ಅಂಕಣ

ಪುಲ್ವಾಮೋತ್ತರ ಘಟನೆಗಳು ಮತ್ತು ಮೋದಿಯವರ ರಾಜತಾಂತ್ರಿಕ ನಡೆಗಳು.

1.1996ರಲ್ಲಿ ಪಾಕಿಸ್ತಾನಕ್ಕೆ ನೀಡಲಾದ MFN(MOST FAVOURED NATION) ಪಟ್ಟಿಯಿಂದ ಹೊರದಬ್ಬಲಾಯ್ತು
2. ಪಾಕಿಸ್ತಾನದಿಂದ ಆಮದಾಗುತ್ತಿದ್ದ ಸರಕುಗಳ ಮೇಲೆ 200% ತೆರಿಗೆ ಹೇರಲಾಯಿತು.
3.25 ರಾಷ್ಟ್ರಗಳೊಂದಿಗೆ ಈ ದಾಳಿಯ ಕುರಿತು ಚರ್ಚೆ ಮಾಡಿದರು. ಆ ಮೂಲಕ ಭಯೋತ್ಪಾದನೆಗೆ ಪಾಕಿಸ್ತಾನವೇ ಮೂಲ ಎಂಬುದನ್ನು ಮನದಟ್ಟು ಮಾಡಿಕೊಟ್ಟರು.
4.ಕಾಶ್ಮೀರದ ಪ್ರತ್ಯೇಕತಾವಾದಿಗಳಿಗಿದ್ದ ಭದ್ರತೆಯನ್ನು ಹಿಂಪಡೆಯಲಾಯಿತು.
5.ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‌ನನ್ನು ಸದೆ ಬಡೆಯಿತು.
6.ಈ ಘಟನೆಗೂ ಮೊದಲೇ ಭಾರತದ ಒತ್ತಡದಿಂದ ಪಾಕಿಸ್ತಾನಕ್ಕೆ ಸಾಲ ಕೊಡುತ್ತಿದ್ದ FATFನವರು ಪಾಕಿಸ್ತಾನವನ್ನು gray listಗೆ ಹಾಕಿದ್ದರು. ಭಾರತ ಪಾಕಿಸ್ತಾನವನ್ನು black listಗೆ ಹಾಕುವಂತೆ FATF ಮೇಲೆ ಒತ್ತಡ ಹೇರುತ್ತಿದೆ.
7.ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದ್ದ ನೀರಿನಲ್ಲಿ ಭಾರತದ ಪಾಲನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿತು.
8.ನ್ಯೂಜಿಲೆಂಡ್, ಪ್ರಾನ್ಸ್, ಅಮೇರಿಕಾ , ಇಂಗ್ಲೆಂಡ್ ಇಸ್ರೇಲ್ ಅಷ್ಟೇ ಅಲ್ಲದೇ ಸುಮಾರು ದೇಶಗಳು ಭಾರತದ ಸಪೋರ್ಟಿಗೆ ನಿಂತವು.
9.ಸರ್ಕಾರ ಸೈನಿಕರಿಗೇ ಪೂರ್ಣ ಸ್ವಾತಂತ್ರ್ಯ ಕೊಡುವುದಾಗಿ ಘೋಷಿಸಿತು.
10.ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ಮಾಡಿ ನಮ್ಮ ದೇಶದ ಸೈನಿಕರು 300ಕ್ಕೂ ಅಧಿಕ ಭಯೋತ್ಪಾದಕರನ್ನು ಕೊಂದು ಬಂದರು.
11. F 16 ಮೂಲಕ ಪಾಕಿಸ್ತಾನ ದಾಳಿ ಮಾಡಿ ನಮ್ಮ ಸೈನಿಕ ಅಭಿನಂದನ್‌ನ್ನು ಬಂಧಿಸಿತು. ಭಾರತದ ವಿಶ್ವದೊಂದಿಗಿನ ಸೌಹಾರ್ದಯುತ ಸಂಬಂಧದ ಕಾರಣ ವಿಶ್ವ ಮಟ್ಟದ ಒತ್ತಡ ಯಾವ ಮಟ್ಟಿಗಿತ್ತು ಎಂದರೆ ಮುಂದಿನ ಒಂದೇ ದಿನದಲ್ಲಿ ಅಭಿನಂದನ್ ವಾಪಾಸು ಬಂದರು.
12. ಭಾರತದ ವಿದೇಶಿ ಸಂಬಂಧಗಳು ಅದೆಷ್ಟು ಗಟ್ಟಿಯಾಗಿವೆ ಎಂದರೆ ತನ್ನ ಅನುಮತಿ ಇಲ್ಲದೇ F 16 ಬಳಸದಂತೆ ಅಮೇರಿಕಾ ಪಾಕಿಸ್ತಾನಕ್ಕೆ ತಾಕೀತು ಮಾಡಿತು.
13. ಪಾಕಿಸ್ತಾನಕ್ಕೆ ಯಾವ ಮಟ್ಟಿಗಿನ ಭಯವಿತ್ತೆಂದರೆ ಎಲ್ಲಾ ಪೋರ್ಟ್‌ಗಳು, ಏರ್‌ಸ್ಪೇಸ್ ಎಲ್ಲವೂ ಬ್ಲಾಕ್ ಆಗಿದ್ದವು.‌
14.OIC(organisation of Islamic cooperation)ನಲ್ಲಿ ಭಾರತದ ವಿದೇಶಾಂಗ ಮಂತ್ರಿ
ಸುಷ್ಮಾ ಸ್ವರಾಜ್ ಮೊಟ್ಟಮೊದಲ ಬಾರಿಗೆ ವಿಶೇಷ ಅತಿಥಿಯಾಗಿ ಹೋದರು.‌ಈ ಸಂಘಟನೆಯನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನ ಇದನ್ನು ವಿರೋಧಿಸಿದರೂ ಪಾಕಿಸ್ತಾನವನ್ನು ಹೊರಗಿಟ್ಟು OIC ಸುಷ್ಮಾ ಸ್ವರಾಜ್ ಅವರನ್ನು ಆಹ್ವಾನಿಸಿತು.
15. “ಭಾರತ ಭಯೋತ್ಪಾದನೆಯ ವಿರುದ್ಧ ಯಾವತ್ತಿಗೂ ಹೋರಾಟ ಮಾಡುತ್ತದೆ. ಅದು ಯಾವುದೇ ಧರ್ಮದ ವಿರುದ್ಧವಲ್ಲ. ಭಾರತದ ಮುಸ್ಲಿಮರನ್ನು ಒಳಗೊಂಡು 130 ಕೋಟಿ ಜನರ ಪ್ರತಿನಿಧಿಯಾಗಿ ನಾನಿಲ್ಲಿ ಬಂದಿದ್ದೇನೆ. ನಮ್ಮ ದೇಶದ ಹಿಂದೂ ಮುಸಲ್ಮಾನರು ಸೌಹಾರ್ದಯುತವಾಗಿದ್ದಾರೆ. ನಮ್ಮ ಹೋರಾಟ ಏನಿದ್ದರೂ ಅದು ಭಯೋತ್ಪಾದನೆಯ ವಿರುದ್ಧ.” ಎಂದು ಸುಷ್ಮಾ ಸ್ವರಾಜ್ OIC ರಾಷ್ಟ್ರಗಳ ಮುಂದೆ ಹೇಳಿದರು.
16. ಭಾರತದ ವಿದೇಶ ಸಂಬಂಧಗಳಲ್ಲಾದ ಸುಧಾರಣೆಯಿಂದಾಗಿ ಮುಸ್ಲಿಂ ರಾಷ್ಟ್ರಗಳೂ ಭಾರತದೊಂದಿಗೆ ಭಯೋತ್ಪಾದನೆಯ ನಿಗ್ರಹಕ್ಕೆ ಕೈ ಜೋಡಿಸಿದವು. ಇಷ್ಟು ದಿನ ಚೀನಾ ಅದರೊಟ್ಟಿಗೆ ನಿಂತಿತ್ತು ಈಗ ನಿಧಾನಕ್ಕೆ ಹಿಂದೆ ಸರಿಯುತ್ತಿದೆ.
17. US UK FRANCEಗಳು ಮಸೂದ್ ಅಜರ್‌ನನ್ನು ಬ್ಲಾಕ್ ಲಿಸ್ಟಿಗೆ ಹಾಕುವಂತೆ UNಗೆ ಕೇಳಿಕೊಂಡವು.
18.ಫ್ರಾನ್ಸ್ ತನ್ನ ದೇಶದಲ್ಲಿದ್ದ ಮಸೂದ್ ಅಜರ್‌ನ ಆಸ್ತಿಯನ್ನು ಗುರುತಿಸಿ ವಶಪಡಿಸಿಕೊಂಡಿತು.

ಈ ಹಿಂದೆ ಭಾರತದ ಮೇಲೆ ದಾಳಿಗಳಾದಾಗ ಭಾರತ ಈ ಮಟ್ಟಿಗಿನ ಉತ್ತರ ಕೊಟ್ಟಿರಲಿಲ್ಲ ಮತ್ತು ವಿದೇಶಗಳು ಭಾರತಕ್ಕೆ ಈ ಮಟ್ಟಿಗಿನ ಬೆಂಬಲ ವ್ಯಕ್ತ ಪಡಿಸಿರಲಿಲ್ಲ. ಮೋದಿಯವರು ದೇಶ ವಿದೇಶ ಸುತ್ತಿ ವಿದೇಶಿ ಸಂಬಂಧಗಳನ್ನು ಗಟ್ಟಿಗೊಳಿಸಿಕೊಂಡಿದ್ದರ ಪರಿಣಾಮವಿದು.

ರಾಹುಲ್ ಹಜಾರೆ
25.03.2019
#ಪ್ರತಿದಿನ_ಪ್ರಧಾನಿ ೧೨

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!