ಅಂಕಣ

ಮೂವತ್ತೇಳನೆಯ ವಯಸ್ಸಿನಲ್ಲಿ ಆರ್ಮಿ ಸೇರಿದ ಮೊದಲ ಮಹಿಳೆ…

“ನಾನು ಈ ನಿರ್ಧಾರವನ್ನು ಭಾವುಕತೆಯಿಂದ ತಗೊಂಡಿಲ್ಲ. ಕಾಶ್ಮೀರದ ಕುಪ್ವಾರಾದಿಂದ ಸತಾರಾವರೆಗೆ ನನ್ನ ಗಂಡನ ಮೃತದೇಹವನ್ನು ತೆಗೆದುಕೊಂಡು ಬರುತ್ತಿರುವಾಗಲೇ ನಿರ್ಧರಿಸಿದ್ದೆ – ಗಂಡನ ಮೈಮೇಲಿರುವ ಸಮವಸ್ತ್ರವನ್ನು ನಾನು ಧರಿಸಬೇಕು. ಅದನ್ನು ಧರಿಸಿ ಕನ್ನಡಿಯ ಮುಂದೆ ನಿಂತಾಗ ನನ್ನ ಗಂಡನನ್ನು ಕಾಣಬೇಕು ಎಂದು ನಿರ್ಧಾರ ಮಾಡಿದ್ದೆ” ಈ ಮಾತನ್ನು ಹೇಳಿದ್ದು ನಿನ್ನೆಯಷ್ಟೇ ಸೈನ್ಯಕ್ಕೆ ಸೇರ್ಪಡೆಯಾದ ಸ್ವಾತಿ ಮಹಾದಿಕ್. ಸ್ವಾತಿ,  ಮೂವತ್ತೇಳನೆಯ ವಯಸ್ಸಿನಲ್ಲಿ ಸೈನ್ಯ ಸೇರಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾಳೆ. ಸ್ವಾತಿ Colonel. ಸಂತೋಷ್ ಮಹಾದಿಕ್ ಅವರ ಮಡದಿ. ಸಂತೋಷ್‌ (ವೀರ ಚಕ್ರ ಹಾಗೂ ಸೇನಾ ಪದಕ ವಿಜೇತ) ಭಾರತೀಯ ಸೈನ್ಯದ ಅಪ್ರತಿಮ ವೀರ. ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ವೀರಾವೇಶದಲ್ಲಿ ದೇಶಕ್ಕಾಗಿ ಹೋರಾಡಿ  ತಮ್ಮ ಜೀವವನ್ನು ಅರ್ಪಿಸಿದ್ದರು. ಗಂಡನ ಜೊತೆ ಸ್ವಾತಿಯ ಸಮಯ ಅವಳಿಗೇ ಅರಿಯದ ಹಾಗೆ ಕಳೆದು ಹೋಗುತ್ತಿತ್ತು. ಆದರೆ ಗಂಡ ಮಡಿದ ನಂತರ ಒಂದು ದಿನವೂ ವರ್ಷವಾಗಿ ಕಂಡಿತು. ಮಾನಸಿಕವಾದ ನೋವಿಗಿಂತ ದೈಹಿಕವಾದ ನೋವು ಲೇಸು ಎಂದುಕೊಂಡು ಸೈನ್ಯ ತರಬೇತಿ ಶಿಬಿರವನ್ನು ಸೇರಿದರು. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಇಲ್ಲಿಯ ತನಕ ಮನೆಯಲ್ಲಿರುತ್ತಿದ್ದ ಅಮ್ಮ ಇವತ್ತಿನಿಂದ ಅವರ ಕಣ್ಣೆದುರು ಆರ್ಮಿ ಆಫಿಸರ್ ಆಗಲಿದ್ದಾಳೆ !

ನಾಯಕ್ ಮುಖೇಶ್ ದುಬೆ ನಿಧನರಾದಾಗ ನಿಧಿ ಇನ್ನೂ ನಾಲ್ಕು ತಿಂಗಳ ಗರ್ಭಿಣಿ! ಅವಳಿಗೆ ಆವಾಗ ಕೇವಲ ಇಪ್ಪತ್ತೊಂದು ವರ್ಷ ವಯಸ್ಸು. ಇಪ್ಪತ್ತೊಂದು ವರ್ಷ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಹೆಂಗಸಿನ ಮನಸ್ಥಿತಿ ಹೇಗಿರಬೇಕು? ಗಂಡ ತೀರಿಕೊಂಡ ಎರಡೇ ದಿನದಲ್ಲಿ ಅತ್ತೆ ಮಾವ ನಿಧಿಯನ್ನು ಮನೆಯಿಂದ ಹೊರಗೆ ಹಾಕಿದರು. ಗಂಡನನ್ನು ಕಳೆದುಕೊಂಡ ನಿಧಿಯನ್ನು ಸಂಬಂಧಿಕರು ಕೂಡ ದೂರ ಮಾಡತೊಡಗಿದರು. ಇದರಿಂದ ಬೇಸತ್ತ ನಿಧಿ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ನಿರ್ಧಾರ ಮಾಡಿದಳು. ಮಗನ ಜನ್ಮವಾದ ಮೇಲೆ ಎಂಬಿಎ ಮುಗಿಸಿದಳು. 2014ರಲ್ಲಿ ನಿಧಿ ಒಂದು ಪತ್ರಿಕೆಯಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತ ಮಡಿದವರ ಮಡದಿಯರೂ ಕೂಡ ಸೈನ್ಯ ಸೇರಬಹುದು ಎಂಬ ವಿಷಯ ಓದಿದರು. ತಮ್ಮ ಪ್ರಯತ್ನದಲ್ಲಿ ಒಮ್ಮೆ ಅಲ್ಲ ನಾಲ್ಕು ಸಲ ಫೇಲ್ ಆದರು. ತಂದೆ ಪೋಲಿಸ್ ಆಗಿ ನಿವೃತ್ತಿ ಪಡೆದವರು, ಗಂಡ ಸೈನ್ಯದಲ್ಲಿ ನಾಯಕ್ ಆಗಿ ಸೇವೆ ಸಲ್ಲಿಸಿದವರು ಹಾಗಿರುವಾಗ ಇವಳ ಛಲ ಕಡಿಮೆಯೇ? ನಾಲ್ಕು ಸಲ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಸೋತರೂ ಇವಳು ಸೋಲಲಿಲ್ಲ. ಐದನೇ ಸಲ ಮತ್ತೆ ಪ್ರಯತ್ನ ಪಟ್ಟಳು. ಇವತ್ತು ನಿಧಿ ದುಬೆ ಆರ್ಮಿಯ ಆಫಿಸರ್!

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!