ಅಂಕಣ

ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ನಮೋ ಸರಕಾರ..!!

ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಚಾರದಲ್ಲಿ ವಿರೋಧದ ನಡುವೆಯೂ ಬಹುಶಃ ಮೋದಿಜೀ ಸರಕಾರ ತೆಗೆದುಕೊಂಡಷ್ಟು ಕಠಿಣ ನಿಲುವು ಯಾರೂ ತೆಗೆದುಕೊಂಡಿಲ್ಲ. ಬಟ್ಟೆ  ಪಾದರಕ್ಷೆಗೆ 20% ರಿಂದ 30 % ಡಿಸ್ಕೌಂಟ್ ಕೊಟ್ಟದನ್ನು ಕೇಳಿರಬಹುದು ಅದರೇ ಮೋದಿಜೀ ಡಿಸ್ಕೌಂಟ್  ಕೊಟ್ಟದ್ದು ಜೀವವನ್ನೇ ಉಳಿಸಬಲ್ಲಂತಹ ಜೀವರಕ್ಷಕ ಸ್ಟಂಟ್ಸ್‌ಗಳಿಗೆ..ಅದೂ ಬರೋಬ್ಬರಿ ಶೇಕಡಾ 70 ರಿಂದ 80% ರಷ್ಟು ರಿಯಾಯಿತಿ ದರದಲ್ಲಿ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ, ಮಂಡಿಚಿಪ್ಪು ಶಸ್ತ್ರಚಿಕಿತ್ಸೆ  ಕನಸಿನ ವಿಚಾರವಾಗಿತ್ತು. ಆದರೆ ಮೋದಿಜೀ ತೆಗೆದುಕೊಂಡ ನಿರ್ಧಾರ ಅವರ ಪಾಲಿಗೆ ಈಗ ಆಶಾಕಿರಣವಾಗಿದೆ. ಹೃದಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ coronary stents ಬೆಲೆ ಈ ಹಿಂದೆ  41 ಸಾವಿರ (for Bare metal stents) ಮತ್ತು 1 ಲಕ್ಷ  21 ಸಾವಿರ (for Drug eluting stents) ಇತ್ತು. ಆದರೆ  ಇವುಗಳ ಗರಿಷ್ಠ ಮಾರಾಟ ಬೆಲೆಯನ್ನು ಮೋದಿಜೀ ಸರಕಾರ ರೂ. 7623 (BMS) ಮತ್ತು ರೂ. 31080 (DES) ಇಳಿಸಿದೆ. ಇನ್ನೂ ಮಂಡಿಚಿಪ್ಪು ಕಸಿ ಶಸ್ತ್ರಚಿಕಿತ್ಸೆಗೆ  (knee replacement surgery) ಬೇಕಾಗುವಂತಹ ಸ್ಟಂಟ್ಸ್‌ಗಳ ಬೆಲೆಯನ್ನು ರೂ. 54720 ಗೆ  ಇಳಿಸಿದೆ. ಈ ಹಿಂದೆ ಇವುಗಳ ಬೆಲೆ 1,58,324  ರೂಪಾಯಿಗಳಷ್ಟು ಇತ್ತು. ಈಗ ಯೋಚಿಸಿ ನಿಜವಾಗಿಯ ಬಡವರ ಪಾಲಿಗೆ ಇದಲ್ಲವೇ ಅಚ್ಛೆದಿನ್..!?

ಕ್ಯಾನ್ಸರ್ ಔಷಧಿ ಸೇರಿದಂತೆ 51 ಕ್ಕೂ ಹೆಚ್ಚು ಅಗತ್ಯವಾದ ಔಷಧಿಗಳ ಬೆಲೆಯನ್ನು ಗಣನೀಯವಾಗಿ ಕೇಂದ್ರ ಸರಕಾರ ಈ ಹಿಂದೆ ಇಳಿಸಿದೆ. ಜಿಎಸ್ಟಿ ಜಾರಿ ಮೂಲಕ ಅಗತ್ಯವಾದ ಟ್ಯಾಬ್ಲೆಟ್ ಮತ್ತು  ಮೆಡಿಸಿನ್ ದರವೂ ಈಗ ಇಳಿದಿದೆ. ಕ್ಷಯ ರೋಗಿಗಳಿಗೆ ಮಾಸಿಕ 500 ರೂಪಾಯಿಯ ಯೋಜನೆ ಜಾರಿಗೆ ತರಲಾಗಿದೆ.

ಬಡವರ ಪಾಲಿನ ಅಶಾಕಿರಣ ಎಂದೆನಿಸಿರುವ *ಪ್ರಧಾನಮಂತ್ರಿ ಜನೌಷಧಿ* ಕೇಂದ್ರದ ಮೂಲಕ ಉತ್ತಮ ಗುಣಮಟ್ಟದ ಮೆಡಿಸಿನ್‌ಗಳು ಶೇಕಡಾ 40 – 50 % ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈ ಹಿಂದೆ ಜನರಿಕ್ ಮೆಡಿಸಿನ್ ಕಾನ್ಸೆಪ್ಟ್ ಸಿನಿಮಾಕ್ಕೆ ಮಾತ್ರ ಸೀಮಿತವಾಗಿತ್ತು ಅದನ್ನು ಖಾಸಗಿ ಸಂಸ್ಥೆಗಳ ವಿರೋಧದ  ನಡುವೆಯೂ ಜಾರಿಗೆ ತಂದಿದ್ದು  ಮಾತ್ರ ನಮ್ಮ ಮೋದಿಜೀ ಸರಕಾರ. ಈಗ ಯೋಚಿಸಿ ಮೋದಿಜೀ ಯಾರ ಪರ.!? ಜನರಿಗೆ ಬೇಕಾಗಿರುವುದು ಇಂತಹ ಬದಲಾವಣೆ ಹೊರತು ಉಚಿತವಾಗಿ ನೀಡುವ ಟಿವಿ , ಮಿಕ್ಸಿ, ಮೊಬೈಲ್ ರಾಜಕೀಯವಲ್ಲ.

ವಿಮೆಯ ಮುಖವೇ ನೋಡದಂತಹ ಬಡವರಿಗೆ ಅವರ ಭವಿಷ್ಯಕ್ಕೆ ಭದ್ರತೆಯ ಕವಚ ನೀಡಿದ ನಮೋ ಸರ್ಕಾರ:

ಕೇವಲ ವಾರ್ಷಿಕ 12 ರೂಪಾಯಿಗೆ 2 ಲಕ್ಷದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಎಂಬ ಅಪಘಾತ ವಿಮೆ ಮತ್ತು ವಾರ್ಷಿಕ 330 ರೂಪಾಯಿಗೆ ಪ್ರಧಾನಮಂತ್ರಿ ಜೀವನ್ ಜ್ಯೋತಿ ಎಂಬ ಜೀವವಿಮೆ ಒದಗಿಸಿ ಪಾಲಿಸಿದಾರರಿಗೆ ಮತ್ತು ಅವರ ಅವಲಂಬಿತರ ಭವಿಷ್ಯಕ್ಕೆ ಸುರಕ್ಷಾ ಕವಚ ಒದಗಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿ ಜೀವನದ ಬಳಿಕ ಅವರಿಗೆ ಅಥವಾ ಪಾಲಿಸಿದಾರರ ಅವಲಂಬಿತರಿಗೆ ಅಧಾರವಾಗಲೂ ಮಾಸಿಕ  ರೂ 1000 ದಿಂದ 5000 ವರೆಗೆ  ಒದಗಿಸಲೂ ಅಟಲ್ ಪಿಂಚಣಿ ಯೋಜನೆ ಪರಿಚಯಿಸಲಾಗಿದೆ. ಹೆಣ್ಣು ಮಕ್ಕಳ ವಿವಾಹ ಮತ್ತು ಶಿಕ್ಷಣಕ್ಕೆ ನೆರವಾಗಲು ಧೀರ್ಘಕಾಲದ ಉಳಿತಾಯ ಖಾತೆ ಸುಕನ್ಯಾ ಸಮೃದ್ದಿ ಯೋಜನೆ ಜಾರಿಗೊಳಿಸಲಾಗಿದೆ.  ಕೇಂದ್ರ ಸರಕಾರ ಇದಕ್ಕೆ ಗರಿಷ್ಠ ಬಡ್ಡಿದರ 9% ರಷ್ಟು ನೀಡಲಾಗುತ್ತದೆ.

ಬಡ ಜನಸಾಮಾನ್ಯರಿಗೆ ಮೋದಿಕೇರ್..!!

ಇತ್ತೀಚೆಗೆ ಮಂಡಿಸಿದ ಬಜೆಟ್’ನಲ್ಲಿ ಮೋದಿ ಸರಕಾರ ವಿಶ್ವದ ಮೊದಲ ಅತೀ ದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯವಿಮೆ  ಯೋಜನೆ ಪರಿಚಯಿಸಿದೆ ಕೇಂದ್ರಸರಕಾರ. 10 ಕೋಟಿ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಇದು. ಒಂದು ವರ್ಷದ ಅವಧಿಯಲ್ಲಿ 5 ಲಕ್ಷ ರೂಪಾಯಿಗಳ ಯಾವುದೇ ಚಿಕಿತ್ಸೆ ಉಚಿತವಾಗಿ ಪಡೆದಕೊಳ್ಳಬಹುದು. ಈ ಯೋಜನೆ ಸುಮಾರು 50 ಕೋಟಿ ಬಡಜನರ ತಲುಪಲಿದೆ.

ನಿಜವಾಗಲೂ ಮೋದಿಜೀ ಬಂಗಾರದ ಮನುಷ್ಯ ಅನ್ನುವುದು ಇವೆಲ್ಲವನ್ನೂ ನೋಡಿದರೆ ಅನಿಸದೇ ಇರದು. ಕೇವಲ ಒಂದು ವರ್ಗವನ್ನು ಒಲೈಸದೇ ಎಲ್ಲರಿಗೂ ಅನ್ವಯಿಸುವ ಯೋಜನೆ ಜಾರಿಗೆ ತಂದಿದ್ದರೆ ಅದು ನಮ್ಮ ಮೋದಿಜೀ. ಮೀನು ಹಿಡಿದು ಕೊಡಲಿಲ್ಲ ಬದಲಿಗೆ ಹಿಡಿಯುವ ಕಲೆಯನ್ನು ಕಲಿಸಿದರು ಅನ್ನಬಹುದು. ಮೇಕ್ ಇನ್ ಇಂಡಿಯಾದ ಜೊತೆ ಸ್ಕಿಲ್ ಇಂಡಿಯಾವನ್ನು ತಂದರು.  ಉಚಿತವಾಗಿ ಏನನ್ನು ನೀಡಲಿಲ್ಲ  ಆದರೆ ಭವಿಷ್ಯದ ಭದ್ರತೆಯ ಭಾಗ್ಯ ನೀಡಿದರು, ತನ್ನ ದೇಶದ ಪ್ರತಿಯೊಬ್ಬರ ಆರೋಗ್ಯ ಉತ್ತಮವಿರಬೇಕು. ಆರೋಗ್ಯಪೂರ್ಣ ಭಾರತದಿಂದ ಮಾತ್ರ ಸಮೃದ್ಧ ಭಾರತ ಸೃಷ್ಟಿಮಾಡಬಹುದು ಎಂದೂ ಯೋಚಿಸಿದರು.  ಆ ಮೂಲಕ ಆಯುಷ್ಮಾನ್ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ.

ಇಲ್ಲಸಲ್ಲದ ವಿಚಾರದ ಕುರಿತು ಚರ್ಚೆ ಮಾಡುವ ನಮ್ಮ ಮಾಧ್ಯಮಗಳು ಇಂತಹ ಕ್ರಾಂತಿಕಾರಿ ಯೋಜನೆ ಕುರಿತು ಚರ್ಚಿಸಲೇ ಇಲ್ಲ ..!! ಜನರಿಗೆ ತಲುಪಿಸುವ ಪ್ರಯತ್ನ ನಾವು ಆದರೂ ಮಾಡೋಣ‌. ನಮಗರಿವಿಲ್ಲಂದಂತೆ ನಮ್ಮ ಸುತ್ತ ಅಚ್ಛೆದಿನ್ ತರುವ ಈ ಮಹಾನ್ ನಾಯಕನನ್ನು ಕಳೆದುಕೊಳ್ಳದಿರೋಣ ಅದಷ್ಟೇ ನನ್ನ ಅಂತರಾಳದ ವಿನಂತಿ.

-ಪ್ರಶಾಂತ್ ಎಮ್ ಉಪ್ಪಿನಂಗಡಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!