ಅಂಕಣ

ಹಿಂದುಳಿದ ವರ್ಗದವರಿಗೆ ಮೋದಿಯವರ ಕೊಡುಗೆಯೇನು?

1.stand up India ಮೂಲಕ ಉದ್ಯೋಗಕ್ಕೆ ಸಾಲ. 2017ರ ಅಂಕಿ ಅಂಶಗಳ ಪ್ರಕಾರ 54733 ಜನರಿಗೆ ಸಾಲ ಸಿಕ್ಕಿದೆ.

2.ದಲಿತರ ಉದ್ಧಾರಕ್ಕಾಗಿ ರೂ. 95000 ಕೋಟಿ ಹಣ ಬಜೆಟ್ಟಿನಲ್ಲಿ ಮೀಸಲು‌

3.ದಲಿತರು ಹಿಂದುಳಿದವರ ವಿದ್ಯಾರ್ಥಿಗಳ ದೈನಿಕ ಭತ್ಯೆ 150 ರೂಪಾಯಿಯಿಂದ 225ಕ್ಕೆ ಏರಿಕೆ.

4.ಹಾಸ್ಟೆಲ್ ವಿದ್ಯಾರ್ಥಿಗಳಿಗಿರುವ ದೈನಿಕ ಭತ್ಯೆ 350ರಿಂದ 525ಕ್ಕೆ ಏರಿಕೆ.

5.ಈ ಮೊದಲು ಕೌಟುಂಬಿಕ ಆದಾಯ 4.5 ಲಕ್ಷಕ್ಕಿಂತ ಕಡಿಮೆ ಇರುವ ದಲಿತರ ಮಕ್ಕಳಿಗೆ ಉಚಿತ ತರಬೇತಿ ಇತ್ತು. ಈಗ ವಾರ್ಷಿಕ ಆದಾಯದ ಮಿತಿಯನ್ನು 6 ಲಕ್ಷಕ್ಕೆ ಏರಿಸಿದ್ದಾರೆ.

6.ಸ್ಥಳೀಯ ವಿದ್ಯಾರ್ಥಿಗಳ ಭತ್ಯೆ 1500 ರೂಪಾಯಿ ಇತ್ತು. ಈಗ ಅದು 2500ಕ್ಕೆ ಏರಿಕೆಯಾಗಿದೆ. ಅದೇ ರೀತಿ ಹೊರಗಡೆಯಿಂದ ಬಂದು ಓದುವವರಿಗೆ 3000 ರೂಪಾಯಿ ಭತ್ಯೆಯಿಂದ 5000ಕ್ಕೆ ಏರಿಕೆಯಾಗಿದೆ.

7.2016ರ ಅಂಕಿ ಅಂಶಗಳ ಪ್ರಕಾರ 3.3ಕೋಟಿ ದಲಿತ ವಿದ್ಯಾರ್ಥಿಗಳಿಗೆ 7565 ಕೋಟಿ ವಿದ್ಯಾರ್ಥಿ ವೇತನ ತಲುಪಿದೆ.

8. ದಲಿತರ ಜಾತಿ ನಿಂದನೆ ಆರೋಪವನ್ನು ಪರಿಶೀಲಿಸಲು ವಿಶೇಷ ನ್ಯಾಯಾಲಯವನ್ನು ತೆರೆಯಲಾಗಿದೆ.

9.ಕ್ಯಾಶ್‌ಲೆಸ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಕಾರಣಕ್ಕೆ ಮೋದಿಯವರು ಬಿಡುಗಡೆ ಮಾಡಿದ ಆ್ಯಪ್‌ಗೆ BHIM ಎಂದು ಡಾ. ಅಂಬೇಡ್ಕರ್ ಅವರ ಹೆಸರನ್ನು ಇಟ್ಟು ಗೌರವಿಸಿದರು.

10.ಡಾ.ಅಂಬೇಡ್ಕರ್ ಅವರ ಸ್ಮರಣಾರ್ಥ ಪಂಚತೀರ್ಥ ನಾಮದಡಿಯಲ್ಲಿ ಅವರ ಜೀವನದ ಮಹತ್ವದ ಘಟ್ಟಗಳು ನಡೆದ ಐದು ಸ್ಥಳಗಳನ್ನು ಗುರುತಿಸಿ ಸ್ಮಾರಕಗಳ ನಿರ್ಮಾಣ ಮಾಡಲಿದ್ದಾರೆ.

11.ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆದ ಫಲಾನುಭವಿಗಳಲ್ಲಿ 8 ಕೋಟಿ ಜನ ದಲಿತರಿದ್ದಾರೆ

12.STANDUP INDIA ಮೂಲಕ ಸಾಲ ಪಡೆದ ಕನ್ನಡಿಗರ ಸಂಖ್ಯೆ 500.

13.ಇವೆಲ್ಲಾ ಸರ್ಕಾರ ಒದಗಿಸುವ ದಾಖಲೆಗಳಾದರೆ ಒಬ್ಬ stand up indiaದಿಂದ ಮತ್ತು ಮುದ್ರಾ ಯೋಜನೆಯ ಮೂಲಕ ಸಾಲ ಪಡೆದ ವ್ಯಕ್ತಿ ಒಬ್ಬರಿಗೆ ಉದ್ಯೋಗ ಕೊಟ್ಟರೂ ಪರೋಕ್ಷವಾಗಿ ಸೃಷ್ಟಿಯಾದ ಉದ್ಯೋಗದ ಸಂಖ್ಯೆ ಅಗಣಿತ. ಮೇಲಾಗಿ ಸಾಲ ಪಡೆದವರಲ್ಲಿ ಬಹುಪಾಲು ಜನ ದೊಡ್ಡ ಉದ್ದಿಮೆಗಳನ್ನೇ ತೆಗೆದಿರುವ ಕಾರಣ ಅಲ್ಲಿ ಒಬ್ಬರಿಗಿಂತ ಅಧಿಕ ಜನ ಉದ್ಯೋಗ ಪಡೆದ ಸಾಧ್ಯತೆಗಳಿವೆ.

14. ಕರ್ನಾಟಕದಲ್ಲಿರುವ ಪರಿವಾರ ತಳವಾರ ಜಾತಿಗಳನ್ನು STಗೆ ಸೇರಿಸುವಂತೆ ಬಹುದಿನಗಳ ಬೇಡಿಕೆ ಇತ್ತು‌. ಅದನ್ನು ಇಡೇರಿಸಿದ್ದು ಮೋದಿಯವರ ಸರ್ಕಾರ.

ರಾಹುಲ್ ಹಜಾರೆ
26.03.2019
#ಪ್ರತಿದಿನ_ಪ್ರಧಾನಿ ೧೩

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!