ಅಂಕಣ

‘ವೀರ್’ ಎನ್ನುವ ಹೆಸರು ಬಂದಿದ್ದು ಯಾರನ್ನೋ ಓಲೈಸಿದ್ದಕ್ಕಾಗಿ ಅಲ್ಲ..!

ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಸತ್ಯಾಸತ್ಯೆತೆಯನ್ನು ತಿಳಿಯದ ಹೆಡ್ಡರು ಮಾತ್ರ ಸಾವರ್ಕರರ ಕೊಡುಗೆಯನ್ನು ಪ್ರಶ್ನಿಸಬಲ್ಲರು. ನೆನಪಿರಲಿ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅನೇಕ ನಾಯಕರಿಗೆ, ಜನ ಪ್ರೀತಿ, ಗೌರವಾದರಗಳಿಂದ ಆಯಾ ನಾಯಕರ ಗುಣ, ವ್ಯಕ್ತಿತ್ವ, ವಿಶೇಷತೆಗಳಿಗೆ ಅನುಗುಣವಾದ ಹೆಸರನ್ನಿಟ್ಟು ಆದರದಿಂದ ಕಾಣುತ್ತಿದ್ದರು. ಆ ಕಾರಣವಾಗಿಯೇ ಮೋಹನದಾಸ್ ಮಹಾತ್ಮನಾಗಿದ್ದು. ಚಿತ್ತರಂಜನ್ ದಾಸ್ ‘ದೇಶಬಂಧು’ ಎನಿಸಿದ್ದು. ತಿಲಕರು ‘ಲೋಕಮಾನ್ಯ’ರಾಗಿದ್ದು, ಸುಭಾಷ್ ‘ನೇತಾಜಿ’ಯಾಗಿದ್ದು, ಮದನ ಮೋಹನರು ‘ಮಹಾಮನ’ರೆನಿಸಿದ್ದು ಹಾಗಾಗಿಯೇ ಅಲ್ಲವೇ..? ಅದೇ ರೀತಿ  ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯದ ಕಿಡಿ, ಅನೇಕ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾರ್ಗದರ್ಶಕರಾಗಿದ್ದ ಸಾವರ್ಕರರನ್ನು ಜನ ಪ್ರೀತಿ, ಗೌರವದಿಂದ ಕರೆದಿದ್ದು ‘ವೀರ್’ ಎಂದು! ಸಿನಿಮಾ ಟೈಟಲ್ ಗಳಂತೆ ಇಟ್ಟಿಕೊಂಡ ಹೆಸರಲ್ಲ ಕಣಮ್ಮಿ ವೀರ್ ಅನ್ನುವುದು.

                 ಶುದ್ಧ ಮನಸ್ಸಿನಿಂದ ಇತಿಹಾಸ ಓದಿಕೊಂಡವರಾರು, ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರರ ಕೊಡುಗೆಯನ್ನು ಪ್ರಶ್ನಿಸುವುದಿಲ್ಲ. ಆದರೆ, ನಕಲಿ ಗಾಂಧಿ ಮನೆಯ ಟೈಲ್ಸ್ ನೆಕ್ಕಿಕೊಂಡು ಅವರ ಎಂಜಲಿಗೆ ನಾಲಿಗೆ ಒಡ್ಡುವ ಈ ಕಾಕ ಇತಿಹಾಸಕಾರರಿದ್ದಾರೆ ನೋಡಿ ಅವರು ಮಾತ್ರ ಸಾವರ್ಕರ್ ಎಂಬ ಅಗ್ನಿಯ ಜ್ವಾಲೆಯನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಅಲ್ಲವೇ ನಮ್ಮ ಪಠ್ಯ ಪುಸ್ತಕಗಳಲ್ಲಿ ಸಾವರ್ಕರರ ಹೆಸರನ್ನು ಆದಷ್ಟು ನೇಪಥ್ಯಕ್ಕೆ ಸರಿಸಲು ಪ್ರಯತ್ನಿಸುವುದು. ಆದರೆ ಸೂರ್ಯನನ್ನು ಮರೆಮಾಡಲು ಸಾಧ್ಯವೇ..? ತಮ್ಮ ಪ್ರಯತ್ನಗಳು ಯಾವಾಗ ಕೈಗೂಡುವುದಿಲ್ಲವೋ ಅಂತಹ ಸಂದರ್ಭದಲ್ಲಿ ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ಅಪಮಾನಿಸಲಾಗುತ್ತದೆ. ಇದು ನೆಹರು ಕಾಂಗ್ರೆಸ್ ನ ಜಾಯಮಾನ.

       ದೇಶದ ಯಾವುದೇ ಇತಿಹಾಸದ ಅರಿವಿರದ ರಮ್ಯಾ, ಸಾವರ್ಕರರ ಕೊಡುಗೆಯ ಕುರಿತಾಗಿ  ಮಾತಾಡಿ ತನ್ನ ಬೋಳೆತನವನ್ನಷ್ಟೇ ಬಯಲು ಮಾಡಿಕೊಂಡಿದ್ದಾಳೆ. ಸಾವರ್ಕರರ ಚಿಂತನೆಗಳು ನಮ್ಮ ಎಷ್ಟು ಕ್ರಾಂತಿಕಾರಿಗಳನ್ನು ಪ್ರಭಾವಿಸಿತ್ತು ಎಂಬ ಅರಿವಿದೆಯೇ ಇವಳಿಗೆ? ಸಾವರ್ಕರ್ ಎಂಬ ಹೆಸರೇ ನೆಹರು ಮತ್ತು ಆತನ ಪಟಾಲಂನ್ನು ಚಿಂತೇಗೆಡಿಸಿತ್ತು ಎಂದರೆ ನೀವು ನಂಬಬೇಕು! ಸಾವರ್ಕರ್ ನೆಹರೂವಿಗೆ ಪರ್ಯಾಯ ನಾಯಕನಾಗಿ ಬೆಳೆಯಬಲ್ಲ ನಾಯಕರಾಗಿದ್ದವರು. ಮೇಲಾಗಿ ಸಾವರ್ಕರ್ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಸಾವರ್ಕರರಿಂದ ಪ್ರೇರಣೆಗೊಂಡ ಹಲವರು ಕ್ರಾಂತಿಯ ಮಾರ್ಗವನ್ನು ಮುನ್ನಡಿಸಿಕೊಂಡು ಬಂದರು. ಆದರೆ ಚಾಚಾ ನೆಹರುಗೆ ಅಂತಹ ಯಾವ ಹೋರಾಟವನ್ನು ಮುನ್ನಡೆಸಲು ಸಾಮರ್ಥ್ಯವಿರಲಿಲ್ಲ. ಮಹಾತ್ಮಾ ಗಾಂಧಿಯ ಕೃಪೆಯ ಹೊರತಾಗಿ ನೆಹರು ಕೊಡುಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಹುಲ್ಲುಕಡ್ಡಿಯಷ್ಟು ಇಲ್ಲ. ಸಾವರ್ಕರ್ ರಾಜಕೀಯ ಖೈದಿಯಾಗಿ ಅಂಡಮಾನ್ ನ ಸುಡು ಬೇಸಿಗೆಯಲ್ಲಿ ರಕ್ತ ಬಸಿಯುತ್ತಿದ್ದರೆ ಇತ್ತ ನೆಹರು ಎಡ್ವಿನಾಳೊಂದಿಗೆ ಲಲ್ಲೆ ಹೊಡೆಯುತ್ತಿದ್ದರು!

           ಅಜಾದ್ ಹೆಸರು ಕೇಳಿದ್ದೀವಿ ತಾನೇ..? ಹೆಸರು ಕೇಳಿದರೇನೇ ಎಂತಹ ರೋಮಾಂಚನ? ಬ್ರಿಟಿಷ್ ಜಡ್ಜ ಸಾಹೇಬನಿಗೆ ಸವಾಲು ಒಡ್ಡಿದ ೧೪ ರ ಕೂಸು! ಆದರೂ ಮೈ ಜುಮ್ ಎನ್ನುವ ಹಾಗೆ ನನ್ನ ಹೆಸರು ಅಜಾದ ಎಂದು ಗರ್ಜಿಸಿದನಂತೆ ಗರ್ವದಿಂದ! ಆ ಬ್ರಿಟಿಷ್ ಜಡ್ಜ ಸಾಹೇಬನ ಮೇಲೆ ಆಜಾದ್ಗೆ ಇಂತಹ ಸಿಟ್ಟಿತ್ತಲ್ಲವಾ..? ಅಂತಹ ಬ್ರಿಟಿಷ್ ಅಧಿಕಾರಿ ಮೊಂಟ್ ಬ್ಯಾಟನ್  ನ ಮಡದಿ ಎಡ್ವಿನಾಳ ತುಟಿಯಲ್ಲಿಯ ಸಿಗರೇಟಿಗೆ ನಮ್ಮ ಚಾಚಾ ಬೆಂಕಿಗಿರಿ ಹೊತ್ತಿಸುವುದೆಂದರೆ ಯಾವ ಸೀಮೆಯ ಹೋರಾಟವನ್ನು ಈ ಮನುಷ್ಯ ಸಂಘಟಿಸಿರಬಹುದು ಕಲ್ಪಿಸಿಕೊಳ್ಳಿ. ಇದು ಚಾಚಾಗಿರಿಯೊ, ಚಮಚಾಗಿರಿಯಾ..? ಇದರ ಅರಿವು ಆ ರಮ್ಯಳಿಗಿದೆಯೇ..? ಈ ಮನುಷ್ಯನಿಗೆ ಅದು ಯಾರು ಪಂಡಿತನೆಂದು ಕರೆದರೋ..? ಹೀಗೆ ಇಡೀ ರಾಷ್ಟೀಯ ಹೋರಾಟವೊಂದನ್ನು ಅಪಮಾನಿಸಿದ ನಾಯಕ ನಮ್ಮ ಚರಿತ್ರೆಯು ಉದ್ದಕ್ಕೂ ದೊರೆಯುವುದಿಲ್ಲ. ನೆಹರು ಮತ್ತು ಅವರ ಪರಿವಾರದ ಹೊರತಾಗಿ.

           ಸಾವರ್ಕರ್, ಬ್ರಿಟಿಷ್ ವಸಾಹತುಶಾಹಿ ಪರವಾಗಿ ಕೆಲಸ ಮಾಡಿದರೆಂಬುದಾಗಿ ವೃತಾ ಆರೋಪವನ್ನು ಎಡಪಂಥೀಯ ಮತ್ತು ನೆಹರು ಪ್ರಣೀತ ಇತಿಹಾಸಕಾರರು ಮಾಡುತ್ತ ಬಂದಿದ್ದಾರೆ. ನಿಜವಾಗಿಯೂ ಸಾವರ್ಕರ್ ವಸಾಹತುಶಾಹಿ ಪರವಾಗಿ ಕೆಲಸ ಮಾಡಿದ್ದರೆ, ಅವರ, “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ :೧೮೫೭” ರ ಕೃತಿಯನ್ನು ಬ್ರಿಟಿಷರು ಪ್ರಕಟಣೆಗೂ ಮೊದಲೇ ಮುಟ್ಟುಗೋಲು ಹಾಕಿ ಬಹಿಷ್ಕರಿಸುತ್ತಿದ್ದರೆ..? ಈ ಕೃತಿ ಮುಂದೆ ನೇತಾಜಿ ನೇತೃತ್ವದ ಐ.ಎನ್.ಎ ಸೈನಿಕರಿಗೆ ಪಠ್ಯ ಪುಸ್ತಕವಾಗುತ್ತಿತ್ತೆ..? ಯಾವ ಆಧಾರಗಳೊಂದಿಗೆ ಇಂತಹ ಸುಳ್ಳು ಅಪಕಥನಗಳನ್ನು ಸೃಷ್ಟಿಸಲಾಗುತ್ತಿದೆಯೋ..? ಮದನ್ ಲಾಲ್ ದಿಂಗ್ರನಂತಹ ಸ್ವಾತಂತ್ರ್ಯ ಸೇನಾನಿ ಯಾರ ಗರಡಿಯಲ್ಲಿ ಅರಳಿದ್ದು ಎನ್ನುವುದು ಈ ಸುಳ್ಳು ಇತಿಹಾಸಕಾರರಿಗೆ ತಿಳಿದಿಲ್ಲವೇ..?

   ನೆಹರುಗೆ ಸಾವರ್ಕರ್ ಕುರಿತಾಗಿ ಒಂದು ಭಯವಿತ್ತು. ಸಾವರ್ಕರ್ ಎಲ್ಲಿ ತಮಗೆ ಪರ್ಯಾಯ ನಾಯಕರಾಗಿ ಬೆಳೆದು ನಿಂತು ಬಿಡುತ್ತಾರೆಂಬ ಭಯ ತೀವ್ರವಾಗಿತ್ತು. ಆ ಕಾರಣಕ್ಕಾಗಿಯೇ ಅವರ ಪ್ರಭಾವವನ್ನು ತಗ್ಗಿಸುವ, ತೆರೆ ಮರೆಗೆ ಸರಿಸುವ ಪ್ರಯತ್ನಗಳು ನಿರಂತರವಾಗಿ ನಡೆದವು.  ಅದರ ಭಾಗವಾಗಿಯೇ ಗಾಂಧಿ ಹತ್ಯೆಯ ಸಂಚಿನಲ್ಲಿ ಉದ್ದೇಶಪೂರ್ವಕವಾಗಿ ಸಾವರ್ಕರ್ ಹೆಸರನ್ನು ಎಳೆದು ತರಲಾಯಿತು. ಇದಾವುದೂ ಇತಿಹಾಸ ಓದಿಕೊಂಡವರಿಗೆ ಗುಟ್ಟಾಗಿ ಉಳಿದಿಲ್ಲ. ಸಾವರ್ಕರ್ ರೀತಿಯಲ್ಲಿ ಯಾರೆಲ್ಲಾ ನೆಹರುಗೆ ಪರ್ಯಾಯ ಶಕ್ತಿಯಾಗಿ ಬೆಳೆಯುವ ತಾಕತ್ತಿತ್ತೋ ಅಂತವರನ್ನು ತೆರೆಮರೆಗೆ ಸರಿಸುವ ಪ್ರಯತ್ನಗಳು ನಡೆದವು. ಈ ಕುತಂತ್ರಕ್ಕೆ ಬಾಬಾಸಾಹೇಬ ಅಂಬೇಡ್ಕರರು ಮತ್ತು ನೇತಾಜಿ ಸುಭಾಷರು ಸಹ ಬಲಿಯಾಗಬೇಕಾಯಿತು.

ಸಾವರ್ಕರ್ ಬಹುವಾಗಿ ಗುರುತಿಸಿಕೊಂಡಿದ್ದು ಲೇಖಕನಾಗಿ, ಒಬ್ಬ ಕವಿಯಾಗಿ, ತತ್ವಜ್ಞಾನಿಯಾಗಿ, ಸಮಾಜಸುಧಾರಕನಾಗಿ, ಚಿಂತಕನಾಗಿ. ಸಾವರ್ಕರಲ್ಲಿಯ ಪ್ರಖರ ರಾಷ್ಟ್ರೀಯವಾದಿ ಚಿಂತನೆಗಳು, ಸ್ವಾತಂತ್ರ್ಯ ಆಂಧೋಲವನ್ನು ಮತ್ತಷ್ಟು ಪ್ರಖವಾಗಿ ಮುಂದುವರೆಯುವಂತೆ ಮಾಡಿದ್ದವು. ಇದು ಬ್ರಿಟಿಷ್ ಪ್ರಭುತ್ವದ ನಿದ್ದೆಗೆಡಿಸಿತ್ತು. ಆ ಕಾರಣವಾಗಿಯೇ ಜಗತ್ತಿನಾದ್ಯಂತ ಇದ್ದ ಬ್ರಿಟಿಷ್ ವಸಾಹತು ಆಡಳಿತದಲ್ಲಿಯೇ ರಾಜಕೀಯ ಖೈದಿಯೆನಿಸಿ ಅತೀ ದೀರ್ಘ ಸೆರೆವಾಸವನ್ನು ಅನುಭವಿಸಿದ್ದು ಸಾವರ್ಕರರು! ಅವರ ಕ್ರಾಂತಿ ಚಟುವಟಿಕೆಗಾಗಿ ಎರಡು ಅವಧಿಯ ಅತೀ ಕಷ್ಟಕರವಾದ ಕರಿನೀರಿನ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಪರಿಣಾಮ ಸಾವರ್ಕರ್ ಸೆರೆವಾಸದಲ್ಲಿ ಗಾಣದೆತ್ತಿನ ರೀತಿಯಲ್ಲಿ ಹಗಲೆಲ್ಲ ದುಡಿಯಬೇಕಿತ್ತು. ರಾತ್ರಿ ಸಾವರ್ಕರ್ ವಿಶ್ರಾಂತಿ ತೆಗೆದುಕೊಳ್ಳುತ್ತಿರಲಿಲ್ಲ, ಬದಲಾಗಿ ಸೆರೆಮನೆಯ ಗೋಡೆಯ ಮೇಲೆ ತನ್ನ ಕೈಗೆ ಹಾಕಿದ ಬೇಡಿಯ ಮೊಳೆಯಿಂದಲೇ ಕ್ರಾಂತಿ ಗೀತೆಯನ್ನು ಕೆತ್ತುತ್ತಿದ್ದರೆಂದರೆ, ಎಂತಹ ದೇಶಭಕ್ತರಿರಬೇಕು ಸಾವರ್ಕರ್..?! ಮೊಟ್ಟ ಮೊದಲ ಬಾರಿಗೆ ಭಾರತದ ಸ್ವಾತಂತ್ರ್ಯದ ಹೋರಾಟ ಜಗತ್ತಿನ ಗಮನ ಸೆಳೆಯುವಂತೆ ಮಾಡಿದ್ದು ಇದೆ ಸಾವರ್ಕರ್!

             ಇತ್ತ ಸಾವರ್ಕರ್ ತಮ್ಮ ಕ್ರಾಂತಿಕಾರಕ ಚಾಟುವಟಿಕೆಯಿಂದಾಗಿ ಅಂಡಮಾನಿನ ಬಿರುಬಿಸಿಲಿನ ಸಮಯದಲ್ಲಿ ದೀರ್ಘಕಾಲದ, ಅತೀ ಕಷ್ಟಕರವಾದ ಕರಿನೀರಿನ ಶಿಕ್ಷೆಯನ್ನು ಅನುಭವಿಸುತ್ತಿದ್ದರೆ, ಅತ್ತ ನೆಹರು ಎಂತಹ ಘೋರ ಶಿಕ್ಷೆಯನ್ನು ಅನುಭವಿಸುತ್ತಿದ್ದರೆಂಬುದು ಗೊತ್ತೇ..? ಅವರ ಮಗಳು ಇಂದಿರಾಳ ಪತ್ರಗಳ ಮೂಲಕ ತಿಳಿಯುತ್ತೆ. ಎರಡು ಮೂರೂ ಕೋಣೆಗಳ ಒಂದು ಚಿಕ್ಕ ಮನೆಯಂತೆ. ಅದರಲ್ಲಿ ಕೇವಲ ಎರಡು-ಮೂರೂ ಸೋಫಾ ಸೆಟ್ಟು, ಮಂಚ, ಮೂರೂ ನಾಲ್ಕು ದಿನ ಪತ್ರಿಕೆಗಳು, ಓದಲು ಬರೆಯಲು ಒಂದಿಷ್ಟು ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಅಷ್ಟೇ! ಎಂತಹ ಘನ ಘೋರ ಶಿಕ್ಷೆಯನ್ನು ನಮ್ಮ ಚಾಚಾ ಅನುಭವಿಸಿದ್ದರಲ್ಲವೇ..? ಇಂತಹವರನ್ನೆಲ್ಲ ಸ್ವಾತಂತ್ರ್ಯದ ಸೇನಾನಿಗಳೆನ್ನುತ್ತೀವಲ್ಲ ಛೇ..! ಈ ಚಾಚಾ, ಲೇಡಿ ಮೌಂಟ್ ಬ್ಯಾಟನಾಳ ತುಟಿಯಲ್ಲಿಯ ಸಿಗರೇಟನ್ನು ಹೊತ್ತಿಸುವಾಗಲೇ ದೇಶದ ಹಿರಿಮೆ, ಸ್ವಾಭಿಮಾನವನ್ನು ಅಡಾಯಿಟ್ಟಾಗಿತ್ತು. ಅದರೊಂದಿಗೆ ಗಾಂಧಿಯ ಆದರ್ಶಗಳನ್ನು ಹತ್ಯೆ ಮಾಡಿದ ಕೀರ್ತಿ ಸಲ್ಲಬೇಕಾಗಿದ್ದೂ ನಮ್ಮ ಪಂಡಿತ ಸಾಹೇಬರಿಗೆ! ನೆಹರು ಎಷ್ಟು ಜನ ಸ್ವಾತಂತ್ರ್ಯ ಹೋರಾಟಗಾರಿಗೆ ಪ್ರೇರಣೆಯಾಗಿ ನಿಂತಿದ್ದಾರೆ ಹೇಳಿ ನೋಡೋಣ. ದೇಶಭಕ್ತಿ, ದೇಶಸೇವೆ, ಕ್ರಾಂತಿಗೆ ಇನ್ನೊಂದು ಹೆಸರೇ ಸಾವರ್ಕರ! ಹೀಗಿರುವಾಗ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಹತ್ತಿರವೂ ಸುಳಿಯಕ್ಕಾಗದ ಜನ ವಿನಾಕಾರಣ ಸಾವರ್ಕರ ತ್ಯಾಗ, ಬಲಿದಾನಗಳನ್ನು ಅಪಮಾನಿಸುವುದು ತರವಲ್ಲ. ಸಾವರ್ಕರರ ಹೆಸರನ್ನು ಶಾಲೆಯ ಪಠ್ಯ ಪುಸ್ತಕಗಳಿಂದ ಮರೆಮಾಚಬಹುದು. ಇತಿಹಾಸವನ್ನು ತಿರುಚುವುದರಲ್ಲಿ,  ಸುಳ್ಳಿನ ಇತಿಹಾಸದ ಕತೆಗಳನ್ನು ಹೆಣೆಯುವುದರಲ್ಲಿ ಕಾಂಗ್ರೆಸ್ ಕಮ್ಯುನಿಸ್ಟ್ (ಕಾಕ) ಇತಿಹಾಸಕಾರರು ನಿಸ್ಸಿಮರೇ ಇರಬಹುದು. ಆದರೆ ಕಾಲ ಮೊದಲಿನಂತಿಲ್ಲ, ಬದಲಾಗಿದೆ. ಇವರು ಗೀಚಿದ್ದೇ ಇತಿಹಾಸವೆಂದುಕೊಂಡು ನಂಬುವ ಸ್ಥಿತಿಯಲ್ಲಿ ಇಂದಿನ ಯುವಜನಾಂಗವಿಲ್ಲ. ಪ್ರಜ್ಞೆ ಜಾಗೃತವಾಗಿದೆ. ನೀವು ಸತ್ಯವನ್ನು ಮರೆಮಾಚಬಲ್ಲಿರಿ. ಆದರೆ ಸತ್ಯವನ್ನು ಕೊಲ್ಲಲಾರಿರಿ ಏಕೆಂದರೆ ಸತ್ಯಕ್ಕೆ ಸಾವಿಲ್ಲ. ನೀವು ಸಾವರ್ಕರರನ್ನು ಮರೆಮಾಚಲು ಪ್ರಯತ್ನಿಸುವಿರಿ. ಇತಿಹಾಸದ ಮೇಲೆ ಸುಳ್ಳಿನ ಹೊದಿಕೆಯನ್ನು ಹೊದೆಸಬಲ್ಲಿರಿ. ಆದರೆ ಸಾವರ್ಕರರ ತ್ಯಾಗ ಬಲಿದಾನಗಳು ಸೂರ್ಯನಂತೆ ಪ್ರಕಾಶಿಸುತ್ತಲೇ ಇರುತ್ತದೆ. ಈ ಭಾರತಮಾತೆಗಾಗಿ ಹೋರಾಡಿದ ತಾಯಿಯ ಪುತ್ರರತ್ನಗಳನ್ನು ಮರೆಯುವಷ್ಟು ಇಲ್ಲಿನ ಜನ ಕೃತಘ್ನರಲ್ಲ..!

ರುದ್ರಶಂಕರ ನಾಯ್ಕ, ಬೆಳಗಾವಿ.

merudratandava@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!