ಅಂಕಣ

ಗ್ರಾಮೀಣ ಬ್ಯಾಂಕುಗಳ ನೇಮಕಾತಿ: ಕನ್ನಡಿಗರದು ಅಧೋಗತಿ

ಕನ್ನಡ, ಪ್ರಾದೇಶಿಕ ಅಸ್ಮಿತೆ, ನಾಡು-ನುಡಿ, ನೆಲ ಜಲಗಳ ವಿಷಯಗಳು ಸಮಸ್ಯೆಗಳಾಗಿ ಅದರ ಪರಿಣಾಮ ತೀವ್ರಗತಿಗೆ ಹೋಗುವವರೆಗೂ ನಮ್ಮ ರಾಜಕಾರಣಿಗಳು, ಸಂಬಂಧಪಟ್ಟ ಇಲಾಖೆಗಳು ಮುಖ್ಯವಾಗಿ ನಾವು ಜನಗಳು ಯಾವುದೇ ತರಹದ ಆಸಕ್ತಿ ತೋರದೆ “ನಮಗೇತಕೆ ಬೇಕು, ಇದರಿಂದ ನಮಗೇನು ಲಾಭ” ಎಂಬ ಬೇಜವಾಬ್ದಾರಿಯನ್ನು ಮೈ ಗಂಟಿಸಿಕೊಂಡುಬಿಟ್ಟಿದ್ದೇವೆ. ಯಾವುದು ನೇರವಾಗಿ ನಮ್ಮ ಮೇಲೆ ಅಥವಾ ನಮ್ಮ ಮನೆ, ಮಗ-ಮಗಳಿಗೆ ವಿಷಯದ ಬಿಸಿ ಮುಟ್ಟುತದೋ ಅಲ್ಲಿಯವರೆಗೂ ನಾವು ಸಮಾಜದಲ್ಲಿ ನಡೆಯುವ ಯಾವ ಅಸಂಬದ್ಧತೆಗಳಿಗೂ, ಅನ್ಯಾಯಗಳಿಗೂ ಪ್ರತಿಕ್ರಿಯಿಸುವುದಿಲ್ಲ ಎನ್ನುವುದೇ ನೋವಿನ ಸಂಗತಿ.

ತಾಜಾ ಉದಾಹರಣೆ ಎಂದರೆ, ಪ್ರತಿ ವರ್ಷವೂ ದೇಶದಲ್ಲಿನ ಸರಕಾರಿ ಸ್ವಾಮ್ಯದ (nationalized banks) ರಾಷ್ಟ್ರೀಕೃತ ಬ್ಯಾಂಕು ಹಾಗೂ ಗ್ರಾಮೀಣ ಬ್ಯಾಂಕುಗಳು (Regional Rural Banks) ಉದ್ಯೋಗ ನೇಮಕಾತಿ ನಡೆಯುತ್ತವೆ. ನೇಮಕಾತಿಯನ್ನು Institute of Banking Personnel Selection (IBPS) ಎಂಬ ಸಂಸ್ಥೆ ಕೇಂದ್ರ ಸರಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಪ್ರಾಯೋಗಿಕ ಪರೀಕ್ಷೆಗಳು ಮೂರು ಹಂತಗಳಲ್ಲಿ ನಡೆಯುತ್ತವೆ. ಪೂರ್ವ ಪರೀಕ್ಷೆ (preliminary exams) ಹಾಗೂ ಕೊನೆಯ ಹಂತದ ಪರೀಕ್ಷೆ. ಇವೆರಡರಲ್ಲಿ ಉತ್ತೀರ್ಣರಾದವರು ಮೂರನೇ ಹಂತದ ಪರೀಕ್ಷೆಯಾದ ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ. Clerical post ಗಳಿಗೆ interview ಇರುವುದಿಲ್ಲ. ಕೇವಲ scale-1 officer post ಗಳಿಗೆ ಮಾತ್ರ interview ಇರುತ್ತದೆ.

ಗ್ರಾಮೀಣ ಬ್ಯಾಂಕುಗಳ ಉದ್ಯೋಗದ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ನಡೆಯುತ್ತಿದೆ . ಈ ಅನ್ಯಾಯ ಕುರಿತು ಎಷ್ಟು ಮುಷ್ಕರ, ಹರತಾಳಗಳು ನಡೆದರೂ ನಮ್ಮ ರಾಜಕಾರಣಿಗಳಿಗೆ ಅದು ಒಂದು ಸಮಸ್ಯೆಯೆಂದು ಅನಿಸಿರಲಿಕ್ಕಿಲ್ಲಾ.

ಸಮಸ್ಯೆ ಏನೆಂದರೆ- ಪ್ರತಿ ವರ್ಷ ನಡೆಯುವ ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬೇರೆ ರಾಜ್ಯದವರೆ ಅಧಿಕವಾಗಿದ್ದಾರೆ.

ನಮ್ಮದೇ ನಾಡಿನಲ್ಲಿರುವ ಅದರಲ್ಲು ನಮ್ಮ ಹಳ್ಳಿಗಳಲ್ಲಿ ಇರುವ ಬ್ಯಾಂಕುಗಳಲ್ಲಿ, ನಮ್ಮದೇ ಹಣ, ನಮ್ಮದೇ ಜಾಗ, ವ್ಯವಹಾರ ಕೂಡ ಇಲ್ಲಿಯೇ ನಡೆದರೂ ಉದ್ಯೋಗಿಗಳು ಮಾತ್ರ ಹೊರರಾಜ್ಯದವರು. ಕನಿಷ್ಠ ಮೂರು ಲಕ್ಷ  ಜನರಾದರು ಕರ್ನಾಟಕದಿಂದ ಪರೀಕ್ಷೆ ಬರೆಯುತ್ತಾರೆ. ಕೊನೆಗೆ ಆಯ್ಕೆಯಾದವರಲ್ಲಿ ನೂರಕ್ಕಿಂತಲೂ ಕಡಿಮೆ. ಎಲ್ಲ ರಾಜ್ಯಗಳಿಗೂ ತಮ್ಮದೆ ಆದಂತಹ ಮೂರು ಅಥವಾ ನಾಲ್ಕು ಗ್ರಾಮೀಣ ಬ್ಯಾಂಕುಗಳು ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತವೆ. ಗ್ರಾಮೀಣ ಜನರಿಗೆ, ಹಿಂದುಳಿದ, ಹಣಕಾಸಿನ ವ್ಯವಹಾರದ ಆಚೆಯಿರುವ, ಬಡ್ಡಿ ವ್ಯವಹಾರಸ್ಥರಲ್ಲಿ ಸಾಲ ಪಡೆದು ಅಧಿಕ ಬಡ್ಡಿ ಕಟ್ಟುವ ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೂ ಅವರನ್ನೆಲ್ಲ ಅರ್ಥಿಕ ಚಟುವಟಿಕೆಯ ವಾಹಿನಿ ತರಬೇಕೆಂಬುದು ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯ ಉದ್ದೇಶ. ಅದೇ ರೀತಿ ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿಗರೆ ಕೆಲಸ ಮಾಡಬೇಕೆಂಬುದು ಕೂಡ. ಅದರೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಿಗರನ್ನು ಬೂದುಕನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಬಂದಿದೆ.

ಬೇರೆ ರಾಜ್ಯದ ಜನರನ್ನು ಗ್ರಾಮೀಣ ಬ್ಯಾಂಕುಗಳಲ್ಲಿ ನೇಮಿಸಿರುವುದರಿಂದ ಅವರಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಬರುವುದಿಲ್ಲ. ಇದರಿಂದ ಗ್ರಾಮಗಳಲ್ಲಿ ಹಾಗು ಉಪನಗರಗಳಲ್ಲಿರೋ ಕನ್ನಡ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಗೊತ್ತಿರುವುದಿಲ್ಲ. ಆದ್ದರಿಂದ ಅಲ್ಲಿ ವ್ಯವಹಾರ ಸುಗಮವಾಗಿ ನಡೆಯುವುದಿಲ್ಲ. ಎಷ್ಟು ಅನಕ್ಷರಸ್ಥರು, ಕೂಲಿ ಕಾರ್ಮಿಕರು ಬ್ಯಾಂಕಿಗೆ ಬಂದು ಹಣ ಇಡುವುದು, ತೆಗೆಯುವುದು ಮಾಡುವವರು ತಮಗೆ ಬೇಕಾದ ಹಾಗೂ ನಿರೀಕ್ಷಿಸಿದ ಪ್ರತಿಕ್ರಿಯೆ ಸಿಗದೆ ಅತೃಪ್ತಿಯಿಂದ ಮನೆಗೆ ತೆರಳುತ್ತಾರೆ. ಗ್ರಾಮೀಣ ಬ್ಯಾಂಕುಗಳ ಉದ್ದೇಶವೇ ಹಳ್ಳಿ ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಹಾಗು ಬ್ಯಾಂಕಿಂಗ್ ವ್ಯವಸ್ಥೆಯ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವುದು. ಬೇರೆ ಭಾಷಿಕರು ಬ್ಯಾಂಕುಗಳಲ್ಲಿ ಕೆಲಸ ಮಾಡುವುದರಿಂದ ಕನ್ನಡ ಬರುವುದಿಲ್ಲದರಿಂದ ಅವರು ಮಾಹಿತಿಯನ್ನು ರೈತರಿಗೆ ಹೇಗೆ ಮುಟ್ಟಿಸಬಲ್ಲರು? ಉದ್ದೇಶ ಈಡೇರುವುದಾದರು ಹೇಗೆ? ರೈತರಿಗೆ ಕಿರಿಕಿರಿ ಎನಿಸಿ ಬ್ಯಾಂಕಿಂಗ್ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದಿಲ್ಲವೆ?

ಕನ್ನಡ ನೆಲದಲ್ಲಿರುವ ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡದವರಿಗೆ ಆದ್ಯತೆ ನೀಡಬೇಕು. ಇದರಿಂದ ವ್ಯವಹಾರ ಸರಳವೂ ಸುಗಮವಾಗಿ ನಡೆಯುತ್ತದೆ. ನಮ್ಮ ರಾಜ್ಯದ ಬ್ಯಾಂಕ್ ಉದ್ಯೋಗದ ಆಕಾಂಕ್ಷಿಗಳಿಗೆ ನ್ಯಾಯವು ಸಿಗುತ್ತದೆ. ಗ್ರಾಮೀಣ ಬ್ಯಾಂಕುಗಳ ಮೂಲ ಉದ್ದೇಶವೂ ಈಡೇರುತ್ತದೆ.ಅಲ್ಲಿ ಕೆಲಸ ಮಾಡುವವರಲ್ಲಿ ನಾನು ಒಬ್ಬನಾಗಬಹುದು ಅಥವಾ ನಿಮ್ಮ ಮಕ್ಕಳಾದರು ಆಗಬಹುದು.

ಸೆಪ್ಟೆಂಬರ್ ೯ರಿಂದ ನಡೆಯುವ ಪರೀಕ್ಷೆಗಳನ್ನು ಬೀದರ್ ಬಾಲ್ಕಿ ಹುಬ್ಬಳ್ಳಿ ಬಳ್ಳಾರಿ ಬೆಂಗಳೂರು ಹಾಗೂ ಮುಂತಾದ ಕಡೆಗಳಲ್ಲಿ ರದ್ದು ಮಾಡಲಾಯಿತು. ಇದರಿಂದ ವರ್ಷಗಟ್ಟಲೆ ಬ್ಯಾಂಕಿಂಗ್ ಪರೀಕ್ಷೆಗಳಿಗೆಂದೇ ಅಧ್ಯಯನ ಮಾಡುತ್ತಿರುವವರಿಗೆ ನಿರಾಸೆಯಷ್ಟೇಯಲ್ಲದೇ ಅನ್ಯಾಯ ಕೂಡ ಆಯ್ತು.ಅಧಿಕಾರದಲ್ಲಿರುವವರು ಸಮಸ್ಯೆಯ ಗಂಭೀರತೆಯನ್ನು ಪರಿಶೀಲಿಸಿ ಯಾರೋಬ್ಬರಿಗೂ ಅನ್ಯಾಯವಾಗದಂತೆ ಪರಿಹಾರ ಸೂಚಿಸಬೇಕು.

ನೀವೇ ಹೇಳಿ ನಮ್ಮ ಕರ್ನಾಟಕದ ರಾಜ್ಯದ ರಾಜಧಾನಿಯಲ್ಲಿ ಗ್ರಾಮೀಣ ಬ್ಯಾಂಕುಗಳಲ್ಲಿ ನೀವು ಕನ್ನಡದವರಾ? ನೀವು ಯಾವ ಭಾಷಿಕರು? ಎಂದು ಕೇಳುವ ಪರಿಸ್ಥಿತಿ ಎಂದರೆ ನಮ್ಮದು ಯಾವ ಕರ್ಮ!!!

ಸ್ವಂತ ನಮ್ಮ ಮನೆಯಲ್ಲಿ ಬೇರೆ ಯಾವುದೋ ಊರಿನ ಪರಿಚಯವಿಲ್ಲದ ಸಂಬಂಧವೆ ಇರದ ಜನರು ಬಂದು ಆಕ್ರಮಿಸಿಕೊಂಡರೆ ನಾವೆಲ್ಲಿರುವುದು…ನಮ್ಮದು, ನಾವು ಎನ್ನುವಂಥ ಅಸ್ತಿತ್ವ ಎಲ್ಲರಿಗೂ ಇರುತ್ತದೆ. ಹಾಗೆಯೇ ನಮ್ಮ ಕನ್ನಡಕ್ಕೂ ಪ್ರಾದೇಶಿಕ ಸ್ಥಾನಮಾನದ ಮಹತ್ವವಿದೆ.ಉದಾಹರಣೆಗೆ ನಮ್ಮ ಹತ್ತಿರ ಒಂದು ರೊಟ್ಟಿ ಇದೆಯೆಂದು ಭಾವಿಸಿ ನಮ್ಮ ಮನೆಯ ಅಕ್ಕಪಕ್ಕದವರು ನಮಗೂ ಒಂಚೂರು ಬೇಕೆಂದಾಗ ಕರುಣೆಯಿಂದ ನಾವು ತಿನ್ನುವ ರೊಟ್ಟಿಯಲ್ಲಿ ನಾಲ್ವರಿಗೂ ಚೂರು ಚೂರು ಕೊಡುತೇವೆ.ಅದು ನಮ್ಮ ದೊಡ್ಡ ಗುಣವಾಗುತ್ತದೆ.ಆದರೆ ಬೇರೆ ರಾಜ್ಯದವರು ನೂರಾರು ಜನ ಬಂದು ನಮ್ಮ ಕೈಯೊಳಗಿನ ರೊಟ್ಟಿಯ ಕಸಿದುಕೊಂಡು “ನಾವು ಭಾರತೀಯರು ನಮಗೂ ಹಕ್ಕಿದೆ” ಎಂದು ಘೋಷಣೆ ಕೂಗಿದರೆ ಇದು ಯಾವೂರ ನ್ಯಾಯ? ನಾವು ಕಷ್ಟಪಟ್ಟು ದುಡಿದು ಗಳಿಸಿದ ರೊಟ್ಟಿಯನ್ನು ನಮಗೇ ಸಿಗದಂತೆ ಮಾಡಿದರೆ?. ನಮ್ಮ ಕರುಣೆ ಬಲಹೀನತೆಯಾಗಬಾರದು.ನಮ್ಮ ರಾಜ್ಯದಲ್ಲಿ ನಮ್ಮ ಹಕ್ಕುಗಳಿಗೆ ನಾವೆ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದ್ದು ಸಣ್ಣ ವಿಚಾರವಲ್ಲ.

ಆಂಧ್ರಪ್ರದೇಶದ ವಿದ್ಯಾರ್ಥಿಗಳೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಪರೀಕ್ಷೆಯನ್ನು ಬರೆಯುತ್ತಿರುವಾಗ ಸಹಜವಾಗಿ ನಮ್ಮ ಅಭ್ಯರ್ಥಿಗಳಿಗೆ ಅನ್ಯಾಯವಾಗಿ ಯಾವ ರಾಜಕಾರಣಿಗಳು ಇದನ್ನು ಒಂದು ಸಮಸ್ಯೆಯೆಂದೇ ಪರಿಗಣಿಸಿಲ್ಲದಿರುವುದನ್ನು ಅರಿತು ಬೇರೆ ರಾಜ್ಯದವರನ್ನು ಪರೀಕ್ಷೆಗೆ ಬರೆಯಲು ಅವಕಾಶ ನೀಡುವುದಿಲ್ಲವೆಂದು ಪರೀಕ್ಷೆಯನ್ನು ಬರೆಯದೆ ಧಿಕ್ಕರಿಸುವುದರಲ್ಲಿ ತಪ್ಪೇನು? ? ಆಂಧ್ರದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೊಂದರೆಯಾಗಿದೆ ಎಂದ ಕೂಡಲೇ ಆಂಧ್ರದ ಇಬ್ಬರು ಮಂತ್ರಿಗಳು ತಕ್ಷಣ ಪ್ರತಿಕ್ರಿಯಿಸಿದ್ದಾರೆ.ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರ ಜೊತೆ ಚರ್ಚಿಸಿ ನಮ್ಮ ಸಿದ್ರಾಮಯ್ಯನವರ secretary ನ್ನು ಸಂಪರ್ಕಿಸಿ ಆಂಧ್ರದ ವಿದ್ಯಾರ್ಥಿಗಳಗೆ police ರಕ್ಷಣೆಯನ್ನು ಹೆಚ್ಚಿಸಿರೆಂದು ಸೂಚಿಸುತ್ತಾರೆ.ಆದರೆ ನಮ್ಮದೇ ರಾಜ್ಯದಲ್ಲಿನ ಸಮಸ್ಯೆಗಳನ್ನು ನಮ್ಮ ನಾಯಕರು ಈ ರೀತಿ ತ್ವರಿತವಾಗಿ ಎಂದಾದರೂ ಕನಿಷ್ಟ ಕಿವಿಗೊಟ್ಟು ಆಲಿಸಿದ್ದಾರಾ?

ಸೊಮಿರೆಡ್ಡಿ ಎನ್ನುವ ಅಂದ್ರದ ಮಂತ್ರಿಯೊಬ್ಬರು ಹೇಳುತ್ತಾರೆ ”ಕರ್ನಾಟಕದವರು ಮಾಡುತ್ತಿರುವುದು ಅನ್ಯಾಯ ಆಂಧ್ರದ ವಿದ್ಯಾರ್ಥಿಗಳು talented ಮತ್ತು hardworkers. ಈ ರೀತಿಯ ಸ್ಪರ್ಧೆಯನ್ನು ಕನ್ನಡದವರು ತಡೆದುಕೊಳ್ಳಲಾರದೆ ಈ ರೀತಿ violence ಮಾಡುತ್ತಿದ್ದಾರೆ ” ಎಂದು. ಅಲ್ಲ ಸ್ವಾಮಿ ನಿಮ್ಮ ಆಂಧ್ರದ ವಿದ್ಯಾರ್ಥಿಗಳು ಅಷ್ಟು talented ಇದ್ದರೆ ibps ರಾಷ್ಟ್ರೀಕ್ರತ ಬ್ಯಾಂಕುಗಳ ಪರೀಕ್ಷೆಯನ್ನು ,state bank of India ಪರೀಕ್ಷೆಗಳನ್ನು ಬರೆದು ಪಾಸು ಮಾಡಲಿ. ನಾವೂ ಅಂತಹ open competition ಗೆ ಮುಕ್ತರೇ. ನಮ್ಮದು ಯಾವ ತಕರಾರು ಇಲ್ಲ.ನಿಮ್ಮ talent ಇನ್ನು ತುಂಬಿ ತುಳುಕುತ್ತಿದ್ದರೆ upsc ಪರೀಕ್ಷೆಯಲ್ಲಿ ನಿಮ್ಮ ಆಂಧ್ರದ talent ತೋರಿಸಿ. ಆಗ ಸ್ವತಃ ನಾವೇ ಹೆಮ್ಮೆ ಪಡುತ್ತೇವೆ.ಅದನ್ನು ಬಿಟ್ಟು ನಮ್ಮ ಕನ್ನಡದ ಗ್ರಾಮೀಣ ಬ್ಯಾಂಕುಗಳಲ್ಲಿ ನಿಮ್ಮ talent ಉಪಯೋಗಿಸಲು ಬರಬೇಡಿ.ಇಲ್ಲಿ ಯಾರು ನಿಮ್ಮನ್ನು ನಿಮ್ಮ talent ನಿರೂಪಿಸಿರೆಂದು ಆಹ್ವಾನವನ್ನಿತ್ತಿಲ್ಲ.

ಅಂದಹಾಗೆ ಕರ್ನಾಟಕದ competition capacity ಯ ಕುರಿತು ನಿಮಗೆ ಹೇಳುವ ಅಗತ್ಯತೆಯೂ ನಮಗಿಲ್ಲ. ಈ ವರ್ಷದ upsc 1st rank ನಮ್ಮ ಕನ್ನಡದ ಹೆಮ್ಮೆಯ ನಂದಿನಿ ಕೆ ಆರ್ ಬಂದಿದ್ದು ಇಡೀಯ ದೇಶಕ್ಕೆ ಗೊತ್ತಿರುವ ಸಂಗತಿ. ಹೌದು!ಒಮ್ಮೆ ವಿಚಾರ ಮಾಡಿ ಬೇರೆ ರಾಜ್ಯದ ಹಾಗೂ ಆಂಧ್ರದ ವಿದ್ಯಾರ್ಥಿಗಳಿಗೆ ನಮ್ಮ ಹುಬ್ಬಳ್ಳಿ, ಗುಲ್ಬರ್ಗ, ಶಿವಮೊಗ್ಗ ಬಿದರಿನಲ್ಲಿ ಪರೀಕ್ಷೆ ಬರೆಯುವ ಹರಕತ್ತಾದರೂ ಏನು? ಅವರ ರಾಜ್ಯದ ಪಟ್ಟಣಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಿಲ್ಲವೇ? ಎಂದರೆ ಇಲ್ಲಿಯೆ ಅರ್ಥವಾಗುವುದಿಲ್ಲವೇ. ಇದು ಕನ್ನಡ ನಾಡಿಗೆ ಸೀಮಿತವಾದ ಉದ್ಯೋಗ ನೇಮಕಾತಿಯೆಂದು.ನಮ್ಮದೇ ರಾಜ್ಯದ ನಮ್ಮ ಕನ್ನಡದ ವಿದ್ಯಾರ್ಥಿಗಳನ್ನು ಬಾಯಿಗೆ ಬಂದಂತೆ ಬಯ್ದು, ಹೊಡೆದು ಬೇರೆ ರಾಜ್ಯದವರಿಗೆ security ಹೆಚ್ಚಿಸುವುದು ಯಾವ ನ್ಯಾಯ? ? ನಮ್ಮ ರಾಜ್ಯಕ್ಕೆ ಬಂದು ನಮ್ಮ ಉದ್ಯೋಗಗಳನ್ನು ,ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡದ ವಿರುದ್ದವೇ ಘೋಷಣೆಯನ್ನು ಕೂಗುವ ಜರಿಯುವ ಹೊರ ರಾಜ್ಯದ ಅರ್ಭ್ಯರ್ಥಿಗಳು ಕೆಲಸದಲ್ಲಿ ಪ್ರಾಮಾಣಿಕರಾಗಿರಲು ಸಾಧ್ಯವೇ? ಬೇರೆ ರಾಜ್ಯದ ಅಥವಾ ಬೇರೆ ಭಾಷೆಯನ್ನು ಗೌರವಿಸಬೇಕು ಎಂಬ ಕನಿಷ್ಟ ತಿಳುವಳಿಕೆ ಕೂಡ ಇಲ್ಲದವರು ಇನ್ನು ಯಾವ ರೀತಿ ಕರ್ನಾಟಕದಲ್ಲಿ ನ್ಯಾಯವಾಗಿ ಕೆಲಸವನ್ನು ಮಾಡಬಲ್ಲರು?

ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಂಬುದೇ ನಮ್ಮೆಲ್ಲರ ಅಂಬೋಣ.ಈವತ್ತು ನಾವೇನೋ ಉದಾರವಾಗಿ ಹೊರಗಿನವರನ್ನು ಕೈಬೀಸಿ ಕರೆದು ಉದ್ಯೋಗ ನೀಡುತ್ತವೆ ಆದರೆ ಮುಂದೊಂದು ದಿನ ನಮ್ಮ ರಾಜ್ಯದಲ್ಲಿ ನಮ್ಮ ಅಸ್ತಿತ್ವಕ್ಕಾಗಿ ನಾವೇ ಹೋರಾಡುವ ಪರಿಸ್ಥಿತಿ ಬರುತ್ತದೆ. ಈಗ ಅಕ್ಷರಶಃ ನಡೆಯುತ್ತಿರುವುದು ಅದೇ. ಇದು ಮೂರು ಲಕ್ಷ ಕನ್ನಡ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆ ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ ಈ ಸಮಸ್ಯೆಗೊಂದು ಪೂರ್ಣ ಪರಿಹಾರ ಸೂಚಿಸಲಿ.

ಅಷ್ಟಕ್ಕೂ ಬೇರೆ ರಾಜ್ಯದವರಿಗೂ ಉದ್ಯೋಗಗಳಲ್ಲಿ ಅವಕಾಶ ಕಲ್ಲಿಸುವುದಾದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿತಿರಬೇಕೆಂಬ ನಿಯಮ ಮಾಡಲಿ, ಹೊರ ರಾಜ್ಯದವರಿಗೆ ಕರ್ನಾಟಕಲ್ಲಿಯೇ ಕೆಲಸ ಮಾಡುಲು ಹಂಬಲಿಸುವವರಿಗೆ university ಗಳಲ್ಲಿ ಕನ್ನಡವನ್ನು ಒಂದು ವರ್ಷದ ಅಥವ ಎರಡು ವರ್ಷದ diploma course ಕಲಿತು ಬರಲಿ.ಇಲ್ಲವೇ ಇಂತಿಷ್ಟು ಶೇಕಡಾ ಮಿಸಲಾತಿಯನ್ನು ನೀಡಲಿ.ಅದನ್ನೇಲ್ಲ ಬಿಟ್ಟು ಹೊರಗಿನವರಿಗೇನೇ ಮಣೆ ಹಾಕಿದರೆ ನಮ್ಮ ಗತಿ ಏನು? ನಾವು ಎಲ್ಲಿಗೆ ಹೋಗೋಣ?.

ಕಳೆದ ವರ್ಷ ಗ್ರಾಮೀಣ ಬ್ಯಾಂಕುಗಳ ನೇಮಕಾತಿಯಲ್ಲಿ ಶೇಕಡಾ ೭೦ ರಷ್ಟು ಹೊರ ರಾಜ್ಯದವರೇ ಅದರಲ್ಲೂ ಆಂಧ್ರದವರೇ ಇದ್ದಾರೆಂದರೆ ಇದು ನಮ್ಮ ಅಧ:ಪತನದ ಮುನ್ಸೂಚನೆಯಲ್ಲವೇ ?ನಮ್ಮ ನಾಡಿನಲ್ಲಿ ನಮಗೆ ಆದ್ಯತೆ ಇಲ್ಲದಿದ್ದರೆ ಮತ್ತಿನ್ನು ಬೇರೆ ರಾಜ್ಯದಲ್ಲಿ ನೀಡುವರೆ? ಕುಣಿಕೆ  ಕುತ್ತಿಗೆಯವರೆಗೂ ಬಂದಾಗಲೇನಾ ಎಚ್ಚೆತ್ತುಕೊಳ್ಳುವದು?.ಇನ್ನಾದರೂ ನಾವು ಜಾಗ್ರತರಾಗುವ ಕಾಲ ಸನ್ನಹಿತವಾಗಿಲ್ಲವೆ?. ಬೇರೆ ರಾಜ್ಯದವರು “ಇನ್ಮೇಲೆ ನಾವು ಕರ್ನಾಟಕದಲ್ಲೆ ಬಂದು ಪರೀಕ್ಷೆ ಬರೆಯುತ್ತೇವೆ ನಿಮ್ಮಕಡೆ ಅದೇನಾಗುತ್ತದೆಯೋ ಮಾಡಿ, ಬೊಗಳುವ ನಾಯಿಗಳು ಕಚ್ಚುವುದಿಲ್ಲ” ಎಂದು ಹಿಯಾಳಿಸುತ್ತಿದ್ದರೂ ನಮ್ಮ ನಾಯಕರೊಬ್ಬರಾದರು ಪ್ರತಿಭಟನೆಗೆ ಬಂದಿದ್ದಾರಾ?ಇಲ್ಲ.

ದಸ್ತಗಿರಿ ಎನ್ನುವ ಒಬ್ಬ ಆಂಧ್ರದ banking coaching centre owner ಹೇಳ್ತಾನೆ “ಕನ್ನಡದವರಿಗೆ ಸೀರೆ ಬಳೆ ಕೊಡುತ್ತೇನೆ ಉಟ್ಟುಕೊಳ್ಳಿ ,ಸಿದ್ರಾಮಯ್ಯ ಬಚ್ಚಾ ಲೀಡರ್ “ಎಂದು. ಇನ್ನೂ ಕೀಳು ಮಟ್ಟಕ್ಕಿಳಿದು ಬೈಯುತ್ತಾನೆ.ಇದು ಆಂಧ್ರದವರ talent ಆದರೆ ಇಂತಹ talent ನಮಗೆ ಖಂಡಿತ ಬೇಡ ಸ್ವಾಮಿ.ಅವನ್ಯಾವನೊ ಕನ್ನಡವನ್ನು ಬೈದನೆಂದು ನಾವು ಆಂಧ್ರವನ್ನು ಬೈಯುವುದಿಲ್ಲ.ನಾವು ಎಲ್ಲರನ್ನೂ ಗೌರವಿಸುತ್ತೆವೆ. ನಮ್ಮ ರಾಜ್ಯದ ಗ್ರಾಮೀಣ ಬ್ಯಾಂಕುಗಳಲ್ಲಿ ಬೇರೆ ರಾಜ್ಯದವರು ಕೆಲಸ ಮಾಡುವುದಾದರೆ ಅಂತಹ ಬ್ಯಾಂಕುಗಳು ನಮ್ಮ ಊರುಗಳಲ್ಲಿ ಇರುವುದೇ ಬೇಡ, ಆಂಧ್ರ ತೆಲಂಗಾಣಗಳಿಗೆ ಮಾರಿಬಿಡಿ.ಅಲ್ಲವೇ?!

-ವಿಶಾಲ್ ಕುಮಾರ್ ಕುಲಕರ್ಣಿ

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!