ಅಂಕಣ

ಮೋದಿಯವರ ಆಡಳಿತದಲ್ಲಿ ಸ್ತ್ರೀ ಸಶಕ್ತೀಕರಣ

 

೧. ಭ್ರೂಣ ಹತ್ಯೆ ತಡೆದು ಲಿಂಗಾನುಪಾತದ ಏರುಪೇರನ್ನು ತಪ್ಪಿಸಲು ಸುಕನ್ಯಾ ಸಮೃದ್ಧಿ ಯೋಜನೆ ಜಾರಿ ಅದರಡಿಯಲ್ಲಿ 1.52ಕೋಟಿ ಅಕೌಂಟುಗಳು ತೆರೆಯಲ್ಪಟ್ಟಿವೆ ಮತ್ತು 25 ಸಾವಿರ ಕೋಟಿ ಹಣ ಜಮೆಯಾಗಿದೆ. 104 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಸಮತೋಲನ.

೨. ಉಜ್ವಲಾ ಯೋಜನೆಯ ಮೂಲಕ 7.1 ಕೋಟಿ ಗ್ಯಾಸ್ ವಿತರಣೆ

೩.ಬಯಲು ಕಡೆಗೆ ಶೌಚಾಲಯಕ್ಕೆ ಹೋಗುತ್ತಿದ್ದವರ ಸಂಕಷ್ಟ ಮತ್ತು ಮುಜುಗರದಿಂದ ತಪ್ಪಿಸಲು 9.78ಕೋಟಿ ಶೌಚಾಲಯಗಳ ನಿರ್ಮಾಣ. ಸ್ವಚ್ಛ ವಿದ್ಯಾಲಯ ಹೆಸರಿನಲ್ಲಿ ಒಂದೇ ವರ್ಷದಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ 1.9 ಲಕ್ಷ ಶೌಚಾಲಯಗಳ ನಿರ್ಮಾಣ. ಶಾಲೆಗಳಲ್ಲಿ ಬಾಲಕಿಯರ ನೋಂದಾವಣಿಯಲ್ಲಿ ಏರಿಕೆ.

೪.ಅತ್ಯಾಚಾರ ತಡೆ ಕಾಯ್ದೆಯಲ್ಲಿ ಬದಲಾವಣೆ 12 ವರ್ಷದ ಕೆಳಗಿನ ಬಾಲಕಿಯರ ಮೇಲೆ ಅತ್ಯಾಚಾರಗೈದವನಿಗೆ ಮರಣ ದಂಡನೆ, ತನಿಖೆಗೆ ಎರಡು ತಿಂಗಳ ಕಾಲಾವಕಾಶ, ಹೊಸ ಫಾಸ್ಟ ಟ್ರ್ಯಾಕ್ ನ್ಯಾಯಾಲಯ ಮತ್ತು ಪ್ರಾಸಿಕ್ಯೂಟರ್ ಮೀಸಲು, ವಿಶೇಷ ಫೋರೆನ್ಸಿಕ್ ಕಿಟ್ ಮತ್ತು ಪ್ರಯೋಗಾಲಯಗಳು. 16 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಿಗೆ ಜಾಮೀನು ನಿಷೇಧ ಕನಿಷ್ಟತಮ  10 ವರ್ಷ ಜೈಲು ಶಿಕ್ಷೆ.

೫. ಮೊಟ್ಟಮೊದಲ ಬಾರಿಗೆ ಕ್ಯಾಬಿನೆಟ್ಟಿನಲ್ಲಿ ಆರು ಜನ ಸ್ತ್ರೀಯರು, ಲೋಕಸಭೆಯ ಒಟ್ಟಾರೆ ಸ್ತ್ರೀಯರಲ್ಲಿ 50%ಕ್ಕಿಂತ ಜಾಸ್ತಿ ಜನ ಸ್ತ್ರೀಯರು ಬಿಜೆಪಿಗರು.

೬.ಮುದ್ರಾ ಯೋಜನೆಯಲ್ಲಿ ಸಾಲ ಪಡೆದು ಉದ್ಯೋಗ ಕಂಡುಕೊಂಡವರಲ್ಲಿ 70%  ಸ್ತ್ರೀಯರು.

೭.stand up India ಯೋಜನೆಯ ಮೂಲಕ SC ST OBC ಮತ್ತು ಸ್ತ್ರೀಯರಿಗೆ ಸ್ವ ಉದ್ಯೋಗಕ್ಕೆ ಸಾಲ

೮.maternity leave 12 ವಾರಗಳಿಂದ 26 ವಾರಗಳಿಗೆ ಏರಿಕೆ

೯.ಇಂದ್ರಧನುಷ್ ಮೂಲಕ 86 ಲಕ್ಷ ಗರ್ಭಿಣಿಯರಿಗೆ ಸುರಕ್ಷೆ

೧೦. ಗರ್ಭಿಣಿಯರಿಗೆ 6000 ರೂಪಾಯಿ ,

ಪ್ರತಿ ವರ್ಷ 50 ಲಕ್ಷ ಸ್ತ್ರೀಯರು ಈ  ಯೋಜನೆಯಡಿಯಲ್ಲಿ ಫಲಾನುಭವಿಗಳು.

೧೧.ಟ್ರಿಪಲ್ ತಲಾಕ್‌ನಲ್ಲಿ ಮಹತ್ವದ ಹೆಜ್ಜೆ, ಮುಸ್ಲಿಂ ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ಹಜ್ ಯಾತ್ರೆಗೆ ಅವಕಾಶ

೧೨.2014ರ ನಂತರ 45 ಲಕ್ಷ ಮಹಿಳಾ ಸ್ವ ಸಹಾಯ ಸಂಘಗಳು ತೆರೆಯಲ್ಪಟ್ಟಿದ್ದು 5 ಕೋಟಿ ಮಹಿಳೆಯರಿಗೆ ಉದ್ಯೋಗ.

೧೩.SWAT ಫೋರ್ಸ್‌ನಲ್ಲಿ‌ 36ಕ್ಕೆ 36 ಜನ ಮಹಿಳೆಯರು ಈ ಸಲ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಿದ ಮೋದಿಯವರಿಗೆ ರಕ್ಷಣೆ ಕೊಟ್ಟಿದ್ದು ಇದೇ 36 ಜನ.

೧೪. ಈ ಸಲದ ಗಣರಾಜ್ಯೋತ್ಸವದಲ್ಲಿ ಭಾವನಾ ಕಸ್ತೂರಿ ಎಂಬ ಮಹಿಳೆ ಮೊತ್ತಮೊದಲ ಬಾರಿಗೆ ಪುರುಷರ ಆರ್ಮಿ ಕಂಟಿನ್ಜೆಂಟ್ ನೇತೃತ್ವ ವಹಿಸಿದರು.

ಕುಶಭೂ ಕನ್ವರ್ ನೇತೃತ್ವದ ಸಂಪೂರ್ಣ ಮಹಿಳೆಯರೇ ಇರುವ ತಂಡ ಪಥಸಂಚಲನದಲ್ಲಿ ಭಾಗಿಯಾಯಿತು.

೧೫.ಭಾರತೀಯ ಸೇನೆಯ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರಿಗೆ ಅವಕಾಶ ಪೈಟರ್ ಪ್ಲೈಟಿನ ಪೈಲಟ್ ವಿಭಾಗದಲ್ಲೂ ಕೂಡಾ!

೧೬.ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ 3000ದಿಂದ 4500ಕ್ಕೆ ಏರಿಕೆ, ಸಹಾಯಕಿಯರ ಗೌರವ ಧನ 1500ದಿಂದ 2250 ರೂಪಾಯಿಗೆ ಏರಿಕೆ.

ಆಶಾ ಕಾರ್ಯಕರ್ತೆಯರಿಗೂ ಮಾಸಿಕ ವೇತನದಲ್ಲಿ 1000ದಿಂದ 2000ಕ್ಕೆ ಏರಿಕೆ ಮತ್ತು ಉಚಿತ ವಿಮೆ

೧೭.ಮುಸ್ಲಿಂ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಶಾದಿ ಸುಗುಣ್ ಅಡಿಯಲ್ಲಿ 51 ಸಾವಿರ ರೂಪಾಯಿ

೧೮. “ಸ್ವ ಆಧಾರ ಗೃಹ” ಯೋಜನೆಯಡಿಯಲ್ಲಿ ಶೋಷಣೆಗೊಳಗಾದ ಸಮಾಜದಿಂದ ಉಚ್ಛಾಟಿತರಾದ ಮಹಿಳೆಯರಿಗೆ(ಉದಾ:-ಮಹಿಳಾ ಖೈದಿಗಳು, ಏಡ್ಸ್ ಸಂತ್ರಸ್ತೆಯರು) ವಸತಿ, ಉದ್ಯೋಗದ ವ್ಯವಸ್ಥೆ.

೧೯.”ಮಹಿಳಾ ಕಿಸಾನ್ ಸಶಕ್ತೀಕರಣ್” ಯೋಜನೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಸಹಾಯ

 

#ಪ್ರತಿದಿನ_ಪ್ರಧಾನಿ ೪

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!