ಅಂಕಣ

ಪ್ರಜಾಪ್ರಭುತ್ವದ ನಿಲುವು ದೃಢವಾಗಬೇಕಿದೆ..

ತಮಿಳುನಾಡಿನಲ್ಲಿ ಹೊಸ ಮುಖ್ಯಮಂತ್ರಿಯ ಆಯ್ಕೆಯ ಭರಾಟೆ ಜೋರಾಗಿದ್ದಾಗ ಸುಪ್ರೀಂ ಕೋರ್ಟ್ ಎಐಎಡಿಎಂಕೆಯ ಶಶಿಕಲಾ ಅವರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಮೂಲಕ ನ್ಯಾಯಾಂಗವು ತನ್ನ ಜೀವಂತಿಕೆಯನ್ನು ಪ್ರದರ್ಶಿಸಿದೆ. ಜನರು ಜಾಗೃತವಾಗಿದ್ದಾಗ ಸರ್ಕಾರದ ಆಡಳಿತ ಚುರುಕಾಗಿರುತ್ತದೆ. ಪ್ರಜಾಪ್ರಭುತ್ವಕ್ಕೆ ಮನ್ನಣೆ ಸಿಗುವ ಪ್ರಬಲ ಆಸ್ತ್ರ ಮತದಾನ. ಜನನಾಯಕರ ಆಯ್ಕೆಯೊಂದಿಗೆ ಜನಪರ ಸರ್ಕಾರ ಸ್ಥಾಪಿಸುವ ಆದ್ಭುತ ಅವಕಾಶ. ಪ್ರಜಾತಂತ್ರ ವ್ಯವಸ್ಥೆ ಭದ್ರಗೊಳ್ಳಲು ಜನರು ಜವಾಬ್ದಾರಿಯ ಹೆಜ್ಜೆಗಳನ್ನಿಡಬೇಕಿದೆ. ರಾಜಕಾರಣಿಗಳಿಗೆ ರಾಜಕೀಯ “ಹೂವಿನ ಹಾಸಿಗೆಯಲ್ಲಿ ಕುಳಿತು ಆಡಳಿತ ನಡೆಸುವ ಯಂತ್ರವಲ್ಲ” ಎಂಬುದನ್ನು ಅರ್ಥೈಸುವ ಪ್ರಬಲ ಮಾರ್ಗವಿದು. ಇದು ಸಾಧ್ಯವಾಗದೇ ಇದ್ದಾಗ ಜನಪರವಾಗಿ ನ್ಯಾಯಾಂಗ ಕಾರ್ಯನಿರ್ವಹಿಸುತ್ತಿರುವುದು ಮಹತ್ವದ ಅಂಶ.

ರಾಜಕಾರಣಿಗಳು ಭಾವುಕತೆ ನೆಲೆಯಲ್ಲಿ ನಾಯಕರಾಗಿ ಈ ದೇಶದಲ್ಲಿ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ಬದಲಾಗಿ ಜನಪರವಾಗಿ ಯೋಚಿಸುವ ಅಗತ್ಯತೆ ಇದೆ. ಇದನ್ನು ಎಚ್ಚರಿಸಿ ಪ್ರಜಾಪ್ರಭುತ್ವ ರಕ್ಷಣೆಗೆ ನ್ಯಾಯಾಂಗ ನಿಂತಿರುವುದು ಮಹತ್ತರ ಬೆಳವಣಿಗೆ. ಜನತಂತ್ರದಲ್ಲಿ ಭಾವನೆಗಳ ಮೇಲಿನ ರಾಜಕಾರಣ ನಿಜವಾದ ನಾಯಕತ್ವಕ್ಕೆ ಸವಾಲಾಗಿದೆ. ನೈಜ ರಾಜಕಾರಣದಲ್ಲಿ ಜನಪರ ಕಾಳಜಿಯನ್ನು ಹೊಂದಿರಬೇಕೇ ಹೊರತು ಯಾವುದೇ ವ್ಯಕ್ತಿಗತ ಆರಾಧನೆಯ, ಭಾವುಕತೆಯ ರಾಜಕೀಯದ ಅವಶ್ಯಕತೆ ಇಲ್ಲ. ಯಾವುದೇ ನಾಯಕತ್ವದ ಗುಣಗಳನ್ನು ಹೊಂದಿರದ ಒಬ್ಬ ವ್ಯಕ್ತಿ, ವ್ಯವಸ್ಥೆಯನ್ನು ಭಾವುಕತೆಯಿಂದಲೋ ಅಥವಾ ಕುಟುಂಬ ರಾಜಕಾರಣದಿಂದಾಗಿ ರಾಜಕೀಯ  ನಾಯಕನಾಗುವುದು ಪ್ರಭುತ್ವಕ್ಕೆ ಮಾರಕ.

ಭಾರತಕ್ಕೆ ಒಂದು ಸಂವಿಧಾನದ ಒಕ್ಕೂಟ ವ್ಯವಸ್ಥೆಯಿದೆ. ಆದರಡಿಯಲ್ಲಿ ಬೆಳೆದ ಪ್ರಜಾಪ್ರಭುತ್ವಕ್ಕೆ ಘನತೆ, ಗೌರವವಿದೆ. ನಾಯಕರನ್ನು ಆಯ್ಕೆ ಮಾಡುವವರು ಮತದಾರರು ಎನ್ನುವುದನ್ನು ಮರೆಯಬಾರದು. ಯಾವುದೋ ಭಾವುಕತೆಯ ಲಾಭ ಪಡೆದ  ರಾಜಕಾರಣ ಕೇವಲ ತಾತ್ಕಾಲಿಕವಷ್ಟೇ. ಮುಂದೇ ಭವಿಷ್ಯತ್ತನಲ್ಲಿ ಅದಕ್ಕೆ ಬೆಲೆತೆರಬೇಕಾಗುತ್ತದೆ.

ನಾಯಕರಾದವರು ಜನಪರವಾದ ಸಂವೇದನೆಯನ್ನು ಹೊಂದಿರಬೇಕು, ಜನರ ಕಷ್ಟ-ಸುಖಗಳನ್ನು, ಸಮಸ್ಯೆಗಳನ್ನು  ಸಂಪೂರ್ಣವಾಗಿ ಅರಿತುಕೊಂಡು ಪ್ರಗತಿಗೆ ನಾಂದಿ ಹಾಡಿದಾಗ ಮಾತ್ರ, ಸಮರ್ಥವಾಗಿ ಒಳ್ಳೆಯ ರಾಜಕಾರಣಿಯಾಗಿ ರೂಪುಗೊಳ್ಳಬಹುದು. ಇತ್ತೀಚೆಗೆ ಇಂತಹ ರಾಜಕಾರಣಿಗಳು ತುಂಬ ವಿರಳ. ಒಬ್ಬ ರಾಜಕಾರಣಿ ತೀರಿದನೆಂದರೆ ಆತನ ಕುಟುಂಬದವರೇ ಭಾವುಕತೆಯ ಲಾಭ ಪಡೆದು ಚುನಾಯಿತರಾಗುವುದು ಸಮಂಜಸವಲ್ಲ.

ದೇಶದಲ್ಲಿ ಕುಟುಂಬ ರಾಜಕಾರಣ ತಾಂಡವವಾಡುತ್ತಿದ್ದು ಒಂದೇ ಕುಟುಂಬದ 16 ಸದಸ್ಯರು ರಾಜಕಾರಣಿಗಳಾಗಿದ್ದಾರೆ. ಅಪ್ಪ ಮಕ್ಕಳೂ ಸೇರಿ ಸರ್ಕಾರ ಮಾಡುತ್ತಾರೆ. ಸತ್ತ ಮನೆಯ ಸದಸ್ಯನ ಸ್ಥಾನಕ್ಕೆ ಅವನ ಕುಟುಂಬದವರೇ  ಶಾಸಕನೋ ಎಂಪಿನೋ ಆಗುತ್ತಾರೆ. ಈ ತರಹದ ರಾಜಕಾರಣವು ಪ್ರಸ್ತುತವಾಗಿ ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ಕರ್ನಾಟಕದಲ್ಲಿ ನೋಡಬಹುದು. ಇದರಿಂದಾಗಿ ಪ್ರಭುತ್ವವು ಕೇವಲ ಕೆಲವೇ ಕುಟುಂಬಗಳಿಗೆ ಹಂಚಿಕೆಯಾಗುತ್ತಿದ್ದು, ಮುಂದೇ ಇದೇ ಭ್ರಷ್ಟಾಚಾರಕ್ಕೆ ದಾರಿಯಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ.

ಇಂದಿನ ಕುಟುಂಬ ರಾಜಕಾರಣವು ಜಾತಿ ಹಾಗೂ ಧರ್ಮದ ಹೆಸರಿನ ಮೇಲೆ ರಾಜಕೀಯ ಅಧಿಕಾರ ಪಡೆಯುವ ಮೂಲಕ ಜನರಿಗೆ ನಂಬಿಕೆ ದ್ರೋಹವೆಸಗುತ್ತಿದೆ. ಇಂತಹ ರಾಜಕೀಯಕ್ಕೆ ಕಡಿವಾಣ ಹಾಕಬೇಕಾಗಿದೆ. ಸಂವಿಧಾನದ ಘನತೆಯನ್ನು ಕಾಪಾಡಬೇಕಾಗಿದೆ, ಈ ನಿಟ್ಟಿನಲ್ಲಿ ನ್ಯಾಯಾಂಗ ಧ್ವನಿಯೆತ್ತಿರುವುದು ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ. ಜನರು ಎಲ್ಲಿಯವರೆಗೆ ಭಾವುಕತೆಗೆ ಮರುಳಾಗುತ್ತಾರೋ, ಅಲ್ಲಿಯವರೆಗೆ ಇಂತಹ ರಾಜಕೀಯ ಜೀವಂತವಾಗಿರುತ್ತದೆ. ಯಾವಾಗ ಜನರು ಪ್ರಜ್ಞ್ಷಾವಂತರಾಗಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೋ ಅಂದೇ ಸಂಪೂರ್ಣ ಪ್ರಜಾಪ್ರಭುತ್ವ ನಮ್ಮದಾಗಲಿದೆ.

ರಾಜಕೀಯ ನಾಯಕತ್ವಕ್ಕೆ ಪ್ರಬಲವಾದ ವೈಚಾರಿಕ ನಾಯಕತ್ವ ಬೇಕಾಗಿದ್ದು, ಯಾವುದೇ ಮೌಢ್ಯ ಆರಾಧನೆಯ, ಭಾವುಕತೆಯ ತಂತ್ರಗಳಿಗೆ ಬಲಿಯಾಗದ ನಾಯಕತ್ವದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜನರು ಯೋಚಿಸಿದಾಗ ಪ್ರಬಲ ಹಾಗೂ ಜನಪರ ನಾಯಕರನ್ನು ಹೊಂದಲು ಸಾಧ್ಯವಾಗುತ್ತದೆ. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ  ಒಂದು ಬೆಲೆ ಸಿಕ್ಕಂತಾಗುತ್ತದೆ.  ಎಲ್ಲವೂ ನಮ್ಮ ಕೈಯಲ್ಲಿದೆ ಆಯ್ಕೆ ನಿಮ್ಮದು.

 

ಪವನ್ ಎಂ.ಸಿ.

ದ್ವಿತೀಯ ಪತ್ರಿಕೋದ್ಯಮ ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!