ಕವಿತೆ

 ಸಂಗಾತಿ……

 

ಜೀವದಾ ಭಾವವೇ, ಒಲವಿನಾ ಕಾವ್ಯವೆ,

ಹೃದಯದಾ ಬಡಿತವೇ, ನಲ್ಮೆಯಾ ನಲ್ಲೆಯೆ

ಎಂದಿಗಾಗುವೆ ಸಂಗಾತಿ, ಬಾಳ ಪಯಣಕೆ ಜೊತೆಗಾತಿ..!

 

ನಿನ್ನೊಲವಿನಾ ಸುಧೆಗೆ ಕಾತರಿಸಿದೆ ಮನವು,

ಬೆಚ್ಚಗಿನ ಅಪ್ಪುಗೆಗೆ ಕಾದಿಹುದು ತನುವು..

ಒಮ್ಮೆ ಸನಿಹಕೆ ಬಾ, ಉಸಿರಿಗೆ ಉಸಿರಾಗು ಬಾ,

ಎದೆ ಬಡಿತವ ಆಲಿಸು ಬಾ, ನಿನ್ನ ಹೆಸರೇ ಕೇಳಲು ಬಾ..!

 

ಕುಡಿನೋಟದ ಸಂಭಾಷಣೆ, ಕಣ್ಣಂಚಿನ ಆಕರ್ಷಣೆ,

ನನ್ನೇ ಮರೆಸುತಿದೆ ನನಗೆ, ಸೋತು ಹೋದೆನು ನಿನಗೆ.

ಕನಸಿನಾ ತೇರಲ್ಲಿ ನಿನ್ನದೇ ಅಂಬಾರಿ,

ಕಾಡುತಿದೆ ನೆನಪು ಪ್ರತಿ ಉಸಿರ ಜೊತೆ ಸಾರಿ..!

 

ಕಾಯುತಿವೆ ಹೆಜ್ಜೆಗಳು ಜೊತೆಗೂಡಿ ಸಾಗಲು,

ಎಂದು ಬರುವೆ ಬಳಿಗೆ ಪ್ರೀತಿ ಹಸಿವನು ನೀಗಲು..

ಬರೆಯಲಾರೆ ಚೆಲುವೆ ಇಲ್ಲಿ ನಿನ್ನಯ ಹೆಸರು,

ಕ್ಷಣವೊಂದು ಸಾಕು ಲೇಖನಿಗೂ ನಿನ್ನಲ್ಲಿ ಪ್ರೀತಿ ಮೂಡಲು…!

 

ಎಂದಿಗಾಗುವೆ ನನ್ನ ಸಂಗಾತಿ

ಬಾಳ ಪಯಣಕೆ ಜೊತೆಗಾತಿ..!!

 

-ಅಶ್ಟತ್ಥ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

ಅಶ್ಟತ್ಥ ಹೆಗಡೆ

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!