ಅಂಕಣ

ಜಟಿಲವಲ್ಲ ಜಿ.ಎಸ್.ಟಿ

ಜುಲೈ ಒಂದಕ್ಕೆ ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ಬಂದಿದೆ. ಬಹಳಷ್ಟು ಜನಕ್ಕೆ  ಅದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ ಜಾಲತಾಣಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆದ್ದರಿಂದ GSTಗೆ ಸಂಬಂಧ ಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಆದಷ್ಟೂ ಸರಳವಾಗಿ ಹೇಳುವುದೇ ಈ ಲೇಖನದ ಉದ್ದೇಶ

ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳೆಂದರೇನು?

ಸರಕು ಮತ್ತು ಸೇವಾ ತೆರಿಗೆಗಳು (GST) ಅರ್ಥವಾಗಬೇಕಾದರೆ ಮೊದಲು ಪ್ರತ್ಯಕ್ಷ (Direct) ಮತ್ತು ಪರೋಕ್ಷ (Indirect) ತೆರಿಗೆಗಳನ್ನು ಅರ್ಥಮಾಡಿಕೊಳ್ಳಬೇಕು.

ಯಾವುದೇ ಸರಕಾರ ಕೇವಲ ಪ್ರತ್ಯಕ್ಷ ತೆರಿಗೆಗಳಿಂದ (Direct taxes) ಸರಕಾರ ನಡೆಸುವುದುಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸಾಧ್ಯವಿಲ್ಲನೇರ ತೆರಿಗೆಗಳಿಗೆ ಉದಾಹರಣೆಯಾಗಿನಾವು ಕಟ್ಟುವ ಆದಾಯ ತೆರಿಗೆಕಂಪನಿಗಳು ಕಟ್ಟುವ ಕಾರ್ಪೊರೇಟ್ ತೆರಿಗೆಗಳನ್ನು ತೆಗೆದುಕೊಳ್ಳಬಹುದುಈ ತೆರಿಗೆಗಳು ನೇರವಾಗಿ ಸರ್ಕಾರಕ್ಕೇ ಸಂದಾಯವಾಗುತ್ತದೆ ಆದ್ದರಿಂದಲೇ ಪ್ರತ್ಯಕ್ಷ ತೆರಿಗೆ (Direct Tax) ಎಂದು ಹೆಸರುಕೇವಲ ಪ್ರತ್ಯಕ್ಷ ತೆರಿಗೆ ಸಂಗ್ರಹದಿಂದ ಸರಕಾರ ನಡೆಸುವುದು ಅಸಾಧ್ಯಆದ್ದರಿಂದಲೇ ಪರೋಕ್ಷ ತೆರಿಗೆ (Indirect tax)ಗಳನ್ನು ಸರಕಾರ ಸಂಗ್ರಹಿಸುವುದುಭಾರತದಲ್ಲಿ ಎಲ್ಲರೂ ಆದಾಯ ತೆರಿಗೆಯ ವ್ಯಾಪ್ತಿಗೆ ಒಳಪಡುವುದಿಲ್ಲತೆರಿಗೆ ಕಟ್ಟುವಷ್ಟು ಆದಾಯವೇ ಇಲ್ಲದ್ದಿದ್ದಾಗ ಅವರಿಂದ ತೆರಿಗೆ ಕಟ್ಟಿಸಿಕೊಳ್ಳುವುದು ಅಸಾಧ್ಯಆದರೆ ಅಭಿವೃದ್ಧಿ ಕಾರ್ಯಗಳಿಗೆ ತೆರಿಗೆ ಹಣ ಬೇಕೇ ಬೇಕುಇಂಥ ಸಮಯದಲ್ಲಿ ಸರಕಾರಗಳ ಕೈ ಹಿಡಿಯುವುದೇ ಪರೋಕ್ಷ ತೆರಿಗೆಗಳುಉದಾಹರಣೆಗೆ ಒಬ್ಬ ಕಡುಬಡವನನ್ನೇ ತೆಗೆದುಕೊಳ್ಳಿಅವನು ಆದಾಯ ತೆರಿಗೆಯನ್ನಂತೂ ಕಟ್ಟಲಾರಆದರೆ ಅವನು ಅಂಗಡಿ ಹೋಗಿ ಒಂದು ಬಿಸ್ಕತ್ ಪೊಟ್ಟಣವನ್ನು ತೆಗೆದುಕೊಂಡ ಎಂದಿಟ್ಟುಕೊಳ್ಳಿಆ ಸರಕಿನ ಉತ್ಪಾದನೆಗೆ ಆದ ಮೂಲ ಬೆಲೆಯ ಮೇಲೆ ಸರಕಾರ ತೆರಿಗೆ ಹಾಕಿರುತ್ತದೆಬಡವನಾದರೂ ಅವನು ಅದನ್ನು ಖರೀದಿಸಿದಾಗ ಅವನೂ ತೆರಿಗೆ ಕಟ್ಟಿದ ಹಾಗಾಗುತ್ತದೆ.

GSTಯ ಮುಂಚೆ ಭಾರತದಲ್ಲಿ ನೂರಾರು ಪರೋಕ್ಷ ತೆರಿಗೆಗಳಿದ್ದವುಕೇಂದ್ರದ ಅಷ್ಟು ತೆರಿಗೆಗಳುರಾಜ್ಯಗಳು ವಿಧಿಸುವ VAT, ಅಂತಾರಾಜ್ಯ ರಫ್ತ್ತು ತೆರಿಗೆ ಮತ್ತೊಂದು ಮಗದೊಂದು ಸೇರಿ ಯಾವುದು ಎಷ್ಟು ಎನ್ನುವುದೇ ಅರ್ಥವಾಗದೆ ಭಾರತದ ತೆರಿಗೆಯ ವಿಧಿಗಳು ಗೊಂದಲದ ಗೂಡಾಗಿ ಹೋಗಿದ್ದವುಉದಾಹರಣೆಗೆದೀಪಾವಳಿ ಬಂತೆಂದರೆ ಸಾಕು ನಮ್ಮಲ್ಲಿ ಸಾಲು ಸಾಲು ಕಾರುಗಳು ಹೊಸೂರಿನ ಕಡೆ ನಡೆದುಬಿಡುತ್ತವೆಅಲ್ಲಿಂದ ತಮಿಳುನಾಡು ಹತ್ತಿರವಾದ್ದರಿಂದ ಮತ್ತು ಶಿವಕಾಶಿಯಲ್ಲಿ ಪಟಾಕಿಗಳು ಉತ್ಪಾದನೆಯಾಗುವುದರಿಂದ ತಮಿಳುನಾಡಿನಲ್ಲಿ ಪಟಾಕಿಗಳ ಬೆಲೆ ಕಡಿಮೆಆದರೆ ಅದೇ ಅಧಿಕೃತವಾಗಿ ತಮಿಳುನಾಡಿನ ಗಡಿ ದಾಟಿ ಕರ್ನಾಟಕಕ್ಕೇ ಬಂತು ಎಂದಿಟ್ಟುಕೊಳ್ಳಿ ಇರುವ ಇರದಿರುವ ಅಂತಾರಾಜ್ಯ ತೆರಿಗೆಗಳು ಬಿದ್ದು ೩೦೦ರೂಪಾಯಿ ಪಟಾಕಿಯ ಬೆಲೆ ಬೆಂಗಳೂರಿನಲ್ಲಿ ೫೦೦ ರೂಪಾಯಿಯಾಗಿರುತ್ತದೆಮೂಲದಲ್ಲಿ ಇದು ಉತ್ಪಾದನೆ ಆಧಾರಿತ ತೆರಿಗೆ (Production based tax). ಅದೇ ರೀತಿ ಒಂದು ರಾಜ್ಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ತೆರಿಗೆ ದರಗಳನ್ನು ಕಡಿತಗೊಳಿಸಿತು ಎಂದಿಟ್ಟುಕೊಳ್ಳಿ ಎಲ್ಲ ಕೈಗಾರಿಕೆಗಳೂ ಅಲ್ಲಿಗೆ ಹೋಗಿ ಸೇರಿಬಿಡುತ್ತವೆಆದ್ದರಿಂದ ಕೆಲವು ರಾಜ್ಯಗಳು ಶ್ರೀಮಂತವಾಗಿ ಮತ್ತು ಕೆಲವು ಕೇವಲ ಗ್ರಾಹಕರಾಗಿ ಒಂದು ರೀತಿಯ ಅಭಿವೃದ್ಧಿಯ ಅಸಮತೋಲನವಾಗಿದೆ ಎಂದರೆ ತಪ್ಪಾಗಲಾರದು.

ಹಾಗಾದರೆ GSTಯಿಂದ ಏನಾಗುತ್ತದೆ?

ಮೊದಲನೆಯದಾಗಿ ಇದು ಭಾರತದಾದ್ಯಂತ ಏಕರೂಪ ತೆರಿಗೆಯಿರಲು ಕಾರಣವಾಗುತ್ತದೆಏಕರೂಪ ತೆರಿಗೆಯ ಕಾರಣ ಕೈಗಾರಿಕೆಗಳು ಎಲ್ಲ ರಾಜ್ಯಗಳಲ್ಲಿಯೂ ಸಮನಾಗಿ ಹಬ್ಬಲು ಸಹಕಾರಿಯಾಗುತ್ತದೆಒಂದು ಮಾತಿನಲ್ಲಿ ಹೇಳಬೇಕೆಂದರೆ ಇದರಿಂದ Ease Of Doing Business ಹೆಚ್ಚಾಗುತ್ತದೆ.

ಜನಸಾಮನ್ಯ ಗೊತ್ತಿದ್ದೂ ಗೊತ್ತಿಲ್ಲದೆಯೋ ಕಟ್ಟುತ್ತಿದ್ದ ನೂರಾರು ಪರೋಕ್ಷ ತೆರಿಗೆಗಳು ಸೇರಿ ಒಂದೇ ಆಗಿಬಿಡುವುದರಿಂದ ಎಲ್ಲವನ್ನೂ ಕೂಡಿ ಕಳೆದು ತಲೆಕೆಡಿಸಿಕೊಂಡುಗಣಿತ ಕಬ್ಬಿಣ ಕಡಲೆ ಎಂದೆನಿಸುವವರಿಗೆ ಆರ್ಯಭಟನಾಗುವ ಪ್ರಮೇಯ ತಪ್ಪುತ್ತದೆಆ ತೆರಿಗೆಈ ತೆರಿಗೆ ಅಂತ ನೂರಾರು ಪದಗಳಿರುತ್ತಿದ್ದ ರಸೀತಿಯಲಿ ಈಗ ಕೇವಲ GSTಯ ಒಂದೇ ದರ ಕಾಣುತ್ತದೆ

ಅಂತಾರಾಜ್ಯ ವ್ಯವಹಾರಗಳು Integrated GST ಅಡಿಯಲ್ಲಿ ಬರುವುದರಿಂದರಾಜ್ಯಗಳು ಗ್ರಾಹಕರ ಮೇಲೆ ಹೇರುತ್ತಿದ್ದ ಅಂತಾರಾಜ್ಯ ತೆರಿಗೆಗಳು ಇಲ್ಲದೇ ಹೋಗಿಕೇವಲ ಒಂದೇ ದರದ GST ಬರುತ್ತದೆಇದರಿಂದ ನೀವು ಯಾವ ರಾಜ್ಯದಲ್ಲೇ ಆದರೂ GSTಅಡಿಯಲ್ಲಿ ಮಾರಲ್ಪಡುವ ವಸ್ತುಗಳು ಒಂದೇ ದರಕ್ಕೆ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.

GSTಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದಯೇ?

ಶ್ರೀಸಾಮಾನ್ಯನ ದಿನನಿತ್ಯದ ಜೀವನಕ್ಕೆ ಅತ್ಯವಶ್ಯಕವಾದ ಯಾವುದೇ ವಸ್ತುಗಳ ಮೇಲೆ ಅಷ್ಟು ಭಾರಿ ಪರಿಣಾಮ ಉಂಟಾಗುವುದಿಲ್ಲಮೂಲದಲ್ಲಿ ನಾವು ಕೇಂದ್ರ ಸರಕಾರದ ತೆರಿಗೆಗಳುರಾಜ್ಯ ಸರಕಾರದ VAT ಮತ್ತೊಂದು ಮಗದೊಂದು ಕಟ್ಟುತ್ತಿದ್ದಾಗಲೂ ಹೆಚ್ಚು ಕಡಿಮೆ ಏನು ದರವಿತ್ತೋಸ್ವಲ್ಪ ಹಿಂದು ಮುಂದಾದರೂ GSTಯ ನಂತರವೂ ಅಷ್ಟೇ ಆಗುತ್ತದೆಹೇಗಿದ್ದರೂ ಗೊತ್ತೇ ಇಲ್ಲದ್ದೆ ನೂರಾರು ಮುಚ್ಚುಮರೆಯ (Hidden tax) ತೆರಿಗೆಗಳನ್ನು ಕಟ್ಟುತ್ತಿದವರಿಗೆ ಈಗ ಯಾವ GSTಗೆ ಎಷ್ಟು ಹಣ ಹೋಗುತ್ತಿದೆ ಎಂಬುದು ಗೊತ್ತಾಗುತ್ತದಷ್ಟೆ.

ಯಾರಾದರೂ ನಿಮಗೆ ಜನಸಾಮಾನ್ಯನ ಜೀವನ ಬುಡಮೇಲಾಗಿ ಅವನು ಜೀವಕಳೆದುಕೊಳ್ಳುತ್ತಾನೆಬಡತನ ಹೆಚ್ಚಾಗುತ್ತದೆಸಿರಿವಂತರು ತಪ್ಪಿಸಿಕೊಳ್ಳುತ್ತಾರೆಬಡವರಿಗೆ ಮಾತ್ರ ಹೊರೆಯಾಗುತ್ತದೆ ಎಂದು ಹೆದರಿಸುತ್ತಿದ್ದಾರೆಂದರೆ ಅವರು ಯಾವುದೋ ಪಟ್ಟಭದ್ರ ಹಿತಾಸಕ್ತಿಯಿಂದ ಮಾತನಾಡುತ್ತಿದ್ದಾರೆ ಎಂದೇ ಅರ್ಥಇದು ಪರೋಕ್ಷ ತೆರಿಗೆ (Indirect tax), ಇದಕ್ಕೆ ಬಡವ ಮತ್ತು ಸಿರಿವಂತರ ಭೇದವಿಲ್ಲಎಲ್ಲರೂ ಒಂದೇ.

GSTಯಿಂದ ಉತ್ಪಾದಕ ರಾಜ್ಯಗಳ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆಯೇ?

ಹೌದು ಎನ್ನಬಹುದು. GST ಮೂಲತಃ ಗಮ್ಯ ಆಧಾರಿತ ತೆರಿಗೆ (Destination based tax). ಅಂತಿಮ ಗ್ರಾಹಕನ ಮೇಲೆಯೇ ತೆರಿಗೆಗಳು ಬರುವುದು ಮತ್ತು ಸಂಗ್ರಹಿತವಾದ ತೆರಿಗೆ ಆ ರಾಜ್ಯಕ್ಕೇ ಸೇರುವುದುಇದರಿಂದ ತಮಿಳುನಾಡಿನಂಥ ಉತ್ಪಾದಕ ರಾಜ್ಯಗಳಿಗೆ ಬರುವ ತೆರಿಗೆ ಕಡಿಮೆಯಾಗುವುದು ಸತ್ಯಇದಕ್ಕೆ ಕೇಂದ್ರ ಸರಕಾರ ಮೊದಲ ಐದು ವರ್ಷವಾಗುವ ತೆರಿಗೆ ನಷ್ಟಕ್ಕೆ ಪರಿಹಾರ ನೀಡಲು ಒಪ್ಪಿರುವುದರಿಂದ ಅಷ್ಟು ದೊಡ್ಡ ಪರಿಣಾಮವಾಗುವುದು ಅನುಮಾನಆದರೂಕಾದು ನೋಡಿದರೆ ಎಲ್ಲವೂ ತಿಳಿಯುತ್ತದೆ.

ಹಾಗಾದರೆ GSTಗೆ ಇಷ್ಟೊಂದು ವಿರೋಧವೇಕೆ?

ಕೆಲವು ಗೊಂದಲಗಳಿವೆಯಾದರೂ ಪರಿಹಾರವಿರದೆ ಎಲ್ಲರೂ ಕೂತು ಮಾತನಾಡಿ ಬಗೆಹರಿಸಲಾಗದಂಥದೇನಲ್ಲ. ಇದೆಲ್ಲ ನೋಡಿದರೆ  ರಾಜಕೀಯ ಪಕ್ಷಗಳ ಪಟ್ಟಭದ್ರ ಹಿತಾಸಕ್ತಿ ಮೂಲಕಾರಣ ಎಂದೇ ಹೇಳಬಹುದುಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವ ಹಾಗೆ ಪ್ರತಿಯೊಂದರಲ್ಲೂ ತಪ್ಪು ಕಂಡುಹಿಡಿಯುವವರಿಗೆ ಇದೂ ಒಂದು ಕಾರಣ.

GST ಕಾಂಗ್ರೆಸ್ ಸರಕಾರದ ಯೋಜನೆಯೇ?

ಮೂಲದಲ್ಲಿ ಏಕರೂಪದ ತೆರಿಗೆ ತರಬೇಕೆನ್ನುವ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಸರಕಾರದ್ದುಅವರು ಯೋಜನೆಗೆ ನಾಂದಿ ಹಾಡಿ ಎಲ್ಲವನ್ನೂ ಕಾರ್ಯರೂಪಕ್ಕೆ ತರಬೇಕೆನ್ನುವಷ್ಟರಲ್ಲಿ ಸರಕಾರ ಹೋಗಿ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಂದಿನ ಹತ್ತು ವರ್ಷದಲ್ಲಿ UPA ಸರಕಾರ GST ತರಲು ಪ್ರಯತ್ನಿಸಿತಾದರೂಭಾಜಪದ ವಿರೋಧ ಮತ್ತು ತನ್ನದೇ ಭ್ರಷ್ಟಾಚಾರಗಳ ಕೆಸರಿನಲ್ಲಿ ಸಿಲುಕಿ ಸೋತಿತು.

ಅಂದು ಭಾಜಪ GST ವಿರೋಧಿಸಿದ್ದೇಕೆ?

ಏನೇ ಸಮಜಾಯಿಷಿಗಳನ್ನು ಕೊಟ್ಟರೂ ಇದಕ್ಕೆ ಒಂದು ಪದದ ಉತ್ತರ – ರಾಜಕೀಯ. ಕಾಂಗ್ರೆಸ್ ಜಾರಿಗೆ ತರಲು ಹೊರಟಿದ್ದ GSTಗೂ ಭಾಜಪದ ಕಾಯ್ದೆಗೂ ಅಷ್ಟೇನೂ ವ್ಯತ್ಯಾಸವಿಲ್ಲ. ಭಾಜಪ ಮನಸು ಮಾಡಿದ್ದರೆ ಕಾಂಗ್ರೆಸ್ ಸರಕಾರದ ಸಮಯದಲ್ಲೇ ಕಾಯ್ದೆ ಜಾರಿಮಾಡಬಹುದಿತ್ತುನಮ್ಮ ರಾಜಕಾರಣಿಗಳಿನ್ನೂ ಪ್ರಬುದ್ಧರಾಗಿಲ್ಲನಮ್ಮದು ಪ್ರಜಾಪ್ರಭುತ್ವ ಇನ್ನೂ ಪ್ರಬುದ್ಧವಾಗಿಲ್ಲಅವನು ಅಧಿಕಾರದಲ್ಲಿದ್ದಾಗ ಇವನು ವಿರೋಧಿಸುತ್ತಾನೆಇವನು ಏನೋ ಮಾಡಲು ಹೋದಾಗ ಅವನು ಕಾಲೆಳೆಯುತ್ತಾನೆಇದರ ಮಧ್ಯ ತಲೆ ಚಚ್ಚಿಕೊಳ್ಳಬೇಕಾದವನು ಶ್ರೀಸಾಮಾನ್ಯ.

– Srinidhi

srinidhi1947@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!