ಅಂಕಣ

ಕಳೆದ ಐದು ವರ್ಷದಲ್ಲಿ ಪದ್ಮ ಪ್ರಶಸ್ತಿಗಳು.

ಈ ಮೊದಲು ಪದ್ಮ ಪ್ರಶಸ್ತಿಗಳು ರಾಜಕಾರಣದ ಮೊಗಸಾಲೆಯಲ್ಲಿ ತಿರುಗಾಡುವವರು, ರಾಜಕಾರಣಿಗಳಿಗೆ ಬಹುಪರಾಕ್ ಹೇಳುವವರು, ಗುಣಗಾನ ಮಾಡುವವರು, ಲಾಭಿಗಳಿಗೆ ಲಭಿಸುತ್ತಿತ್ತು. ಕಡೆಯ ಐದು ವರ್ಷಗಳಲ್ಲಿ ಸ್ವಯಂ ಅರ್ಜಿಯ ಜೊತೆಗೆ ಒಬ್ಬ ವ್ಯಕ್ತಿ ಯೋಗ್ಯ ಅನಿಸಿದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಹಾಕುವ ಅವಕಾಶ ಕಲ್ಪಿಸಿಕೊಡಲಾಯಿತು. ಅದರಿಂದಾಗಿ ಪ್ರಖ್ಯಾತರಷ್ಟೇ ಅಲ್ಲದೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದವರು, ಪ್ರಚಾರ ಪ್ರೀಯರಲ್ಲದರಿಗೆ ಪ್ರಶಸ್ತಿ ಲಭಿಸಿತು. ಇನ್ನೂ ಕೆಲವರು ಅದೆಂಥ ಎಲೆ ಮರೆ ಕಾಯಿಗಳೆಂದರೆ ಅವರಿಗೆ ಇಂಥ ಒಂದು ಪ್ರಶಸ್ತಿ ಇರುವುದೇ ಗೊತ್ತಿರಲಿಲ್ಲ. ಸುಮ್ಮನೇ ಒಳಿತನ್ನು ಮಾಡುತ್ತಾ ಸಾಗಿದ್ದವರು. ಶ್ರೇಷ್ಟಾತಿಶ್ರೇಷ್ಟರೇ  ಸರ್ಕಾರದ ಕಣ್ಣಿಗೆ ಬೀಳದ ಈ ಕಾಲದಲ್ಲಿ ಇಂಥವರನ್ನೂ ಗುರುತಿಸಿ ಪ್ರಶಸ್ತಿ ನೀಡಿದ್ದು ಶ್ಲಾಘನೀಯ. ಕರ್ನಾಟಕದಿಂದ ಕಳೆದ ಐದು ವರ್ಷದಲ್ಲಿ ಪ್ರಶಸ್ತಿ ಪಡೆದ ಪ್ರಮುಖರು ಮತ್ತು ಅವರ ಕಿರುಪರಿಚಯ ಕೆಳಗಿನಂತಿದೆ.

1.ಸಿದ್ಧಗಂಗಾ ಶ್ರೀಗಳು (ಪರಿಚಯ ಬೇಕಾಗಿಲ್ಲ. ಜಗತ್ಪ್ರಸಿದ್ಧರು ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕದ್ದು 2015ರಲ್ಲಿ!)

2. S.L. ಭೈರಪ್ಪ (ಖ್ಯಾತ ಕಾದಂಬರಿಕಾರರು ಸರಸ್ವತಿ ಸಮ್ಮಾನ ಪುರಸ್ಕೃತರು. ಕನ್ನಡವಲ್ಲದೇ ಎಲ್ಲ ಭಾಷೆಗಳಲ್ಲೂ ಓದುಗರನ್ನು ಹೊಂದಿದವರು. ಪದ್ಮಶ್ರೀ ಸಿಕ್ಕಿದ್ದು 2016ರಲ್ಲಿ!)

3.ಸೂಲಗಿತ್ತಿ ನರಸಮ್ಮ 15000ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದವಳು ಅಲ್ಲದೆಯೇ ಬಾಣಂತಿಗೆ ಬೇಕಾದ ಔಷಧೋಪಚಾರವನ್ನು ಗಿಡಮೂಲಿಕೆಗಳಿಂದಲೇ ಮಾಡಿಕೊಡುತ್ತಿದ್ದಳು.(ಪದ್ಮಶ್ರೀ 2018)

4.ಗಿರೀಶ್ ಭಾರದ್ವಾಜ್ ಕಡಿಮೆ ಖರ್ಚಿನ ಕಡಿಮೆ ಸಮಯದಲ್ಲಿ ಸೇತುವೆ ಕಟ್ಟಿದವರು. ಸೇತುವೆಗೆ ಆಗುವ ಖರ್ಚಿನ ಹೊರತುಪಡಿಸಿ ಉಳಿದೆಲ್ಲಾ ಖರ್ಚು ವೆಚ್ಚಗಳು ಉಚಿತವಾಗಿ ಮಾಡಿಕೊಟ್ಟರು. “ಸೇತುಬಂಧು” ಹೆಸರಿನಿಂದ ಪ್ರಖ್ಯಾತರು. ನೂರಾರು ಸೇತುವೆಗಳನ್ನು ಇಲ್ಲಿಯವರೆಗೆ ಕಟ್ಟಿಕೊಟ್ಟಿದ್ದಾರೆ. (ಪದ್ಮಶ್ರೀ 2017)

5. T V ಮೋಹನ್‌ದಾಸ್ ಪೈ ಶ್ರೇಷ್ಟ ಅರ್ಥಶಾಸ್ತ್ರಜ್ಞರು (ಪದ್ಮಶ್ರೀ 2015)

6.ಸುಕ್ರಿ ಬೊಮ್ಮಗೌಡ ಸುಕ್ರಜ್ಜಿ ಬುಡಕಟ್ಟು ಜನಾಂಗದ ಸ್ತ್ರೀ ಜಾನಪದ ಸಾಹಿತ್ಯವನ್ನು ಹಾಡುವುದರ ಮೂಲಕವೇ ಊರೂರಿಗೆ ತಲುಪಿಸಿದವಳು. ಮದ್ಯ ವಿರೋಧಿ ಆಂದೋಲನ ಮಾಡಿದವಳು. (ಪದ್ಮಶ್ರೀ 2017)

7.ವಿಕಾಸ್ ಶಿವೇ ಗೌಡ ಡಿಸ್ಕಸ್ ಥ್ರೋ ಆಟಗಾರ 2016ರಲ್ಲಿ ಓಲಂಪಿಕ್‌ಗೆ ಕ್ವಾಲಿಫೈ ಆದವರು, 2013ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದವರು (ಪದ್ಮಶ್ರೀ 2017).

8. M M ಜೋಷಿ ಹುಬ್ಬಳ್ಳಿ ಧಾರವಾಡದ ಪ್ರಸಿದ್ಧ ನೇತ್ರತಜ್ಞರು.( ಪದ್ಮಶ್ರೀ 2016)

9.JOHN EBNEZAR ಆರ್ಥೋಪೆಡಿಕ್ ಸರ್ಜನ್ (ಪದ್ಮಶ್ರೀ 2016)

10. M ವೆಂಕಟೇಶ್ ಕುಮಾರ್ ಹಿಂದುಸ್ಥಾನಿ ಸಂಗೀತಗಾರರು (ಪದ್ಮಶ್ರೀ 2016)

11.H R ನಾಗೇಂದ್ರ ಯೋಗ ತಜ್ಞರು 35 ಪುಸ್ತಕ ಬರೆದವರು (ಪದ್ಮಶ್ರೀ 2016)

12. ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯ ನಿಘಂಟು ತಜ್ಞರು (ಪದ್ಮಶ್ರೀ 2017)

13. ಭಾರತಿ ವಿಷ್ಣುವರ್ಧನ್ ಪಂಚ ಭಾಷಾ ತಾರೆ ( ಪದ್ಮಶ್ರೀ 2017)

14. ದೊಡ್ಡರಂಗೇಗೌಡ ಚಿತ್ರ ಸಾಹಿತಿ (ಪದ್ಮಶ್ರೀ 2018)

15.ಸೀತವ್ವ ಜೋಗತಿ ದೇವದಾಸಿ ಪದ್ಧತಿಗೆ ಒಳಗಾಗಿ ನಂತರ ಆ ಪದ್ಧತಿಯ ವಿರುದ್ಧ ಹೋರಾಟ ಮಾಡಿದವಳು. 4000ಕ್ಕೂ ಜಾಸ್ತಿ ಮಹಿಳೆಯರನ್ನು ದೇವದಾಸಿ ಪದ್ಧತಿಯಿಂದ ಹೊರ ತಂದವಳು. (ಪದ್ಮಶ್ರೀ 2018)

16.R.ಸತ್ಯನಾರಾಯಣ ಸಂಗೀತಗಾರರು (ಪದ್ಮಶ್ರೀ 2018)

17.ಇಬ್ರಾಹಿಂ ಸುತಾರ್ ಹಿಂದೂ ಮುಸ್ಲಿಂ ಸೌಹಾರ್ದತೆಗೋಸ್ಕರ ಶ್ರಮಿಸಿದವರು. ಅವರ ಪ್ರವಚನಗಳಿಂದ ಕರ್ನಾಟಕದ ಬಹುತೇಕ ಜನರು ಪ್ರಭಾವಿತರಾಗಿದ್ದಾರೆ. (ಪದ್ಮಶ್ರೀ 2018)

18.R N ತ್ಯಾಗರಾಜ್ ಶ್ರೇಷ್ಟ ಸಂಗೀತಗಾರರು (ಪದ್ಮಶ್ರೀ 2018)

19.ರೋಹಿನಿ ಗೋಡ್‌ಬೋಳೆ ಭೌತಶಾಸ್ತ್ರಜ್ಞೆ (ಪದಶ್ರೀ 2019)

20.ಪಂಕಜ್ ಅಡ್ವಾಣಿ ಬಿಲಿಯರ್ಡ್ಸ್ ಆಟಗಾರ (ಪದ್ಮಭೂಷಣ 2018)

21. ಶ್ರೀ ಸಿದ್ದೇಶ್ವರ ಸ್ವಾಮೀಜಿ ಶ್ರೇಷ್ಟ ಪ್ರವಚನಕಾರರು (ಪದ್ಮಶ್ರೀ 2018 ಯಾವುದೇ ಪ್ರಶಸ್ತಿಯ ಆಕಾಂಕ್ಷಿಯಲ್ಲ. ಆಧ್ಯಾತ್ಮಿಕ ಭೋದನೆಯಷ್ಟೇ ನನ್ನ ಕೆಲಸವೆಂದು ಹೇಳಿ ಪ್ರಶಸ್ತಿಯನ್ನು ಗೌರವಯುತವಾಗಿ ನಿರಾಕರಿಸಿದರು.

22. ಸಾಲುಮರದ ತಿಮ್ಮಕ್ಕ ಸಾಲು ಸಾಲು ಗಿಡಗಳನ್ನು ನೆಟ್ಟು ಪರಿಸರ ಸೇವೆಯಲ್ಲೇ ತಮ್ಮ ಬದುಕು ಸವೆಸಿದವರು (ಪದ್ಮಶ್ರೀ 2019)

23. ವಿರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾಧಿಕಾರಿಗಳು (ಪದ್ಮ ವಿಭೂಷಣ 2015)

24. ಶ್ರೀ ಶ್ರೀ ರವಿಶಂಕರ್ ಗುರೂಜಿ art of living ಮುಖ್ಯಸ್ಥರು ಆಧ್ಯಾತ್ಮಿಕ ಗುರುಗಳು (ಪದ್ಮ ವಿಭೂಷಣ 2016)

25. U R RAO ಬಾಹ್ಯಾಕಾಶ ತಜ್ಞರು (ಪದ್ಮ ವಿಭೂಷಣ 2017)

ಸಾಧಕರಿಗೆ ಪ್ರಶಸ್ತಿ ಸಿಕ್ಕಿತು ಅನ್ನುವದಕ್ಕಿಂತ ಪ್ರಶಸ್ತಿಗೆ ಸಾಧಕರು ಸಿಕ್ಕರು ಎಂದು ಹೇಳಿದರೇ ಸೂಕ್ತ.

ರಾಹುಲ್ ಹಜಾರೆ
27.03.2019
#ಪ್ರತಿದಿನ_ಪ್ರಧಾನಿ ೧೪

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!