ಅಂಕಣ

ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ದಿನ – ಸಾರ್ಥಕವಾಗಿಸಿಕೊಂಡಿದ್ದು ಹೀಗೆ

ಸಾಧನೆಗೆ ಬೇಕಾಗಿರುವುದು ಪ್ರೇರಣೆ,ಸಾಧಿಸಿದವರಿಗೆ ಬೇಕಾಗಿರುವುದು ಅಹಂಕಾರವಲ್ಲ,ಇತರರನ್ನು ಪ್ರೇರಣೆ,
ಸ್ಫೂರ್ತಿ ನೀಡಿ ದೇಶವನ್ನು  ಮೇಲೆತ್ತುವ ದೊಡ್ಡಗುಣ.  #ನಿವೇದನಾ #ಯುವಾಬ್ರಿಗೇಡ್

ಮಾರ್ಚ್ ೧೫,  ಸಂದೀಪ್ ಉನ್ನಿಕೃಷ್ಣನ್ ಅವರ ಮನೆಯಲ್ಲಿ ಉಣ್ಣೀಕೃಷ್ಣನ್ ಅವರ ಹುಟ್ಟುಹಬ್ಬವನ್ನು #ನಿವೇದನಾ
ಎಂಬ ಕಾರ್ಯಕ್ರಮದಡಿಯಲ್ಲಿ ಸಾವಿರಾರು ತರುಣರ,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಹಾಗೂ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆತಾಯಿಯ ಆಶೀರ್ವಾದ,ಹಾರೈಕೆ ಹಾಗೂ ಸಂಪೂರ್ಣ ಕಾರ್ಯಕ್ರಮವನ್ನು ಉನ್ನಿಕೃಷ್ಣನ್ ಅವರ ಕುಟುಂಬಕ್ಕೆ ಸಮರ್ಪಿಸಿದ,ಭಾವನಾತ್ಮಕ,ಚಿಂತನಾತ್ಮಕ ಹಾಗೂ ಪ್ರೇರಣಾದಾಯಕ ಕಾರ್ಯಕ್ರಮಕ್ಕೆ ಇದು ಸಾಕ್ಷಿಯಾಯಿತು.

ಯುವಾಬ್ರಿಗೇಡಿನ ನೇತೃತ್ವದಲ್ಲಿ ಸಂಘಟನೆಯ ಮಾರ್ಗದರ್ಶಕರಾದ ಹಾಗೂ ನಮ್ಮೆಲ್ಲರ ಪ್ರೇರಣಾಶಕ್ತಿಯಾದ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ  ರಾಜ್ಯಸಂಚಾಲಕರಾದ ಶ್ರೀ ನಿತ್ಯಾನಂದ ವಿವೇಕವಂಶಿಯವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಇವರು ಮಾತನಾಡುತ್ತಾ, ಸಂದೀಪ್ ಉನ್ನಿಕೃಷ್ಣನ್ ಅವರ ಹುಟ್ಟುಹಬ್ಬದ ಜೊತೆಗೆ ಪ್ರತೀ ಭಾರತೀಯ ಸೈನಿಕರ ಹುಟ್ಟುಹಬ್ಬದ ಆಚರಣೆ,ನಮ್ಮ ಜೀವವನ್ನುಳಿಸಲು ತಮ್ಮ ಜೀವನವನ್ನೇ ಅರ್ಪಿಸಿ ಹುತಾತ್ಮರಾದ ಎಲ್ಲಾ ಸೈನಿಕರನ್ನೂ ನಮಿಸುವ  ಕಾರ್ಯಕ್ರಮ ಎಂದರು.

ಕಾರ್ಯಕ್ರಮದ ಪ್ರಾರಂಭ ದೇಶಭಕ್ತಿಯ ಹಾಡಿನೊಂದಿಗೆ,ನಮ್ಮ ಭಾರತದ ಯುದ್ಧ ತಯಾರಿ(ಕಳರಿಪಯಟ್)ನ ಪ್ರದರ್ಶನ ಹಾಗೂ ಖ್ಯಾತ ಅಂತರಾಷ್ಟ್ರೀಯ ಚಿತ್ರಕಲಾವಿದ ವಿಲಾಸ್ ನಾಯಕ್ ಅವರ ತ್ರಿವರ್ಣಧ್ವಜದ ಜೊತೆ ಸೈನಿಕರ ಯುದ್ಧ ತಯಾರಿಯನ್ನು ಬಿಂಬಿಸುವ ಚಿತ್ರ ಬರೆಯುವದರೊಂದಿಗೆ ಪ್ರಾರಂಭವಾಯಿತು.ತಮಿಳುನಾಡಿನ ಕಳರಿಪಯೆಟ್ ತಂಡ ಶಸ್ತ್ರಗಳೊಂದಿಗೆ ತಮ್ಮ ಅಧ್ಬುತ ಪ್ರದರ್ಶನ ನೀಡಿದಾಗ ಸೇರಿದವರ ಮೈ ರೋಮಾಂಚನಗೊಂಡಿತ್ತು.

ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ದೇಶಭಕ್ತಿಯನ್ನು ವಿಶಿಷ್ಟವಾಗಿ ವಿಶೇಷ ಸೇವೆಯೊಂದಿಗೆ ಮಾಡಿ ಯಶಸ್ವಿಯಾದ ಶ್ರೀಸದಾನಂದ ಮೈಯ್ಯರವರು ಭಾರತದ ಸೇನೆಗೆ ತಾವು ಮಾಡಿರುವ ಸೇವೆಯನ್ನು ಯುವಜನಾಂಗಕ್ಕೆ ಹಾಗೂ ಸೇರಿದವರೆಲ್ಲರೂ ಪ್ರೇರಣೆಯಾಗುವಂತೆ ವಿವರಿಸಿದರು. ನಮ್ಮ ಹೆಮ್ಮೆಯ ಸೈನಿಕರಿಗೆ,ಶಸ್ತ್ರಾಸ್ತ್ರಗಳ ಜೊತೆಗೆ ಜಮ್ಮು ಕಾಶ್ಮೀರದ ಹಾಗೂ ಇತರ ಎತ್ತರದ ಬೆಟ್ಟಗಳೆನ್ನೇರುವಾಗ  ತಾವು ಒಯ್ಯುವ ಆಹಾರದ ಚೀಲಗಳು ಭಾರವಾಗಿರುವಾಗಿರುವುದನ್ನು ಪರಿಹರಿಹಲು ಅಂದಿನ ರಕ್ಷಣಾಮಂತ್ರಿಗಳು ಬೇಡಿಕೆಯಿಟ್ಟಾಗ
ಇದರ ಭಾರವನ್ನು ಕಡಿಮೆ ಮಾಡಿ,ಆಹಾರದ ಗ್ಯಾಲರಿಕೂಡ ಹೆಚ್ಚಿಸಿ ಭಾರತದ ಸೈನ್ಯಕ್ಕೆ ಉಚಿತ ವಿಶಿಷ್ಟ ಸೇವೆಯನ್ನು  ಮಾಡಿದವರು ಇವರು.

ಶ್ರೀ ಮಾಲತಿ ಹೊಳ್ಳ, ತಾನು ಅಂಗವೈಕಲ್ಯಕ್ಕೊಳಗಾಗಿದ್ದರೂ,ವ್ಹೀಲ್ ಛೇರ್ ನಲ್ಲಿ ಓಡಾಡುವ ಇವರಿಗೆ ಸಿಕ್ಕಿದ ಗೌರವಪುರಸ್ಕಾರ,ಪದಕಗಳ ಪಟ್ಟಿ ದಿನಕ್ಕೆ ನಾಲ್ಕುಭಾರಿ ಓದಿದರೂ ನೆನಪುಳಿಯಲು ಸಾಧ್ಯವಿಲ್ಲದಷ್ಟು.ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಚಿನ್ನದ ಪದಕಗಳೂ ಸೇರಿದಂತೆ ವಿವಿಧಪುರಸ್ಕಾರಗಳು,ಪದ್ಮಶ್ರೀ,ಡಾಕ್ಟರೇಟ್ ಗೌರವಾದರಕ್ಕೆ ತಮ್ಮ ಸಾಧನೆಗಳಿಂದ ಪಾತ್ರರಾಗಿದ್ದ ಇವರು,ಕೆಲವು ಪ್ರೇರಣಾ ಕಥೆಗಳನ್ನು ಮತ್ತು ಭಾಹ್ಯಸೌಂಧರ್ಯಕ್ಕಿಂತ ಆಂತರಿಕ ಸೌಂದರ್ಯ,ಸೇವೆ,ಇನ್ನೊಬ್ಬರಿಗಾಗಿ ಬದುಕುವ ಜೀವನವೇ ಶ್ರೇಷ್ಟ ಎಂದು ತಮ್ಮ ಸ್ಪೂರ್ತಿಮಾತುಗಳನ್ನಾಡಿದರು.

ಅಧ್ಬುತ ಚಿತ್ರಕಲಾವಿಧ,ಚಿತ್ರಕಲೆಗಳಲ್ಲಿ ತಮ್ಮ ಅದ್ಬುತ ಪ್ರತಿಭೆಯ ಮೂಲಕ ಜಗತ್ತನ್ನೇ ಗೆದ್ದ ಕಲಾವಿಧ,ಯುವ ಪ್ರೇರಣಾದಾಯಕ ಸ್ಪೂರ್ತಿನೀಡಬಲ್ಲ ಅದ್ಬುತಚಿತ್ರಗಳನ್ನು ಕೆಲವೇ ಸೆಕೆಂಡುಗಳಲ್ಲಿ,ಅದೂ ತನ್ನ ಕೈಯ ಅಲುಗಾಟಕ್ಕೆ ಗಮನಕೊಡದಂತೆ ಇಡೀಚಿತ್ರದಲ್ಲಾಗುವ ಬದಲಾವಣೆಗಳಲ್ಲಿಯೇ ಗಮನವಿಡುವಂತೆಮಾಡುವ ಚಿತ್ರಮಾಂತ್ರಿಕ ಮೇಜರ್ ಸಂಧೀಪ್ ಉಣ್ಣಿಕೃಷ್ಣನ್ ಅವರ ಚಿತ್ರವನ್ನು ತಮ್ಮ ಕುಂಚದಲ್ಲಿ ಬಿಡಿಸಿ ಅದನ್ನು ಸಂಧೀಪ್ ಉಣ್ಣೀಕೃಷ್ಣನ್ ಅವರ ತಂದೆತಾಯಿಗೆ ಉಡುಗೊರೆ ನೀಡಿದಾಗ ಸಂಧೀಪ್ ಉಣ್ಣೀಕೃಷ್ಣನ್ ಅವರ ತಾಯಿ ಭಾವಉಧ್ವೇಗಕ್ಕೊಳಗಾಗಿ ತಮ್ಮ ಮಗನಂತೆ ಅಪ್ಪಿ ಕಣ್ಣ್ಲಲ್ಲ್ಲಿ ನೀರುಹರಿಸದಾಗ ಇಡೀ ಸೇರಿದ ಜನಸ್ತೋಮ ಭಾವೂದ್ವೇಗಕ್ಕೊಳಗಾಗಿ ಸೇರಿದವರೆಲ್ಲರ ಕಣ್ಣನ್ನು ಒದ್ದೆಮಾಡಿಸಿತ್ತು ಮತ್ತು ಚಿತ್ರಬಿಡಿಸಿದ ವಿಲಾಸ್ ನಾಯಕ್ ಅವರು ಕೂಡ ತಮ್ಮ ಕಣ್ಣನ್ನು ಒರೆಸಿ,ಸಂದೀಪ್ ಉನ್ನಿಕೃಷ್ಣನ್ ಅವರು ಇನ್ನೂ ನಮ್ಮೆಲ್ಲರ ಹೃದಯದಲ್ಲಿದ್ದಾರೆ ಎಂದು ಸಭೆಯಲ್ಲಿದ್ದವರೆಲ್ಲರೂ ಕಣ್ಣೀರು ಒರೆಸಿಕೊಳ್ಳುವಂತೆ ಮಾಡಿದರು.

ಜರೂರ್ ಮಾತಿನ ಮೂಲಕ ಸಾಮಾಜಿಕಚಿಂತನೆಗಳಿಗೆ ಬರಹದ ರೂಪವನ್ನು ಕೊಟ್ಟು,ಇನ್ನಷ್ಟು ಸಮಾಜಮುಖಿ ಸೇವಾಕಾರ್ಯಗಳಲ್ಲಿ,ದೇಶಸೇವೆಗಳಲ್ಲಿ ತೊಡಗಿಸಿಕೊಳ್ಳಬಲ್ಲಂತಹ ಯುವಕರನ್ನು ತಮ್ಮ ಮಾಧ್ಯಮ ಬರಹದ ಮೂಲಕ ದೇಶಸೇವೆಯಲ್ಲಿ ತೊಡಗಿ,ನಿಜವಾಗಿಯೂ ನಮ್ಮ ಸಮಾಜಕ್ಕೆ ಬೇಕಾಗಿರುವ ಧನಾತ್ಮಕ ವಿಷಯ,ವಿಚಾರಗಳನ್ನು ಆಯ್ಕೆಮಾಡಿ ಸಮಾಜಕ್ಕೆ ತಲುಪಿಸಿ,ವಿಶಿಷ್ಟ ವಿಶ್ವಗುರುಭಾರತದ ಕನಸಿಗೆ ಕೈಜೋಡಿಸುತ್ತಿರುವ ವಿಜಯವಾಣಿ ಪತ್ರಿಕೆಯ ವರದಿಗಾರರೂ,ಅಂಕಣಕಾರರೂ ಹಾಗೂ ಜೋಡಣಾ (editor)ಕೆಲಸ ನಿರ್ವಹಿಸುತ್ತಿರುವ ದೇಶಮುಖ್ ಅವರು ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ,ದೇಶಸೇವೆಗಳಲ್ಲಿ ನಮ್ಮನ್ನು ನಾವು ಹೇಗೆ ತೊಡಗಿಸಿಕೊಳ್ಳಬಹುದು ಎಂದೂ,ಯುವಾಬ್ರಿಗೇಡ್ ನ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಪ್ರಶಂಶಿಸಿದರು.

ಚಕ್ರವರ್ತಿ ಸೂಲಿಬೇಲೆ, ಯುವಾಬ್ರಿಗೇಡಿನ ಮಾರ್ಗದರ್ಶಕರು ಇಡೀ ಕಾರ್ಯಕ್ರಮದುದ್ದಕ್ಕೂ ನಿರೂಪಣೆ ಸಾಂಧರ್ಬಿಕವಾಗಿ ವಿಷಯಗಳ ವೀಶ್ಲೇಷಣೆ ಮಾಡುತ್ತಾ ಸೇರಿದ ಜನಸ್ತೋಮಕ್ಕೆ ಭಾರತ ಬೆಳೆಯಲು ನಾವೆಲ್ಲರೂ ಜೊತೆಗೆ ಕೈಜೋಡಿಸಬೇಕಿದೆ,ಜೀವನದಲ್ಲಿ ವಿದ್ಯಾಭ್ಯಾಸ,ದುಡ್ಡು ಅಥವಾ ಇನ್ಯಾವುದರಿಂದಲೂ ಸಾಧಿಸಲು ಅಸಾಧ್ಯವಾದುದನ್ನು ಕೇವಲ ಭರವಸೆ,ನಂಬಿಕೆ,ಮತ್ತು ಸ್ಪಷ್ಟ ಧ್ಯೇಯಗಳೊಂದಿಗೆ ಸಾಧಿಸಬಹುದು ಎನ್ನುವ ಸಂದೇಶ ನೀಡಿದರೂ.ಇಂಜಿನಿಯರಿಂಗ್ ಮಾಡುವ ವಿಧ್ಯಾರ್ಥಿಗಳು ಸಮಾಜಕ್ಕೆ ತಮ್ಮನ್ನು ಯಾವರೀತಿಯಲ್ಲಿ ತೊಡಗಿಸಿಕೊಳ್ಳಬಹುದೆಂಬ ಹೊಸತನದ ಚಿಂತನೆಯಲ್ಲಿ ತೊಡಗಿರುವವರಿಗೆ ಹೊಸ ದಾರಿಯೊಂದನ್ನು ತೋರಿಸಿದ ಹಾಗೂ ತಾವೇ ಕಂಡುಕೊಂಡ ದಾರಿಗಳಲ್ಲಿ ಅದ್ಬುತ ಯಶಸ್ಸು,ಜನಮನ್ನಣೆಗಳು ಹಾಗೂ ದೇಶದಸೇವೆಗಳಲ್ಲಿ ತೊಡಗಿರುವ ಉದಾಹರಣೆಗಳನ್ನು ತಮ್ಮ ಇಡೀ ಕಾರ್ಯಕ್ರಮದುದ್ದಕ್ಕೂ ನೀಡುತ್ತಾ ಒಂದು ಉತ್ತಮ ಪ್ರೇರಣಾದಾಯಕ ಮತ್ತು ಜೀವನಪರ್ಯಂತ ಮರೆಯಲಾಗದ ಕಾರ್ಯಕ್ರಮಕ್ಕೆ ನಾವೆಲ್ಲರೂ ಮೂಕಪ್ರೇಕ್ಷಕರಾದೆವು.

ಶ್ರೀ ಚಕ್ರವರ್ತಿಸೂಲಿಬೆಲೆಯವರು ವಿವರಿಸಿದ ಕೆಲವು ವಿಶಿಷ್ಟ ಅನುಭವದ ಮಾತುಗಳು ಹೀಗಿವೆ…

*ಬಡವರ ಮನೆಗೆ ಉಚಿತ ಸೋಲಾರ್ ಬಲ್ಬ್ ಗಳನ್ನು ತಯಾರಿಸಿಕೊಡುತ್ತಿರುವ ಇಂಜಿನಿಯರಿಂಗ್ ವಿಧ್ಯಾರ್ಥಿಗಳ ಕಥೆ.

*ಬೆಂಗಳೂರಿನ ಕಿಧ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರತೀದಿನ ಬೆಳಗ್ಗೆ ಎಲ್ಲಾ ರೋಗಿಗಳಿಗೂ ಉಚಿತ ಟೀ ಮತ್ತು ಬಿಸ್ಕೆಟ್ ಬನ್ ಗಳನ್ನು ಹಂಚುವವರ ಕಥೆ.

*ಕ್ಯಾನ್ಸರ್ ರೋಗಿಗಳು ತಾವು ರೋಗಿಗಳೆಂದು ಮರೆತು ಅವರ ಮನಸ್ಸನ್ನು ಬೇರೆಡೆ ಸೆಳೆದು ಸ್ವಯಂ ಉಧ್ಯೋಗದ ಜೊತೆಗೆ,ಸಂಪಾಧನೆ ಹಾಗೂ ಹಾಗೂ ಆರೋಗ್ಯವನ್ನು ಪುನ:ಗಳಿಸಿಕೊಡಬಲ್ಲ ಕೆಲಸಗಳಲ್ಲಿ ತೊಡಗಿರುವವರ ಕಥೆ.

*ನಮ್ಮ ಹಿಂಧೂಧರ್ಮದ ರಕ್ಷಣೆ ಕೇವಲ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವವರಿಂದ ಅಸಾಧ್ಯ ಸ್ವತ:ತಾವು ಬದಲಾದಾಗ ಸಾಧ್ಯವೆನ್ನುವಂತೆ,ಬೆಂಗಳೂರಿನ ರಸ್ತೆಬದಿಗಳಲ್ಲಿ,ಕಸದ ರಾಶಿಗಳಲ್ಲಿ,ಕೆಲವು ಆರಾಧನಾಲಯಗಳ ಎದುರು ಬಿದ್ದಿರುವ ದೇವರುಗಳ ಫೋಟೋಗಳನ್ನು ಸಂಗ್ರಹಿಸಿ ಧರ್ಮರಕ್ಷಣೆ,ಸ್ವಚ್ಚತೆ ಹಾಗೂ ಕಸದಿಂದ ರಸ ತಯಾರಿಸುವವರಿಗೆ ಫೋಟೋ ಪ್ರೇಮ್,ಗ್ಲಾಸು,ಹಾಗೂ ಪೇಪರುಗಳನ್ನು ಬೇರ್ಪಡಿಸಿ ಕೊಡುವ ಯುವಶಕ್ತಿಯ ಬಗ್ಗೆ ವಿವರಣೆ..


*ಸಾರಾಯಿ ಯ ದುಶ್ಚಟಕ್ಕೆ ಬಿದ್ದು ಕುಟುಂಬ ಬೀದಿಗೆ ಬರುವಂತೆ ಮಾಡಿದವರನ್ನು ಸಾರ್ವಜನಿಕ ಕಾರ್ಯಕ್ರಮ ಹಾಗೂ ಆಂಧೋಲನಗಳ ಮೂಲಕ ಹೋರಾಟ ಮಾಡಿ ಯಶಸ್ಸು ಸಾಧಿಸಿದ ವ್ಯಕ್ತಿಗಳ ಕಥೆ.

ಕಾರ್ಯಕ್ರಮದ ಕೊನೆಗೆ ಧನ್ಯವಾದವನ್ನು ಅರ್ಪಿಸಿದ ಉಣ್ಣೀಕೃಷ್ಣನ್ ಅವರ ತಂದೆತಾಯಿಯ ಮಾತುಗಳು ಮತ್ತೆ ಇಡೀ ಸಭಿಕರನ್ನು ಭಾವೋದ್ವೇಗಕ್ಕೊಳಪಡಿಸಿತು.ತನಗೆ ಸಮಾಜದಿಂದ ಸಿಕ್ಕಿದ ಧೈರ್ಯಹಾಗೂ ನಮ್ಮನ್ನು ಪ್ರೀತಿಸುವವರ ಸಂದೀಪ್ ಉಣ್ಣಿಕೃಷ್ಣನ್ ಅವರ ತ್ಯಾಗವನ್ನು ಸ್ಮರಿಸಿ ನಮ್ಮನ್ನು ಗುರುತಿಸುವವರಿಂದಾಗಿ ನಾವಿಂದು ನಿಮ್ಮ ಕಣ್ಣೆದುರು ಇದ್ದೇವೆ,ಇಲ್ಲವೆಂದರೆ ಈ ಜೀವಗಳು ಎಂದೋ ಅಂತ್ಯವಾಗಿರುತ್ತಿತ್ತು ಎಂದು ಇಡೀ ಸಭೆಗೆ ಧನ್ಯವಾದ ಮತ್ತು ಇದೇ ರೀತಿ ನಮ್ಮ ಅಗಲಿಕೆಯ ನಂತರವೂ ಸಂಧೀಪ್ ಉಣ್ಣಿಕೃಷ್ಣನ್ ಅವರ ಹುಟ್ಟುಹಬ್ಬ ಆಚರಣೆಯಾಗುತ್ತಿರಲಿ,ನಮ್ಮ ಭಾರತಿಯ ಸೈನ್ಯದ ಬಗ್ಗೆ ಸೈನಿಕರ ತ್ಯಾಗದ ಬಗ್ಗೆ ಹುತಾತ್ಮರ ತ್ಯಾಗಗಳನ್ನು ಮರೆಯಾಗದಂತೆ ಜೀವಂತವಾಗಿಡುವ ಕೆಲಸವನ್ನು ಮಾಡುವ ಯುವಾಬ್ರಿಗೇಡ್ ಹಾಗೂ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರನ್ನು ಹಾಗೂ ಸೇರಿದ ಗಣ್ಯರನ್ನು ಅಭಿನಂದಿಸಿ,ವಂದೇ ಮಾತರಂ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವಿಶಿಷ್ಟವಾದ ಕಾರ್ಯಕ್ರಮದ ಮಂಟಪ,ಪರಸ್ಪರ ಗೌರವ,ಪ್ರೀತಿಯಿಂದ ಸಂಪೂರ್ಣ ಕೆಲಸಗಳನ್ನು ಮಾಡಿದ ಯುವಾಬ್ರಿಗೇಡ್ ಸಹೋದರರ ಕೆಲಸಗಳನ್ನು ಪ್ರೀತಿಯಿಂದ ಶ್ಲಾಘಿಸಲೇಬೇಕು.ಇಂತಹ ಅಪರೂಪದ,ವಿಶಿಷ್ಟ,ಪ್ರೇರಣಾ ಕಾರ್ಯಕ್ರಮ #ನಿವೇದನಾ ತಂಡಕ್ಕೆ ಧನ್ಯವಾದಗಳು.

         -ದಯಾ ಆಕಾಶ್ ಕಾಸರಗೋಡು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!