ಅಂಕಣ

ಬದುಕು…ಎಂಬ ಪಾಠ ಶಾಲೆ

   ಬದುಕಿನ ನಿರಂತರ ಪಥದಲ್ಲಿ ನಾವೆಲ್ಲರೂ ಬೊಂಬೆಗಳು. ಆದರೆ ಆ ಬೊಂಬೆಗಳಿಗೆ ಜೀವ ತುಂಬಿದರೆ ಹೇಗಾಗಬಹುದು ಎಂಬುದಕ್ಕೆ ಶ್ರೀಮಂತ ಉದಾಹರಣೆಯೇ ಮಾನವ ಜನ್ಮ. ಮನುಷ್ಯನಲ್ಲಿ ಅಷ್ಟೈಶ್ವರ್ಯ, ಆಸ್ತಿ-ಪಾಸ್ತಿ, ಘನತೆ ಗೌರವ ಎಲ್ಲವೂ ಇದ್ದರೂ, ಇನ್ನೂ ಬೇಕು ಎಂಬ ಹಂಬಲ. ಕೊನೆಗೊಂದು ದಿನ ಅದೇ ನಿರಾಸೆಯ ಹಾದಿಗೆ ಎಡೆ ಮಾಡಿ ಕೊಡುತ್ತದೆ.

   ಜೀವನ ಎಂಬುದು ಮೂರಕ್ಷರದ ಪದ. ಆ ಪದಗಳೇ ನಮ್ಮನ್ನು ಪೂರಕಗೊಳ್ಳುವಂತೆ ಮಾಡುವುದು. ಬದುಕಿನುದ್ದಕ್ಕೂ ಅಸಾಧ್ಯವಾದುದನ್ನು ತಲುಪಬೇಕು ಎಂಬ ಹಂಬಲವಿರಬೇಕು ನಿಜ. ಆದರೆ ಅದು ತೀರಾ ಅತಿರೇಕಕ್ಕೆ ಹೋಗಿ ಜೀವನವನ್ನು ಹಾಳು ಮಾಡುವಂತಿರಬಾರದು.

   ಕೆಲವೊಮ್ಮೆ ತೀರಾ ಕಲ್ಪನೆಗೆ ಒಳಪಟ್ಟು, ಪ್ರಪಂಚ ಸುಂದರವಾಗಿ ಕಾಣುವುದು ಸಹಜ. ಆದರೆ, ಅದೇ ಪ್ರಪಂಚ ಜೀವನದುದ್ದಕ್ಕೂ ಯಾವ ರೀತಿ ಸಮಾಜದಲ್ಲಿ ಬದುಕು ಸಾಗಿಸಬೇಕು ಎಂಬುದನ್ನು ನಮಗೆ ತಿಳಿಸುತ್ತದೆ. ಆದರೆ ಇವೆಲ್ಲ ನಮ್ಮ ಬುದ್ಧಿಗೆ ಗೋಚರವಾಗುವುದು ಪ್ರಪಂಚದ ಒಳಿತು ಕೆಡುಕುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ.

   ಅರಿಸ್ಟಾಟಲ್ ಹೇಳಿದಂತೆ,”ಮಾನವ ಸಂಘಜೀವಿ”. ಅವನು ಎಂದಿಗೂ ಏಕಾಂಗಿಯಾಗಿ ಸಮಾಜದಲ್ಲಿ ಬದುಕಲಾರ. ಮಾನವನ ಜೀವನ ಸಾಗಬೇಕಾದರೆ ಸಮಾಜದೊಳಗೆ ಇತರರೊಡನೆ ಉತ್ತಮ ಭಾಂಧವ್ಯ ಮೂಡಿಸಿಕೊಂಡಿರಬೇಕು. “ಬದುಕು ಜಟಕಾಬಂಡಿ, ವಿಧಿ ಅದರ ರುವಾರಿ” ಎಂಬ ಮಾತನ್ನು ನಾವು ಬಹಳ ಕೇಳಿರಬಹುದು. ಜೀವನ ನಮ್ಮನ್ನು ರೂಪಿಸಬಾರದು, ನಾವು ಜೀವನವನ್ನು ರೂಪಿಸಬೇಕು. ಈ ವಿಷಯವನ್ನು ಶೀಘ್ರವಾಗಿ ತಿಳಿದುಕೊಂಡಾಗ ನಮ್ಮ ಅಭಿವೃದ್ಧಿ ಅಷ್ಟೇ ಶೀಘ್ರದಲ್ಲಿ ಆಗುವುದರಲ್ಲಿ ಬೇರೆ ಮಾತಿಲ್ಲ.

   ಜನರ ಸ್ವಭಾವವನ್ನು ತಿಳಿದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಮ್ಮ ಜೊತೆಗಿರುವ ವಿಷಯಕ್ಕಿಂತ, ಇನ್ನೊಂದು ಚಲನೆಯಲ್ಲಿರುವ ವಿಷಯಗಳಿಗೆ  ಆಸ್ಪದ ನೀಡುವುದು ಮಾನವನ ಕೆಲವೊಂದು ಪ್ರಮುಖ ಗುಣಗಳಲ್ಲಿ ಒಂದು. ಅಂಥಹ ಕಾರ್ಯಗಳು ವೈಯಕ್ತಿಕ ಬದುಕಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಮಾತ್ರ ಗಮನದಲ್ಲಿರಿಸಿಕೊಳ್ಳಬೇಕು. ಜೀವನದಲ್ಲಿ ನಮ್ಮ ದಾರಿ ನಮಗೆ, ಹೆತ್ತವರನ್ನು ಹೊರತುಪಡಿಸಿ ಯಾರನ್ನೂ ನಂಬಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಅಭ್ಯುದಯವನ್ನು ಬಯಸುವ ಜೀವಗಳೆಂದರೆ ಅವು ಮಾತ್ರ.

   ಜನನ ಮರಣಗಳ ನಡುವೆ ಸಾಗುವ ಈ ಜೀವನದಲ್ಲಿ ಅದೆಷ್ಟೋ ನೋವು ನಲಿವುಗಳು. ಮುಳ್ಳುಗಳ ದಾರಿಯಿದೆ ಸಾಗಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಂಡರೆ ನಮ್ಮಿಂದ ಯಾವುದೇ ರೀತಿಯಲ್ಲಿ ಪ್ರಯತ್ನ ಅನ್ನೋ ಪ್ರಕ್ರಿಯೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದಾಗಿ ಹೂವಿನ ಹಾದಿ ನಮ್ಮದಾಗುವ ತನಕ ಪ್ರಯತ್ನ ಪಟ್ಟು, ಶ್ರಮವಹಿಸಿ ಅದೇ ದಾರಿಯಲ್ಲಿ ನಡೆಯಬೇಕು. ಕೊನೆಗೊಂದು ದಿನ ನಾವಂದುಕೊಂಡಂತೆ ಪುಷ್ಪಪಥ ನಮ್ಮದಾದಾಗ ಸಿಗುವ ಖುಷಿ ಲೆಕ್ಕಾಚಾರಕ್ಕೆ ನಿಲುಕದ್ದು. ಜೊತೆಜೊತೆಗೆ ಸಾಧನೆಗೆ ಪ್ರತಿಫಲದ ಸನ್ಮಾನ.

   ಅದೆಷ್ಟೋ ಬಡಜೀವಗಳು ಹೊಟ್ಟೆಗೆ ಹಿಟ್ಟಿಲ್ಲದೆ ಯಾರ್ಯಾರದ್ದೋ ಕೈಯಡಿಯಲ್ಲಿ ದುಡಿದು ಜೀವನ ಸಾಗಿಸುತ್ತಾರೆ. ಆದರೆ ಮುಖ್ಯವಾಗಿ ತಿಳಿದುಕೊಳ್ಳಬೇಕಾದದ್ದು ಇಷ್ಟೇ ಪ್ರತಿಯೊಬ್ಬರೂ ಕೂಡ ಒಬ್ಬರ ಮುಂದೆ ಕೈಚಾಚಿ ತಮ್ಮ ಬೇಡಿಕೆಯನ್ನು ಪೂರೈಸಿಕೊಳ್ಳುತ್ತಾರೆ. ಆ ಬೇಡಿಕೆ ಈಡೇರಿಸುವವನು ಭಗವಂತ ಮಾತ್ರ. ಆತನ ಕೈಯಾಳುಗಳು ನಾವು. ಆದರೆ ಸಮಾಜದಲ್ಲಿ ಇಂದಿಗೂ ಮೇಲು-ಕೀಳು, ಅಸ್ಪ್ರಷ್ಯತೆ, ನಮ್ಮಿಂದಲೇ ಎಲ್ಲಾ ಎನ್ನುವ ಅಹಂ, ಹೀಗೆ ಕೆಲವು ಪಿಡುಗುಗಳು ಬದುಕುಳಿದಿದೆ ಎಂಬುದೇ ಆಶ್ಚರ್ಯ ಸಂಗತಿ.

   ಅದೇನೇ ಇರಲಿ ಒಂದು ಮಾತಿದೆ “ಒಂದು ತಮಾಷೆಗೆ ಒಮ್ಮೆ ನಕ್ಕು ಸುಮ್ಮನಾಗುತ್ತೇವೆ ಆದರೆ ಒಂದು ಬಾರಿ ಮನಸ್ಸಿಗೆ ಆದಂಥಹ ಘಾಸಿಯನ್ನು ನೆನೆದುಕೊಂಡು ಜೀವನದುದ್ದಕ್ಕೂ ಕೊರಗುತ್ತೇವೆ” ಎಂಥಾ ವಿಪರ್ಯಾಸ. ಮುಖ್ಯವಾಗಿ ಹೇಳುವುದಾದರೆ ನಮ್ಮ ಜೀವ ಹಾಗೂ ಜೀವನ ಎರಡೂ ನಮ್ಮ ಕೈಯಲ್ಲಿದೆ. ಅವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಜೀವನದುದ್ದಕ್ಕೂ ಬರುವ ಏರುಪೇರುಗಳನ್ನು ಸಮಾನವಾಗಿ ಸ್ವೀಕರಿಸಿ, ಸಮದೂಗಿಸಿಕೊಂಡು ನಡೆಯಬೇಕು. ಅಲ್ಲಿ ಕೇವಲ ನಮ್ಮ ಕರ್ತವ್ಯ ಮಾತ್ರ ಕಾಣುವುದಿಲ್ಲ. ಬದಲಾಗಿ ನಮ್ಮ ಸಾಮರ್ಥ್ಯ ಬಲಗೊಳ್ಳುತ್ತದೆ.

–  ಭವಿಷ್ಯ ಶೆಟ್ಟಿ

ಪ್ರಥಮ ಎಂ.ಸಿ.ಜೆ

ಎಸ್.ಡಿ.ಎಂ ಕಾಲೇಜು ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!