ಅಂಕಣ

ಚಕ್ರತೀರ್ಥರ ಚಕ್ರದ ಗಾಳಿ ತೆಗೆಯಲು ಹೊರಟವರಾರು?

ಪತ್ರಿಕೆಗಳಲ್ಲಿ ಲೇಖನ ಮತ್ತು  ವಿಮರ್ಶಣೆಯ ವರದಿಗಳನ್ನು ಬರೆಯುವಂತಹ ರೋಹಿತ್ ಚಕ್ರತೀರ್ಥರನ್ನು ಕೇಸು ಹಾಕಿ ನಿಯಂತ್ರಿಸುತ್ತಿರುವವರಿಗೆ ತಮ್ಮ ಬಗ್ಗೆ ವಿಮರ್ಶಣೆ ಮಾಡದಂತೆ ನೇರವಾಗಿ ಪ್ರಾಮಾಣಿಕತೆಯಿಂದ ಜೀವಿಸೋಣವೆಂದು ಶಪಥ ಮಾಡಲು ಸಾಧ್ಯವೇ..? ಲೋಕ ಬದಲಾಗಲೆಂದು ಬಹಳಷ್ಟು ಜನ ಪತ್ರಿಕೆಯನ್ನು ಪ್ರಾರಂಬಿಸಿದವರನ್ನು ನೋಡಿರುವ ನಮಗೆ ನಾವೇ ಬದಲಾಗೋಣವೆಂದು, ಅದರೊಂದಿಗೆ ಎಲ್ಲರಿಗೂ ಸ್ಪೂರ್ತಿಯನ್ನು ಉತ್ತಮ ಸಂದೇಶವನ್ನೂ ಕೊಡುವ ಕೆಲವು ಬ್ಲಾಗ್ ಹಾಗೂ ಸಂಘಟನೆಗಳನ್ನಲ್ಲದೆ,ಪತ್ರಿಕೆಗಳು ಸಿಗುವುದು ಬಹಳ ಕಷ್ಟ.ಕೆಲವರು ಬಕೇಟು ಹಿಡಿಯಲು ಪತ್ರಿಕೆ ಮಾಡಿದವರಾದರೆ,ಕೆಲವರು ರೋಲ್ ಕಾಲ್ ಮಾಡಲು ಇನ್ನು ಕೆಲವರು ಎಡಪಂಥೀಯ ಚಿಂತನೆಗಳನ್ನು ಪಸರಿಸಲು (ಇದು ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮ ಮಿತ್ರರಿಗೆ ಅನ್ವಯಿಸುವುದಿಲ್ಲ)ಪತ್ರಿಕೆಯ ಹೆಸರಲ್ಲಿ ಹೊಸ ವೇದಿಕೆ ಮಾಡಿದವರೇ ಅಧಿಕ.

 

ಶ್ರೀಯುತ ರೋಹಿತ್ ಚಕ್ರತೀರ್ಥರವರು ಇತ್ತೀಚೆಗೆ ತಮ್ಮ ಒಂದು ಲೇಖನದ ಮೂಲಕ ರಾಜಕೀಯದಲ್ಲಿ ಈಗ ಸಕ್ರೀಯವಾಗಿರುವವರ ಬಗ್ಗೆ ಮತ್ತು ಮಕ್ಕಳ ಶೂ ಹೆಸರಿನಲ್ಲಿ ಚಪ್ಪಲಿ ನುಂಗಿದವರ ಕಥೆಯನ್ನು ಬಹಳ ವಿವರವಾಗಿ ಬರೆದಿದ್ದರು.ಇದು ಬಹುಷ: ಆಡಳಿತಾರೂಢ ಪಕ್ಷಗಳಿಗೆ ಮಾತ್ರವಲ್ಲದೆ,ಎಲ್ಲಾ ರಾಜಕೀಯ ಪಕ್ಷಗಳನ್ನು ಬಹಳವಾಗಿ ಕಾಡಿರಬಹುದು. ಕಾರಣೆವೇನೆಂದರೆ ಸಾಮಾಜಿಕ ಕಳಕಳಿಯಲ್ಲಿ ಬರೆಯುವ ಲೇಖನ ಬರಹ ವಾಸ್ತವಾಂಶಗಳಿಗೆ ಬೆಳಕು ಚೆಲ್ಲುತ್ತವೆಯೇ ಹೊರತು ರಾಜಕೀಯ ಪಕ್ಷಗಳನ್ನು ಹೆಸರಿಸಿ ಅಲ್ಲಾ.

 

ಹೀಗೆ ರೋಹಿತ್ ಚಕ್ರತೀರ್ಥರು ಹಲವು ಬರಹಗಳನ್ನು ಬರೆಯುತ್ತಾ ಕೆಲವರಿಗೆ ಬಲಪಂಥೀಯ, ಹಾಗೂ ಕೆಲವರಿಗೆ ರಾಜಕೀಯ ವ್ಯಕ್ತಿ ,ಹಾಗೂ ಇನ್ನು ಕೆಲವರಿಗೆ ಇವನನ್ನು ಬೆಳೆಯಲು ಬಿಡಬಾರದು ಎಂದು ತಮ್ಮ ತಮ್ಮ ಯೋಗ್ಯತೆಗನುಸಾರವಾಗಿ ಲೆಕ್ಕ ಹಾಕಿದವರೇ ಅಧಿಕ.ಅಗ್ನಿ ಶ್ರೀಧರ್ ಎಂಬ ರೌಡಿಶೀಟರ್ ಮನೆಗೆ ಪೋಲಿಸ್ ದಾಳಿ ನಡೆದು ಮಾರಕಾಸ್ತ್ರಗಳನ್ನು ಹಾಗೂ ಹಲವು ರೌಡಿಗಳನ್ನು ಬಂಧಿಸಿದಾಗ ಕೆಲವು ಪತ್ರಿಕೆಗಳು ವಿವರವಾಗಿ ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ಎಂದು ಬರೆದರೆ,ಕೆಲವು ತಮ್ಮ ಸಹೋಧ್ಯೋಗಿ ಅಥವಾ ನಮ್ಮಂತೆ ಇವನು ಎಂದು ತಿಳಿದೋ ಗೊತ್ತಿಲ್ಲ ಸ್ವಲ್ಪ ಸುದ್ದಿಯನ್ನು ತಿರುಚಿ ಅಗ್ನಿ ಶ್ರೀಧರ್ ಹೆಸರು ಬರದಂತೆ ನೋಡಿಕೊಂಡಿದ್ದರು.ಅವರು ಯಾವ ಕಾರಣಕ್ಕೆ ಆ ವ್ಯಕ್ತಿಯ ಹೆಸರು ಬರೆಯಲಿಲ್ಲ ಎಂಬುದಲ್ಲ ಈಗ ಪ್ರಶ್ನೆ. ಅವರು ಯಾಕಾಗಿ ಅಗ್ನಿ ಶ್ರೀಧರ್ ಹೆಸರನ್ನು ಉಲ್ಲೇಖಿಸಿಲ್ಲಾ,ಭಯವೇ,ಹೊಂದಾಣಿಕೆಯೇ,ಒಪ್ಪಂದವೇ ಎಂಬುದನ್ನು ತಮ್ಮ ವೈಯುಕ್ತಿಕ ಸಾಮಾಜಿಕ ತಾಣದ ಮುಖಪುಟದಲ್ಲಿ ಪ್ರಶ್ನಿಸಿದ್ದ ರೋಹಿತ್ ಚಕ್ರತೀರ್ಥರನ ಮೇಲೆ ಕೇಸು ಹಾಕಿದ್ದು ಯಾಕೆ ಎಂಬುದೇ ಈಗಿನ ಪ್ರಶ್ನೆ!

 

ಇದರರ್ಥವೇನು? ತಾವು ಬರೆದ ಬರಹಗಳನ್ನು ಪ್ರಕಟಿಸುತ್ತಿದ್ದವರನ್ನು ಪ್ರಶ್ನಿಸುವುದು ತಪ್ಪೇ? ಅಷ್ಟಕ್ಕೂ ತಾವು ಆ ಪತ್ರಿಯನ್ನೆಲ್ಲೂ ದೂಷಿಸಿಲ್ಲ ಬದಲಾಗಿ ಇಡೀ ಪ್ರಕರಣದ ಬಗ್ಗೆ ಬರೆದವರು ಪ್ರಕರಣದ ಕೇಂದ್ರಬಿಂದು ಇಡೀ ರೌಡಿಗ್ಯಾಂಗನ್ನು ತನ್ನ ಮನೆಯಲ್ಲಿಟ್ಟವನ ಹೆಸರು ಉಲ್ಲೇಖಿಸದಿರಲು ಕಾರಣವೇನು ಎಂದಷ್ಟೇ ಪತ್ರಿಕೆಗೆ ಪ್ರಶ್ನಿಸಿದ್ದರು.ಅದೂ ಎಲ್ಲೂ ಯಾವುದೇ ಅಸಭ್ಯ ಪದಗಳನ್ನು ಬಳಸದೇ ತಮ್ಮ ಮುಖಪುಟದಲ್ಲಿ ಹಂಚಿಕೊಂಡದ್ದಕ್ಕಾಗಿ ಅವರ ಮೇಲೆ ಮಾನಹಾನಿ,ಬೆದರಿಕೆ ಹೀಗೆಲ್ಲಾ ಕಥೆ ಕಟ್ಟಿ ಕೇಸು ಹಾಕಲು ಬೆನ್ನೆಲುಬಾಗಿ ನಿಂತವರು ಈ ಹಿಂದೆ ಇವರು ಬರೆದ ಚಪ್ಪಲಿ ತಿಂದವರೋ ಅಥವಾ ಸಕ್ರೀಯ ರಾಜಕಾರಣಿಗಳೋ ಆಗಿರಬಹುದು ಎಂದು ನಾವು ಸುಮ್ಮನಿರಬಹುದಿತ್ತು .ಆದರೆ ಸ್ವಾಮಿ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದವರ ಬಗ್ಗೆ,ಧಾರ್ಮಿಕ ವಿಚಾರಗಳನ್ನು,ದೇವರನ್ನು ಕೀಳಾಗಿ ಬರೆದವರ ಬಗ್ಗೆ ಸುಮ್ಮನಿದ್ದವರು ಕೇವಲ ಒಬ್ಬ ರೌಡಿಯ ಬಗ್ಗೆ ಪ್ರಸ್ತಾಪಿಸಿದ್ದಕ್ಕಾಗಿ ಕೇಸು ಹಾಕುತ್ತಾರೆಂದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಸಹಿಷ್ಣುತಾವಾದಿಗಳ ಕೆಲಸವೇ ಹೌದು.ಅಸಹಿಷ್ಣುತೆ ಭಾರತದಲ್ಲಿ ಇಲ್ಲವೆಂದು ವಾದಿಸುತ್ತಿದ್ದ ನಮಗೆ ಕರ್ನಾಟಕದ ಸಾಹಿತ್ಯ ಸಮ್ಮೇಳನದಲ್ಲಿ ಎಸ್.ಎಲ್.ಭೈರಪ್ಪನವರನ್ನು ಹೊರಗಿಟ್ಟಾಗ,ಸಾಹಿತ್ಯ ಸಮ್ಮೆಳನದಲ್ಲಿ ಚಪ್ಪಲಿ ಎತ್ತಿ ಸೌಜನ್ಯ ಮೆರೆದಾಗ ರೋಹಿತ್ ಚಕ್ರತೀರ್ಥರಂತಹ ಬರಹಗಾರರ ಮೇಲೆ ಪೋಲಿಸು ಕೇಸು ಹಾಕುವಾಗ ಕೆಲವು ಸಲ ಅನ್ನಿಸುವುದು ಅಸಹಿಷ್ಣುತೆಯ ಪದವನ್ನು ಯಾರು ಬಳಸಬೇಕೋ ಅವರು ಬಳಸದೇ ತಮ್ಮನ್ನು ತಾವೇ ಸಾಹಿತಿಗಳೆಂದು ಬಿಂಬಿಸುತ್ತಿರುವವರು ಉಪಯೋಗಿಸುತ್ತಿರುವುದು ಖೇಧಕರ.

-ದಯಾ ಆಕಾಶ್ ನಾರಂಪಾಡಿ

akashpatali2@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!