ಅಂಕಣ

ಮತ್ತೊಂದು ಕುರುಕ್ಷೇತ್ರಕ್ಕೆ ಸಜ್ಜಾಗುತ್ತಿದೆಯೇ ವಿಶ್ವ?

ಅಂದು ದ್ವಾಪರಯುಗದಲ್ಲಿ ಅಳಿವಿನಂಚಿಗೆ ಹೋಗಿದ್ದ ಧರ್ಮವನ್ನು,ನ್ಯಾಯವನ್ನು ಉಳಿಸಲು ಭಗವಾನ್ ವಿಷ್ಣು ಸ್ವತಃ ಶ್ರೀ ಕೃಷ್ಣನ ಅವತಾರವೆತ್ತಿ ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿ ಬರೆದು ದುಷ್ಟ ಸಂಹಾರ ಮಾಡಿ ಶಿಷ್ಟರಿಗೆ ನ್ಯಾಯ ಒದಗಿಸಿ ಸತ್ಯ ,ನ್ಯಾಯ ಧರ್ಮವೇ ಪ್ರಪಂಚದಲ್ಲಿ ಶ್ರೇಷ್ಠ ಎಂದು ಲೋಕಕ್ಕೆ ಭಗವದ್ಗೀತೆಯ ಮುಖಾಂತರ ಸಂದೇಶ ನೀಡುತ್ತಾನೆ. ಆಗ ಹೀಗಾಗಿ ಆಗ ನಡೆದದ್ದು ಧರ್ಮ ಯುದ್ಧ ಎಂದು ಪರಿಗಣಿಸಲಾಗಿದೆ. ಅದೇ ರೀತಿಯಾಗಿ ಇತ್ತೀಚಿಗೆ ನಡೆಯುತ್ತಿರುವ ಘಟನೆಗಳನ್ನು ಅವಲೋಕನ ಮಾಡಿದಾಗ ಮತ್ತೊಮ್ಮೆ ಕುರುಕ್ಷೇತ್ರದಂತಹ ಯುದ್ಧ ನಡೆಯಲಿದೆಯೇ ಎಂಬ ಅನುಮಾನ ಕಾಡುತ್ತದೆ. ಆದರೆ ಈ ಬಾರಿ ನಡೆಯುವುದು ಕೇವಲ ಭಾರತ ಉಪಖಂಡಕ್ಕೆ ಸೀಮಿತವಾಗಿರುವುದಿಲ್ಲ ಎನ್ನುವದು ಮಾತ್ರ ಸತ್ಯ.

ಯಾಕೆ ಈ ಪ್ರಶ್ನೆ ಉದ್ಭವವಾಗುತ್ತದೆ ಎಂದರೆ  ಮೊದಲು ಭಾರತವನ್ನು ಪರಿಗಣಿಸೋಣ. ಕಾಶ್ಮೀರದಲ್ಲಿದ್ದ ಹಿಂದೂ ಪಂಡಿತರನ್ನು ಅಲ್ಲಿನ ಸರ್ಕಾರ ಹಾಗು ಕೆಲ ವರ್ಗದ ಜನ ಮತ ಬ್ಯಾಂಕ್ ಹಾಗು ಜಿಹಾದಿಯ ಹೆಸರಿನಲ್ಲಿ ಚಿತ್ರ ಹಿಂಸೆ ನೀಡಿ ಸಾಯಿಸಿದರು ಕೆಲವರು ಜೀವ ಭಯದಿಂದ ಅಲ್ಲಿಂದ ಗುಳೆ ಹೊರಟರು. ಭಾರತದ ಸ್ವರ್ಗ ಎಂದೇ ಹೆಸರುವಾಸಿಯಾಗಿದ್ದ ಕಾಶ್ಮೀರ ಅಲ್ಲಿನ ಹಿಂದುಗಳಿಗೆ ಅಕ್ಷರಶಃ ನರಕವಾಗಿ ಕಾಣಿಸತೊಡಗಿತು. ಇತ್ತ ಪೂರ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ಯಾರು ಏನು ಮಾಡಲಾಗದಂತಹ ಸ್ಥಿತಿ ತಂದುಕೊಂಡು ಕುಳಿತಿದ್ದೇವೆ. ಇನ್ನು ಅಸ್ಸಾಮ್’ನ ಪರಿಸ್ಥಿತಿ ಕೇಳುವುದೇ ಬೇಡ. ಛತ್ತೀಸಘರ್ ,ಆಂಧ್ರಪ್ರದೇಶ, ಜಾರ್ಖಂಡ್’ನಲ್ಲಿ ನಕ್ಸಲರು ರಕ್ತದೋಕುಳಿಯನ್ನು ಹರಿಸುತ್ತಾ ಬಂದಿದ್ದಾರೆ. ಕೇರಳದ ವಿಚಾರಕ್ಕೆ ಬಂದರೆ ನಿರಂತರವಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ದಾಳಿಯಾಗುತ್ತಿದೆ, ಅವರನ್ನು ಹತ್ಯೆ ಮಾಡಲಾಗುತ್ತಿದೆ . ಅದು ಕೂಡಾ ಅಲ್ಲಿನ ಕಮ್ಯುನಿಷ್ಟ್ ಮುಖ್ಯಮಂತ್ರಿಯ ಅಭಯ ಹಸ್ತದೊಂದಿಗೇ ನಡೆಯುತ್ತಿರುವುದು ನಗ್ನ ಸತ್ಯವಾದರೂ ಮತ್ತದೇ ಯಾರು ಏನು ಮಾಡಲಾಗದ  ಪರಿಸ್ಥಿತಿ. ಇವುಗಳಷ್ಟೇ ಅಲ್ಲದೇ ಇನ್ನು ಹಲವಾರು ದೌರ್ಜನ್ಯಗಳು ದೇಶದ ಒಳಗೆ ನಡೆಯುತ್ತಿದ್ದರೂ ಕೆಲವೊಂದು ಮುಖ್ಯವಾಹಿನಿಗೆ ಬರುವ ಮುನ್ನವೇ ಮಣ್ಣಾಗಿ ಹೋಗಿರುವ ನಿದರ್ಶನಗಳಿವೆ. ಇಲ್ಲಿ ಯಾವುದೇ ಒಂದು ವರ್ಗದವರು ಮಾತ್ರಾ ತುಳಿತಕ್ಕೆ, ಅನ್ಯಾಯಕ್ಕೆ ಬಲಿಯಾಗಿಲ್ಲ. ಒಂದೊಂದು ಭಾಗದಲ್ಲಿ ಒಂದೊಂದು ವರ್ಗದವರು ಬಲಿಯಾಗಿದ್ದಾರೆ.

ಇದಿಷ್ಟು ಭಾರತೊಳಗಿನ ಸಂಗತಿಗಳಾದರೆ, ಇನ್ನು ಇಡೀ ಪ್ರಪಂಚವನ್ನು ಗಮನಿಸೋಣ. ಭಯೋತ್ಪಾದನೆಯನ್ನು ತನ್ನ ಮಡಿಲಲ್ಲೇ ಇತ್ತು ಪೋಷಿಸುತ್ತಿರುವ ಪಾಕಿಸ್ತಾನ, ಆ ಭಯೋತ್ಪಾದಕರಿಂದ ವಿಶ್ವದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳು. ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು. ಇದೆ ಉಗ್ರರು ಒಂದು ಕಾಲದಲ್ಲಿ ಅಮೆರಿಕಾದಲ್ಲಿ ನೆತ್ತರ ಕೋಡಿಯನ್ನೇ ಹರಿಸಿ ಅಮೆರಿಕಾದ ಜಂಘಾಬಲವನ್ನೇ ಉಡುಗಿಹೋಗುವಂತೆ ಮಾಡಿರುವುದು ಎಲ್ಲರಿಗು ಗೊತ್ತಿರುವ ವಿಚಾರ. ಇನ್ನೊಂದೆಡೆ ಕೊರಿಯಾದಂತಹ ಪುಟ್ಟ ದೇಶದ ದೊರೆ ಸರ್ವಾಧಿಕಾರಿಯಾಗಿ ಚಿತ್ರ ವಿಚಿತ್ರ ಕಾನೂನುಗಳನ್ನು ತರುವ ಮೂಲಕ  ಅಲ್ಲಿನ ಪ್ರಜೆಗಳಿಗೆ ತಡೆಯಲಾರದ ಚಿತ್ರಹಿಂಸೆ ನೀಡುತ್ತಿರುವುದು ಒಂದು ಸಂಗತಿಯಾದರೆ, ಏತನ್ಮಧ್ಯೆ ಇಡೀ ವಿಶ್ವವನ್ನೇ ಇಸ್ಲಾಮೀಕರಣಗೊಳಿಸುತ್ತೇವೆ ಎಂದು ಪತಾಕೆ ಹಾರಿಸಿ ಪ್ಯಾರಿಸ್ ,ಅಫಘಾನಿಸ್ತಾನ್, ಪಾಕಿಸ್ತಾನ್, ಬಾಂಗ್ಲಾ ಹೀಗೆ ಎಲ್ಲಾ ಕಡೆಗಳಲ್ಲೂ ಮಂದಿರ ಮಸೀದಿ ಚರ್ಚು ಎನ್ನುವುದನ್ನು ನೋಡದೆ , ಮಕ್ಕಳು, ಮಹಿಳೆಯರು,ದೊಡ್ಡವರು ಎಂಬ ತಾರತಮ್ಯವಿಲ್ಲದೆ  ರಕ್ತದೋಕುಳಿಯನ್ನು ಆಡುತ್ತಿರುವ, ಸಿರಿಯಾದಿಂದ ಮೊದಲ್ಗೊಂಡು ಈಗ ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಐಸಿಸ್ ಉಗ್ರರು , ತಮಗೆ ಕಡಿವಾಣ ಹಾಕುವವರು ಯಾರು ಇಲ್ಲ ಎನ್ನುವಂತೆ ಮೆರೆಯುತ್ತಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ ಇಡೀ ವಿಶ್ವವೇ ಈ ಧರ್ಮಗಳ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಕುರುಕ್ಷೇತ್ರದಂತಹ  ಯುದ್ಧಭೂಮಿಯಾಗಿ ವೇದಿಕೆಯಾಗುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆ ಕಾಲವು ಕೂಡಾ ಬಹಳ ಏನು ದೂರದಲ್ಲಿಲ್ಲ. ಪರಿಸ್ಥಿತಿ ಇದೆ ರೀತಿ ಮುಂದುವರೆದರೆ ಈ ಭೂಮಂಡಲದಲ್ಲಿ ಮಾನವ ಎಂಬ ಜೀವಿ ಬದುಕಿದ್ದ ಎಂಬುದಕ್ಕೆಪುರಾವೆಗಳೇ ಇಲ್ಲದಾಗಿ ಹೋಗುತ್ತದೆ. ಬುದ್ಧಿವಂತ ಜೀವಿಯಾಗಿ ಮಾನವ ಮಾಡುತ್ತಿರುವ ಇಂತಹ ಕೆಟ್ಟ ಕೆಲಸಗಳು ಆತನಿಗೆ ಮಾರಕ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮನುಷ್ಯರಹಿತ ಭೂಮಿ ಸ್ಥಾಪನೆಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

-ನಾಗರಾಜ ಭಟ್ ಟಿ ಆರ್

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!