ಅಂಕಣ

ಈಶಾನ್ಯ ರಾಜ್ಯಗಳಿಗೆ ಮೋದಿಯವರ ಕೊಡುಗೆ

೧.ಈ‌ ಮೊದಲು ಭಾರತದ ಇತರೆ ಪ್ರದೇಶಗಳಿಂದ ಮಣಿಪುರ ನಾಗಾಲ್ಯಾಂಡಿಗೆ ಹೋಗಬೇಕಾದರೆ ಸುತ್ತಿಬಳಸಿ ಹೋಗಬೇಕಿತ್ತು. ಮೋದಿಯವರ ಬಾಂಗ್ಲಾದೊಂದಿಗಿನ ಸೌಹಾರ್ದಯುತ ಸಂಬಂಧದಿಂದ ಬಾಂಗ್ಲಾದ ಮುಖೇನ ಹೊಸ ಮತ್ತು ಸುಲಭದ ದಾರಿ ನಿರ್ಮಾಣವಾಗಿದೆ. ಇದರಿಂದ ಅಲ್ಲಿನ ಊರುಗಳಿಗೆ ಸುಲಭದಲ್ಲಿ LPG, ನೈಸರ್ಗಿಕ ಅನಿಲ, ಪೆಟ್ರೋಲ್ ವಿದ್ಯುತ್ ಸಿಗುವಂತಾಗಿದೆ.

೨. ಈಶಾನ್ಯ ರಾಜ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಚಿತ್ತಗಾಂಗ್‌ನಲ್ಲಿ ರಿಫೈನರಿ ಘಟಕ

೩.ಬಾಂಗ್ಲಾ ಮೂಲಕ‌ ಹೋಗಲು ಕೊಲ್ಕತ್ತಾ ಅಗರ್ತಲಾ ಢಾಕಾ ಬಸ್ಸು ಬಿಡಲಾಯಿತು. ಬಾಂಗ್ಲಾದೊಂದಿಗಿನ ಹದಗೆಟ್ಟ ಸಂಬಂಧದಿಂದ 1965ರ ನಂತರ ನಿಂತುಹೋದ ಬಿಲೋನಿಯಾದಿಂದ ಅಗರ್ತಲಾ ಸಂಪರ್ಕಿಸುವ 9.8ಕಿಮೀ ರೈಲು ಮಾರ್ಗ ಶುರುವಾಗುವ ಸಂಭವ. ಬಾಂಗ್ಲಾದೊಂದಿಗಿನ ಗಡಿಯಲ್ಲಿರುವ ಸಣ್ಣಪುಟ್ಟ ಭೂಭಾಗಗಳ ಹಂಚಿಕೆ ನಿರ್ಧಾರ ಇತ್ಯರ್ಥವಾಯಿತು.

೪.2008ರ ಮೊದಲು ತ್ರಿಪುರಾದಲ್ಲಿ ರೇಲ್ವೆಗಳಿರಲಿಲ್ಲ. 2008ರಲ್ಲಿ METER GAUGE ವ್ಯವಸ್ಥೆ ಬಂತು.‌ ಮೋದಿಯವರು ಬಂದ ಮೇಲೆ ಸುಮಾರು 900 ಕಿಮೀ ಹಳಿಗಳನ್ನು BROAD GAUGEಗೆ ಪರಿವರ್ತಿಸಿದ್ದಾರೆ. ತ್ರಿಪುರಾದಿಂದ ದೆಹಲಿಗೆ ತ್ರಿಪುರ ಸುಂದರಿ ಮತ್ತು ರಾಜಧಾನಿ ಎಕ್ಸ್ಪ್ರೆಸ್‌ಗಳಿಗೆ ಹಸಿರು ನಿಶಾನೆ.

೫.2016ರಲ್ಲಿ 88 ಕಿಮೀ ಉದ್ದದ ಧನಸಿರಿ-ಕೊಹಿಮಾ ಮಧ್ಯ ಹೊಸ ರೈಲು ಮಾರ್ಗಕ್ಕೆ ಮುನ್ನುಡಿ. ಈ ಮಾರ್ಗ ಕೊಹಿಮಾವನ್ನು ರಾಷ್ಟ್ರೀಯ ರೈಲು ಮಾರ್ಗದೊಂದಿಗೆ ಸಂಪರ್ಕ ಬೆಸೆಯುತ್ತದೆ. ಐಜ್ವಾಲ್, ಇಂಪಾಲ್ ಶಿಲ್ಲಾಂಗ್ ಶಹರುಗಳನ್ನು ರಾಷ್ಟ್ರದೊಂದಿಗೆ ಜೋಡಿಸಲು 25 ರೈಲುಗಳ ವ್ಯವಸ್ಥೆ ಮಾಡಲಾಗಿದೆ.

೬.ಗುವಾಹಟಿಯಲ್ಲಿ ಸೌರಶಕ್ತಿಯಿಂದ ನಡೆಯಬಲ್ಲ‌ ಪ್ರಥಮ ರೇಲ್ವೇ ನಿಲ್ದಾಣ ನಿರ್ಮಾಣ, guwahati-dibrugarh ಬೆಸೆಯುವ ಮೊದಲ ಶತಾಬ್ದಿ ಎಕ್ಸ್‌ಪ್ರೆಸ್‌‌ಗೆ ಅನುಮತಿ ಸಿಕ್ಕಿದ್ದು ಈಗ.

೭.ಭಾರತದ ರೇಲ್ವೇ ಭೂಪಟದಲ್ಲೇ ಇಲ್ಲದ ಮೇಘಾಲಯಕ್ಕೆ 275 ಕೋಟಿ ವೆಚ್ಚದಲ್ಲಿ

ಇದೇ ಮೊದಲ ಬಾರಿ ಸ್ಥಾನ ಪಡೆದಿದೆ. 2005ರಲ್ಲೇ ಈ ಒಂದು ಮನವಿ ಕೇಂದ್ರ ಸರ್ಕಾರಕ್ಕೆ ಹೋಗಿತ್ತು. ಅನುಮೋದನೆ ಸಿಕ್ಕಿದ್ದು ಸದ್ಯದ ಸರ್ಕಾರದಲ್ಲಿ. 271 ಕಿಮೀ ಉದ್ದದ Meghalaya-tura-shillong ಜೋಡಿಸುವ ಹೆದ್ದಾರಿ ಪ್ರವಾಸೋದ್ಯಮಕ್ಕೆ ಕೊಡುವ ಕೊಡುಗೆ ಅಷ್ಟಿಷ್ಟಲ್ಲ.

೮.32000ಕೋಟಿ ವೆಚ್ಚದಲ್ಲಿ 1200 ಕಿಮೀ ಉದ್ದದ ರಸ್ತೆ ಮಂಜೂರಾಗಿದೆ.

೯.Hollongi-itanagar ಚತುಷ್ಪಥ ಹೆದ್ದಾರಿ, western peripheral express way, 890 ಕಿಮೀ ಉದ್ದದ ಬ್ರಹ್ಮಪುತ್ರ ನದಿ ದಡದ ಹೆದ್ದಾರಿ, ಭಾರತ ಮಯನ್ಮಾರ್ ಥೈಲ್ಯಾಂಡ್ ಜೋಡಿಸುವ 1360ಕಿಮೀ ಹೆದ್ದಾರಿ ಇವೆಲ್ಲಾ ಸದ್ಯದ ಸರ್ಕಾರದ ಕೊಡುಗೆ.

೧೦. 3400ಕೋಟಿ ವಾಯುಸಾರಿಗೆ ಅಭಿವೃದ್ಧಿಗೆ ಮೀಸಲು ಅದರಲ್ಲಿ 950 ಕೋಟಿ ವಿನಿಯೋಗವಾಗಿದೆ. ಇತ್ತಿಚೆಗೆ ಉದ್ಘಾಟನೆಯಾದ ಪಾಕ್ಯಾಂಗ್ ವಿಮಾನ ನಿಲ್ದಾಣ‌ ಸಿಕ್ಕಿಂನ ಪ್ರಪ್ರಥಮ ವಿಮಾನ ನಿಲ್ದಾಣ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷರು ಕಟ್ಟಿದ ದುಬ್ರಿ ಜಿಲ್ಲೆಯ ರೂಪ್ಸಿ ವಿಮಾನ ನಿಲ್ದಾಣ 35 ವರ್ಷಗಳಿಂದ ಸ್ಥಗಿತಗೊಂಡಿತ್ತು. ಉಡಾನ್ ಯೋಜನೆಯಡಿಯಲ್ಲಿ 71.63 ಕೋಟಿ ವೆಚ್ಚದಲ್ಲಿ ಈ ವರ್ಷಾಂತ್ಯಕ್ಕೆ ಮರುಜೀವ ಕೊಡಲಾಗುವುದು.

೧೧. 21 ವರ್ಷ ಮೊದಲೇ ಅಡಿಗಲ್ಲು ಹಾಕಿ ನಿಂತುಹೋದ bogibeel ಸಂಪೂರ್ಣವಾಗಿದೆ.

Dhola-sidiya ಬ್ರಿಡ್ಜ್ ಪೂರ್ವ ಅರುಣಾಚಲ ಪ್ರದೇಶದಿಂದ ಅಸ್ಸಾಂಗೆ ಜೋಡಿಸುತ್ತದೆ. ಭಾರತದ ಅತಿ ಉದ್ದವಾದ ಈ ಬ್ರಿಡ್ಜ್ ಪೂರ್ಣಗೊಂಡಿದ್ದು 2017ರಲ್ಲಿ. Saraighat ಬ್ರಿಡ್ಜ್ ಜನವರಿ 2017ರಲ್ಲಿ ಉದ್ಘಾಟನೆಗೊಂಡಿದೆ. ಇನ್ನೂ ಆರು ಬ್ರಿಡ್ಜ್‌ಗಳು ಸರದಿಯಲ್ಲಿವೆ.

೧೨.ಸಿಕ್ಕಿಂ 2003ರಿಂದ ತಾನೊಂದು ಸಂಪೂರ್ಣ ಸಾವಯವ ಕೃಷಿ ಹೊಂದಿರುವ ರಾಜ್ಯವಾಗಬೇಕೆಂಬ ಆಸೆ ಈಗ ಫಲಪ್ರದವಾಗಿದೆ. ಆ ರಾಜ್ಯದ 75000 ಹೆಕ್ಟೇರ್ ಭೂಭಾಗ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದೆ. ಸಿಕ್ಕಿಂಗೆ UNನಿಂದ best policies for world’s first organic state ಪ್ರಶಸ್ತಿ ಲಭಿಸಿತು.

೧೩.ತೋಟಗಾರಿಕಾ ಉತ್ಪನ್ನಗಳು ಕೆಡದಂತೆ 16840 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣ.

೧೩.24 ಘಂಟೆ ವಿದ್ಯುತ್‌ಗಾಗಿ 5111 ಕೋಟಿ ಮೀಸಲು

೧೪.ಭಾರತದಿಂದ ಭೂತಾನ್ ಥಿಂಪುಗೆ 30 ಕಿಮೀ ಉದ್ದದ ರಸ್ತೆ.

೧೫.ಇಂಡೋ ಚೈನಾ ಯುದ್ಧದಲ್ಲಿ ಸೇನಾ ಸಾಮಗ್ರಿಗಳನ್ನು ಇಡಲು ವಶಪಡಿಸಿಕೊಂಡ ಜಾಗಕ್ಕೆ ಪರಿಹಾರ ಧನ ಕೊಟ್ಟಿರಲಿಲ್ಲ. ಸದ್ಯದ ಸರ್ಕಾರ ಮೂರು ಕಂತುಗಳಲ್ಲಿ 132ಕೋಟಿಯನ್ನು 223 ಕುಟುಂಬಗಳಿಗೆ ಅವರವರ ಪಾಲಿನಂತೆ ಕೊಟ್ಟಿದೆ.

೧೬.ಬಾಂಗ್ಲಾದ ಗಡಿಗೆ ಬೇಲಿ ಹಾಕುವ ಕಾರ್ಯ ನಡೆಯುತ್ತಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಮೂಲಕ ಬಾಂಗ್ಲಾ ನುಸುಳುಕೋರರಿಗೆ ಬುದ್ದಿ ಕಲಿಸಲು ತಯಾರಿ ನಡೆಯುತ್ತಿವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!