ಅಂಕಣ

ರಾಷ್ಟ್ರ ರಾಷ್ಟ್ರೀಯತೆ ಮತ್ತು ದೇಶಭಕ್ತಿ

ತೃತೀಯ ವರ್ಷ ಸಂಘ ಶಿಕ್ಷಾವರ್ಗದ ಸಮಾರೋಪದಲ್ಲಿ (೦೭-೦೬-೨೦೧೮) ಡಾ. ಪ್ರಣವ್ ಮುಖರ್ಜಿ ಅವರ ಭಾಷಣದ ಬರಹ ರೂಪ

ಇಂಡಿಯಾ, ಎಂದರೆ ಭಾರತದ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಕುರಿತಾಗಿ ನನ್ನ ಅರಿವಿನ ಕುರಿತಾಗಿ ಮಾತನಾಡಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಮೂರು ವಿಚಾರಗಳು ಒಂದಕ್ಕೊಂದು ಎಷ್ಟು ಆಳವಾಗಿ ಬೆಸೆದುಕೊಂಡಿವೆ ಎಂದರೆ ಒಂದು ವಿಚಾರವನ್ನು ಬಿಟ್ಟು ಉಳಿದದ್ದನ್ನು ಮಾತನಾಡುವುದು ಅಸಾಧ್ಯವಾಗುತ್ತದೆ.

 ಮೊದಲಿಗೆ ಶಬ್ದಕೋಶದ ಪ್ರಕಾರ ಮೂರು ಶಬ್ದಗಳ ಅರ್ಥವನ್ನು ತಿಳಿಯೋಣ. ರಾಷ್ಟ್ರ ಎಂದರೆ, ಒಂದು ಪ್ರದೇಶದಲ್ಲಿ, ಒಂದೇ ರೀತಿಯ ಸಂಸ್ಕೃತಿ, ಭಾಷೆ / ಇತಿಹಾಸವನ್ನು ಹೊಂದಿದ ಜನರ ಗುಂಪು; ರಾಷ್ಟ್ರೀಯತೆತಮ್ಮ ದೇಶದ ಸತ್ತ್ವದ ಕುರಿತಾಗಿ ಇರುವ ಅಭಿಮಾನ; ದೇಶಭಕ್ತಿತನ್ನ ದೇಶದ ಬಗೆಗೆ ಇರುವ ಭಕ್ತಿ ಮತ್ತು ತೀವ್ರವಾದ ಬೆಂಬಲ.

 ನಮ್ಮ ಮೂಲವನ್ನು ನೋಡಿದಾಗ, ಭಾರತ ರೇಷ್ಮೆ ಮತ್ತು ಮಸಾಲೆ ಪದಾರ್ಥಗಳ ಮೂಲಕ ಜಾಗತಿಕವಾಗಿ ಬೆಸೆಯಲ್ಪಟ್ಟ ಸಮಾಜವಾಗಿತ್ತು. ವಾಣಿಜ್ಯ ಉದ್ಯಮವು ಸಂಸ್ಕೃತಿಯ ವಿನಿಮಯ, ನಂಬಿಕೆ ಮತ್ತು ವ್ಯಾಪಾರಿಗಳ ಹುಟ್ಟು, ವಿದ್ವಾಂಸರು ಮತ್ತು ಋಷಿಗಳು ಪರ್ವತಗಳಲ್ಲಿ ಸಂಚರಿಸುವುದನ್ನು, ಸಾಗರದಲ್ಲಿ ಸಾಗುವುದನ್ನು ಸಾಕ್ಷಿಯಾಗಿ ನಿಂತಿತು. ಹಿಂದೂಧರ್ಮದ ಪ್ರಭಾವದೊಂದಿಗೆ ಬೌದ್ಧಧರ್ಮವು ಮಧ್ಯ ಏಷ್ಯಾ, ಚೀನಾ ಮತ್ತು ಆಗ್ನೇಯ ಏಷ್ಯಾವನ್ನು ತಲಪಿತು. ಮೆಗಸ್ತನೀಸ್ (ಕ್ರಿ.ಪೂ. 4ನೇ ಶತಮಾನ), ಫಾಹಿಯಾನ್ (ಕ್ರಿ.. 5ನೇ ಶತಮಾನ), ಹ್ಯುಯೆನ್ ತ್ಸಾಂಗ್(ಕ್ರಿ.. 7ನೇ ಶತಮಾನ) ಇವರೆಲ್ಲ ಭಾರತಕ್ಕೆ ಬಂದು ಸುಸಜ್ಜಿತ ಮೂಲಕ ಸೌಕರ್ಯಗಳಿಂದ ಕೂಡಿದ ಸಮರ್ಥ ಆಡಳಿತ ವ್ಯವಸ್ಥೆಯುಳ್ಳ ಭಾರತದ ಬಗ್ಗೆ ಬರೆದರು. ತಕ್ಷಶಿಲಾ, ನಳಂದಾ, ವಿಕ್ರಮಶಿಲಾ, ವಾಲಭಿ, ಸೋಮಪುರ ಮತ್ತು ಓದಂತಪುರಿ ನಮ್ಮ ಪುರಾತನ ವಿಶ್ವವಿದ್ಯಾನಿಲಯಗಳಾಗಿದ್ದವು. ಪ್ರಪಂಚದ ಬುದ್ಧಿವಂತರ ಆಕರ್ಷಣಾ ಕೇಂದ್ರಗಳಂತಿದ್ದ ವಿಶ್ವವಿದ್ಯಾನಿಲಯಗಳು ಕ್ರಿ.ಪೂ. 6 ನೇ ಶತಮಾನದ ಮೊದಲಿಗೆ ಸುಮಾರು 1800 ವರ್ಷಗಳ ಕಾಲ ಪ್ರಪಂಚವನ್ನೇ ಆಳಿದವು. ವಿಶ್ವವಿದ್ಯಾನಿಲಯಗಳ ವಾತಾವರಣದಲ್ಲಿ ಸಾಹಿತ್ಯಕಲೆವಿದ್ವತ್ಗಳು ಪ್ರವರ್ಧಮಾನಕ್ಕೆ ಬಂದವು. ರಾಜ್ಯ ನಿರ್ಮಿಸುವ, ನಡೆಸುವ ನೈಪುಣ್ಯತೆಯ ಕುರಿತಾಗಿ ತಿಳಿಸುವ ಅಧಿಕೃತ ಪುಸ್ತಕವೆಂದೇ ಹೇಳಬಹುದಾದ ಚಾಣಕ್ಯನಅರ್ಥಶಾಸ್ತ್ರಪುಸ್ತಕವು ಇದೇ ಸಮಯದಲ್ಲಿ ಬರೆಯಲ್ಪಟ್ಟಿತು.

1648ರ ವೆಸ್ಟ್ಫಾಲಲಿಯಾ ಒಪ್ಪಂದದ ಪ್ರಕಾರ ಯುರೋಪಿಯನ್ ನೇಷನ್-ಸ್ಟೇಟ್ ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ ಭಾರತದಲ್ಲಿ ರಾಷ್ಟ್ರದ ಅಸ್ತಿತ್ವವಿತ್ತು. ನಿರ್ದಿಷ್ಟ ಪ್ರದೇಶ, ಏಕಭಾಷೆ, ಧರ್ಮೀಯತೆ, ಸಮಾನ ಶತ್ರು-ಮಿತ್ರ ಎನ್ನುವ ನಮ್ಮ ಈ ಪರಿಕಲ್ಪನೆಯೇ ಯೂರೋಪಿನ ಹಲವು ರಾಜ್ಯಗಳ ರಚನೆಗೆ ನಾಂದಿಯಾಯಿತು. ವಸುಧೈವ ಕುಟುಂಬಕಮ್’, ಸರ್ವೇ ಭವಂತು ಸುಖಿನಃ, ಸರ್ವೇ ಂತು ನಿರಾಮಯಾ ಇತ್ಯಾದಿ ಆಧಾರದಲ್ಲಿ ಭಾರತದ ರಾಷ್ಟ್ರೀಯತೆ ಬೆಳೆದಿದೆ. ಪ್ರಪಂಚವನ್ನು ನಮ್ಮ ಕುಟುಂಬ ಎಂದು ಪರಿಗಣಿಸುವ ನಾವು ಎಲ್ಲರ ಉತ್ತಮ ಆರೋಗ್ಯ ಮತ್ತು ಆನಂದಕ್ಕಾಗಿ ಪ್ರಾರ್ಥಿಸುತ್ತೇವೆ. ಸಂಘರ್ಷ, ಸಮೀಕರಣ ಮತ್ತು ಸಹ-ಅಸ್ತಿತ್ವದ ದೀರ್ಘಕಾಲದ ಪ್ರಕ್ರಿಯೆಯ ಮೂಲಕ ನಮ್ಮ ರಾಷ್ಟ್ರೀಯತೆಯ ಗುರುತು ಹೊರಹೊಮ್ಮಿದೆ. ವೈವಿಧ್ಯವಾದ ಸಂಸ್ಕೃತಿ, ನಂಬಿಕೆ ಮತ್ತು ಭಾಷೆಯ ವಿವಿಧತೆ ಭಾರತವನ್ನು ವಿಶೇಷವಾಗಿಸುತ್ತದೆ. ತಾಳ್ಮೆಯೇ ನಮ್ಮ ಶಕ್ತಿ, ಬಹುಸಾಂಸ್ಕೃತಿಕತೆಯನ್ನು ಸ್ವೀಕರಿಸುವುದು ಮತ್ತು ಗೌರವಿಸುವುದು ನಮ್ಮ ಗುಣ. ವೈವಿಧ್ಯತೆಯನ್ನು ಆಚರಿಸುತ್ತೇವೆ. ಇವೆಲ್ಲವೂ ಶತಶತಮಾನಗಳಿಂದ ನಮ್ಮ ಸಾಮೂಹಿಕ ಪ್ರಜ್ಞೆಯ ಭಾಗವಾಗಿದೆ. ಧರ್ಮ, ಪ್ರದೇಶ, ದ್ವೇಷ ಮತ್ತು ಅಸಹಿಷ್ಣುತೆಯ ಮೂಲಕ ರಾಷ್ಟ್ರೀಯತೆಯನ್ನು ಗುರುತಿಸುವುದು ನಮ್ಮ ರಾಷ್ಟ್ರೀಯತೆಯ ಗುರುತನ್ನೇ ದುರ್ಬಲವಾಗಿಸುತ್ತದೆ. ನಮ್ಮಲ್ಲಿ ವ್ಯತ್ಯಾಸಗಳು ಕಾಣಿಸುವುದು ಸಹಜ ಮತ್ತು ಅದು ತೋರಿಕೆಯಷ್ಟೆ; ಆದರೆ ನಮ್ಮ ಅಂತರಂಗದಲ್ಲಿ ನಾವು ವಿಶಿಷ್ಟ ಸಂಸ್ಕೃತಿಯ ಹಿನ್ನೆಲೆಯಿಂದ ಒಂದೇ ಇತಿಹಾಸ, ಸಾಹಿತ್ಯ, ಾಗರಿಕತೆಯನ್ನು ಹೊಂದಿದ್ದೇವೆ. ಶ್ರೇಷ್ಠ ಇತಿಹಾಸಕಾರ ವಿನ್ಸೆಂಟ್ ಸ್ಮಿತ್‌ನ ಮಾತುಗಳಲ್ಲಿ ಹೇಳುವುದಾದರೆ – ಭಾರತವು ಎಲ್ಲಾ ಅನುಮಾನಗಳಿಗೂ ಮೀರಿದ ಭೌಗೋಳಿ ಪ್ರತ್ಯೇಕತೆ ಅಥವಾ ರಾಜಕೀಯ ಶ್ರೇಷ್ಠತೆಯಿಂದ ಉತ್ಪತ್ತಿಯಾಗುವಂತೆಯೇ ಹೆಚ್ಚು ಗಾಢವಾದ ಆಧಾರವಾಗಿರುವ ಮೂಲಭೂತ ಏಕತ್ವವನ್ನು ಹೊಂದಿದೆ. ಈ ಐಕ್ಯತೆಯು ಅಸಂಖ್ಯಾತ ವೈವಿಧ್ಯತೆಯು ರಕ್ತ, ಬಣ್ಣ, ಭಾಷೆ, ಉಡುಗೆ, ಸ್ವಭಾವ, ನಡವಳಿಕೆ, ಪಂಥಗಳಿಂದ ಬಂದುದಾಗಿದೆ.

ನಾವು ಇತಿಹಾಸವನ್ನು ತ್ವರಿತವಾಗಿ ನೋಡುವುದಾದರೆ,  ಹದಿನಾರು ಮಹಾಜನಪದಗಳು ಉತ್ತರ ಭಾರತದಾದ್ಯಂತ ಪೂರ್ವ ಸಾಮಾನ್ಯ ಶಕೆ (ಬಿಸಿಇ)  6 ನೇ ಶತಮಾನದಲ್ಲಿ ಹರಡಿತ್ತು. 4 ನೇ ಶತಮಾನದಲ್ಲಿ (ಬಿಸಿಇ), ಚಂದ್ರಗುಪ್ತ ಮೌರ್ಯನು ಉತ್ತರ-ಪಶ್ಚಿಮ ಮತ್ತು ಉತ್ತರ ಭಾರತವನ್ನು ಒಳಗೊಂಡ ಶಕ್ತಿಶಾಲಿ ಸಾಮ್ರಾಜ್ಯವನ್ನು ನಿರ್ಮಿಸಲು ಗ್ರೀಕರನ್ನು ಸೋಲಿಸಿದನು. ಚಕ್ರವರ್ತಿ ಅಶೋಕ ಈ ರಾಜವಂಶದ ಅತ್ಯಂತ ಶ್ರೇಷ್ಠ ಆಡಳಿತಗಾರನಾಗಿದ್ದ. ಮೌರ್ಯ ಸಾಮ್ರಾಜ್ಯದ ಕುಸಿತದ ನಂತರ, ಸಾಮ್ರಾಜ್ಯವು ಸುಮಾರು ಬಿಸಿಇ  185 ರಲ್ಲಿ ಸಣ್ಣ ಸಾಮ್ರಾಜ್ಯಗಳಾಗಿ ಮುರಿದು ಹೋಯಿತು; ಗುಪ್ತ ರಾಜವಂಶವು ಮತ್ತೆ ಸುಮಾರು ಸಾಮಾನ್ಯ ಶಕೆ (ಬಿಇ) 550 ರಲ್ಲಿ ಕುಸಿದ ದೊಡ್ಡ ಸಾಮ್ರಾಜ್ಯವನ್ನು ಸೃಷ್ಟಿಸಿತು; 12 ನೇ ಶತಮಾನದಲ್ಲಿ ಮುಸ್ಲಿಂ ದಾಳಿಕೋರರು ದೆಹಲಿಯನ್ನು ವಶಪಡಿಸಿಕೊಳ್ಳುವವರೆಗೆ ಅನೇಕ ರಾಜವಂಶಗಳು ಆಳಿದವು ಮತ್ತು ಹಲವು ರಾಜಮನೆತನಗಳು ಮುಂದಿನ 300 ವರ್ಷಗಳ ಕಾಲ ಸತತ ಆಳ್ವಿಕೆ ನಡೆಸಿದವು. ಬಾರ್ಬ 1526 ರಲ್ಲಿ ಮೊದಲ ಪಾಣಿಪತ್ ಕದನದಲ್ಲಿ ಕೊನೆಯ ಲೋಧಿ ರಾಜನನ್ನು ಸೋಲಿಸುವ ಮೂಲಕ ದೃಢವಾದ ಮೊಘಲ್ ಆಳ್ವಿಕೆಯನ್ನು 300 ವರ್ಷಗಳವರೆಗೆ ಮುಂದುವರೆಸಿದರು. 1757 ರಲ್ಲಿ ಪ್ಲಾಸಿ್ಸ ಯುದ್ಧವನ್ನು ಗೆದ್ದ ನಂತರ ಈಸ್ಟ್ ಇಂಡಿಯಾ ಕಂಪೆನಿ, ಮತ್ತು ಮೂರು ಬ್ಯಾಟಲ್ಸ್ ಆಫ್ ಆರ್ಕೊಟ್ (1746-63) ಮೂಲಕ ಭಾರತದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ವ್ಯಾಪಕ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆಯಿತು. ಪಾಶ್ಚಾತ್ಯ ಪ್ರದೇಶದ ಬಹುಪಾಲು ಭಾಗವು ಕಂಪೆನಿಯ ಪ್ರಾಂತ್ಯಕ್ಕೆ ಸೇರ್ಪಡೆಗೊಂಡಿತ್ತು ಮತ್ತು ಈ ಪ್ರಾಂತ್ಯಗಳನ್ನು ಆಡಳಿತ ನಡೆಸಲು ಪ್ರಾರಂಭಿಸಿತು, 1774 ರಲ್ಲಿ ಒಂದು ಆಧುನಿಕ ರೂಪದ ಸರ್ಕಾರವನ್ನು ಸ್ಥಾಪಿಸಲಾಯಿತು. ಈ ಪ್ರದೇಶಗಳನ್ನು ನಿರ್ವಹಿಸಲು, ಕೋಟೆು ವಿಲಿಯಂ, ಕಲ್ಕತ್ತಾದಲ್ಲಿನ ಗವರ್ನರ್ ಜನರಲ್  ಕಚೇರಿ ಮತ್ತು ಎರಡು ಉಪ-ಆಡಳಿತದ ಗವನರ್ರ ಕಚೇರಿಗಳನ್ನು ಮದ್ರಾಸ್ ಮತ್ತು ಬಾಂಬೆಯಲ್ಲಿ ರಚಿಸಲಾಯಿತು. ಸುಮಾರು 140 ವರ್ಷಗಳ ಕಾಲ, ಕೊಲ್ಕತ್ತವು ಭಾರತದಲ್ಲಿನ ಬ್ರಿಟಿಷ್ ಪ್ರಾಧಿಕಾರದ ಕೇಂದ್ರವಾಗಿತ್ತು. ಆದಾಗ್ಯೂ, ಆಡಳಿತದ ಜವಾಬ್ದಾರಿಯನ್ನು 1858 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯಿಂದ ದೂರವಿರಿಸಲಾಯಿತು ಮತ್ತು ಭಾರತದ ಆಡಳಿತ ನಿಭಾಯಿಸಲು ಬ್ರಿಟಿಷ್ ಕ್ಯಾಬಿನೆಟ್ ನಲ್ಲಿ ಭಾರತದ ಆಡಳಿತ ಕಾರ್ಯದರ್ಶಿಯನ್ನು ನೇಮಿಸಲಾಯಿತು.

 2500 ವರ್ಷಗಳ ರಾಜಕೀಯ ಅದೃಷ್ಟ ಮತ್ತು ವಿಜಯದ ಅವಧಿಯ ಉದ್ದಕ್ಕೂ, 5000 ವರ್ಷ ಹಳೆಯ ನಾಗರಿಕತೆಯು ನಾಶವಾಗದೆ ನಿರಂತರವಾಗಿ  ಉಳಿಯಿತು. ವಾಸ್ತವವಾಗಿ, ಪ್ರತಿ ಆಕ್ರಮಣಕಾರರೂ ಮತ್ತು ಪ್ರತಿ ವಿದೇಶಿ ಅಂಶವೂ ಹೊಸ ಸಂಶ್ಲೇಷಣೆ ಮತ್ತು ಏಕತೆಯನ್ನು ರೂಪಿಸಲು ಹೀರಿಕೊಳ್ಳಲ್ಪಟ್ಟವು. ಟಾಗೋರ್ ಅವರ ಕವಿತೆಭಾರತ್ ತೀರ್ಥದಲ್ಲಿ ಹೇಳಿರುವಂತೆ … ‘ಯಾರ ಕರೆಯ ಮೇರೆಗೆ ಸಹಸ್ರಮಾನಗಳವರೆಗೆ ಪ್ರಪಂಚದ ಮೂಲೆಗಳಿಂದ ಮಾನವೀಯತೆಯ ಎಷ್ಟೋ ಧಾರೆಗಳು ಅಸಂಖ್ಯಾತ ಅಲೆಗಳ ರೂಪದಲ್ಲಿ ಬಂದವು ಮತ್ತು ನದಿಗಳಂತೆ ಬೆರೆತವು. ಮೂಲಕ ಒಂದು ಆತ್ಮವನ್ನು ಸೃಷ್ಟಿಸಿದೆ, ಇದನ್ನು ಭಾರತ ಎಂದು ಕರೆಯಲಾಗುತ್ತದೆ.’

ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಅನೇಕ ಭಾರತೀಯ ಸಂಘಟನೆಗಳ ಆಧುನಿಕ ಭಾರತೀಯ ರಾಜ್ಯ ಎಂಬ ಪರಿಕಲ್ಪನೆಯು ಕಂಡುಬಂದಿದೆ.  1895 ರಲ್ಲಿ ಪುಣೆಯಲ್ಲಿ ಶ್ರೀ ಸುರೇಂದ್ರನಾಥ್ ಬ್ಯಾನರ್ಜಿ ಅವರೊಂದಿಗೆ ಆರಂಭಗೊಂಡು ಎಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬ್ರಿಟಿಷ್ ಇಂಡಿಯಾ ಮತ್ತು 565 ರಾಜಪ್ರಭುತ್ವದ ರಾಜ್ಯಗಳ ಪ್ರದೇಶಗಳನ್ನು ಒಳಗೊಂಡ ಭಾರತೀಯ ರಾಷ್ಟ್ರಕ್ಕೆ ಕರೆ ನೀಡಿದರು. ಬ್ಯಾರಿರ್ಸ್ಟ ಜೋಸೆಫ್ ಬ್ಯಾಪ್ಟಿಸ್ಟಾ ಅವರು ಹುಟ್ಟುಹಾಕಿದ್ದ ಸ್ವರಾಜ್ ವಿಚಾರಕ್ಕೆ ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ಪಡೆಯುತ್ತೇನೆ ಎಂದು ಬಾಲಗಂಗಾಧರ ತಿಲಕರು ಘೋಷಿಸಿ, ಬ್ರಿಟಿಷ್ ಇಂಡಿಯಾದಾದ್ಯಂತ ವ್ಯಾಪಿಸಿರುವ ವಿವಿಧ ಜಾತಿಗಳು, ಮತಗಳು ಮತ್ತು ಧರ್ಮಗಳನ್ನು ಒಳಗೊಂಡ ಭಾರತೀಯ ಜನರಿಗೆ ಸ್ವರಾಜ್ ಎಂದು ಅವರು ಉಲ್ಲೇಖಿಸಿದ್ದರು. ಈ ರಾಷ್ಟ್ರ ಮತ್ತು ರಾಷ್ಟ್ರೀಯತೆಯು ಭೌಗೋಳಿಕ, ಭಾಷೆ, ಧರ್ಮ, ಅಥವಾ ಜನಾಂಗದವರಿಂದ ಆದದ್ದಲ್ಲ. ಗಾಂಧೀಜಿಯವರು ವಿವರಿಸಿದಂತೆ, ಭಾರತೀಯ ರಾಷ್ಟ್ರೀಯತೆಯು ಹೊರಗಿಡುವ, ಅಥವಾ ಆಕ್ರಮಣಕಾರಿ, ಅಥವಾ ವಿನಾಶಕಾರಿ ಅಲ್ಲ. ಪಂಡಿತ್ ಜವಾಹರಲಾಲ್ ನೆಹರು ಅವರ ‘ಡಿಸ್ಕವರಿ ಆಫ್ ಇಂಡಿಯಾ’ ನಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಿದಂತೆ ನಾನು ಭಾರತದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಇತರ ಗುಂಪುಗಳ ಸೈದ್ಧಾಂತಿಕ ಸಮ್ಮಿಳನದಿಂದ ರಾಷ್ಟ್ರೀಯತಾವಾದವು ಮಾತ್ರ ಬರಬಹುದೆಂದು ನನಗೆ ಮನವರಿಕೆಯಾಗಿದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧದ ನಮ್ಮ ಚಳವಳಿಯ ಪ್ರಕ್ರಿಯೆಯಲ್ಲಿ, ದೇಶಾದ್ಯಂತದ  ವಸಾಹತುಶಾಹಿ ವಿರೋಧಿ, ಮತ್ತು ಬ್ರಿಟಿಷ್ ವಿರೋಧಿ ಪ್ರಗತಿಶೀಲ ಚಳುವಳಿಗಳು ಹೆಚ್ಚಾಗಿ, ತಮ್ಮ ವೈಯಕ್ತಿಕಕ್ಕಿಂತ ದೇಶಭಕ್ತಿಯ ಭಾವನೆ, ಸೈದ್ಧಾಂತಿಕ ಮತ್ತು ರಾಜಕೀಯ ಒಲವು ಹೆಚ್ಚಿ ರಾಷ್ಟ್ರೀಯತೆ ಜಾಗೃತವಾಯಿತು.

 ನಾವು 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದೆವು. ರಾಜಾಡಳಿತವಿದ್ದ ಭಾರತದ ರಾಜ್ಯಗಳು ಭಾರತದ ಏಕೀಕರಣದಲ್ಲಿ ಒಂದಾದವು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರಯತ್ನಗಳಿಗೆ ಧನ್ಯವಾದಗಳು. ರಾಜ್ಯಗಳ ಪುನರ್ ರಚನೆಯ ಆಯೋಗದ ಶಿಫಾರಸಿನ ಮೇರೆಗೆ ರಾಜ್ಯಗಳ ರಚನೆಯ ನಂತರ ಪ್ರಾಂತೀಯ ಮತ್ತು ರಾಜಾಡಳಿತ ರಾಜ್ಯಗಳ ಸಂಪೂರ್ಣ ಏಕೀಕರಣವು ನಡೆಯಿತು.

 26 ಜನವರಿ 1950 ರಂದು, ಭಾರತದ ಸಂವಿಧಾನ ಜಾರಿಗೆ ಬಂದಿತು. ಆದರ್ಶವಾದ ಮತ್ತು ಧೈರ್ಯದ ಗಮನಾರ್ಹ ಪ್ರದರ್ಶನದಲ್ಲಿ, ನಾವು ಭಾರತದ ಜನರು ನಮ್ಮ ಎಲ್ಲಾ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ರಕ್ಷಣೆ ನೀಡಲು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ಒಪ್ಪಿಕೊಂಡೆವು. ಶತಮಾನಗಳ ಕಾಲ ವಸಾಹತು ಆಳ್ವಿಕೆಯಿಂದ ಸೃಷ್ಟಿಯಾದ ಬಡತನದಿಂದ ಪುನರುತ್ಪಾದನೆಯ ಕಡೆಗೆ ಬರಲು  ಪ್ರಜಾಪ್ರಭುತ್ವವು ನಮಗೆ ಅತ್ಯಂತ ಅಮೂಲ್ಯ ಮಾರ್ಗದರ್ಶಿಯಾಯಿತು. 395 ಆರ್ಟಿಕಲ್ಸ್ ಮತ್ತು 12 ಶೆಡ್ಯೂಲ್ಗಳನ್ನು ಒಳಗೊಂಡಿರುವ ಭಾರತೀಯ ಸಂವಿಧಾನವು ಕೇವಲ ಕಾನೂನು ದಾಖಲೆಯಾಗಿಲ್ಲ; ದೇಶದ ಸಾಮಾಜಿಕಆರ್ಥಿಕ ರೂಪಾಂತರದ ಮ್ಯಾಗ್ನಾ ಕಾರ್ಟಾ. ಇದು ಕೋಟ್ಯಂತರ ಭಾರತೀಯರ ಭರವಸೆಯನ್ನು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ನಮ್ಮ ಸಂವಿಧಾನ ಮೂಲಕ ನಮ್ಮ ರಾಷ್ಟ್ರೀಯತೆ ಹರಿಯುತ್ತದೆ. ಭಾರತೀಯ ರಾಷ್ಟ್ರೀಯತೆಯ ನಿರ್ಮಾಣವುಸಾಂವಿಧಾನಿಕ ದೇಶಭಕ್ತಿಆಗಿದೆ

 ನನ್ನ ಐವತ್ತು ವರ್ಷ ಅವಧಿಯ ಸಾರ್ವಜನಿಕ ಜೀವನದಲ್ಲಿ, ನಾನು ಸಂಸತ್ ಸದಸ್ಯನಾಗಿ ಮತ್ತು ಆಡಳಿತಗಾರನಾಗಿ ಅರಗಿಸಿಕೊಂಡ ಕೆಲವು ಸತ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಭಾರತದ ಆತ್ಮವು ಬಹುತ್ವ ಮತ್ತು ಸಹಿಷ್ಣುತೆಗಳಲ್ಲಿ ನೆಲೆಸಿದೆ. ನಮ್ಮ ಸಮಾಜದ ವಿವಿಧತೆಯು ಶತಮಾನಗಳ ಚಿಂತನೆಗಳ ಸಮೀಕರಣದ ಮೂಲಕ ಬಂದಿದೆ. ಸೆಕ್ಯುಲರಿಸಂ ಮತ್ತು ಒಳಗೊಳ್ಳುವಿಕೆ ನಮಗೆ ನಂಬಿಕೆಯ ವಿಷಯವಾಗಿದೆ. ಇದು ನಮ್ಮ ಸಂಯುಕ್ತ ಸಂಸ್ಕೃತಿಯಾಗಿದ್ದು, ಅದು ನಮ್ಮನ್ನು ಒಂದು ರಾಷ್ಟ್ರವನ್ನಾಗಿ ಮಾಡುತ್ತದೆ. ಭಾರತದ ರಾಷ್ಟ್ರೀಯತೆ ನಿಂತಿರುವುದು ಒಂದು ಭಾಷೆಯಿಂದಲ್ಲ, ಒಂದು ರಿಲಿಜನ್ ನಿಂದಲ್ಲ, ಒಂದು ಶತ್ರುವಿನಿಂದಲ್ಲ. 122ಕ್ಕೂ ಹೆಚ್ಚಿನ ಭಾಷೆಗಳು ಮತ್ತು ತಮ್ಮ ದೈನಂದಿನ ಜೀವನದಲ್ಲಿ 1600 ಉಪಭಾಷೆಗಳನ್ನು ಬಳಸಿಕೊಳ್ಳುವ 1.3 ಶತಕೋಟಿ ಜನರಪೆರೆನಿಯಲ್ ಯೂನಿವರ್ಸಲಿಸಂಇದು. 7 ಪ್ರಮುಖ ಮತಗಳನ್ನು ಅನುಸರಿಸುತ್ತ ಭಾರತದಲ್ಲಿ ಮೂರು ಪ್ರಮುಖ ಜನಾಂಗೀಯ ಗುಂಪುಗಳಾದ ಆರ್ಯನ್ನರು, ಮಂಗೋಲಿಯನ್ ಮತ್ತು ದ್ರಾವಿಡರು ಒಂದೇ ವ್ಯವಸ್ಥೆಯಲ್ಲಿ ವಾಸಿಸುತ್ತಾರೆ. ಒಂದು ಧ್ವಜ ಮತ್ತುಭಾರತಿ ಎಂಬ ಒಂದು ಗುರುತಿನಡಿ ನಾವೆಲ್ಲ ಬದುಕುತ್ತೇವೆ; ಮತ್ತು ನಮಗೆ ಶತ್ರುಗಳು ಇಲ್ಲ. ಇವುಗಳೇ ಭಾರತವನ್ನು ವೈವಿಧ್ಯಮಯ ಮತ್ತು ಏಕೀಕೃತ ರಾಷ್ಟ್ರವನ್ನಾಗಿಸಿದೆ.

ಶಾಂತಿಯುತ ಸಹ ಅಸ್ತಿತ್ವ, ಕರುಣೆ, ಜೀವನಕ್ಕೆ ಗೌರವ, ಮತ್ತು ಪ್ರಕೃತಿಯ ಸೌಹಾರ್ದತೆ ನಮ್ಮ ನಾಗರಿಕತೆಯ ಅಡಿಪಾಯ ರೂಪಿಸುತ್ತವೆ. ಪ್ರತಿ ಬಾರಿಯೂ ಒಂದು ಮಗು ಅಥವಾ ಮಹಿಳೆಯ ಮೇಲೆ ಕ್ರೌರ್ಯ ಘಟಿಸಿದಾಗ ಭಾರತದ ಆತ್ಮವು ಗಾಯಗೊಂಡಿದೆ. ಕ್ರೋಧದ ಅಭಿವ್ಯಕ್ತಿಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ಪದರವನ್ನು ಹರಿದುಹಾಕುತ್ತಿವೆ. ಪ್ರತಿದಿನ, ನಮ್ಮ ಸುತ್ತಲಿನ ಹಿಂಸೆಯನ್ನು ನಾವು ನೋಡುತ್ತೇವೆ. ಈ ಹಿಂಸೆಯ ಹೃದಯದಲ್ಲಿ ಕತ್ತಲೆ, ಭಯ, ಮತ್ತು ಅಪನಂಬಿಕೆಯಿದೆ. ನಾವು ಎಲ್ಲಾ ರೀತಿಯ ದೈಹಿಕ ಮತ್ತು ಮಾತಿನ ಹಿಂಸೆಗಳಿಂದ ನಮ್ಮ ಸಾರ್ವಜನಿಕ ಬದುಕನ್ನು ಮುಕ್ತಗೊಳಿಸಬೇಕು. ಅಹಿಂಸಾತ್ಮಕ ಸಮಾಜವು ಕೇವಲ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ, ವಿಶೇಷವಾಗಿ ಅಂಚಿನಲ್ಲಿರುವ ಮತ್ತು ಹೊರಹಾಕಲ್ಪಟ್ಟಿರುವ ಜನರ ಎಲ್ಲಾ ವಿಭಾಗಗಳ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ನಾವು ಕೋಪದಿಂದ, ಹಿಂಸಾಚಾರದಿಂದ ಮತ್ತು ಸಂಘರ್ಷದಿಂದ ಶಾಂತಿ, ಸಾಮರಸ್ಯ ಮತ್ತು ಸಂತೋಷದೆಡೆಗೆ ಸಾಗಬೇಕು.

 ಪ್ರಜಾಪ್ರಭುತ್ವದಲ್ಲಿ, ರಾಷ್ಟ್ರೀಯ ಪ್ರಾಮುಖ್ಯತೆಯ ಎಲ್ಲ ವಿಚಾರಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಮತ್ತು ಚರ್ಚೆಗಿಡುವುದು ಅತಿ ಮುಖ್ಯವಾಗಿದೆ. ಸ್ಪರ್ಧಾತ್ಮಕ ಆಸಕ್ತಿಗಳನ್ನು ಸಮತೋಲನಗೊಳಿಸುವುದಷ್ಟೇ ಅಲ್ಲದೆ ಅವುಗಳನ್ನು ಸಮನ್ವಯಗೊಳಿಸಲು ಸಹ ಒಂದು ಸಂವಾದ ಅವಶ್ಯಕ. ಸಾರ್ವಜನಿಕ ಚರ್ಚೆಗಳಲ್ಲಿ ವಿಭಿನ್ನವಾದ ಎಳೆಗಳನ್ನು ಗುರುತಿಸಬೇಕು. ನಾವು ವಾದಿಸಬಹುದು, ನಾವು ಒಪ್ಪಿಕೊಳ್ಳಬಹುದು ಅಥವಾ ನಾವು ಒಪ್ಪಿಕೊಳ್ಳದಿರಬಹುದು. ಆದರೆ ಬಹುಮತದ ಅಭಿಪ್ರಾಯದ ಅವಶ್ಯಕತೆಯನ್ನು ನಾವು ನಿರಾಕರಿಸಲಾಗುವುದಿಲ್ಲ. ಕೇವಲ ಒಂದು ಸಂಭಾಷಣೆಯ ಮೂಲಕ ನಮ್ಮ ರಾಜಕೀಯದಲ್ಲಿ ಅನಾರೋಗ್ಯಕರವಾದ ಕಲಹವಿಲ್ಲದೆ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಬಹುದು.

 ನಾವು ದೀರ್ಘಕಾಲ ನೋವು ಮತ್ತು ಕಲಹದಿಂದ ಬದುಕಿದ್ದೇವೆ. ವಿದ್ಯಾವಂತ ಯುವಕರಾದ ನೀವು ಶಿಸ್ತಿನ, ತರಬೇತಿ ಪಡೆದವರಾಗಿದ್ದೀರಿ. ದಯವಿಟ್ಟು ಶಾಂತಿ, ಸೌಹಾರ್ದತೆ ಮತ್ತು ಸಂತೋಷವನ್ನೇ ಬಯಸೋಣ. ನಮ್ಮ ತಾಯಿನಾಡು ಇದನ್ನು ಅಪೇಕ್ಷಿಸುತ್ತಿದೆ. ನಮ್ಮ ತಾಯಿನಾಡು ಇದಕ್ಕೆ ಅರ್ಹವಾಗಿದೆ.

ಮಾನವನ ಜೀವನದ ಅನುವಕ್ಕೆ ಸಂತೋಷವು ಮೂಲಭೂತ ಅವಶ್ಯಕತೆ ಆರೋಗ್ಯಕರ, ಸಂತೋಷಕರ, ಮತ್ತು ಉತ್ಪಾದಕ ಜೀವನವನ್ನು ನಡೆಸುವುದು ನಮ್ಮ ನಾಗರಿಕರ ಮೂಲಭೂತ ಹಕ್ಕು. ನಮ್ಮ ಆರ್ಥಿಕ ಬೆಳವಣಿಗೆಯ ಸೂಚಕಗಳಲ್ಲಿ ನಾವು ಚೆನ್ನಾಗಿ ಕೆಲಸ ಮಾಡಿದ್ದರೂ, ನಾವು ವಿಶ್ವ ಸಂತೋಷದ ಪಟ್ಟಿಯಲ್ಲಿ ಕಳಪೆ ಸ್ಥಾನ ಗಳಿಸಿದ್ದೇವೆ. ವಿಶ್ವ ಸಂತೋಷದ ವರದಿ- 2018 ರಲ್ಲಿ ಮ್ಯಾಪ್ ಮಾಡಲಾದ 156 ದೇಶಗಳಲ್ಲಿ ನಾವು 133 ನೇ ಸ್ಥಾನ ಹೊಂದಿದ್ದೇವೆ. ಪಾರ್ಲಿಮೆಂಟ್ ಹೌಸ್‌ನ ಲಿಫ್ಟ್ ಕ್ರ. 6 ರ ಸಮೀಪದಲ್ಲಿ ಬರೆಯಲ್ಪಟ್ಟ  ಕೌಟಿಲ್ಯನ ಅರ್ಥಶಾಸ್ತ್ರದ ಶ್ಲೋಕ ಹೀಗೆ ಹೇಳುತ್ತದೆ :

ಪ್ರಾಜಾಸುಖೇ ಸುಖಂ ರಾಜಃ ಪ್ರಜಾನಾಂ ಚ ಹಿತೇ ಹಿತಮ್

ನಾತ್ಮಪ್ರಿಯಂ ಹಿತಂ ರಾಜಃ ಪ್ರಜಾನಾಂತು ಪ್ರಿಯಂ ಹಿತಂ ॥

ಜನರ ಸಂತೋಷದಲ್ಲಿ ರಾಜನ ಸಂತೋಷ ಇರುತ್ತದೆ, ಅವರ ಕಲ್ಯಾಣವು ಅವನ ಕಲ್ಯಾಣವಾಗಿದೆ. ಆತನು ತಾನು ಸಂತೋಷಪಡುವುದನ್ನು ಮಾತ್ರ ಪರಿಗಣಿಸಬಾರದು. ಎಲ್ಲರಿಗೂ ಸಂತೋಷವನ್ನುಂಟುಮಾಡುವ ರೀತಿಯ ಬದುಕನ್ನು ಪ್ರಯೋಜನಕಾರಿ ಎಂದು ಪರಿಗಣಿಸಬೇಕು. ಕೌಟಿಲ್ಯನು ಈ ಶ್ಲೋಕದ ಮೂಲಕ ಹೇಳುವುದೇನೆಂದರೆ, ರಾಜ್ಯವು ಜನರಿಗೆ ಸೇರಿದ್ದು. ಜನರು ರಾಜ್ಯದ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದಾರೆ ಮತ್ತು ಜನರನ್ನು ವಿಭಜಿಸಲು ಮತ್ತು ಅದರ ನಡುವೆ ದ್ವೇಷವನ್ನು ಉಂಟುಮಾಡುವ ಏನನ್ನೂ ಮಾಡಬಾರದು. ಬಡತನ, ಕಾಯಿಲೆ ಮತ್ತು ನಿರುಪುುಕ್ತತೆಗೆ ವಿರುದ್ಧವಾದ ಯುದ್ಧ ಮಾಡಲು ಮತ್ತು ಆರ್ಥಿಕ ಬೆಳವಣಿಗೆಯನ್ನು ನೈಜ ಅಭಿವೃದ್ಧಿಯನ್ನಾಗಿ ಪರಿವರ್ತಿಸಲು ರಾಜ್ಯವನ್ನು ರೂಢಿಸಿಕೊಳ್ಳಬೇಕು. ಶಾಂತಿ, ಸಾಮರಸ್ಯ ಮತ್ತು ಸಂತೋಷವನ್ನು ಹರಡಲು ನಮ್ಮ ಸಾರ್ವಜನಿಕ ನೀತಿಯನ್ನು ರೂಪಿಸಬೇಕು. ನಮ್ಮ ದೈನಂದಿನ ಜೀವನದಲ್ಲಿ ನಮ್ಮ ರಾಜ್ಯ ಮತ್ತು ನಾಗರಿಕರ ಎಲ್ಲಾ ಕ್ರಮಗಳನ್ನು ವಾರ್ಗದರ್ಶನ ಮಾಡಬೇಕು. ಕೇವಲ ಇದರಿಂದ ಮಾತ್ರ ಸಂತೋಷದಾಯಕ ರಾಷ್ಟ್ರವನ್ನು ರಚಿಸಲು ಸಾಧ್ಯ. ಅಲ್ಲಿ ರಾಷ್ಟ್ರೀಯತೆ ಸ್ವಯಂಚಾಲಿತವಾಗಿ ಹರಿಯುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!