ಅಂತರಂಗದ ಒಳಗೆ ನಡೆದಿದೆ ಭಾವ-ಮೌನದ ಕದನ!
ಕಾಣದಂತೆ ಕರಗಿ ಹೋದೆ ನೀ ಒಂಟಿ ಪಯಣಿಗಳು ನಾ !
ತಿಳಿನೀರ ಕೊಳವಾಗಿತ್ತು ಮನ
ತಳದಲ್ಲಿದ್ದರೂ ಕೆಸರು!
ಪ್ರೀತಿಯ ಕಲ್ಲೆಸೆದು ಹೋದೆ ನೀ
ಹೇಗೆ ಮರೆಯಲಿ ನಾ ನಿನ್ನ ಹೆಸರು!
ಕಣ್ಣಲ್ಲಿ ಕಣ್ಣಿರಿಸಿ, ಮುಂಗುರಳ ನೇವರಿಸಿ
ನೀನಿಟ್ಟ ಭರವಸೆಯ ಕನಸು!
ಕಾರ್ಮೋಡ ಕವಿದು, ಅಲೆಯೊಂದು ಬಡಿದು
ಛಿದ್ರವಾಗಿದೆ ಮುಗ್ಧ ಮನಸು!
ಹಬ್ಬವಾಗಿದೆ ಜಗಕೆ ಅಬ್ಬರದ ಜೊತೆಗೆ ನಗುಮೊಗದ ಚಿತ್ರಣ!
ಅಂತರಂಗದ ಒಳಗೆ ನಡೆದಿದೆ ಭಾವಜೀವಿಯ ಮೌನ!