ಅಂಕಣ

ಯಾವ ಪುರುಷಾರ್ಥಕ್ಕಾಗಿ ಸುಮ್ಮನಿದ್ದೀರಿ ಧುರೀಣರೇ .?

2013 ರಲ್ಲಿ ಕಾಂಗ್ರೆಸ್ ಜನ ಬೆಂಬಲ ಪಡೆದಿದ್ದರೂ ೨೦೧೪ರಲ್ಲಿ ಮೋದಿ ಅಲೆಯಲ್ಲಿ ಎಲ್ಲವೂ ತೇಲಿ ಹೋಯ್ತು .18 ಜನ ಸಂಸದರನ್ನ ಕರ್ನಾಟಕ ಜನತೆ ಕೇಂದ್ರಕ್ಕೆ ಕಳುಹಿಸಿಕೊಟ್ಟಿತು .ಅದು ಕೇವಲ ಚುನಾವಣೆ ಆಗಿರಲಿಲ್ಲ  . ಅದೊಂದು ಉತ್ಸವ . ಯಾಕಂದ್ರೆ ಪ್ರಜೆಗಳು ಅತಿ ಹೆಚ್ಚು ಮತದಾನದಲ್ಲಿ ಭಾಗಿ ಅದ ದಿನ .  ಯಾವತ್ತು ತನ್ನ ಹಕ್ಕನ್ನೇ ಕೇಳೋ ಪ್ರಜೆ  ಅವತ್ತು ತನ್ನ ಕರ್ತವ್ಯವನ್ನು ಮಾಡಿದ್ದ . politics NO interest ಎನ್ನೋ ಫೇಸ್ಬುಕ್ ಸ್ಟೇಟಸ್ #IsupportModi ಆಗಿತ್ತು . ಅಭಿವೃಧ್ಧಿಯ ಘೋಷಣೆಯಲ್ಲೇ ಗೆದ್ದ ಸಮರ ಅದು . ಅದರಂತೆ ಮೋದಿ ನಡೆದುಕೊಳ್ತಾನು ಇದ್ದಾರೆ .  ಆದರೆ ಗೆದ್ದು ಹೋದ ನಮ್ಮ ನಾಯಕರು ಅಭಿವೃದ್ದಿಯನ್ನ ಜನರ ಮನಸಿನ ಮಟ್ಟಕ್ಕೆ ತರೋಕೆ ವಿಫಲರಾಗಿದ್ದಾರಷ್ಟೇ . ಸಿನಿಮಾ ನಟರು ಮಾಡಿದ ಆದರ್ಶ ಗ್ರಾಮದ ಸಾಧನೆ  ನಮ್ಮ ಸಂಸದರ ಕೈನಲ್ಲಿ ಇಲ್ಲ .ಸಾಮಾನ್ಯ ಜನರಿಗೋಸ್ಕರ ಮಾಡಿದ ಯೋಜನೆಯನ್ನ ತಳಮಟ್ಟಕ್ಕೆ ಇಳ್ಸೋಕೆ ನಮ್ಮ ಸಂಸದರಿಂದ ಆಗಿಲ್ಲ . ನಮ್ಮ  ಒಂದೆರಡು ಸಂಸದರು ಹೊರತುಪಡಿಸಿ  ಉಳಿದವರು ಹಣದ ಅಪಮೌಲ್ಯಿಕರಣದ ಉದ್ದೇಶ, ಸಾರ್ಥಕತೆಯನ್ನ  ತಿಳಿಸುವ ಕಾರ್ಯಕ್ರಮವನ್ನು ಒಂದು ಸಂಘಟನೆ ಮಾಡಿದ ಕಿಂಚಿತ್ ಭಾಗವನ್ನು ಮಾಡುವ  ಗೋಜಿಗೂ ಹೋಗಲಿಲ್ಲ  .

     ಕೆಂದ್ರದಲ್ಲಿ  ಕಳೆದ ಸರ್ಕಾರ ಇದ್ದಾಗ ಹಗರಣಗಳ ಸರಮಾಲೆಗಳೇ ಇದ್ದವು . ಕಲ್ಲಿದ್ದಲ ಹಗರಣದಿಂದಾಗಿ ಎಲ್ಲೂ  ಕಲ್ಲಿದ್ದಲು ಸಮರ್ಪಕ ಪೂರೈಕೆ ಆಗಿರಲಿಲ್ಲ . ಇವತ್ತಿನ ಸರ್ಕಾರ ಶಿಸ್ತಿನಿಂದ ಪೂರೈಸುತ್ತಾ  ಇದೆ . ಅದಿಕ್ಕೆ ನಾವು ಹಗಲು ರಾತ್ರಿ ಬೆಳಕಲ್ಲಿದ್ದಿವಿ. ಅದನ್ಯಾಕೆ ಜನಕ್ಕೆ ತಿಳಸ್ತಾ ಇಲ್ಲ?   . ಆಧಾರ್ ಬಗ್ಗೆ ಸಂಸದರಿಗೆ ಮಾಹಿತಿ ಇದ್ಯೋ ಇಲ್ವೋ ಗೊತ್ತಿಲ್ಲ .ಸಿಲಿಂಡರ್ ಸಬ್ಸಿಡಿ ತ್ಯಜಸಿ ಅಂತಾ ಅಪ್ಪಿತಪ್ಪಿಯೂ ಬಾಯಿಂದ ಬಂದಿಲ್ಲ .ನೀವ್ ಮಾಡಿರೋ ಅಭಿವೃದ್ಧಿನಾ ಹೇಳಿಕೊಳ್ಳುವುದಕ್ಕೆ  ಯಾಕ್ರಿ ನಿಮಗೆ ನಾಚ್ಗೆ.!! ನಿಮ್ ಅಭಿವೃದ್ಧಿ ಜನರಿಗೆ ಮನದಟ್ಟ  ಆಗದೆ ಅದು ಹೇಗೆ ಸಾರ್ಥಕತೆ ಪಡ್ಯೋಕೆ ಸಾದ್ಯಾ ???

2018 ರಲ್ಲಿ ಕರ್ನಾಟಕದ ಮಹಾಚುನಾವಣೆ ಇದೆ ,ಆದರೆ ಭಾಜಪ ಯಾವ ಸಿದ್ದತೆ ನಡೆಸಿದೆ ಎನ್ನೋದು ಪ್ರಶ್ನಾರ್ಥಕ.ಮೊನ್ನೆ ನಡೆದ ಉಪಚುನಾವಣೆ ದಿಕ್ಶೂಚಿ ಅಲ್ಲ ಎಂದು ನೀವು ಅಲ್ಲಗೆಳೆಯಬಹುದು. ಅದೊಂದು ತಾತ್ಕಾಲಿಕ ಮುನ್ಸೂಚನೆಯಂತು ಹೌದು . ನೋಡಿ ಸ್ವಾಮಿ ! ನನಗೆ ರಾಜಕೀಯ ಅನುಭವ ಇಲ್ಲದೆ ಇರಬಹುದು .ಆದರೆ ವಿರೋಧ ಪಕ್ಷದಲ್ಲಿ ಇರಬೇಕಾದ ಸತ್ವ  ರಾಜ್ಯದ ಜನತೆ ನಿಮ್ಮಲ್ಲಿ ಕಂಡಿಲ್ಲ ಎಂದು ಹೇಳಬಲ್ಲೆ . ಉತ್ತಮವಾದ ಆಡಳಿತವನನ್ನ  ಗಟ್ಟಿ ವಿರೋಧ ಪಕ್ಷ ಇಲ್ಲದೆ ನೋಡೋಕೆ ಸಾದ್ಯ ಇಲ್ಲ .ಸಿದ್ದರಾಮಯ್ಯನವರ ನೀರಸವಾದ ,ವಿವಾದತ್ಮಕವಾದ ಆಡಳಿತಕ್ಕೆ ಒಂದರ್ಥದಲ್ಲಿ ನೀವೇ ನೇರವಾದ ಹೊಣೆ ಹೊರಬೇಕಾಗುತ್ತದೆ  .ವಿರೋಧಿಗಳು ಅಂತಾ ವಿರೋಧಿಸ್ಬೇಕು ಅಂತಾ ನಾವು ಹೇಳುತ್ತಾ ಇಲ್ಲ  .ಸಾಕಷ್ಟು ಹಗರಣಗಳು ಬಂದಿದೆ , ನ್ಯಾಯಾಂಗ ವ್ಯವಸ್ತೆ ಕುಸಿದು ಬಿದ್ದಿದೆ  .ಯಾಕೆ ಪ್ರಸ್ತಾಪಿಸೋದಿಕ್ಕೆ ಹಿಂಜರಿಯುತ್ತಿದ್ದಿರಾ.ರಾಜ್ಯದ ಹಿತಕ್ಕಲ್ಲದ ರಾಜಕಾರಣ ಯಾರಿಗೋಸ್ಕರ ?

    ಮೈತ್ರಿ ಸರ್ಕಾರದ ನಂತರ ಭಾರಿ ಬಹುಮತದಿಂದ ಆಯ್ಕೆ ಆದ್ರಿ ,೩ ವರ್ಷ ಆಗ್ತಾ ಇರುವ ಹಾಗೆ ಸರ್ಕಾರ ಹಾದಿ ತಪ್ಪಿತು . ಆಗಿನ ವಿರೋಧ ಪಕ್ಷ ಪಾದಯಾತ್ರೆ ,ಪ್ರತಿಭಟನೆ ಮೂಲಕ ನಿಮ್ ಹಗರಣ ಬಯಲಿಗೆಳದು ಸರ್ಕಾರ ಹೇಗೆ ಉರಳಿಸ್ತು ನೆನಪಿಲ್ವಾ ಸ್ವಾಮಿ . ಅಂತಹದೇ ಹಗರಣಗಳು ಇಂದು ಆಗಿವೆ . ಕೆಲವೊಂದನ್ನು ವಿರೋಧಿಗಳಿಂದಲೂ ಕಲಿಯಬೇಕು . ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಅಶ್ಲೀಲ ಚಿತ್ರಗಳನ್ನ ನೋಡಿ ಹ್ಯಾಟ್ರಿಕ್ ಹೀರೋಗಳು ಹೊರಬಂದ್ರು . ಮಾಧ್ಯಮಗಳು ಇಷ್ಟೊಂದು ಪ್ರಚಾರ ಕೊಡದೆ ಇರೋ ಕಾಲ ಅದು  . ಆ ಶಾಸಕರನ್ನ ಉರಳಸ್ತಲ್ಲಾ  . ಆದರೆ ಇಂದು ಮಾಧ್ಯಮ ಲೈವ್ ಟೆಲಿಕಾಸ್ಟ್ ಕೊಟ್ಟಿಲ್ಲ ಬಿಟ್ಟು ಅಷ್ಟೊಂದು ಸುದ್ದಿ ಮಾಡಿತ್ತು .ಆದ್ರೆ ಇನ್ನು ಕೆಲವೇ ದಿನಗಳಲಿ ಮೇಟಿ ಅವ್ರಿಗೆ ಕ್ಲೀನ್ ಚೀಟ್  ಕೊಡೊ ಅವಸರದಲ್ಲಿದೆ .  ಅವ್ರು ಮುಂದಿನ ಚುನಾವಣೆಗೆ ಅಣಿ ಆಗ್ತಾ ಇದ್ದಾರೆ .ಏನ್ ಮಾಡ್ತಾ ಇದ್ದೀರಾ ಸ್ವಾಮಿ ?

  ಈ ಕಳೆದ ನಾಲ್ಕು ವರ್ಷದಲ್ಲಿ ಕರ್ನಾಟಕದಲ್ಲಿ ನೀರಿಗಿಂತ  ರಕ್ತ ಹರಿದಿರೋದೆ ಹೆಚ್ಚು . ನಿಷ್ಟಾವಂತ ಪೋಲಿಸ್ ಅಧಿಕಾರಿ’ ಮಲ್ಲಿಕಾರ್ಜುನ್ ಬಂಡೆ ಸಾವಾಯ್ತು  . ‘ಎಂ ಕೆ ಗಣಪತಿ’ಯವರಂತ ಕಡಕ್ ಪೋಲಿಸ್ ಆಫೀಸರ್ ನೇಣು ಬಿಗಿಕೊಳ್ತಾರೆ ಅಂತ ಕೇಸ್ ಮುಗಿತು  . ಜನರ ಸೇವೆ ಮಾಡಲೇಬೇಕು ಅಂತಾ ಬಡತನದಲ್ಲಿ ಕಷ್ಟಪಟ್ಟು ಓದಿ  ನಿರ್ದಿಷ್ಟ ಗುರಿ ಹೊಂದಿ  ಸೇವೆ ಸಲ್ಲಿಸಿದ  ಡಿ  ಕೆ ರವಿಯವರದ್ದು ‘ಮಾನಸಿಕ ಖಿನ್ನತೆಯಿಂದ ನಿಗೂಡ ಸಾವಾಗತ್ತೆ. ಕಲ್ಲಪ್ಪ , ರುದ್ರೇಶರಂತಹ ಸಾವಿನ ಸರಣಿಯೇ ಇದೆ . ಪರಿವಾರದವರು ಅಂತಲ್ಲ ಸಾಮಾನ್ಯ ವ್ಯಕ್ತಿಯ ಕೊಲೆ ಆದ್ರು ಪ್ರಶ್ನಿಸಬೇಕಾದದ್ದು ನಿಮ್ ಕರ್ತ್ಯವ್ಯ ಅಲ್ವಾ. ನೀವ್ ಬಾಯಿ ಬಿಡೋಕೆ ಇನ್ನೆಷ್ಟು ಹೆಣ ಬೀಳಬೇಕು ಸ್ವಾಮಿ  ಅನ್ನೋ ಕಾಲ ಬಂದಿದೆ .

ರಾಜ್ಯದಲ್ಲಿ ಬರಗಾಲ ಇದೆ ದನಕರುಗಳಿಗೆ ನೀರು- ಮೇವಿಲ್ಲ . ಚಾಮರಾಜ್ ನಗರದಲ್ಲಿ ದನಕರು ಸಾಯ್ತಾ ಇವೆ . ಅದನ್ನ  ನೋಡೋಕೆ ಆಗದೆ ಇರೋ ಒಬ್ಬ ಸ್ವಾಮೀಜಿ ಅದರ ರಕ್ಷಣೆಗೆ ಮುಂದಾಗ್ತಾರೆ .KMF ಮಹಾರಾಷ್ಟ್ರದಲ್ಲಿ ವಿಸ್ತರಿಸ್ತಿವಿ ಎನ್ನೋ ಸರ್ಕಾರಕ್ಕೆ ದನಕರುಗಳನ್ನಾ ಉಳಿಸಬೇಕು ಎನ್ನೋ ಕನಿಷ್ಠ ಪ್ರಜ್ಞೆ ಇಲ್ಲ .ಗೋಹತ್ಯಾ ನಿಷೇಧ ನಿಮ್ಮತ್ರ ಆಗದೆ ಇರೋ ಕೆಲಸ .ವಿರೋಧ ಪಕ್ಷದಲ್ಲಿ ಇದ್ದಿರೋದಕ್ಕಾದ್ರು ಕೇವಲ ಕಣ್ಣೆದುರು ಸಾಯ್ತಾ ಇರೋ ಹಸುವನ್ನು ಉಳಿಸಿ ಅಂತ ಆಗ್ರಹ ಮಾಡಬಾರದಾ ?

       ಒಬ್ಬ ಅಪ್ರತಿಮ ದೇಶ ಭಕ್ತ , ದೇಶಕ್ಕೊಸ್ಕರ ಸನ್ಯಾಸಿ ಜೀವನ ನಡಸ್ತಾ ಇದ್ದಾರೆ . ಉತ್ತರ ಪ್ರದೇಶದ ಜನಪ್ರೀಯ ನಾಯಕರಾಗಿ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರ ವಹಿಸ್ಕೊಂಡ ಕೆಲವೇ ದಿನದಲ್ಲಿ ಐತಿಹಾಸಿಕ ನಿರ್ಣಯ ತೆಗೆದ್ಕೊಂಡಿದ್ದಲ್ಲದೆ 41  IAS ಅಧಿಕಾರಿಗಳನ್ನ  ಏಕಕಾಲದಲ್ಲಿ ವರ್ಗಾಯಿಸಿ ಸೂಕ್ತ ವೇದಿಕೆ ನೀಡಿ  ಉದ್ಧಾರ ಮಾಡ ಹೊರಟ ವ್ಯಕ್ತಿ ಆ ಯೋಗಿ .  ಅಂತ ವ್ಯಕ್ತಿ ಪಡೆಯಲಾರದ ಯೋಗ ನಮದಲ್ಲದೆ ಹೋದರು , ಅವರನ್ನ ನಿಂದನೆಯಾದರು ಮಾಡಬಾರದು . ಆದರೆ ನಮ್ಮ ರಾಜ್ಯದ ದುರಾದೃಷ್ಟ , ಅಂತ ವ್ಯಕ್ತಿಗೆ ಅಶ್ಲೀಲ ಚಿತ್ರ ಅಂಟಿಸಿ ಪ್ರಚಾರ ಕೊಟ್ರು . ಪ್ರತಾಪ್ ಸಿಂಹರನ್ನು ಸೇರಿಸಿ ರಾಜ್ಯದ ವಿವಿಧೆಡೆ  ೮೦ ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದರೂ  ಅವ್ರು ತಮ್ಮ” ಪ್ರಭೆ” ಯಿಂದ ಇನ್ನೂ ಬೆಳೆದು ಮಂಗಳರಾಗಿದ್ದಾರೆ . ನೀವೆಲ್ಲ ಏನ್ ಮಾಡ್ತಿದ್ದೀರ ಸ್ವಾಮಿ .?

  ಸರ್ಕಾರಗಳು ಬದಲಾಗತ್ತೆ , ಅದರ ಧೋರಣೆಗಳು ಬದಲಾಗತ್ತೆ  . ಆದ್ರು ದೇಶ ಒಂದು ಹಂತದಲ್ಲಿ ನಡೆದುಕೊಂಡು ಬರೋದು ಬದಲಾಗದ ಅಧಿಕಾರಿಗಳಿಂದ . ಆ ಅಧಿಕಾರಿಗಳ ಸಾಮರ್ಥ್ಯ ಆಡಳಿತ ಪಕ್ಷ ಹೇಗೆ ಬಳಸ್ಕೊಳತ್ತೆ ಎನ್ನೋದು ಆ ಸರ್ಕಾರಕ್ಕೆ ಬಿಟ್ಟ ವಿಚಾರ . ಅವರನ್ನು ಉತ್ತಮವಾಗಿ ನಡಿಸ್ಕೊಂಡ್ರೆ ಉತ್ತಮ ಆಡಳಿತ ಸಾಧ್ಯ  ಎನ್ನೋದು ಮೋದಿ ನಮ್ಮ ಕಣ್ ಮುಂದೇ ಇಟ್ಟಿದ್ದಾರೆ . ಆದರೆ ಅಂತ ಅಧಿಕಾರಿಗಳನ್ನ ನಮ್ಮ ಮುಖ್ಯಮಂತ್ರಿಗಳು ತುಂಬಿದ ಸಭೆಯಲ್ಲಿ ಅನವಶ್ಯಕ   ಬೈತಾರೆ . ಅದರ ವಿರುದ್ದ ಯಾರ ಮಾತನಾಡಬೇಕು ಸ್ವಾಮಿ .?

ಒಬ್ಬ ಪ್ರಧಾನಿ ಎಂದ ಮೇಲೆ ಓಟು ಹಾಕಿದವರಿಗೆ ಮಾತ್ರ ಅಲ್ಲಾ .ಅವ್ರು ಎಲ್ಲರಿಗು ಪ್ರಧಾನಿನೆ  . ನಮ್ಮ ಉನ್ನತ ಶಿಕ್ಷಣ ಸಚಿವರು ಅಂತ ಬಾಲಿಶವಾದ ಹೇಳಿಕೆ ನೀಡ್ತಾರೆ .ಅವರನ್ನ ತಿದ್ದಿ ಕಿವಿ ಹಿಡಿಯೋ ಕೆಲಸ ಯಾರ ಮಾಡಬೇಕು ಸ್ವಾಮಿ . ? ಮಾತು ಮಾತಿಗೂ  ಗಾಂಧಿ ತತ್ತ್ವಗಳನ್ನ ಉದುರಿಸುತ್ತಾ , ಅಹಿಂದ, ಅಹಿಂಸೆ ‘ ಅ’ಕಾರದ ಮಾತುಗಳೇ ಬರತ್ತೆ .ಆ ನಾಯಕರ  ತತ್ವ ಪರಿಪಾಲನೆಯಲ್ಲಿ ಮಾತ್ರ ನಕಾರ .ಗೋಹತ್ಯೆ ನಿಷೇಧ ಏನು ಪ್ರಾಣಿ ಹತ್ಯೆ ಮಾಡೋ ಕಾರಣದಿಂದ  ಸಿರಸಿಗೆ ಬರೋದಿಲ್ಲ ಎಂದವರು ಗಾಂಧಿಜಿ . ಅವರ ನೆರಳಲ್ಲೇ ಬದುಕ್ತಿರೋರು ಚಿಕನ್ ,ಮಟನ್ ಅಂಗಡಿಗೆ ಪ್ರೋತ್ಸಾಹ ಧನ ಕೊಡ್ತಾರೆ .ಯಾರು ಈ ಕೆಲಸ ಬಿಟ್ಟು ಹೊಸ ಉದ್ಯೋಗ ಪ್ರಾರಂಭ ಮಾಡ್ತಾರೋ ಅವ್ರಿಗೆ  ಪ್ರೋತ್ಸಾಹ ಧನ ಕೊಡಿ ಅನ್ನೋದ್ ಬಿಟ್ಟು ಸುಮ್ಮನಿದ್ದಿರಲ್ಲಾ ಸ್ವಾಮಿ , ನಿಮ್ಮ ಬಾಯಿಯ ಬೀಗದ ಕೈ ಎಲ್ಲಿದೆ ?

  ಪ್ರತಿ ಮನೆಯಲ್ಲಿ ಒಬ್ಬಿಬ್ಬರಾದರು ಶಿಕ್ಷಿತರಗಿದ್ದಾರೆ . ಸರಿ ಯಾವದು? ತಪ್ಪಾವುದು? ಅಂತಾ ಮನೆಯಲ್ಲಾದರೂ ತಿಳಿಸುವಷ್ಟು ಶಕ್ತರಾಗಿದ್ದಾರೆ .ಜಾತಿ ರಾಜಕಾರಣದ ಅಧ್ಯಾಯ ಕೊನೆ ಹಂತದಲ್ಲಿದೆ . ಅಭಿವೃದ್ಧಿಯ ಸಾಧ್ಯತೆ ಇದ್ದರೆ ಮಾತ್ರ ಬೆಂಬಲ ನೀಡ್ತಾರೆ . ನೀವು ಅವರಿಗಿಂತ ಬಿನ್ನ ಅಲ್ಲಾ ಅಂತಾದ್ರೆ ಜನ ಮುಡಿಯಲಾರದ ಕಮಲ ಮುಟ್ಟೋದಿಲ್ಲ .ಕೈಯಲ್ಲಿ ಸಿಗೋ ಗುಲಾಬಿನೇ ಆಯ್ಕೆ ಮಾಡೋದು  .ನಿಮ್ಮ ನಿಮ್ಮಲ್ಲಿಯೇ ಬಿಗ್ರೆಡ್ ರಾಜಕಾರಣ ಮಾಡುವ ಬದಲು ಇನ್ನಾದರೂ ಎಚ್ಚರ ಆಗಿ. .ಜನ ನಿಮ್ಮನ್ನು ಯಾವತ್ತು ಗಮನಿಸ್ತಾರೆ . ಆಡಳಿತ ನಡಸೋಕೆ ಬೇಕಾದ ಮೊದಲ ಅರ್ಹತೇನೆ ತರ್ಕಬದ್ದವಾಗಿ ವಿರೋಧ ಮಾಡೋದು . ಇಷ್ಟೆಲ್ಲಾ ಅವಾಂತರಗಳು ಆದರೂ ಯಾವ ಪುರುಷ’ಅರ್ಥ’ಕ್ಕಾಗಿ ಸುಮ್ಮನಿದ್ದೀರಿ ಧುರೀಣರೇ .?

ಕೃಷ್ಣಮೂರ್ತಿ ಭಟ್

ಕಾನೂನು ವಿದ್ಯಾರ್ಥಿ

ಮೈಸೂರು

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!