ಅಂಕಣ ಸ್ಪ್ಯಾನಿಷ್ ಗಾದೆಗಳು

ಮಾಡಿದ ಕೆಲಸ ನೋಡದೆ ಕೆಟ್ಟಿತು ! El que no mira, no suspira.

ನಾವೆಲ್ಲಾ ಯಾವುದೇ ಒಂದು ಕೆಲಸವನ್ನ ಬಹಳ ಖುಷಿಯಿಂದ ಶುರು ಮಾಡುತ್ತೇವೆ . ಆದರೆ ನಮ್ಮಲ್ಲಿ ಬಹಳ ಜನ ಅದೆ ಖುಷಿ ಮತ್ತು ಹುಮ್ಮಸ್ಸನ್ನ ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ಅಸಫಲವಾಗುತ್ತೀವಿ . ನಾವು ಕೈಗೆತ್ತಿಕೊಂಡ ಕೆಲಸ ಎಷ್ಟೇ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ನೀಡಬೇಕಾದ ಗಮನ ನೀಡುತ್ತಲೆ ಇರಬೇಕು . ಶ್ರಮವಹಿಸಿ ಕೆಲಸ ಮಾಡಿ ಅದನ್ನ ಪೂರ್ಣಗೊಳಿಸಿದ ಮೇಲೂ ಸಮಯಾಂತರದಲ್ಲಿ ಅದು ನಿಗದಿತ ರೀತಿಯಲ್ಲಿ ಕೆಲಸ ಮಾಡುತ್ತಿದೆಯೇ ? ಎಂದು ನೋಡುವುದು ಬಹಳ ಮುಖ್ಯ . ಹೀಗೆ ಮಾಡಿದ ಕೆಲಸವನ್ನ ನೋಡದೆ ಹೋದರೆ ಆ ಕೆಲಸವನ್ನ ಮಾಡಲು ಹಾಕಿದ ಶ್ರಮ ಕೂಡ ವ್ಯರ್ಥ ಎನ್ನುವ ಅರ್ಥವನ್ನ ಈ ಗಾದೆ ನೀಡುತ್ತದೆ . ಸರಳವಾಗಿ ಹೇಳಬೇಕೆಂದರೆ ವಸ್ತು ವಿಷಯ ಏನೇ ಇರಲಿ ಅದರ ಬಗ್ಗೆ ನಿರಂತರ ಗಮನವಿದ್ದರೆ ಮಾತ್ರ ಹಿಡಿದ ಕೆಲಸದಲ್ಲಿ ನಮಗೆ ಜಯ ಸಿಗುತ್ತದೆ .

ಸ್ಪಾನಿಷ್’ನ ಈ ಗಾದೆ ಎರಡು ಅರ್ಥ ಕೊಡುತ್ತದೆ, ಮೊದಲೆನೆಯದು ಮೇಲೆ  ಹೇಳಿದ್ದು ಎರಡನೆಯದು ಸದಾ ಕೆಲಸ ಮಾಡುತ್ತಾ ಪ್ರಸುತ್ತರಾಗಿರಬೇಕು ಹೆಚ್ಚಿನ ವಿಶ್ರಾಂತಿ ತೆಗೆದುಕೊಂಡು ಆರಾಮಾಗಿರುವ ಜನರನ್ನ ಸಮಾಜ ಬೇಗ ಮರೆತು ಬಿಡುತ್ತದೆ ಎನ್ನುವ ಅರ್ಥ . ಸ್ಪಾನಿಷ್ ಜನರು ಎರಡೂ ಅರ್ಥವನ್ನೂ ಸನ್ನಿವೇಶಕ್ಕೆ ತಕ್ಕ ಹಾಗೆ ವಿಶ್ಲೇಷಿಸುತ್ತಾರೆ . ಆದರೆ ಇಂಗ್ಲಿಷ್ ಭಾಷಿಕರಲ್ಲಿ ಮೊದಲನೆಯ ಅರ್ಥಕ್ಕಿಂತ ಎರಡನೆಯ ಅರ್ಥವನ್ನು ಹೆಚ್ಚು ಬಳಸುತ್ತಾರೆ . ಇಂಗ್ಲಿಷ್ನಲ್ಲಿ  ‘Long absent, soon forgotten.’  ಎನ್ನುವುದನ್ನ ಯಥಾವತ್ತಾಗಿ ಅರ್ಥೈಸಿಕೊಂಡಿದ್ದಾರೆ .

ಅರ್ಥ ಯಾವುದೆ ಇರಲಿ ನಮ್ಮ ಪೂರ್ವಜರು ಹೇಳಿದ ಮಾತು ಇಂದಿಗೂ ಸತ್ಯ . ನಾವು ಕೆಲಸ ಮಾಡಿ ಮುಗಿಸಿಯಾಯಿತು ಎಂದು ಕೈಕಟ್ಟಿ ಕೂರುವ ಹಾಗಿಲ್ಲ. ಪದೇ ಪದೆ ಅದನ್ನ ಸರಿಯಾಗಿದೆಯೇ ಎಂದು ನೋಡುತ್ತಿರಬೇಕು ಮತ್ತು ಇಂತಹ ಕೆಲಸವನ್ನ ಜೀವನವಿರುವರೆಗೂ ಮಾಡುತ್ತಲೇ ಇರಬೇಕು . ಇಂಗ್ಲಿಷರಲ್ಲಿ ಇದಕ್ಕೆ ಸಮಾನಾರ್ಥಕವಾಗಿ ‘ out of sight, out of mind’  ಎನ್ನುವ ಗಾದೆಯನ್ನು ಬಳಸುತ್ತಾರೆ .

ಭಾಷೆ ಅಥವಾ ವ್ಯಕ್ತಪಡಿಸುವ ರೀತಿ ಬದಲಾದರೇನು ಭಾವವೊಂದೇ ಅಲ್ಲವೆ ?

ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .

೧)El  ಅಂದರೆ he ಅಥವಾ ಅವನು ಎನ್ನುವ ಅರ್ಥ ನೀಡುತ್ತೆ . ಎಲ್ ಎಂದು ಉಚ್ಚರಿಸಬೇಕು .

೨)que ಅಂದರೆ ಏನು ಎನ್ನುವುದು ಅರ್ಥ ಆದರೆ  ಸಂದರ್ಭಕ್ಕೆ ತಂಕ್ಕಂತೆ ಇದರ ಭಾವ ಬದಲಾಗುತ್ತದೆ. ಹೀಗಾಗಿ ಇಲ್ಲಿ el que ಒಂದು ಪದದಂತೆ ಓದಬೇಕು.  ಅರ್ಥ ಯಾರೊಬ್ಬ ಅಥವಾ one who ಎನ್ನುವ ಅರ್ಥ ನೀಡುತ್ತೆ .  ಕೇ ಎನ್ನುವುದು ಉಚ್ಚಾರಣೆ .

೩) No mira : ನೋಡದೆ ಇರುವುದು , (ಮಿರಾ = ನೋಡು ) ಉಚ್ಚಾರಣೆ ಮಿರಾ

೪)suspira  : ನಿಟ್ಟುಸಿರು .  ಸೂಸ್ಪಿರ ಎನ್ನುವುದು ಉಚ್ಚಾರಣೆ .

 

Facebook ಕಾಮೆಂಟ್ಸ್

ಲೇಖಕರ ಕುರಿತು

Rangaswamy mookanahalli

ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!