ತಾಯಿ
ತಾಯಿ ಅಂದರೆ ಪ್ರೀತಿ
ಮಾಡಬೇಡಿ ಆಕೆಗೆ ಭೀತಿ
ಸಲಹಿಹಳು ಒಂಬತ್ತು ತಿಂಗಳು ಗರ್ಭದಲಿ
ನೋವ ತರಿಸದಿರಿ ಆಕೆಯ ಆಂತರ್ಯದಲಿ
ತಂದೆ
ತಂದೆ ಎಂದರೆ ಭೀತಿ
ಆದರೆ ಒಳಗೊಳಗೆ ಪ್ರೀತಿ
ಕಷ್ಟಕಾಲದಲ್ಲಿ ಧೈರ್ಯ ನೀಡುವ
ಧೈರ್ಯವಂತ
ಗೆದ್ದಾಗ ಗೆಲುವ ನೋಡುವ ಹೃದಯವಂತ
ಪ್ರೀತಿ
ಹೇಳಿದೆ ಒಂದು ಕವನವನ್ನ
ಕೇಳಿದಳು ಕಿವಿಗೊಟ್ಟ ಅದನ್ನ
ನಿವೇದಿಸಿದೆ ನನ್ನ ಪ್ರೀತಿಯನ್ನ
ಕೊಟ್ಟಳು ಸಿಹಿ ಮುತ್ತೊಂದನ
ಸಂತ
ಭಾರತವೆ ಗಾಢ ನಿದ್ರೆಯಲ್ಲಿತ್ತು
ಎಚ್ಚರಿಸಲು ಒಬ್ಬ ವೀರ ಬೇಕಿತ್ತು
ಬಂದರು ಒಬ್ಬ ಸಂನ್ಯಾಸಿ
ತೋರಿಸಿದರು ತಮ್ಮ ಪ್ರೀತಿಯನ್ನು
ಒಪ್ಪಿತು ಜಗ ಅವರನ್ನು
ಗುರು
ಬಂದಳು ಮಾರ್ಗರೆಟ್ ಆಗಿ ಭಾರತಕ್ಕೆ
ಮನಸೋತು ನಿವೇದಿತಾ ಆದಳು ಭಾರತೀಯ ತತ್ತ್ವಶಾಸ್ತ್ರಕ್ಕೆ
ಸಿಕ್ಕರು ವೀರ ಸಂನ್ಯಾಸಿ ಗುರುವಾಗಿ ಈಕೆಗೆ
ನಮಿಪೆನು ಸ್ವಾಮಿ ವಿವೇಕಾನಂದಗೆ