Uncategorized

ಅಭಿವೃದ್ಧಿ ಕಂಡ ಗ್ರಾಮೀಣ ಭಾರತ

೧.2014ರ ತನಕ‌ 56% ಇದ್ದ ಗ್ರಾಮೀಣ ರಸ್ತೆಗಳು 2017ರ ಹೊತ್ತಿಗೆ 82%ಕ್ಕೆ ತಲುಪಿವೆ. ಒಟ್ಟಾರೆ ನಿರ್ಮಾಣವಾದ ರಸ್ತೆಯ ಉದ್ದ 2,03,484 ಕಿಮೀ

೨.ಈ ಮೊದಲು ಒಂದು ದಿನಕ್ಕೆ 69 ಕಿಮೀ ಸರಾಸರಿಯಲ್ಲಿ  ಆಗುತ್ತಿದ್ದ ರಸ್ತೆ ನಿರ್ಮಾಣ ಈಗ 134 ಕಿಮೀನಷ್ಟು ವೇಗ ಪಡೆದುಕೊಂಡಿದೆ.

೩.15-35ರ ವಯೋಮಾನದ ಯುವಕರಿಗೆ ಕೌಶಲ್ಯಾಭಿವೃದ್ಧಿಯನ್ನು ಮಾಡುವ ಸಲುವಾಗಿ ದೀನದಯಾಳ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ 6.35 ಲಕ್ಷ ಯುವಕರಿಗೆ ತರಬೇತಿ ಸಿಕ್ಕಿದ್ದು 3.48 ಲಕ್ಷ ಯುವಕರಿಗೆ ಉದ್ಯೋಗವೂ ಲಭಿಸಿದೆ.

೪. ದೀನದಯಾಳ್ ಅಂತ್ಯೋದಯ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸ್ವ ಸಹಾಯ ಸಂಘಗಳಿಗೆ ಆರ್ಥಿಕಾನುಕೂಲ ಮಾಡಿಕೊಡಲಾಗುತ್ತಿದೆ. ದೇಶದಲ್ಲಿ 2014ರಿಂದೀಚೆ 45 ಲಕ್ಷ ಸ್ವ ಸಹಾಯ ಸಂಘಗಳು ತೆರೆಯಲ್ಪಟ್ಟಿವೆ

‌ಅದರಲ್ಲಿ 20 ಲಕ್ಷ ಗ್ರಾಮೀಣ ಪ್ರದೇಶದಲ್ಲೇ ಇವೆ. 2.25ಕೋಟಿ ಮಹಿಳೆಯರಿಗೆ ಈ ಮೂಲಕ ಉದ್ಯೋಗ ಲಭಿಸಿದೆ.

೫.ಮಹಿಳಾ ಕಿಸಾನ್ ಸಶಕ್ತೀಕರಣ ಯೋಜನೆಯಲ್ಲಿ 33ಲಕ್ಷ ಮಹಿಳಾ ಕೃಷಿಕರಿಗೆ ತರಬೇತಿ.

೬.ಆಜೀವಿಕಾ ಗ್ರಾಮೀಣ ಎಕ್ಸ್‌ಪ್ರೆಸ್‌ ಯೋಜನೆಯಡಿಯಲ್ಲಿ ಒಂದು ಹಳ್ಳಿಗೆ ಸಂಚಾರಿ ಬಸ್ಸಿನ ಮೂಲಕ ಮೊಬೈಲ್ ಆಸ್ಪತ್ರೆಯಂಥ, ಮಾರುಕಟ್ಟೆಯಂಥ ವ್ಯವಸ್ಥೆ ಮಾಡಿಕೊಡಲಾಗಿದೆ.

೭.ಸಂಸದ್ ಆದರ್ಶ ಗ್ರಾಮ್ ಯೋಜನೆಯಡಿಯಲ್ಲಿ ಗ್ರಾಮಗಳ ಉದ್ಧಾರದ ಜವಾಬ್ದಾರಿಯನ್ನು ಸಂಸದರಿಗೆ ವಹಿಸಿಕೊಡುತ್ತಿದ್ದಾರೆ. 696 ಗ್ರಾಮ ಪಂಚಾಯತಿಗಳನ್ನು ಸಂಸದರು ಕೈಗೆತ್ತಿಕೊಂಡಿದ್ದಾರೆ.

೮.ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ ನಿರ್ಮಾಣವಾದ ಮನೆಗಳ ಸಂಖ್ಯೆ 1 ಕೋಟಿ. 2020ರ ವೇಳೆಗೆ ಎಲ್ಲ ಗ್ರಾಮಸ್ಥರಿಗೂ ಸೂರು ಒದಗಿಸಿಕೊಡುವ ಸಂಕಲ್ಪ.

೯.2009-14ರತನಕ ಕೇವಲ 59 ಗ್ರಾಮ ಪಂಚಾಯತಿಗಳಿಗೆ ಆಫ್ಟಿಕಲ್ ಫೈಬರ್ ಕನೆಕ್ಷನ್ 2014ರ ನಂತರ ಇಲ್ಲಿಯವರೆಗೆ 1.22ಲಕ್ಷ ಗ್ರಾಮೀಣ ಪಂಚಾಯತ್‌ಗಳಿಗೆ ಆಫ್ಟಿಕಲ್ ಫೈಬರ್ ಕನೆಕ್ಷನ್!

೧೦.ಸ್ವಚ್ಛಭಾರತದಡಿಯಲ್ಲಿ ಶೌಚಾಲಯಗಳನ್ನು ಕಟ್ಟುವುದರ ಮೂಲಕ ಗ್ರಾಮೀಣ ನಿರ್ಮಲೀಕರಣದ ಮಟ್ಟ ಏರಿಕೆ. ಗ್ರಾಮೀಣ ನೈರ್ಮಲ್ಯ 2014ರವರೆಗೆ 38.7% ಸದ್ಯ ಇದರ ಪ್ರಮಾಣ 98.63%.  5.5 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ.

೧೧. ಹಳ್ಳಿಗಳಿಗೆ ವಿದ್ಯುತ್ ಗ್ರಿಡ್‌ಗಳನ್ನು ಹಾಕಿ ವಿದ್ಯುತ್ ಕಲ್ಪಿಸಿಕೊಡೋದು ತುಂಬಾ ಕಷ್ಟದ ಕೆಲಸ. ಒಟ್ಟಾರೆ 18475 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ. ಬೆಳಕು ಕಂಡ ಮನೆಗಳ ಸಂಖ್ಯೆ 2.55 ಕೋಟಿ.

೧೨. ಸರ್ಕಾರದ ಗ್ರಾಮೀಣ ಸೌಕರ್ಯಗಳನ್ನು ತಿಳಿದುಕೊಳ್ಳಲು ಸೇವಾಕೇಂದ್ರಗಳ ಸ್ಥಾಪನೆ ಈ ಮೊದಲು ಇದ್ದ ಸೇವಾಕೇಂದ್ರಗಳ ಸಂಖ್ಯೆ 83000 ಕೊನೆಯ ಐದು ವರ್ಷಗಳಲ್ಲಿ ನಿರ್ಮಾಣವಾದ ಸೇವಾ ಕೇಂದ್ರಗಳ ಸಂಖ್ಯೆ 3.18 ಲಕ್ಷ

೧೩.ಉಜ್ವಲಾ ಯೋಜನೆಯ ಮೂಲಕ ಗ್ಯಾಸ್‌ ಕನೆಕ್ಷನ್ ಪಡೆದ ಗ್ರಾಮಗಳು 70%.ಆದಿವಾಸಿ ಜನಾಂಗದವರಿಗೇ 45% ಗ್ಯಾಸ್ ಕನೆಕ್ಷನ್ ಲಭಿಸಿದೆ.

೧೪. ಜನ್-ಧನ್ ಸ್ಕೀಮಿನಲ್ಲಿ 2017 ಡಿಸೆಂಬರ್ ವೇಳೆಗೆ ಗ್ರಾಮೀಣ ವಿಭಾಗದಲ್ಲಿ  ತೆರೆಯಲ್ಪಟ್ಟ ಅಕೌಂಟುಗಳ ಸಂಖ್ಯೆ 18 ಕೋಟಿ ಆಗಿನ ಅಂಕಿಅಂಶಗಳ ಪ್ರಕಾರ ಒಟ್ಟಾರೆ ಅಕೌಂಟುಗಳ 50%ಕ್ಕಿಂತ ಹೆಚ್ಚು ಗ್ರಾಮೀಣ ಜನರದ್ದೇ ಆಗಿದ್ದವು.

೧೫. ಆಯುಷ್ಮಾನ್ ಭಾರತದಲ್ಲಿ ರೋಗ ರುಜಿನಗಳಿಗೆ ಉಚಿತ ಚಿಕಿತ್ಸೆ ಪಡೆದುಕೊಂಡವರಲ್ಲಿ ಗ್ರಾಮೀಣ ಜನರೇ ಹೆಚ್ಚು.‌

೧೬.ಜನೌಷಧಿ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶದ ಫಲಾನುಭವಿಗಳ ಸಂಖ್ಯೆ 79%.

೧೭. 2018ರ ನಂತರ ಗ್ರಾಮೀಣ ಮೂಲ ಸೌಕರ್ಯಗಳಿಗೆ ಮೀಸಲಾದ ಹಣದ ಮೊತ್ತ 14.34 ಲಕ್ಷ ಕೋಟಿ

೧೮. 2018ರ ನಂತರ ಕೆಲವು ಯೋಜನೆಗಳಿಂದ  ಗ್ರಾಮೀಣ ಜನರಿಗೆ ಲಭಿಸಲಿರುವ ಉದ್ಯೋಗದ ಪ್ರಮಾಣ 321 ಕೋಟಿ man-hourನಷ್ಟು (man-hour ಒಬ್ಬ ಮನುಷ್ಯ ಒಂದು ಗಂಟೆಯಲ್ಲಿ ಮಾಡಬಹುದಾದ ಸರಾಸರಿ ಕೆಲಸ)

ಪ್ರತಿದಿನ_ಪ್ರಧಾನಿ ೬

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!