ಅಂಕಣ

ರೇವತಿ-ಬಲರಾಮನ ಮದುವೆ – An Interstellar Bride from Past

ಭಾಗವತದಲ್ಲಿ ಇಂಟರ್’ಸ್ಟೆಲ್ಲಾರ್ ಸಿನೆಮಾ ಅಂಥದ್ದೇ ಒಂದು ಕಥೆ (ಅದಕ್ಕಿಂತಲೂ ಉತ್ತಮವಾದದ್ದು) ಇದೆ. ಇಂಟರ್’ಸ್ಟೆಲ್ಲಾರ್ ನೋಡಿದವರಿಗೆ ಏನಪ್ಪಾ ಇದು ಹೀಗಿದೆ ಅಂದ್ರೆ, ರೇವತಿ ಜೊತೆ ಬಲರಾಮನ ಮದುವೆ ಕಥೆ ಇನ್ನೂ ಮಜವಾಗಿದೆ. ಇದನ್ನೇ ಒಂದು ಸಿನೆಮಾ ಮಾಡಬಹುದು. ಓದಿ, ಯೋಚಿಸಿ! ಮೊದಲು ಕಥೆ ಓದಿ, ನಂತರ ಕಥೆಯಲ್ಲಿ ಯಾವ್ಯಾವ ಟೆಕ್ನಾಲಜಿ ಅಡಗಿದೆ ಎಂದು ನೋಡೋಣ.

ಕಥೆ:

ಯುಗಯುಗಗಳ ಹಿಂದೆ, ದ್ವಾರಕೆಯಲ್ಲಿ (ಆವಾಗ ಕುಶಸ್ಥಲಿ.) ಕಕುದ್ಮಿ (ರೈವತ) ಎಂಬ ರಾಜನಿದ್ದ. ಅವನಿಗೆ ಸುಂದರಿ ಮತ್ತು ಬುದ್ಧಿವಂತೆಯಾದ ರೇವತಿ ಎಂಬ ಮಗಳು. ಎಲ್ಲ ಅಪ್ಪಂದಿರಂತೆ ರೈವತನಿಗೂ ಮಗಳನ್ನು ಸಾಮಾನ್ಯರಿಗೆ ಕೊಡಲು ಮನಸ್ಸಿಲ್ಲ. ಹಾಗಾಗಿ, ಯಾವ ರಾಜಕುಮಾರರೂ ಅವನಿಗೆ ಇಷ್ಟ ಆಗಲಿಲ್ಲ. ಮಗಳ ಮದುವೆ ವಯಸ್ಸು ಮೀರುತ್ತಾ ವರ್ಷಗಳೇ ಉರುಳಿದರೂ ಸರಿಯಾದ ಗಂಡು ಸಿಗಲಿಲ್ಲ. ಆಗ ಅವನಿಗೆ ಚಿಂತೆ ಆಗಿ, ಸರಿ ಬ್ರಹ್ಮನನ್ನೇ ಕೇಳೋಣ ಅಂತ ನಿರ್ಧಾರ ಮಾಡ್ತಾನೆ. ೪-೫ ರಾಜಕುಮಾರರ ಪಟ್ಟಿ ಹಿಡಿದು ಕೊಂಡು ರೇವತಿಯ ಜೊತೆ ಬ್ರಹ್ಮಲೋಕಕ್ಕೆ ಹೋದ.

ಬ್ರಹ್ಮಲೋಕದಲ್ಲಿ ಗಂಧರ್ವರ ಗಾಯನ, ನೃತ್ಯ ನಡೀತಾ ಇತ್ತು.  ಅದನ್ನು ನೋಡ್ತಾ, ಕೇಳ್ತಾ ಅಪ್ಪ, ಮಗಳಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಸುಮಾರು ೧೦-೧೫ ನಿಮಿಷಗಳ ನಂತರ ಬ್ರಹ್ಮನನ್ನು ಭೇಟಿ ಮಾಡಿ, ಪಟ್ಟಿ ಕೊಟ್ಟು, ಯಾರು ರೇವತಿಗೆ ಸರಿಹೊಂದಬಹುದು ಅಂತ ಕೇಳ್ದಾಗ, ಬಹ್ಮ ನಕ್ಕು ಹೇಳಿದ, “ನೀವು ಸಂಗೀತ, ನೃತ್ಯ ನೋಡಿದ ಸಮಯದಲ್ಲಿ ಭೂಮಿಯಲ್ಲಿ ೨೭ ಚತುರ್ಯುಗಗಳು ಕಳೆದು ಹೋಗಿದೆ. ಇವರ್ಯಾರೂ ಮತ್ತು ನಿನ್ನ ರಾಜ್ಯವೂ ಈಗ ಉಳಿದಿಲ್ಲ. ಆದರೆ ಚಿಂತೆ ಮಾಡಬೇಡ, ಈಗ ನಿನ್ನ ರಾಜ್ಯ ದ್ವಾರಕೆ ಎಂದು ಬದಲಾಗಿದೆ. ಅಲ್ಲಿ ಆದಿಶೇಷನ ಅವತಾರ ಕೃಷ್ಣನ ಅಣ್ಣ ಬಲರಾಮನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು.”

ಸರಿ, ಮಾಡಿದ್ದುಣ್ಣೋ ಮಹಾರಾಯ ಅಂತ, ರೈವತ ಮತ್ತು ರೇವತಿ ವಾಪಾಸ್ ಭೂಲೊಕಕ್ಕೆ ಬರ್ತಾರೆ.  ನಿಜವಾಗಲೂ ತಮ್ಮ ಕಾಲದ ಜನರು ಇಲ್ಲದ್ದನ್ನು ಮತ್ತು ನಗರ ಪೂರ್ತಿ ಬದಲಾಗಿದ್ದನ್ನು ಕಂಡು ಆಶ್ಚರ್ಯವಾಗುತ್ತದೆ.  ಬ್ರಹ್ಮನ ಮಾತಿನಂತೆ, ಬಲರಾಮ, ಕೃಷ್ಣರನ್ನು ಭೇಟಿಯಾಗಿ, ತಮ್ಮ ಕಥೆ ಹೇಳ್ತಾರೆ. ಬ್ರಹ್ಮನ ಮಾತನ್ನು ಪಾಲಿಸಲು ಬಲರಾಮ ಮದುವೆಗೆ ಒಪ್ಪುತ್ತಾನೆ. ಆದರೆ ಒಂದು ಸಮಸ್ಯೆ ಏನಂದರೆ, ಕಾಲದ ಬದಲಾವಣೆಯಿಂದ, ರೇವತಿ ಬಲರಾಮನಿಗಿಂತ ತುಂಬಾ ಉದ್ದ ಇರ್ತಾಳೆ. ಆಗ ತೀಕ್ಷ್ಣಬುದ್ದಿಯ ಕೃಷ್ಣ, ಬಲರಾಮನಿಗೆ ಒಂದು ಸಲಹೆ ಕೊಡ್ತಾನೆ. ಅದರಂತೆ ಬಲರಾಮ ತನ್ನ ಆಯುಧ ನೇಗಿಲನ್ನು ಪ್ರಯೋಗಿಸಿ, ರೇವತಿಯನ್ನು shrink ಮಾಡ್ತಾನೆ. ವೈಭವದ ಮದುವೆ ಮುಗಿದ ನಂತರ, ರಾಜ್ಯವಿಲ್ಲದ ರಾಜ ರೈವತ ತಪಸ್ಸಿಗೆ, ಬದ್ರಿಗೆ ಹೋಗುತ್ತಾನೆ.

ಈಗ ನಾವು ಈ ಕಥೆಯಲ್ಲಿ ಅಡಕವಾದ ಬೇರೆ ಬೇರೆ ಟೆಕ್ನಾಲಜಿ ಮತ್ತು ಕಾನ್ಸೆಪ್ಟ್’ನ್ನ ನೋಡೋಣ.

೧. ಬ್ರಹ್ಮಲೋಕ ಎನ್ನುವುದು ಭೂಮಿಯಂತೆ ಇರುವ ಯಾವುದೋ ಗ್ರಹ. ರಾಜರು ಮತ್ತು ಋಷಿಗಳು ಭೂಮಿ ಮತ್ತು ಬ್ರಹ್ಮಲೋಕದ ನಡುವೆ ಹೋಗಿ ಬರುತ್ತಿದ್ದರು. ಉದಾಹರಣೆಗೆ, ರಾಮಾಯಣದಲ್ಲಿ .ಸೂರ್ಯ ವಂಶದ ಕುಲಗುರುಗಳಾದ ವಸಿಷ್ಠರು ಯಾವುದೋ ಕಾರ್ಯದ ಮೇಲೆ ಬ್ರಹ್ಮಲೋಕಕ್ಕೆ ಹೋಗಿದ್ದನ್ನು ಕನಿಷ್ಠ ಪಕ್ಷ ೨ ಬಾರಿ ಆದರೂ ಹೇಳಲಾಗಿದೆ. ಅರ್ಜುನ ವನವಾಸದ ಸಮಯದಲ್ಲಿ ದೇವಲೋಕಕ್ಕೆ ವಿಮಾನದಲ್ಲಿ ಹೋಗಿದ್ದ. ಅದರರ್ಥ ಇಂಟರ್’ಸ್ಟೆಲ್ಲಾರ್ ಟ್ರಾವೆಲ್ ಆಗಿನ ಕಾಲದಲ್ಲಿ ಸಾಮಾನ್ಯ ಮಾತಾಗಿತ್ತು.  

೨. ಆ ಕಾಲದಲ್ಲಿ ಬೆಳಕಿನ ವೇಗವನ್ನು ಮೀರಿ ಪ್ರಯಾಣಿಸುವಂತ ಟೆಕ್ನಾಲಜಿ ಇತ್ತು. ಭೂಮಿಯಿಂದ ಬ್ರಹ್ಮಲೋಕ ಪ್ರಯಾಣ ಒಂದು ವರ್ಷಕ್ಕಿಂತ ಜಾಸ್ತಿ ಖಂಡಿತ ತೆಗೆದುಕೊಳ್ಳುತ್ತಿರಲಿಲ್ಲ. ಇಲ್ಲದಿದ್ದರೆ ಮದುವೆ ವಯಸ್ಸಿಗೆ ಬಂದ ಮಗಳ ಮದುವೆಗೆ ವರರ ಪಟ್ಟಿ ತೆಗೆದುಕೊಂಡು ಬ್ರಹ್ಮನ ಸಲಹೆ ಕೇಳಲು ರೈವತನಿಗೇನು ಹುಚ್ಚಾ ?

೩. ರೈವತನ ಲೆಕ್ಕಾಚಾರ ತಪ್ಪಿದ್ದು, ಬ್ರಹ್ಮಲೋಕದಲ್ಲಿ, ಗಾಯನ, ನೃತ್ಯ ನೋಡಿ ಮೈ ಮರೆತದ್ದರಿಂದ. ಭೂಮಿ ಮತ್ತು ಬ್ರಹ್ಮಲೋಕದಲ್ಲಿ, ಕಾಲ ಬೇರೆ ಬೇರೆಯಾಗಿದೆ ಎಂಬುದನ್ನು ಅವನು ಮರೆತು ಬಿಟ್ಟ. ಕಾಲ ಬೇರೆ ಬೇರೆ ಗ್ರಹ ನಕ್ಷತ್ರಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತದೆಂದು ಭಾರತೀಯರಿಗೆ ತಿಳಿದಿತ್ತು. ಯುಗ ಲೆಕ್ಕಾಚಾರದಲ್ಲಿ ಭೂಲೋಕ, ದೇವ ಲೋಕ, ಬ್ರಹ್ಮಲೊಕದ ಸಮಯಕ್ಕೆ ಬೇರೆ ಬೇರೆ ಗಣನೆಯನ್ನು ಸ್ಪಷ್ತವಾಗಿ ಹೇಳಲಾಗಿದೆ. ಬಹುಶಃ ಬ್ರಹ್ಮಲೊಕ ಬ್ಲ್ಯಾಕ್’ಹೋಲ್ ಬಳಿ ಅಥವಾ ಬ್ಲ್ಯಾಕ್’ಹೋಲ್ ಒಳಗೆ ಇರಬಹುದು. ಅದಕ್ಕೆ ಸಮಯ ಅಲ್ಲಿ ನಿಧಾನವಾಗಿರುತ್ತದೆ.

೪. ಬಲರಾಮನ ನೇಗಿಲು ಬರೀ ಆಯುಧ ಮಾತ್ರ ಅಲ್ಲ. ಅದರಿಂದ ವಸ್ತುವಿನ ಗಾತ್ರ ಮತ್ತು ಆಕಾರವನ್ನು ಬದಲಾವಣೆ ಮಾಡಲು ಸಾಧ್ಯವಿತ್ತು. Ant man or Atom man ! ರಾಮಾಯಣದಲ್ಲೂ ಹನುಮಂತ ಬಹಳ ಸಲ ಇಂತಹ ಪ್ರಯೋಗ ಮಾಡಿದ್ದಾನೆ. ಹಾಗಾಗಿ, ಇದು ಖಂಡಿತವಾಗಿಯೂ ಆ ಕಾಲದಲ್ಲಿ ಕೆಲವೇ ಜನರಿಗೆ ಲಭ್ಯವಿದ್ದ ವಿಶೇಷ ಟೆಕ್ನಾಲಜಿಯಾಗಿತ್ತು.

೫. ಬ್ರಹ್ಮ ೨೭ ಚತುರ್ಯುಗ ಕಳೆದವು ಎಂದಿದ್ದಾನೆ. ಸೌರಮಂಡಲದಿಂದ ಆಕಾಶಗಂಗೆ ಗ್ಯಾಲಕ್ಸಿಯ ಮಧ್ಯ ಭಾಗಕ್ಕೆಇರುವ ದೂರ೨೭,೦೦೦ ಬೆಳಕಿನ ವರ್ಷ.

–       ಅನೀಶ್

aneesh.ibby@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!