ಅಂಕಣ

ಕಾಲಕ್ಕೆ ತಕ್ಕಂತೆ ನಾಲಗೆ ಬದಲಾಯಿಸುವ ಶಕ್ತಿಯಿರುವುದು ರಾಜಕೀಯ ನಾಯಕರಿಗೆ ಮಾತ್ರ..

ಹಿಂದೊಮ್ಮೆ ಬದಲಾಯಿಸುವ ಶಕ್ತಿ ಎಂಬ ಶಿರೋನಾಮೆಯಿರುವ ಯಾವುದೋ ಜಾಹೀರಾತನ್ನು ಪ್ರಮುಖ ದಿನಪತ್ರಿಗಳಲ್ಲಿ ನಾವು ನೋಡಿದ್ದೇವೆ. ಆದರೆ ಈ ಶಕ್ತಿಗಳಿಂದ ಬದಲಾವಣೆಯಾಗುತ್ತದೆಯೋ ಇಲ್ವೋ ಆದರೆ ರಾಜಕೀಯ ಪಕ್ಷದ ನಾಯಕರ ನಾಲಗೆಗಳು ಬೇಕಾದಂತೆ ಬದಲಾಗುತ್ತದೆ.

ಕಳಸಾಬಂಡೂರಿ ಹೋರಾಟವನ್ನು ನಾವೆಲ್ಲ ಕೇಳಿದ್ದೇವೆ,ಬೆಂಬಲಿಸಿದ್ದೇವೆ ರೈತರು ಅನೇಕ ಸಮಯಗಳ ಕಾಲ ಪ್ರತಿಭಟನೆ, ಸತ್ಯಾಗ್ರಹ ಇವೆಲ್ಲವುಗಳನ್ನು ಮಾಡಿದರೂ,ರಾಜಕೀಯನಾಯಕರು ಮಾಡಿದ್ದೇನು? ತಾವು ಅವರೊಂದಿಗೆ ಸೇರಿ ಪ್ರತಿಭಟಿಸದೇ ಕಾಂಗ್ರೆಸ್, ಜೆ.ಡಿ.ಎಸ್  ಹಾಗೂ ಬಿ.ಜೆ.ಪಿ ಪ್ರತ್ಯೇಕವಾಗಿ ಪ್ರತಿಭಟಿಸಿತು. ನಿಜವಾಗಿ ಇವರ ನಿಲುವೇನು ನಾವು ಸಮಸ್ಯೆಯ ಪರಿಹಾರದ ಹೋರಟಕ್ಕಾಗಿ ಅಲ್ಲ, ಹೋರಾಟದ ಹೆಸರಲ್ಲಿ ಸ್ವಲ್ಪ ರಾಜಕೀಯ ಲಾಭ ನಮಗೆ ಬೇಕು ಎನ್ನುವ ನಿಲುವು. ಹೀಗೆ ಕಬ್ಬಿಗೆ ಸೂಕ್ತಬೆಂಬಲ ಬೆಲೆಗೆ ಹೋರಾಡುತ್ತಿರುವವರೂ ಕಬ್ಬಿನ ಫ್ಯಾಕ್ಟರೀಯ ಮಾಲಕರೇ ಹೊರತು ಕಾರ್ಮಿಕರಲ್ಲ,ಅಂದರೆ ಲಾಭ ಬೆಂಬಲ ಬೆಲೆ, ಏನೇ ಸಿಕ್ಕಿದರೂ ಲಾಭ ರಾಜಕೀಯ ನಾಯಕರಿಗೆ ಹೊರತು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತನಿಗಲ್ಲ. ನಿಜಕ್ಕೂ ಈ ರಾಜಕೀಯ ವ್ಯಕ್ತಿಗಳೆಂದರೆ ಯಾರು ಅವರು ಕೂಡ ನಮ್ಮ ನಿಮ್ಮಂತೆಯೇ ಮನುಷ್ಯರೇ ಆದರೆ ಅವರು ನೋಡುವ ದೃಷ್ಟಿಮಾತ್ರ ತಮ್ಮ ರಾಜಕೀಯದ ದಿವ್ಯ ದೃಷ್ಟಿಯಾಗಿರುತ್ತದೆಯಷ್ಟೇ.

ಅಣ್ಣಮ್ಮ, ಗಣೇಶ ಕೂರಿಸುವಲ್ಲಿಯೂ ರಾಜಕೀಯ,ನಮ್ಮೂರ ಹತ್ತಿರದ ಮೈದಾನದಲ್ಲೊಂದು ಕ್ರಿಕೆಟ್ ಕಬಡ್ಡಿಯಾಟ ನಡೆದರೆ ಅಲ್ಲೂ ರಾಜಕೀಯ ಅಂದರೆ ತಮ್ಮ ಬೆಂಬಲಿಗರ ಆಸಕ್ತಿ ನೋಡಿ ಅವರನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಮನೋರಂಜನಾ ಕಾರ್ಯಕ್ರಮಗಳಲ್ಲೂ ರಾಜಕೀಯದ ನೆರಳೇ ಸಿಗುತ್ತದೆ. ಧಾರ್ಮಿಕ ಆಚರಣೆಗಳನ್ನೂ ಹೀಗೆ ತಮ್ಮ ರಾಜಕೀಯ ವೇದಿಕೆಯಾಗಿಸಿಕೊಳ್ಳುತ್ತಿರುವ ಅನೇಕ ಘಟನೆಗಳನ್ನು ನಾವು ಕಣ್ಣಾರೆ ನೋಡಿರುತ್ತೇವೆ. ಅಷ್ಟಕ್ಕೂ ನಾವಿಂದು ಚಿಂತಿಸಬೇಕಾಗಿರುವುದು ರಾಜಕೀಯ ಅಸ್ತಿತ್ವವೆನ್ನುವುದು ನಮಗೆ ಬಹಳ ಅನಿವಾರ್ಯವೇ ಎಂದು.

ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಅಬ್ಬಬ್ಬಾ ಅಂದರೆ ನನಗೊಂದು ಓಟು, ಅದು ಚುನಾವಣೆ ಸಮಯದಲ್ಲಿ ಹೆಬ್ಬರಲ್ಲೊಂದು ಶಾಯಿ ಹಾಕಿ ಜನಪ್ರತಿನಿಧಿಗಳನ್ನು ಆಯ್ಕೆಮಾಡಲಷ್ಟೇ ಉಳಿದಿಲ್ಲ ಇಂದು.ಹೋರಾಟ, ಪತ್ರಿಕೆ ಮಾಧ್ಯಮಗಳು, ಕೆಲವು ಮಠ ಮಂದಿರ,ಮಸೀದಿ, ಚರ್ಚುಗಳೂ, ಸಾಮಾಜಿಕ ನ್ಯಾಯದ ಹೋರಾಟಗಳೂ ಇದಕ್ಕೆ ಹೊರತಾಗಿಲ್ಲ. ಕನ್ನಡ ಹೋರಾಟಗಳಲ್ಲೂ ಚಲನಚಿತ್ರಮಂಡಳಿಗಳಲ್ಲೂ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಗಳಲ್ಲೂ ಈ ರಾಜಕೀಯದ ಗಾಳಿ ಹೊಕ್ಕಿಬಿಟ್ಟಿದೆ. ಕೆಲವರು ತಮ್ಮ ಸ್ಪಷ್ಟ ನಿಲುವಿನ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳನ್ನು ಆಶ್ರಯಿಸಿಕೊಂಡರೆ,ಇನ್ನು ಕೆಲವರು ರಾಜಕೀಯ ಲಾಭಕ್ಕಾಗಿ, ಅಧಿಕಾರದ ಸ್ವಾರ್ಥಕ್ಕಾಗಿ! ರಾಜಕೀಯ ಲಾಭಕ್ಕಾಗಿ ಯಾವುದಾದರೂ ಪಕ್ಷವನ್ನು ಆಶ್ರಯಿಸುವವರಿಗೆ ಸ್ಪಷ್ಟ ಸಿದ್ದಾಂತ ಎನ್ನುವುದು ಇರುವುದಿಲ್ಲ. ಇವರ ಭಾವನೆ ಗೆದ್ದವನು ನನ್ನವನು ಮತ್ತು ನನ್ನನ್ನು ಯಾರೂ ಬಹುಮಾನಿಸುತ್ತಾರೋ, ಗಳಿಕೆಗೆ ಮೂಲವನ್ನು ಹುಡುಕಿಕೊಡುತ್ತಾರೋ ಅವರು ನಮ್ಮವರೆನ್ನುವ ಭಾವನೆ. ಇನ್ನು ಕೆಲವರದ್ದು ಸ್ಪಷ್ಟ ನಿಲುವಿಲ್ಲದ ರಾಜಕಾರಣ ತಮಗೆ ಹೇಗೆ ಬೇಕೋ ಅದನ್ನು ರಾಜಕೀಯದಲ್ಲಿ ತರಲು ಯತ್ನಿಸುತ್ತಾರೆ. ಉದಾಹರಣೆಗೆ ಯಾವುದೋ ಯಾವುದೋ ಜಯಂತಿ ಆಚರಣೆ,ಮಾಡಬೇಕೋ  ಬೇಡ್ವೋ ಎಂಬುದು ಈಗಿನ ಅಗತ್ಯಕ್ಕಿಂತ ಇದರಿಂದ ನನಗೇನು ಲಾಭವೆಂಬುದನ್ನು ಹೊಂದಿಕೊಂಡಿರುತ್ತವೆ.

ಯಾವುದೋ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಕ್ಕೆ ಕಾರ್ಯಕ್ರಮಗಳ ಆಯೋಜನೆಗಳಿಗೆ,ಪ್ರಚಾರಕ್ಕೆ ಸಹಕರಿಸದ ರಾಜಕಾರಣಿಗಳು ಕೆಲವೊಮ್ಮೆ ಕಾರ್ಯಕ್ರಮಕ್ಕೆ ಬಂದರೆ ತಮ್ಮದೇ ವೇದಿಕೆಯೆಂಬಂತೆ ಮಾತಾಡಿ ಕಾರ್ಯಕ್ರಮ ಆಯೋಜಕರಿಗೂ, ದುಡಿದ ಕಾರ್ಯಕರ್ತರಿಗೂ ನಿರಾಸೆಯನ್ನುಂಟುಮಾಡುವ ಅದೆಷ್ಟೋ ಸನ್ನಿವೇಶಗಳು ನಮ್ಮಲ್ಲಿ ನಡೆಯುತ್ತದೆ.ರಾಜಕೀಯ ವ್ಯಕ್ತಿ ನಮ್ಮೊಡನೆ ನಿಂತಾಗ ಅವರೇನಾದರೂ ಸ್ವಲ್ಪ ಧನಸಹಾಯ, ಮುಂದಿನ ಚುನಾವಣೆಯ ಅಭ್ಯರ್ಥಿಯಾದರೆ ದೂರಾಲೋಚನೆ ಗೆದ್ದರೇನಾದರೂ ನಮಗೆ ಲಾಭವಾಗಬಹುದೇ ಎಂದು, ಮತ್ತು ಅಧಿಕಾರವಿರುವವನಾದರೆ ಯಾವುದಾದರು ಹುದ್ದೆಗೆ ನಮ್ಮ ಹೆಸರನ್ನು ಸೂಚಿಸಬಹುದೇನೋ ಎನ್ನುವ ಆಸೆಯಿದ್ದು ರಾಜಕೀಯದ ನಂಟಿಗೆ ಹೊಂದಿಕೊಂಡವರೇ ಅಧಿಕ ನಮ್ಮಲ್ಲಿ.


ರಾಜಕೀಯ ಬೇಕಾದದ್ದೇ. ಆದರೆ ಸಮಾಜವನ್ನೆಲ್ಲ ಕೇವಲ ರಾಜಕೀಯ ವಿಶ್ಲೇಷಣೆ ಕೊಟ್ಟು ಮತ್ತು ಅವರು ಹಾಗಿರಬಾರದು, ಹೀಗೆ ಹೇಳಬಾರದು ಅನ್ನುವಷ್ಟರ ಮಟ್ಟಿಗೆ ರಾಜಕೀಯ ನಿಜವಾಗಲೂ ಅಗತ್ಯವಿಲ್ಲ. ಯಾಕೆಂದರೆ ಶ್ರೀ ನರೇಂದ್ರಮೋದಿಜಿಯವರಂತಹ ರಾಜಕಾರಣಿಗಳು ಈ ದೇಶದಲ್ಲಿ ಎಷ್ಟು ಜನ ಇದ್ದಾರೆ? ಹಾಗೆಂದು ಮಾತನಾಡುವ ಹಕ್ಕೆಂದು ದೇಶಕ್ಕೆ ಪ್ರೇರಣೆ ನೀಡಬಲ್ಲ ಸಮಾಜವನ್ನು ಅಣಕಿಸುವುದಾಗಲೀ, ದೇಶದ್ರೋಹಿ ಕೃತ್ಯಗಳನ್ನು ನಡೆಸುವ ಧೋರಣೆಗಳನ್ನಾಗಲಿ ಖಂಡಿತ ಬೆಂಬಲಿಸಬಾರದು.

Daya akash

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!