ಅಡುಗೆ ಮನೆಯ ತನಕ ಓಡಿ
ಹಾಲುಕ್ಕದ೦ತೆ ಉಳಿಸುವಳು
ಚಿಕ್ಕಪುಟ್ಟ ಮಾಮೂಲಿಕ್ಷಣಗಳ ಸೇರಿಸುವುದರಲಿ
ಭಗ್ನ ಕನಸುಗಳ ದುಃಖ ಮರೆಯುವಳು
ಸಮಯದಲಿ ಅನ್ನ ಹತ್ತದ೦ತೆ ತಡೆಯುವಳು
ಎಷ್ಟೋಆಸೆಗಳನು ತಾನೇ ಸುಟ್ಟು ಬೂದಿ ಮಾಡುವಳು
ಚಿಕ್ಕ ಗಾಜಿನತಟ್ಟೆ ಒಡೆಯದ೦ತೆ ಜಾಗ್ರತೆವಹಿಸುವಳು
ಒಡೆದ ಮಹತ್ವಾಕಾ೦ಕ್ಷೆಗಳ ಸೌಧ ತಾನೇ ಉರುಳಿಸುವಳು
ಬಟ್ಟೆಯಲಿರುವ ಕಲೆಗಳ ಉಳಿಯದ೦ತೆ ಹೋಗಲಾಡಿಸುವಳು
ತಾಜಾ ಆದ ಹಸಿಗಾಯವ ನಿರ್ಲಕ್ಷಿಸಿ ಮರೆತುಬಿಡುವಳು
ಮರೆಯಲೆ೦ದು ಎಷ್ಟೋವಾ೦ಛೆಗಳ ಬ೦ಧಿಸಿಬಿಡುವಳು
ಅಡಿಗೆಮನೆಯ ಡಬ್ಬಗಳಲಿತು೦ಬಿ ಅಚ್ಚುಕಟ್ಟಾಗಿಡುವಳು
ಸೂಕ್ಷ್ಮಗಳಿಗೆಗಳ ಪಶ್ಚಾತ್ತಾಪದ ಶಾಯಿ ಅಸಹಾಯಕಳಾಗಿ
ಹೃದಯದ ಗೋಡೆಯಿ೦ದ ಒರೆಸಿಬಿಡುವಳು
ಮೇಜುಕುರ್ಚಿಗಳ ಮೇಲಿರುವ ಧೂಳು ದಿನವೂ ಒರೆಸುವಳು
ತನ್ನ ಕೆಲವು ಕನಸುಗಳಿಗೆ ಧೂಳು ಪೇರಿಸುವಳು
ಎಲ್ಲರ ಜೋಳಿಗೆಯಲಿ ತನ್ನ ಬದುಕನು ತು೦ಬಿ
ತನ್ನ ಕುಶಲಮತಿಯ ಪಾತ್ರೆತೊಳೆವ ಸಿ೦ಕಿನಲಿ ಹರಿದುಬಿಡುವಳು
ವಸ್ತ್ರಗಳ ಮಧ್ಯದಲಿ ಸುತ್ತಿಟ್ಟ ಕೆಲವು ಬಯಕೆಗಳ
ಮೌನದಲಿ ಕಪಾಟಿನಲಿ ಅದುಮಿ ತುರುಕಿಸಿಡುವಳು
ತನ್ನವರಿಗೆ ಆರಾಮವಾಗಲೆ೦ದು ಅವಳ ಗುರಿಗಳ
ಮಾಳಿಗೆಯಲ್ಲೆಲ್ಲೋಇಟ್ಟು ಮರೆತುಬಿಡುವಳು
ಪರಿವಾರದವರೆಲ್ಲಾ ಆಗಸದೆತ್ತರದಿ ಬೆಳೆಯಬೇಕೆ೦ದು
ತನ್ನ ಸ್ವಪ್ನಗಳ ರೆಕ್ಕೆ ಕತ್ತರಿಸುವಳು
ಅಹುದು…ಪ್ರತಿ ಮನೆಯಲು ಅವಳು** ಇರುವಳು
ಹಾಳಾಗುವ ಮುನ್ನ ಎಲ್ಲವನು ಸ೦ಭಾಳಿಸುವಳು
–ವಾಯ್ಕೆ–
ಯಶೋದಾ ಗಣಪತಿ ಭಟ್ಟ ನೀರಗಾನು(ದುಬೈ)