ಅಂಕಣ

ನಾನೇಕೆ ಒಬ್ಬ ಹಿಂದೂ, ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ….

ಪುಸ್ತಕದ  ಹೆಸರು : ನಾನೇಕೆ ಒಬ್ಬ ಹಿಂದೂ, ಸತ್ಯಾಸತ್ಯಗಳ ಅನ್ವೇಷಣೆಯಲ್ಲಿ….

ಲೇಖಕರು : ಉದಯಲಾಲ್ ಪೈ

ಕನ್ನಡ ಅನುವಾದ : ವೇದಾ ಆಠವಳೆ

[ ಇಂಗ್ಲೀಷ್ ಮೂಲ- ಉದಯಲಾಲ್ ಪೈ “ Why Am I a Hindu” ]

ಬೆಲೆ : ₹ 450

ಪ್ರಕಾಶಕರು : ಪೋಥಿ.ಕಾಮ್

“ಆಸಿಂಧು ಸಿಂಧು ಪರ್ಯಂತಾ ತಸ್ಯ ಚ ಭಾರತ ಭೂಮಿಕಾ, ಮಾತೃಭೂ ಪಿತೃಭೂಶ್ಚೈವ ಸ ವೈ ಹಿಂದುರಿತಿ ಸ್ಮೃತ:”. ಸಪ್ತ ಸಿಂಧುಗಳು ಮತ್ತು ಹಿಂದೂ ಮಹಾಸಾಗರದ ನಡುವೆ ಇರುವ ಭಾರತಭೂಮಿಯನ್ನು ತಂದೆ-ತಾಯ್ನೆಲ ಎಂದು ಯಾರು ಭಾವಿಸಿದ್ದಾನೋ ಅವನೇ ಹಿಂದೂ. ‘ಹಿಂದೂ’ ಪ್ರಜ್ಞೆಯನ್ನು ಎಷ್ಟು ಸರಳವಾಗಿ ವಿವರಿಸುತ್ತಿದೆ ನೋಡಿ ಈ ಶ್ಲೋಕ.  ಹೌದು, ಹಿಂದೂ ಅನ್ನೋದು ಒಂದು ಮಾನಸಿಕ ಸ್ಥಿತಿ- ಜೀವನ ಪದ್ಧತಿ- ಆತ್ಮಪ್ರಜ್ಞೆ- ಸ್ವಾತಂತ್ರ್ಯ- ಆತ್ಮವಿಶ್ವಾಸ, ಇನ್ನೂ ಏನೇನೋ…

ಯಾಕೆಂದರೆ ಹಿಂದೂಧರ್ಮದಲ್ಲಿ ಯಾವುದೇ ನಿಯಮಗಳ ಹಂಗಿಲ್ಲ. ಅದು ಅನುಯಾಯಿಗಳ ಚಿಂತನೆಗಳನ್ನು ಕಟ್ಟಿಹಾಕಿಲ್ಲ ಬದಲಾಗಿ ಸ್ವಯಂ ಉತ್ತರಗಳನ್ನು ಹುಡುಕಲು ನಿರಂತರವಾಗಿ ಪ್ರೇರೇಪಿಸಿದೆ. ಒಂದುವೇಳೆ ಅವರು ಧರ್ಮದ ಆಚರಣೆಗಳನ್ನು ವಿರೋಧಿಸಿದರೂ ಯಾರೂ ಅವರನ್ನು ಧರ್ಮದಿಂದ ಕಿತ್ತುಹಾಕಲಾರರು. ತಮ್ಮ ಧರ್ಮದ ಬಗ್ಗೆ  ನಿರ್ಭೀತಿಯಿಂದ ಯೋಚಿಸುತ್ತಾ, ತಪ್ಪು ಅನಿಸಿದ್ದನ್ನು ಪ್ರಶ್ನಿಸುತ್ತಾ ಬದುಕಬಹುದು. ಹಾಗೆ ನೋಡಿದರೆ ಹಿಂದೂಧರ್ಮ ಮತ್ತು ಅದರ ಆಚರಣೆಗಳು ಯಾವೊಬ್ಬ ವ್ಯಕ್ತಿಯಿಂದ ಆರಂಭವಾಗಿಲ್ಲ. ಇತರ ಧರ್ಮಗಳಂತೆ ಹಿಂದೂಗಳು ದೇವಾಲಯಗಳ ನಿಯಂತ್ರಣದಲ್ಲಿ ಬಾಳುತ್ತಿಲ್ಲ. ಇಲ್ಲಿ ಯಾರೂ ಶ್ರೇಷ್ಠರಲ್ಲ… ಕನಿಷ್ಠರೂ ಅಲ್ಲ .. ಹಿಂದೂಗಳು ಧರ್ಮದ ಹುಳುಕುಗಳ ಬಗ್ಗೆ ಕುರುಡಾಗಿದ್ದು , ಸದ್ವಿಚಾರಗಳನ್ನು ಮಾತ್ರ ಬಡಬಡಿಸುವ ಬದಲು , ನಾನೇಕೆ ಒಬ್ಬ ಹಿಂದೂ? ಎಂದು ಪ್ರಶ್ನಿಸುವ-ಉತ್ತರ ಹುಡುಕುವ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾರೆ.

ಸನಾತನ ಧರ್ಮದ ತಳಕಟ್ಟಿನ ಮೇಲೆ ನಿಂತ ಹಿಂದೂಧರ್ಮದ ಅಂತರಾಳವನ್ನು ಆಧುನಿಕತೆಯ ಒರೆಗಲ್ಲಿಗೆ ಹಚ್ಚುವ, ಪತ್ರಕರ್ತ ಉದಯ್ ಲಾಲ್ ಪೈ ರವರ “ Why Am I a Hindu” ಎಂಬ ಇಂಗ್ಲೀಷ್ ಕೃತಿಯನ್ನು ಲೇಖಕಿ ಕನ್ನಡಕ್ಕೆ ಅನುವಾದಿಸಿದ್ದಾರೆ. 47 ಬಿಡಿ ಅಧ್ಯಾಯಗಳ ಈ ಪುಸ್ತಕ “ ನಾನೇಕೆ ಒಬ್ಬ ಹಿಂದೂ?” ಅನ್ನೋ ಹೆಸರಲ್ಲಿ ಈಗ ಪ್ರಕಟವಾಗಿದೆ. ಬಹುರೂಪಿ ದೇವರು- ದೇವಾಲಯಗಳು-  ಅರ್ಥಪೂರ್ಣ ಸಂಪ್ರದಾಯಗಳು– ಗೋತ್ರ- ಜಾತಕ – ಮದುವೆ- ನೈವೇದ್ಯ – ಪ್ರಸಾದ – ಆತ್ಮ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ವೈಚಾರಿಕ ವಿವರಣೆ ಇಲ್ಲಿ ನಿಮಗೆ ಸಿಗುತ್ತದೆ. ಪೈ ಮತ್ತು ಅವರ ಓದುಗರ-ಮಿತ್ರರ ನಡುವಣ ಸಂಭಾಷಣೆಯ ರೂಪದಲ್ಲಿರುವ ಬರಹಗಳನ್ನು ಕನ್ನಡತನದ ಸುಗಂಧದೊಂದಿಗೆ ಸವಿಯುವ ಸದವಕಾಶವನ್ನು ಪುಸ್ತಕ ಕಲ್ಪಿಸಿದೆ.

ದೇವರು ಇದ್ದಾನೆಯೇ? ,  ಪುರಾಣಗಳು ನಿಜವೇ?, ಹಿಂದೂ ಆಚರಣೆಗಳು ಪ್ರಶ್ನಾತೀತವೇ ?, ಹಣೆಬೊಟ್ಟು ಇಂದಿಗೆ ಪ್ರಸ್ತುತವೇ? , ಮನುಷ್ಯ ದೇವರಿಗಿಂತ ಬಲಶಾಲಿಯೇ? , ಮದುವೆಗೆ ಬೇಕೇ ಜಾತಕದ ಅಪ್ಪಣೆ? ಇತ್ಯಾದಿ ಬರಹಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ.

ಕಲ್ಲು ದೇವರಾಗಬಹುದು ಆದರೆ ದೇವರು ಕಲ್ಲಲ್ಲ , ಎಂದೆಂದಿಗೂ ಹಿಂದೂ , “ ಹಿಂದೂ” – ವಿದೇಶೀ ಶಬ್ದವೇ?, ನಿಮ್ಮ ಜಾತಿ ಯಾವುದು ಸ್ವಾಮೀ? , ಹಿಂದೂಧರ್ಮ ಪ್ರೇಮವಿವಾಹಕ್ಕೆ ವಿರೋಧಿಯೇ? , ಎಂಥ ಅದ್ಭುತ ನಮ್ಮ ದೇಗುಲ ! ಮುಂತಾದ ಲೇಖನಗಳು ಸನಾತನಧರ್ಮದ ತಾರ್ಕಿಕತೆಯ ಪರಿಚಯ ಮಾಡಿಕೊಡುತ್ತವೆ.

‘ನಾನೇಕೆ ಒಬ್ಬ ಹಿಂದೂ’ ಪುಸ್ತಕವನ್ನು ಕೊಂಡು ಓದಿ….. “ನಾನೊಬ್ಬ ಹಿಂದೂ” ಎಂದು ಹೆಮ್ಮೆಯಿಂದ  ಹೇಳಿ …. ಆತ್ಮವಿಶ್ವಾಸದಿಂದ ಬದುಕಿ….

ಪುಸ್ತಕವನ್ನು  Flip kart ತಾಣದಲ್ಲಿ ಈ  ಕೆಳಗಿನ ಲಿಂಕ್ ನಲ್ಲಿ ಕೊಳ್ಳಬಹುದು . ಇಲ್ಲಿ ಕ್ಲಿಕ್ ಮಾಡಿ
ಮತ್ತು Amazon ತಾಣದಲ್ಲಿ ಈ  ಕೆಳಗಿನ ಲಿಂಕ್ ನಲ್ಲಿ ಕೊಳ್ಳಬಹುದು . 
https://www.amazon.in/dp/1775156532 

ಪುಸ್ತಕವನ್ನು  ebook ರೂಪದಲ್ಲಿ ಈ ಜಾಲತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಡೌನ್’ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಕಾಶಕರಿಂದ ನೇರವಾಗಿ ಖರೀದಿಸಲು  ಇಲ್ಲಿ ಕ್ಲಿಕ್ ಮಾಡಿ

  • ನಯನಾ ಭಿಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!