ಅಂಕಣ

ನಮ್ಮ ಹಬ್ಬಗಳು ಅಳಿಯುವ ಮುನ್ನ…..

ಈ ಪ್ರಪಂಚವೇ ಹಾಗೆ ತನ್ನೊಡಲಿನಲ್ಲಿ ಅಸಂಖ್ಯಾತ ರಹಸ್ಯಗಳನ್ನು ಉಳಿಸಿಕೊಂಡಿದೆ ಯಾರು ಎಷ್ಟೇ ಪ್ರಯತ್ನಪಟ್ಟರೂ ಕೆಲವನ್ನು ಜಯಿಸಲಾಗುವುದಿಲ್ಲ ಇಂತಹವುಗಳಲ್ಲಿ ಭಾರತವು ಒಂದು. ಯಾರು ಎಷ್ಟೇ ಪ್ರಯತ್ನಪಟ್ಟರೂ ಇಲ್ಲಿನ ಸಂಸ್ಕೃತಿಯನ್ನು ನಾಶ ಮಾಡಲು ಯಾರು ಸಫಲವಾಗಲಿಲ್ಲ. ಇದೆ ಕಾರಣಕ್ಕೆ ಏನೋ ಭಾರತವು ಒಂದಾದ ಮೇಲೊಂದು ದಾಳಿಗಳನ್ನು ಏದಿರುಸುತ್ತಲೇ ಇದೆ.

ಮೊದಮೊದಲು ನೇರವಾಗಿ ದಾಳಿ ಮಾಡುತ್ತಿದ್ದ ವೈರಿಗಳು ತಮ್ಮ ಪಥವನ್ನು ಬದಲಾಯಿಸಿವೆ. ನಮ್ಮ ದೇವರುಗಳನ್ನು ನಮ್ಮ ದೇವಸ್ಥಾನಗಳನ್ನು ನಾಶ ಮಾಡಿದರು, ನಂತರ ನಮ್ಮ ಪುರಾಣಗಳನ್ನು ತಿರುಚಿದರು, ಭಾರತವನ್ನು ಜ್ಯಾತ್ಯಾತಿತ ರಾಷ್ಟ್ರ ಮಾಡಿದರು, ಹಿಂದೂ ದೇವಾಲಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡರು, ನಮ್ಮ ಧರ್ಮದ ಸಾಧುಗಳ ಮೇಲೆ ಸುಳ್ಳು ಅಪವಾದಗಳನ್ನು ಹೊರೆಸಿದರು, ಒಬ್ಬ ಹಿಂದೂ ತನ್ನ ಧರ್ಮವನ್ನು ವಿರೋಧಿಸಲು ಏನೇನು ಮಾಡಬೇಕೋ ಎಲ್ಲವನ್ನು ಮಾಡಿದರು. ಇಷ್ಟೆಲ್ಲಾ ಮಾಡಿದರು ಪೂರ್ಣ ಪ್ರಮಾಣದ ಯಶಸ್ಸು ಸಿಗದಿರುವಾಗ ಹೊಸದೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಈ ಕೆಳಗಿನ ಘಟನೆಗಳನ್ನು ಅವಲೋಕಿಸಿದರೆ ಹಿಂದೂ ಧರ್ಮವನ್ನು ಹಣಿಯಲು ಹೇಗೆ ಒಂದು ವ್ಯವಸ್ಥೆ ಸಜ್ಜಾಗುತ್ತಿದೆ ಎಂಬುದನ್ನು ನೋಡಬಹುದು.

1. ಸೆಕ್ಯುಲರಿಸಂ ಎಂಬ ಪದವನ್ನು ಬಳಸಿ ಹಿಂದೂ ಧರ್ಮವನ್ನು ವಿರೋಧ ಮಾಡುವುದು ಮೊದಲನೆಯ ಪ್ರಯತ್ನ ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆಯನ್ನು ಆಯೋಜಿಸಲು ಹೊರಟಾಗ ಎಲ್ಲ ದೇಶಗಳು ಬೆಂಬಲಿಸಿದರು, ವಿರೋಧ ಮಾಡಿದ್ದು ನಮ್ಮವರೇ.

2. ಸಿದ್ದರಾಮಯ್ಯನವರು ಹಲವು ಬಾರಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಬಗ್ಗೆ ಮಾತನಾಡಿದ್ದಾರೆ. ಈ ಕಾಯ್ದೆಯನ್ನು ಜಾರಿಗೆ ತಂದು ಆದಷ್ಟು ಹಿಂದೂ ಧರ್ಮದ ಆಚಾರ ವಿಚಾರಗಳನ್ನು ನಿಷೇಧಿಸುವುದು ಇದರ ಮೂಲ ಉದ್ದೇಶ, ಇವರ ಹಿಂದೂ ವಿರೋಧಿ ನೀತಿಗಳಿಗೆ ಸೊಪ್ಪು ಹಾಕದಿದ್ದಾಗ ಹಿಂದೂ ವಿರೋಧಿ ನೀತಿಗಳನ್ನು ಕಾನೂನು ಅಡಿಯಲ್ಲಿ ತಂದು ನಮ್ಮ ಆಚಾರ ವಿಚಾರಗಳನ್ನು ತಡೆಯುವ ವ್ಯವಸ್ಥಿತ ಪ್ರಯತ್ನ.

3. ಇನ್ನು ಚಲನಚಿತ್ರಗಳಲ್ಲಿ ರಿಯಾಲಿಟಿ ಶೋಗಳಲ್ಲಿ ನಕಲಿ ಹಿಂದೂ ಸಾಧುಗಳನ್ನು ಬಳಸಿ ಹಿಂದೂ ಧರ್ಮದ ಸಾಧು ಪರಂಪರೆಯನ್ನು ನಾಶ ಮಾಡುವುದು ಇವರ ಉದ್ದೇಶ. ಬೇಕಾದರೆ ಹಿಂದಿಯಲ್ಲಿ ನಡೆಯುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಓಂ ಸ್ವಾಮಿಯೇ ಸ್ಪಷ್ಟ ಉದಾಹರಣೆ.

4. ಹಿಂದೂ ಧರ್ಮದ ವರ್ಚಸ್ಸು ಹೆಚ್ಚಿಸುವ ಯಾವುದೇ ಕಾರ್ಯಕ್ರಮಗಳಿಗೆ ತೊಂದರೆ ಕೊಡುವುದು. ನಿಮಗೆ ನೆನಪಿರಬಹುದು ಕಳೆದ ವರ್ಷ ಶ್ರೀ ಶ್ರೀ ರವಿಶಂಕರ್ ಗುರೂಜೀ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ದೆಹಲಿಯಲ್ಲಿ ಆಯೋಜಿಸಿದಾಗ ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯಕ್ರಮ ನಡೆಯಬೇಕೆನ್ನುವಾಗ ಹಸಿರು ನ್ಯಾಯಾಧಿಕರಣ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಗೆ ನೋಟಿಸ್ ಕಳಿಸಿತು, ಪರಿಸರ ಮಾಲಿನ್ಯ ಮಾಡಿದ್ದಕ್ಕೆ 5 ಕೋಟಿ ದಂಡ ವಿಧಿಸಿತ್ತು. ಆದರೆ ಅಸಲಿಗೆ ಶ್ರೀ ಶ್ರೀ ಟೀಂ ಮಾಲಿನ್ಯ ಮಾಡುವ ಬದಲು ನದಿಯನ್ನು ಸ್ವಚ್ಚ ಮಾಡಿತ್ತು. ಅದಕ್ಕೆ ಸೂಕ್ತ ದಾಖಲೆಯನ್ನು ಒದಗಿಸಿತ್ತು. ಇಷ್ಟಾದರೂ ಹಸಿರು ನ್ಯಾಯಾಧಿಕರಣ ತನ್ನ ಪಟ್ಟು ಬಿಡಲಿಲ್ಲ. ಕೊನೆಗೂ ಹೇಗೋ ಮಾಡಿ ಗುರುಜೀ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

5. ಕಳೆದ ವರ್ಷದಿಂದ ಹೊಸದೊಂದು ವಿವಾದ ಶುರುವಾಗಿದೆ ಮಹಿಳೆಯರಿಗೆ ಪ್ರವೇಶವಿಲ್ಲದ ದೇಗುಲಗಳಿಗೆ ಪ್ರವೇಶ ಒದಗಿಸಬೇಕು ಎಂದು ಪಟ್ಟು ಹಿಡಿಯುವುದು. ಅದೇ ಭರದಲ್ಲಿ ಹಿಂದುತ್ವವನ್ನು ಟೀಕಿಸುವುದು.

ಇವೆಲ್ಲವುಗಳ ನಡುವೆ ಗಂಭೀರವಾದ ಸಮಸ್ಯೆಯೆಂದರೆ ಸೆಕ್ಯುಲರ್ ಮುಖವಾಡ ಹಾಕಿಕೊಂಡ ಜ್ಯಾತ್ಯಾತಿತ ಶಕ್ತಿಗಳು ಆದಷ್ಟು ನಮ್ಮ ಹಬ್ಬಗಳನ್ನು ಹತ್ತಿಕ್ಕಲು ಸಿದ್ಧವಾಗಿವೆ. ಅಷ್ಟಕ್ಕೂ ನಮ್ಮ ಹಬ್ಬಗಳನ್ನು ವಿರೋಧಿಸಲು ಕಾರಣಗಳೇನು, ಇದರಿಂದ ಅವರಿಗೇನು ಉಪಯೋಗವೆಂಬುದನ್ನು ಪ್ರತಿಯೊಬ್ಬ ಭಾರತೀಯನೂ ಯೋಚಿಸಬೇಕಾಗಿದೆ.

ಹಿಂದೂ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷವಾದ ಸ್ಥಾನವಿದೆ, ಜೀವನದ ಪ್ರತಿ ಕ್ಷಣವನ್ನು ಸಂಭ್ರಮಿಸಬೇಕು ಎನ್ನುವುದನ್ನು ಈ ಹಬ್ಬಗಳು ನೆನಪಿಸುತ್ತವೆ. ಹಬ್ಬಗಳು ಕೇವಲ ಆಚರಣೆಯಷ್ಟೆಯಲ್ಲ ಅವು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ, ಅಷ್ಟಕ್ಕೂ ಹಬ್ಬಗಳಿಂದ ನಮಗೆ ಸಿಗುವುದಾದರು ಏನು ಎಂಬುದನ್ನು ನೋಡೋಣ.

1. ಹಬ್ಬಗಳು ನಮ್ಮ  ಪೂರ್ವಜರ ಸಾಧನೆಗಳನ್ನು ನಮ್ಮ ಸಂಸ್ಕೃತಿಯನ್ನು ಜೀವನದ ಮೌಲ್ಯಗಳನ್ನು ನೆನಪಿಸುತ್ತವೆ.

2. ಹಬ್ಬಗಳು ನಮ್ಮ ಅಧ್ಯಾತ್ಮದ ವೈಭವವನ್ನು ಪುರಾಣಗಳನ್ನು ಯಾವುದೇ Documentation ಇಲ್ಲದೆ ಸಂರಕ್ಷಿಸುತ್ತವೆ.

3. ಜೀವನದಲ್ಲಿ ಹೊಸ ಆಶಾಕಿರಣವನ್ನು ಮೂಡಿಸುತ್ತವೆ .

4. ಇವು ಸಮುದಾಯವನ್ನು ಒಗ್ಗೂಡಿಸುವುದಲ್ಲದೆ, ನಾವೆಲ್ಲಾ ಒಂದು ಎಂಬ ಭಾವನೆ ಮೂಡಿಸುತ್ತವೆ.  ನಮ್ಮ ಧರ್ಮದ ಮೇಲಿನ ನಂಬಿಕೆಗಳನ್ನು ಗಟ್ಟಿಗೊಳಿಸುತ್ತವೆ. ಇದರಿಂದಾಗಿಯೇ ನಮ್ಮ ಸಂಸ್ಕೃತಿ 1000 ವರ್ಷಗಳಿಂದ ಎಲ್ಲ ದಾಳಿಗಳನ್ನು ಎದುರಿಸಿ ನಿಂತಿರುವುದು ಎಂದರೆ ತಪ್ಪಾಗಲಾರದು.

ಇದೆ ಕಾರಣಕ್ಕಾಗಿಯೇ ಸೆಕ್ಯುಲರ್’ಗಳು ಹಬ್ಬಗಳನ್ನು ಬೇರೆ ಬೇರೆ ನೆಪವೊಡ್ಡಿ ನಿಷೇಧಿಸಲು ಮುಂದಾಗಿದ್ದಾರೆ, ಇವರಿಗೆ ಪರಿಸರ ನೆನಪಾಗುವುದು ಗಣೇಶನ ಹಬ್ಬ, ದೀಪಾವಳಿಯಲ್ಲಿ ಮಾತ್ರ. ಪ್ರಾಣಿ ಹಿಂಸೆ ಕಾರಣ ನೀಡಿ ಅನೇಕ ಹಬ್ಬಗಳನ್ನು ಈಗಾಗಲೇ ನಿಷೆಧಿಸಿದ್ದಾರೆ ಆದರೆ ಗೋ ಹತ್ಯೆ ನಿಷೇಧದ ಬಗ್ಗೆ ಇವರುಗಳು ಮಾತನಾಡುವುದಿಲ್ಲ. ಕೃಷ್ಣ ಜನ್ಮಾಷ್ಟಮಿಯ ದಹಿ ಹಂಡಿಯನ್ನುಇವರು ಬಿಟ್ಟಿಲ್ಲ. ಒಂದೊಂದೇ ಹಿಂದೂ ಹಬ್ಬಗಳನ್ನು ಇವರು ಕಾನೂನಿಯ ಸಹಾಯ ತೆಗೆದುಕೊಂಡು ಹತ್ತಿಕ್ಕುತ್ತಿದ್ದರೆ ಹಿಂದೂ ಸಮಾಜ ಸೆಕ್ಯುಲರಿಸಂನನ್ನು ಆಚರಿಸುತ್ತಾ ತಮ್ಮ ಸಂಸ್ಕೃತಿಯನ್ನು ತಾವೇ ನಾಶ ಮಾಡುತ್ತಿದ್ದಾರೆ. ಎಲ್ಲವನ್ನು ಕಳೆದುಕೊಳ್ಳುವ ಮುನ್ನ ಹಿಂದೂಗಳು ಎಚ್ಚರವಾಗಬೇಕಾಗಿದೆ. ಇದೆ ಎಲ್ಲ ಸಮಸ್ಯೆಗಳಿಗೂ ಪರಿಹಾರ.

-ಪ್ರಹ್ಲಾದ್ ಜೋಷಿ

pralhad.kj@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!