ನಾನು ಗಂಡಸರ ದೌರ್ಜನ್ಯದ
ವಿರುದ್ಧ ಧ್ವನಿ ಎತ್ತಿದ
ಸ್ತ್ರೀ ವಾದಿ ಲೇಖಕಿ..
ನನ್ನಪ್ಪ ನನ್ನ ಸರ್ವಸ್ವ
ಒಳಗೊಳಗೆ ನೋವು ನುಂಗಿ
ಸಂಸಾರದ ಬಂಡಿ ಎಳೆದ ಅಪ್ಪ
ಈ ಲೇಖನಿ ಹಿಡಿದಾಗ
ನೆನಪೇ ಆಗುವುದಿಲ್ಲ.
ಅವನ ತಂಗಿಯ ಮದುವೆ
ನಿದ್ದೆಗೆಟ್ಟು ದುಡಿದು
ಕೂಡಿಟ್ಟ ಹಣವ
ವರದಕ್ಷಿಣೆ ಕೊಟ್ಟು
ತಂಗಿ ಸುಖವಾಗಿರಲೆಂದ
ಆ ಅವಳಣ್ಣನೂ
ಲೇಖನಿ ಹಿಡಿದಾಗ
ನೆನಪಾಗಲೇ ಇಲ್ಲ…
ಇವರಂತಹ ಯಜಮಾನ
ಯಾರಿಗೂ ಸಿಕ್ಕಿಲ್ಲ
ಒಂದೂ ಹೂ ದೇವರಿಗೆ
ಹೆಚ್ಚು ಅರ್ಪಿಸಿರಬಹುದು
ಪುಣ್ಯ ಮಾಡಿದ್ದೇನೆ
ಎಂದ ಆ ಹೆಂಗಸಿನ ಮಾತು
ಲೇಖನಿ ಹಿಡಿದಾಗ
ನೆನಪಾಗಲೇ ಇಲ್ಲ..
“ನನ್ನಮ್ಮ ನನ್ನ
ಬೆಳಕು” ಎನ್ನುವ
ಈವರೆಗೂ ವೃದ್ದಾಶ್ರಮದ
ಬಾಗಿಲು ತಟ್ಟಿಸದ
ಆ ಕೈಕಾಲು ಬಿದ್ದೋದ
ಮುದುಕಿಯ ಮಗ
ಲೇಖನಿ ಹಿಡಿದಾಗ
ನೆನಪಾಗಲೇ ಇಲ್ಲ..
ಒಂದು ಕ್ಷಣ
ನನಗೆ ಇವು ನೆನಪಾದಾಗ
ಲೇಖನಿ ಮುಸಿ ಮುಸಿ
ನಕ್ಕಂತಾಯಿತು..
ನಾನೂ ಸುಮ್ಮನಾಗಿಬಿಟ್ಟೆ..
ವ್ಯವಸ್ಥೆಯಲಿ ಎಲ್ಲವೂ ಇದೆ..
ಅಲ್ಲಲ್ಲಿ ಚೂರು ಕೆಟ್ಟಿರಬಹುದು..
ಪದಗಳು ಹೊಂದಾಣಿಕೆಯಾಗಲೇ ಇಲ್ಲ..
Facebook ಕಾಮೆಂಟ್ಸ್