ಅಂಕಣ ಸ್ಪ್ಯಾನಿಷ್ ಗಾದೆಗಳು

ಕಬ್ಬಿಣ ಕಾದಿರುವಾಗಲೇ ಬಡಿಯಬೇಕು! 

ಸ್ಪಾನಿಷ್ ಗಾದೆ : A la ocasion la pintan calva. ( ಆ ಲಾ ಒಕಾಸಿಯನ್ ಲಾ ಪಿಂತಾನ್ ಕಾಲ್ವಾ )

ಸಮಾನಾರ್ಥಕ ಕನ್ನಡ ಗಾದೆ : ಕಬ್ಬಿಣ ಕಾದಿರುವಾಗಲೇ ಬಡಿಯಬೇಕು!

ಇಂಗ್ಲಿಷ್ ಭಾಷೆಯಲ್ಲಿನ ಸಮಾನಾರ್ಥಕ ಗಾದೆ : You have to make the most of the chances that come your way. ಅಥವಾ You have to strike while the iron is hot.

ಕೆಲಸ ಯಾವುದೇ ಇರಲಿ ಸರಿಯಾದ ಸಮಯದಲ್ಲಿ ಮಾಡಿದರೆ ಅದರಿಂದ ಬರುವ ಫಲಿತಾಂಶ ಸಕಾರಾತ್ಮಕವಾಗಿರುತ್ತದೆ ಎನ್ನುವುದು  ಗಾದೆಯ ಒಳಾರ್ಥ. ಸಂದರ್ಭಕ್ಕೆ ತಕ್ಕಂತೆ ಬೋಡು ತಲೆಗೆ ಬಣ್ಣ ಹೆಚ್ಚು ಅಥವಾ ವಿಗ್ ಹಾಕು ಎನ್ನುವುದು ಸ್ಪಾನೀಷ್ ಗಾದೆಯ ನಿಘಂಟಿನ ಅರ್ಥ. ಸರಿಯಾದ ಸಮಯಕ್ಕೆ ಸರಿಯಾದ ಕೆಲಸ ಮಾಡಿದರೆ ಜಯ ನಿಶ್ಚಿತವಾಗಿ ಸಿಗುತ್ತದೆ ಎನ್ನುವುದನ್ನು ಸ್ಪಾನೀಷ್ ಹಿರಿಯರು ಸೂಕ್ಷ್ಮವಾಗಿ ಈ ರೀತಿಯಲ್ಲಿ ಹೇಳಿದ್ದಾರತ್.

ಕಬ್ಬಿಣ ಕಾದಿರುವಾಗ ಅದನ್ನು ನಮಗೆ ಬೇಕಾಗಿರುವ ಆಕಾರಕ್ಕೆ ಬಡಿದು ತರಬಹದು. ಅದೇ ಕಬ್ಬಿಣ ತಣ್ಣಗಾದಾಗ ಅದನ್ನ ಬಗ್ಗಿಸುವುದು ಸಾಧ್ಯವಿಲ್ಲದ ಮಾತು. ಅರ್ಥವಿಷ್ಟೆ ನಮ್ಮ ಸಮಯ ಚೆನ್ನಾಗಿದ್ದಾಗ ಆದಷ್ಟೂ ನಮಗೆ ಬೇಕಾದ ಕೆಲಸವನ್ನು ಆಲಸ್ಯವಿಲ್ಲದೆ ಮಾಡಿಬಿಡಬೇಕು. ನಾಳೆ ಹೇಗೆ ಬದಲಾಗುತ್ತದೆಂದು ಹೇಳುವುದು ಅಸಾಧ್ಯ. ಅಂದಿನ ಕೆಲಸ ಅಂದೇ ಮಾಡಿಬಿಡಬೇಕ. ಆ ಬಿಸಿಯಲ್ಲಿ ಕೆಲಸ ಮಾಡಿ ಮುಗಿಸುವುದು ಸುಲಭ ಉತ್ಸಾಹವು ಇರುತ್ತದೆ. ಮಾಡಬೇಕಾದ್ದನ್ನು ಮಾಡದೆ ಮುಂದೂಡಿದರೆ ಉತ್ಸಾಹವು ಕಡಿಮೆಯಾಗುತ್ತದೆ ಕೆಲಸವೂ ಆಗುವುದಿಲ್ಲ. ಮಾಡಲೇಬೇಕೆಂದರೂ ಹೆಚ್ಚಿನ ಶ್ರಮ ಕಡಿಮೆ ಫಲಿತಾಂಶ ಸಿಗುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಕಬ್ಬಿಣ ಕಾದಾಗ ಬಡಿಯಬೇಕು ಎಂದರು .

ಇಂಗ್ಲಿಷ್ ಭಾಷಿಕರು ನಮ್ಮ ಹಿರಿಯರು ಹೇಳಿರುವುದನ್ನೇ ಪುನರುಚ್ಚರಿಸಿದ್ದಾರೆ ನಿಮ್ಮ ಕೈಲಾದಾಗ, ಅವಕಾಶ ನಿಮ್ಮಬಳಿ ಬಂದಾಗ ನಿಮ್ಮ  ಕೆಲಸ ಮಾಡಿಕೊಳ್ಳಿ ಎಂದು ಹೇಳುವ You have to make the most of the chances that come your way ಇರಬಹುದು. ಅಥವಾ ಯಥಾವತ್ತಾಗಿ ಕಬ್ಬಿಣ ಕಾದಾಗ ಬಡಿಯಬೇಕು ಎನ್ನುವ You have to strike while the iron is hot. ಗಾದೆಯ ಮೂಲಕ ತಮ್ಮ ಮುಂದಿನ ಜನಾಂಗಕ್ಕೆ ತಮ್ಮ ಬದುಕಿನ ಸಾರವನ್ನು ಕಟ್ಟಿಕೊಟ್ಟಿದ್ದಾರೆ .

ದೇಶ ಭಾಷೆಗಳ ಗಡಿಯನ್ನು ದಾಟಿ ನಮ್ಮ ಹಿರಿಯರು ಮುಂದಿನ ಪೀಳಿಗೆಗೆ ಹೇಳಿ ಹೋದ ಬದುಕಿನ ಪಾಠಗಳು ಒಂದಕ್ಕೊಂದು ಬೆಸೆದುಕೊಳ್ಳುವ ರೀತಿ ಸಾರುವ ಸಂದೇಶವೊಂದೇ ಅದುವೇ ನಾವೆಲ್ಲಾ ಒಂದೇ ಎನ್ನವುದು .

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ : 

ocasion  ಸಂದರ್ಭ ಎನ್ನುವುದು ಅರ್ಥ ಒಕಾಸಿಯನ್ ಎನ್ನುವುದು ಉಚ್ಚಾರಣೆ.

pintan  ಬಣ್ಣಹಚ್ಚು ಎನ್ನುವುದು ಅರ್ಥ ಪಿಂತಾನ್ ಎನ್ನುವುದು ಉಚ್ಚಾರಣೆ.

calva  ಬೋಡ ಅಥವಾ ತಲೆಕೂದಲು ಇಲ್ಲದವನು ಎನ್ನುವ ಅರ್ಥ ಕೊಡುತ್ತದೆ. ಕಾಲ್ವಾ ಎನ್ನುವುದು ಉಚ್ಚಾರಣೆ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!