ಅಂಕಣ

ಕಳೆದ ಐದು ವರ್ಷದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ.

 

1.ಮೋದಿಯವರು ಅಧಿಕಾರಕ್ಕೆ ಬಂದ ಮೊದಲ ಮೂರು ವರ್ಷದಲ್ಲೇ ISRO 36 ಪ್ರಾಜೆಕ್ಟ್‌ಗಳನ್ನು ಮುಗಿಸಿತ್ತು. ಅದರಲ್ಲಿ 17 launch vehicle, 16 satellite, 3 technology demonstration missionಗಳಿವೆ.

2. KU(12 GHz-18GHz) ಬ್ಯಾಂಡಿನಲ್ಲಿ ಕೆಲಸ ಮಾಡುವ “ಸೌಥ್ ಏಷಿಯಾ” ಎಂಬ ಹೆಸರಿನ ಉಪಗ್ರಹವನ್ನು ಉಡಾವಣೆ ಮಾಡಿತು. ಈ ಉಪಗ್ರಹ HIGH. POWER TRANSPONDERಗಳನ್ನು ಹೊಂದಿದೆ.

3.NAVIC ಎಂಬ ಹೆಸರಿನ ಭಾರತ ಮೂಲದ 7 ಉಪಗ್ರಹಗಳ ಕೂಟ real time positioning ಮತ್ತು timing service ಕೊಡುವ ಸಲುವಾಗಿ ಉಡಾವಣೆ ಮಾಡಲಾಯಿತು. 2013ರಿಂದ ಇದರ ಪ್ರಯತ್ನಗಳು ನಡೆದರೂ ಇತ್ತಿಚಿನ ಎರಡು ವರ್ಷಗಳಲ್ಲೇ ಯಶಸ್ವಿಯಾಯಿತು.

4. ಪುನರ್ಬಳಕೆ ಮಾಡಬಲ್ಲ ರಾಕೆಟ್ಟಿನ ಬಗೆಗಿನ scramjet ತಂತ್ರಜ್ಞಾನದ ಪ್ರದರ್ಶನ ಮಾಡಲಾಯಿತು.

5. ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾಯಿಸಿ ISRO ದಾಖಲೆ ಬರೆಯಿತು.

6.2014-17 ರ ಮಧ್ಯೆ PSLV ಬೇರೆ ದೇಶಗಳಿಗಾಗಿ 200 ಉಪಗ್ರಹಗಳನ್ನು ನಮ್ಮ ದೇಶದ ಮುಖೇನ ಉಡಾಯಿಸಿಕೊಟ್ಟಿದೆ. ಅದರಲ್ಲಿ 14 ದೇಶದ 29 ನ್ಯಾನೋ ಸೆಟ್‌ಲೈಟ್‌ಗಳಿವೆ.

7.ನೈಸರ್ಗಿಕ ಸಂಪನ್ಮೂಲಗಳ ಮಾಹಿತಿ ಕಲೆಹಾಕುವ ಮತ್ತು ನೋಡಿಕೊಳ್ಳುವ 3 tier imaging system ಉಳ್ಳ RESOURCESAT-2Aಯನ್ನು ಉಡಾಯಿಸಲಾಯಿತು.

8.ಚಂಡಮಾರುತಗಳ ಬಗ್ಗೆ ಮತ್ತು ಸಮುದ್ರದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿ ಪ್ರಾಕೃತಿಕ ವಿಕೋಪಗಳ ಕುರಿತು ಎಚ್ಚರಿಸಬಲ್ಲ SCATSAT ಯಶಸ್ವಿಯಾಗಿ ಉಡಾವಣೆಯಾಯಿತು.

9. ಭಾರತದ ಮೂಲದ 640 ಟನ್ ಭಾರದ (200 ಆನೆಗಳ ತೂಕಕ್ಕೆ ಸಮ)ಉಪಗ್ರಹಗಳನ್ನು ಹೊತ್ತೊಯ್ಯಬಲ್ಲಂಥ GSLV MK3(FAT BOY) 2017ರಲ್ಲಿ ಉಡಾವಣೆಯಾಯಿತು. ಇದರಲ್ಲಿ 19 ಉಪಗ್ರಹಗಳು 10 ವರ್ಷಗಳ ಕಾಲ ಬಾಳಿಕೆ ಬರುವಂತಹವಿವೆ. ಈ ತಂತ್ರಜ್ಞಾನಕ್ಕೋಸ್ಕರ ಹೊರದೇಶದ ಮೇಲೆ ನಾವು ಅವಲಂಬಿತರಾಗುತ್ತಿದ್ದೆವು. ಯಾರ ಮೇಲೂ ಅವಲಂಬಿತರಾಗದೇ ಸ್ವದೇಶಿ ತಂತ್ರಜ್ಞಾನದಿಂದ ನಾವು ಮಣಭಾರದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲೆವು .

10.ಕಕ್ಷೆಯಲ್ಲಿರುವ INSAT 3D INSAT 3DR ಉಪಗ್ರಹಗಳಿಂದ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಹವಾಮಾನ ವರದಿ ಪಡೆಯಬಹುದಾಗಿದೆ.

11.MARS ORBITER MISSION(MOM) ಮಂಗಳನ ಕಕ್ಷೆಯಲ್ಲಿ ಯಶಸ್ವಿಯಾಗಿ ತನ್ನ ಕಾರ್ಯ ಮುಂದುವರೆಸುತ್ತಿದೆ. ಇದರ ಯಶಸ್ವಿ ಉಡಾವಣೆಯಾಗಿ ಕಕ್ಷೆಗೆ ಕೂತ ದಿನ ಪ್ರಧಾನಿಗಳು ಮಾತಾಡುತ್ತಾ “MARS ಕೋ ಮಾ ಮಿಲ್‌ಗಯಿ” ಎಂದು ಹೇಳಿದ್ದರು.

12.ವಿಶ್ವ ಮತ್ತು ಖಗೋಳದ ಮಾಹಿತಿಯನ್ನು ಸಂಗ್ರಹಿಸಬಲ್ಲ ವಿವಿಧ ತರಂಗಾಂತರ(wave length)ಗಳಲ್ಲಿ ಕೆಲಸ ಮಾಡಬಲ್ಲ ASTROSAT ಉಡಾವಣೆಯಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾದ ಮಾಹಿತಿ ಕೊಡುತ್ತಿದೆ.

13.PSLV-C40ಯನ್ನು ಕಕ್ಷೆಗೆ ಕೂಡಿಸಲಾಯಿತು. ಇದು ನಮ್ಮ 710KGಯ cartosat-2 ಅಲ್ಲದೇ 30 ವಿವಿಧ ಉಪಗ್ರಹಗಳನ್ನು ಜೊತೆಗೆ ತೆಗೆದುಕೊಂಡು ಹೋಯಿತು. ಆ 30ರಲ್ಲಿ 2 ಭಾರತೀಯ ಉಪಗ್ರಹಗಳ ಮತ್ತು 28 ವಿದೇಶಿ ಉಪಗ್ರಹಗಳಿದ್ದವು.

14.ಮುಂದಿನ ದಿನಗಳಲ್ಲಿ ಚಂದ್ರಯಾನ ಮಾಡುವ ಸಂಕಲ್ಪ ಹೊಂದಿರುವ ISRO ಅದರ ತಯಾರಿಗೋಸ್ಕರ ಕ್ರಯೋಜನಿಕ್ ಇಂಜಿನ್‌ಗಳ ಪರೀಕ್ಷೆ ಮಾಡಿತು. ಕ್ರಯೋಜನಿಕ್ ಇಂಜಿನ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ISRO ವರದಿ ಮಾಡಿದೆ.

15. 14 ನವೆಂಬರ್ 2018ರಂದು GSLV MK 3 4000 ಕೆಜಿ‌ ಭಾರದ ಉಪಗ್ರಹಗಳನ್ನು GTO(GEOSYNCHRONOUS TRANSFER ORBIT)ನಲ್ಲಿ 10 ಟನ್ ಭಾರದ ಉಪಗ್ರಹಗಳನ್ನು LEO(LOWER EARTH ORBIT)ನಲ್ಲಿ ಕೂರಿಸುವ ಒಟ್ಟು 29 ಉಪಗ್ರಹಗಳನ್ನು ಉಡಾವಣೆ ಮಾಡಿತು. 2018ರ ಫೆಬ್ರುವರಿಯಲ್ಲಿ ಇಂಗ್ಲೆಂಡ್ ಹಾರಿಬಿಟ್ಟ space x’s falcon ಎಂಬ ಭಾರದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ವ್ಯೋಮನೌಕೆಗೆ ನೇರ ಸ್ಪರ್ಧೆಯನ್ನು ಭಾರತ ಕೊಟ್ಟಿದೆ.

16.GSAT 7A ಉಪಗ್ರಹ ಭಾರತದ ಸೇನೆಯ ಸಂಪರ್ಕವನ್ನು ಹಿರಿದಾಗಿಸಿ ದೇಶದ ರಕ್ಷಣೆಗೆ ಬಳಕೆಯಾಗುತ್ತಿದೆ.

ಬಾಹ್ಯಾಕಾಶ ಲೋಕದಲ್ಲಿ ISRO ಇತ್ತಿಚೆಗೆ ತನ್ನ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದು ಹೊಸ ಅನ್ವೇಷಣೆಗಳಿಗೆ ಮುನ್ನುಡಿ ಬರೆದಿದೆ. ಆಳುವ ಸರ್ಕಾರಗಳು ವಿಜ್ಞಾನಿಗಳಿಗೆ ಸಹಕಾರ ಕೊಟ್ಟರೆ ವಿಜ್ಞಾನಿಗಳೂ ದೇಶಕ್ಕೆ ತಮ್ಮ ಕೊಡುಗೆಯನ್ನು ಕೊಡುತ್ತಾರೆ. ಈ ವರ್ಷ ನಂಬಿ ನಾರಾಯಣ್ ಅನ್ನುವವರಿಗೆ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಕಥೆಯನ್ನು ಆಧರಿಸಿ ಬರುವ ದಿನಗಳಲ್ಲಿ ರಾಕೆಟರಿ ಎಂಬ ಸಿನಿಮಾ ಬಿಡುಗಡೆಯಾಗಲಿದೆ. ಅದನ್ನು ವೀಕ್ಷಿಸಿದರೆ ISROದ ಯಶಸ್ಸಿನ ಕ್ರೆಡಿಟ್ಟು ಮೋದಿಯವರಿಗೆ ಏಕೆ ಸಲ್ಲಬೇಕು ಎಂಬುದಕ್ಕೆ ಸೂಕ್ತ ಉತ್ತರ ಸಿಗಬಲ್ಲದು.

ರಾಹುಲ್ ಹಜಾರೆ
28.03.2019

#ಪ್ರತಿದಿನ_ಪ್ರಧಾನಿ ೧೫

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!