ಅಂಕಣ

ದೇವರ ರಾಜ್ಯದ ತುಂಬಾ ರಾಕ್ಷಸರು!!

“ದೇವತೆಗಳ ನಾಡು” ಎನ್ನುವ ಅನ್ವರ್ಥನಾಮ ಪಡೆದಿರುವ  ಈ ರಾಜ್ಯವನ್ನು ವರ್ಣಿಸಲು ಪದಗಳೇ ಸಾಲದು. ಅದೆಷ್ಟು ಸುಂದರ, ಎಲ್ಲಿ ನೋಡಿದರಲ್ಲಿ ಸಸ್ಯ ಶಾಮಲೆಯಿಂದ ಕಂಗೊಳಿಸಿ, ಹಸಿರುಡಿಗೆ ಉಟ್ಟ ಭೂರಮಣಿ, ನೋಡಲು ಕಣ್ಣುಗಳೆರಡು ಸಾಲದು. ದ್ವೀಪವನ್ನು ಸೃಷ್ಟಿಸಿದಂತಿರುವ ಸಮುದ್ರ ಕಿನಾರೆಗಳು, ಸ್ವರ್ಗವೇ ಧರೆಗೆ ಇಳಿದು ಬಂದಂತಿರುವ ಅಂದದ ಪ್ರಾಚೀನ ದೇಗುಲಗಳ, ಆದಿಶಂಕರಾಚಾರ್ಯರು ಅವತರಿಸಿದ ತಪೋ ಭೂಮಿ. ಅತಿ  ಹೆಚ್ಚಿನ ಸಾಕ್ಷರರನ್ನು ಹೊಂದಿರುವ, ದೇಶದ ಪ್ರಥಮ ಜ್ಞಾನಪೀಠ ಪ್ರಶಸ್ತಿಯ ಸಾಹಿತ್ಯದ ಗೂಡು. ವಿವಿಧತೆಯಲ್ಲಿ ಏಕತೆ. ಹಲವು ಧರ್ಮಗಳ ಸಮನ್ವಯ ಉಂಟುಮಾಡಿರುವ ಬೀಡು. ಅರೇ ನೀವು ಯಾವುದಪ್ಪಾ ಅನ್ನುತ್ತಿದ್ದೀರಾ? ಅದುವೇ ನಮ್ಮ ಪಕ್ಕದ ರಾಜ್ಯವಾದ ಕೇರಳ. ಆದರೆ ಇಂದು ಹಾಗಿಲ್ಲ ,ಊರು ತುಂಬಾ  ಅಸುರರು ತುಂಬಿಕೊಂಡಿದ್ದಾರೆ.

ಇತ್ತೀಚೆಗೆ ನಡೆದಿರುವ ಪ್ರಖ್ಯಾತ ನಟಿ ಭಾವನಾ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ರಾತ್ರಿ 7.30 ರ ಸುಮಾರಿಗೆ ತ್ರಿಶೂರ್ನಿಂದ ಎರ್ನಾಕುಲಂಗೆ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ನಟಿ ಭಾವನಾ ಅವರನ್ನು ಮಾರ್ಗ ಮಧ್ಯೆ ಅಪಹರಣ ಮಾಡಿದ ಹಾಲಿ ಮತ್ತು ಮಾಜಿ ಚಾಲಕರು ದುಷ್ಕರ್ಮಿಗಳ ನೆರವಿನಿಂದ ಆಕೆಯ ಮೇಲೆ ಕಾರಿನಲ್ಲೇ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದರು. ಸ್ಥಳೀಯ ಓರ್ವ ನಿರ್ದೇಶಕನ ನೆರವಿನಿಂದ ನಟಿ ಭಾವನಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಹಾಲಿ ಚಾಲಕ ಮಾರ್ಟಿನ್ ಮತ್ತು ಮಾಜಿ ಚಾಲಕ ಮತ್ತು ಪ್ರಕರಣದ ಪ್ರಮುಖ ಕಿರಾತಕ  ಪಲ್ಸರ್ ಸುನಿಲ್ ನ್ನು   ಪೊಲೀಸರು ಬಂಧಿಸಿದ್ದಾರೆ. ಈ ಪಲ್ಸರ್ ಸುನಿಲ್ ಅಪರಾಧ ಹಿನ್ನೆಲೆ ಉಳ್ಳವನು. ಈತನಿಗೆ ಎಡಪಂಥೀಯರ ಶ್ರೀರಕ್ಷೆ ಇದೆ ಎನ್ನಲಾಗಿದೆ.ದುಷ್ಕರ್ಮಿಗಳಿಂದ ಅಪಹರಣಕ್ಕೀಡಾಗಿ ಲೈಂಗಿಕ ಕಿರುಕುಳದ ಕಹಿ ಪ್ರಸಂಗ ಅನುಭವಿಸಿದ ಬಹುಭಾಷಾ ತಾರೆ ಭಾವನಾ, ಇದೀಗ ಚಿತ್ರರಂಗದಲ್ಲೆ ಮತ್ತೆ ಸಕ್ರಿಯರಾಗಿದ್ದಾಳೆ. ನಟಿ ಎಲ್ಲವನ್ನು ಧೈರ್ಯದಿಂದ ಎದುರಿಸಿ ಮಹಿಳೆ ಸಬಲಳೆಂದು ಎಲ್ಲರಿಗೂ  ಮಾದರಿಯಾಗಿದ್ದಾಳೆ. ಹಾಗಾದರೆ ಕೇರಳವೇಕೆ ಕರಾಳವಾಗುತ್ತಿದೆ ? ಒಂದು ಕಾಲದಲ್ಲಿ ಬರೆ ಮೇಲ್ವರ್ಗದವರ ಕಪಿಮುಷ್ಠಿಯಲ್ಲಿ ಇದ್ದ ರಾಜ್ಯವನ್ನು ,ಅಸ್ಪ್ರಶ್ಯತೆಯನ್ನು ಬುಡಸಮೇತ ಕಿತ್ತು ಹಾಕಿ,ಬಡ ಬೀಡಿ ಕಾರ್ಮಿಕರ ಪರವಾಗಿನಿಂತು ಸಮಾನತೆಯ ಬೀಜ ಬಿತ್ತಿದವರು ಎಡಪಂಥೀಯರು. ಹೀಗಿದ್ದವರು ಇಂದ್ಯಾಕೆ ಅತ್ಯಾಚಾರ,ಕೊಲೆಗಳಿಗೆ ಮಣೆ ಹಾಕುತಿದ್ದಾರೆ. ಬರೆ ಕಮ್ಯುನಿಸ್ಟ್ರು ಮಾತ್ರವಲ್ಲದೆ ಬಹಳಷ್ಟು ಹೊಲಸು ತಿಂದ ರಾಜಕೀಯದವರು ಇಲ್ಲಿದ್ದಾರೆ. ಹೀಗೆ ಕೇರಳ ಕೀಚಕರ ಇತಿಹಾಸ ಕೆದಕಿ ನೋಡಿದರೆ ಇವರಿಗೆ ಬಳೆದಿರುವ ರಾಜಕೀಯ ಬಣ್ಣವೇ ಅವರನ್ನು ಶ್ರೀರಕ್ಷೆ ಮಾಡುತ್ತಿದೆ. ಇಂತಹ ಕೆಲವು ದುಷ್ಟ ರಾಕ್ಷಸರ  ನೀಚ ಕೆಲಸವನ್ನು ಸಂಕ್ಷೀಪ್ತವಾಗಿ ವಿವರಿಸುತ್ತೇನೆ ನೋಡಿ .

ಪಿ.ಕೆ ಕುನ್ಹಾಲಿಕುಟ್ಟಿ
ಈತ ಓರ್ವ ಓರ್ವ ಪ್ರಭಾವಿ ಮುಸ್ಲಿಂ ರಾಜಕಾರಣಿ . 1997ರಲ್ಲಿ ಕೇರಳ ಸರಕಾರದಲ್ಲಿ ಸಚಿವರಾಗಿದ್ದ ಸಮಯದಲ್ಲಿ ನಡೆದ “ಕೋಳಿಕ್ಕೋಡ್  ಐಸ್ ಕ್ರೀಂ ಪಾರ್ಲರ್ ಸೆಕ್ಸ್ ಹಗರಣ”ದಲ್ಲಿ ಈತನ ಹೆಸರು ಕೇಳಿಬಂದಿತ್ತು. ಯುವತಿಯರಿಗೆ ಆಮಿಷ ತೋರಿಸಿ ಅವರನ್ನು ವೈಶ್ಯಾವಾಟಿಕೆಗೆ ಪ್ರೇರೇಪಿಸಿ,ಅವರನ್ನು ಪ್ರಭಾವಿ ವ್ಯಕ್ತಿಗಳ ಕಾಮತೃಷೆ ತೀರಿಸುವ ತಾಣವಾಗಿತ್ತು ಆ ಐಸ್ ಕ್ರೀಮ್ ಪಾರ್ಲರ್. ಈ ಪಾಪಕೃತ್ಯವನ್ನು ಬಯಲಿಗೆದವಳು ಸಂತ್ರಸ್ತೆ  ರಜಿನಾ ಎನ್ನುವ ಮಹಿಳೆ.  ಪರಿಣಾಮ ಕುಟ್ಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ . ಆದ್ರು ತನ್ನ ಪ್ರಭಾವ ಬಳಸಿ ನ್ಯಾಯಾಧೀಶರಿಗೆ ಲಂಚದ ಆಮಿಷವೊಡ್ಡಿ ಸಂಪೂರ್ಣ ಹಗರಣದಿಂದ  ಖುಲಾಸೆಯಾಗಿದ್ದಾನೆ ಎಂದು ವರದಿಯಾಗಿದೆ.

ನೀಲಲೋಹಿತಾ ದಾಸನ್ನಾಡರ್
ಈತ ಜೆ.ಡಿ.ಎಸ್ ನ ಶಾಸಕನಾಗಿ ಸಚಿವನಾದವನು.  2000ದಲ್ಲಿ ಪರಿಸರ ಸಚಿವರಾಗಿದ್ದಾಗ, IFS ಅಧಿಕಾರಿಯಾದ  ಪ್ರಕೃತಿ ಶ್ರೀವಾಸ್ತವ್ ರನ್ನು ತನ್ನ ಗೆಸ್ಟ್ ಹೌಸ್ ಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪ ಸಾಬೀತಾಗಿ ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಿದ. ಹೀಗಿದ್ದರೂ ಈತನ ಚಾಳಿ ಇಷ್ಟಕ್ಕೆ ಮುಗಿಯಲಿಲ್ಲ, ಸಾರಿಗೆ ಸಚಿವನಾಗಿದ್ದಾಗ ನಳಿನಿ ನೆಟ್ಟೊ ಎನ್ನುವ ಐಎಎಸ್ ಅಧಿಕಾರಿಗೂ ಲೈಂಗಿಕ ಕಿರುಕುಳ ನೀಡಿದ್ದ. ಸಾಕ್ಷ್ಯಾಧಾರಗಳ ಕೊರತೆಯಿಂದ ಬಚಾವಾದ. ರಾಜಾರೋಷವಾಗಿ ಮತ್ತೆ ರಾಜಕೀಯದಲ್ಲಿದ್ದಾನೆ,ಬಿ.ಎಸ್.ಪಿ ಮುಖಂಡನಾಗಿದ್ದಾನೆ. ಎಲ್ಲ ಕೇಸುಗಳು ಮುಚ್ಚಿ ಹೋಗಿವೆ. ಈತನು ಮಾಡಿದ ಪಾಪದ ಕರ್ಮದ ಫಲವೇನೊ ಎಂಬಂತೆ ವಿಜ್ಞಾನಿಯಾಗಿದ್ದ ಮಗಳು ಆತ್ಮಹತ್ಯೆ ಮಾಡಿಕೊಂಡಳು.

ಪಿ.ಜೆ.ಕುರಿಯನ್
ಈತ ಪ್ರಭಾವಿ ಕಾಂಗ್ರೆಸ್ ಮುಖಂಡ ,೧೬ ವರ್ಷದ ನಂತರ ರಾಷ್ಟ್ರವ್ಯಾಪಿ ಬಾರಿ ಸಂಚಲನಕ್ಕೀಡಾದ ಸೆಕ್ಸ್ ಹಗರಣವೆಂದರೆ 1996ರ  “ಸೂರ್ಯನೆಲ್ಲಿ ಗ್ಯಾಂಗ್ರೇಪ್ ಪ್ರಕರಣ”. ಈತ ರಾಜ್ಯಸಭೆ ಉಪಸಭಾಪತಿ ಬೇರೆ ,ಇನ್ನು ಕೇಳಬೇಕೆ? ಪ್ರಕರಣದ ಕೊಂಡಿ ಇಂತಿದೆ- ಕೇರಳದ ಇಡುಕ್ಕಿಯ ಸೂರ್ಯನೆಲ್ಲಿ ಎನ್ನುವಲ್ಲಿ 16 ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು 42 ಜನರ ಗುಂಪು ಅಪಹರಿಸಿ , 45 ದಿನಗಳ ಕಾಲ ಕೂಡಿಹಾಕಿ ಅತ್ಯಾಚಾರ ಮಾಡಲಾಯಿತು ಎನ್ನುವುದು ಸಂತ್ರಸ್ತೆಯ ವಾದ. ಘಟನೆ ನಡೆದ ಅತಿಥಿ ಗೃಹದಲ್ಲಿ ಕುರಿಯನ್ ಕೂಡ ಹಾಜರಿದ್ದ ಎನ್ನುವುದು ಇದರ ಕೇಂದ್ರ ಬಿಂದು . ಯಾವುದೇ ಸಾಕ್ಷ್ಯಧಾರಗಳಿಲ್ಲದೆ ಈ ಕೇಸು ಕೂಡ ಹಳ್ಳ ಹಿಡಿಯಿತು.

ಕೇರಳದ ಇತ್ತೀಚೆಗಿನ ಲೈಂಗಿಕ ಹಗರಣಗಳ ಸಂಖ್ಯೆ ಹೇಳತೀರದ್ದು, ಕಳೆದ ವರ್ಷ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ  2568. ನಮ್ಮ ನೆರೆಯ ರಾಜ್ಯ ಯಾಕೆ ಹೀಗಾಯಿತು?. ಆ ಸುಂದರ ನಾಡು ಹೇಗಿತ್ತೆಂದರೆ  ಎಲ್ಲಾ ಜಾತಿ ,ಪಂಗಡಗಳು ಒಟ್ಟಿಗೆ ಸೇರಿ ಹಬ್ಬ ಆಚರಿಸುತ್ತಿದ್ದರು, ಅದುವೇ ಓಣಂ. ದೇಶದಲ್ಲೆಂದಾದರೂ ಬರೇ ಮಹಿಳೆಯರು ಜಾತ್ರೆ ನಡೆಸಿದ್ದು ನೋಡಿದ್ದೀರಾ? ಆಶ್ಚರ್ಯವಾದರೂ ಇದು ನಿಜ. ಕೇರಳದ ರಾಜಧಾನಿ ತಿರುವನಂತಪುರಂನ ಅಟ್ಟುಕಲ್ ಎಂಬಲ್ಲಿರುವ ಭಗವತಿ ದೇವಾಲಯದಲ್ಲಿ, ಹೊಸವರುಷದ ಶುಭದಿನ ಪೊಂಗಲನ್ನು ಜಾತ್ರೆಯಾಗಿ ಬರೆ ಮಹಿಳೆಯರು ಆಚಾರಿಸುತ್ತಾರೆ, ಪುರುಷರಿಗೆ ಪ್ರವೇಶ ನಿಷೇಧ. ಆದ್ದರಿಂದ ಈ ದೇಗುಲವನ್ನು ಮಹಿಳೆಯರ ಶಬರಿಮಲೆ ಅನ್ನುತ್ತಾರೆ. ಮಹಿಳೆಯರಿಗೆ ಬಸ್ಸುಗಳಲ್ಲಿ ಮೊದಲು ಸೀಟು ಮೀಸಲು ವ್ಯವಸ್ಥೆ ಬಂದಿದ್ದು ಕೇರಳದಲ್ಲಿಯೇ. ಇಷ್ಟೆಲ್ಲ ಆಚಾರ -ವಿಚಾರ ಹೊಂದಿದ ಒಂದು ಸಮೃದ್ಧ ರಾಜ್ಯವೇಕೆ ಹಿಂಗಾಯಿತು ಎಂದು ಅವಲೋಕಿಸಿದಾಗ ನಮ್ಮೆದುರಿಗೆ ಕಾಣಸಿಗುವ ನಗ್ನ ಸತ್ಯವೇ, ಆ ರಾಜ್ಯ ಕಮ್ಯುನಿಸ್ಟರ ಕಪಿಮುಷ್ಠಿಯಲ್ಲಿರೋದು. ಅಲ್ಲಿ ನಡೆದಿರುವ ಕೊಲೆಪಾತಕಗಳಿಗೆ ಲೆಕ್ಕವೇ ಇಲ್ಲ. ಆರ್ .ಎಸ್ .ಎಸ್ ಮತ್ತು ಕಮ್ಯುನಿಸ್ಟರ ನಡುವಿನ ಸಂಘರ್ಷದ  ರಕ್ತಪಾತಕ್ಕೆ ಅಮಾಯಕ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್ ಓರ್ವ ಕೊಲೆ ಮತ್ತು ಭ್ರಷ್ಟಾಚಾರ  ಆರೋಪಿ . ತನ್ನ ಸ್ವಂತ ಮಗಳೇ ರಾಜ್ಯ ಬಿಟ್ಟು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿ ಪ್ರಾರಂಭಿಸಿದ್ದಾಳೆ. ಇಷ್ಟೆಲ್ಲ ಇರುವಾಗ ಸಾಮಾನ್ಯ ಮಹಿಳೆಯರಿಗೆ ರಕ್ಷಣೆ ಸಿಕ್ಕಿತೇ? ಇವೆಲ್ಲವನ್ನೂ ಹಿಮ್ಮೆಟ್ಟಿಸಿ  ದೇವರ ರಾಜ್ಯವನ್ನು ಮರುಸ್ಥಾಪಿಸಬೇಕಾದ ಕಾಲ ಅಲ್ಲಿಯ ಜನರ ಕೈಯಲ್ಲಿದೆ. ಇತಿಹಾಸದ ಕರಾಳ ಅಧ್ಯಾಯದಲ್ಲೊಂದು ಕೇರಳ ಆಗದಿರಲೆಂದು ನಮ್ಮ ಅರಿಕೆ .ದೇವರನಾಡಲ್ಲಿ ತುಂಬಿರುವ ರಾಕ್ಷಸ ಸಂಹಾರವಾಗಿ ಮತ್ತೆ ದೇವರು ಸ್ಥಾಪನೆಯಾಗಲೆಂದು ಆಶಿಸುತ್ತೇನೆ .  

  • Ganesh M K

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!