ಅಂಕಣ

ನೊಂದ ಮನಸ್ಸುಗಳಿಗೆ ನನ್ನ ಕಿವಿಮಾತು…

ಎಲ್ಲಿಂದ ಶುರು ಮಾಡೋದು ಅಂತ ಗೊತ್ತಾಗ್ತಿಲ್ಲ. ಆತ್ಮಹತ್ಯೆಯಿಂದನೇ ಶುರು ಮಾಡೋಣ… ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ದೊಡ್ಡ ಖಾಯಿಲೆ ಅಂದರೆ ಅದು “ಆತ್ಮಹತ್ಯೆ”. ಆತ್ಮಹತ್ಯೆ ಏಕೆ ಮಾಡ್ತಾರೆ??? … ಗೊತ್ತಿಲ್ಲ… ಆದರೆ ಆತ್ಮಹತ್ಯೆಯೇ ಎಲ್ಲಾದಕ್ಕೂ ಪರಿಹಾರವೇ? ಖಂಡಿತಾ ಅಲ್ಲ!!!. ಬದುಕಲು ನೂರಾರು ದಾರಿಗಳಿವೆ, ಅದನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ. “ಏನಾಗಲೀ ಮುಂದೆ ಸಾಗು ನೀ … ಬಯಸಿದ್ದೆಲ್ಲಾ ಸಿಗದು ಬಾಳಲಿ” ಎಂಬ ಹಾಡಿನ ಸಾಲಿನಂತೆ… ಆ ದೇವರು ನಮ್ಮ ಹಣೆಯಲ್ಲಿ ಎಷ್ಟು ಬರೆದಿರುತ್ತಾನೆಯೋ ಅಷ್ಟೇ ಸಿಗುತ್ತದೆ, ಹೊರತು ನಮಗೆ ಜಾಸ್ತಿ ಬೇಕೆಂದರೆ ಸಿಗವುದಿಲ್ಲ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡಬೇಕು. ಪ್ರಯತ್ನದ ಫಲವನ್ನು ನಿರೀಕ್ಷಿಸಬಾರದು. ಪ್ರಯತ್ನವೇ ಮಾಡದೆ ಇದ್ದರೆ ಹೇಗೆ??… ಮುಂದೊಂದಿನ ನಮ್ಮ ಪ್ರಯತ್ನಕ್ಕೆ ಫಲ ಸಿಗುತ್ತದೆಯೆಂಬ ನಂಬಿಕೆಯಿಂದ ಕಾಯಬೇಕು. ಕಾಯುವುದರಲ್ಲಿಯೂ ಒಂದು ಸುಖವಿದೆ!!!…

ಸಮಸ್ಯೆಗಳು ಹುಟ್ಟಿಕೊಳ್ಳುವುದೇ ನಮ್ಮ ಅತಿಯಾಸೆಯಿಂದ. ಆಸೆ ಇರಬೇಕು ಆದರೆ ದುರಾಸೆ ಒಳ್ಳೆಯದಲ್ಲ. ನಿರಾಸೆ ಕೆಲವರನ್ನು ಹಾಳು ಮಾಡಿದರೆ… ಅತಿಯಾಸೆ ಎಲ್ಲರನ್ನೂ ಹಾಳು ಮಾಡುತ್ತದೆ. “Expectation hurts a lot”!!! … ಸಮಸ್ಯೆಗಳು ಹೇಗೆ ಹುಟ್ಟಿಕೊಳ್ಳುತ್ತವೆಯೋ ಹಾಗೆಯೇ ಅದಕ್ಕೆ ಪರಿಹಾರಗಳೂ ಹುಟ್ಟಿಕೊಳ್ಳುತ್ತವೆ. ಹಾಗಾದರೆ ಆತ್ಮಹತ್ಯೆ ಯಾಕೆ ಮಾಡಬೇಕು??? ದೇವರು ಕೊಟ್ಟಿರುವ ಆಯುಷ್ಯವನ್ನು ಹಾಳು ಮಾಡುವ ಅಧಿಕಾರವನ್ನು ನಮಗೆ ಕೊಟ್ಟವರು ಯಾರು??? ಸಾಯುತ್ತಿರುವವರು ನನಗೆ ಇನ್ನೊಂದಷ್ಟು ವರ್ಷ ಬದುಕಬೇಕು ಎಂದಾಗ ಸಿಗುತ್ತದೆಯೆ? ಹೀಗೆ ಸಿಗುವಂತಿದ್ದರೆ ಜೀವಕ್ಕೆ ಬೆಲೆಯೆ ಇರುತ್ತಿರಲಿಲ್ಲ ಅಲ್ವಾ?. ನಮಗೆ ನೋವಾದಾಗ, ನಾವು ಸೋತಾಗ, ಕಷ್ಟದ ಪರಿಸ್ಥಿತಿ ಬಂದಾಗ, ಹಲವಾರು ಸಮಸ್ಯೆಗಳಿಂದ ಒದ್ದಾಡುತ್ತಿರುವಾಗ  ಅದೆಲ್ಲಾದಕ್ಕೂ ಆತ್ಮಹತ್ಯೆಯೇ ಪರಿಹಾರವಲ್ಲ… ಯಾವುದೇ ಕಷ್ಟ ಬಂದಾಗ ಧೈರ್ಯದಿಂದ ಎದುರಿಸಬೇಕು. “ಧೈರ್ಯಂ ಸರ್ವತ್ರ ಸಾಧನಂ” ಅಂತಾರಲ್ಲ ಹಾಗೆ… ಕಷ್ಟ ಬಂದಾಗ ಕುಗ್ಗುವುದು, ಸುಖ ಬಂದಾಗ ಹಿಗ್ಗುವುದು ಸರಿಯಲ್ಲ.

ನಮ್ಮಿಂದ ಅಸಾಧ್ಯವಾದುದು ಯಾವುದಾದರೂ ಇದೆಯೇ???… ಯಾವುದೂ ಇಲ್ಲ ಅಲ್ವಾ??.  “ಮನಸ್ಸಿದ್ದರೆ ಮಾರ್ಗ”ಎನ್ನುವಂತೆ ನಮ್ಮ ಎಲ್ಲಾ ಯೋಜನೆಗಳಿಗೂ ಮನಸ್ಸು ಬೇಕು, ಆದರೆ ಅದನ್ನು ಸಾಧಿಸಲು ಛಲ ಮತ್ತು ಧೈರ್ಯ ಬೇಕು. ಇವೆರಡೂ ಇದ್ದರೆ ಎಲ್ಲವೂ ಸಾಧ್ಯ… ಯಾವುದೇ ಕೆಲಸ ಮಾಡುವಾಗ,  ನಾವು ಯಾವಾಗಲೂ ಇನ್ನೊಬ್ಬರ ತಪ್ಪನ್ನು ಹುಡುಕ್ಕುತ್ತೇವೆಯೇ ಹೊರತು ನಮ್ಮ ತಪ್ಪನ್ನು ನಾವು ಹುಡುಕುವುದಿಲ್ಲ… ಅದೇ ನಾವು ಮಾಡುವ ದೊಡ್ದ ತಪ್ಪು ಎಂಬುದು ನನ್ನ ಅನಿಸಿಕೆ…

ಇನ್ನೊಂದು ವಿಷ್ಯ… ಆತ್ಮಹತ್ಯೆ ಮಾಡಬೇಕು ಎಂದುಕೊಂಡಿರುವವರಿಗೆ… ಒಂದ್ ಸೆಕೆಂಡ್ ಪ್ಲೀಸ್… ನಿಮ್ಮನ್ನು ನಂಬಿಕೊಂಡು ತುಂಬಾ ಜನ ಇದ್ದಾರಲ್ವಾ??? ಅವರಿಗೊಸ್ಕರನಾದ್ರೂ…?? ಅಟ್ ಲೀಸ್ಟ್ ನಿಮ್ಮ ಅಪ್ಪ-ಅಮ್ಮ, … ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಿಮ್ಮ ಪ್ರಾಣ ಸ್ನೇಹಿತರು/ ಸ್ನೇಹಿತೆಯರು… ನಿಮ್ಮ ಬಂಧು-ಬಳಗ…!!!. ನಿಮ್ಮ ಜೀವನವನ್ನು ಒಮ್ಮೆ ಹಿಂದಿರುಗಿ ನೋಡಿ, ನೀವು ನಡೆದು ಬಂದ ದಾರಿ, ಕೈ ಹಿಡಿದು ನಡೆಸಿದ ನಿಮ್ಮ ಆತ್ಮೀಯರು, ನಿಮ್ಮ ಸೋಲು – ಗೆಲುವಿಗೆ ಬೆನ್ನೆಲುಬಾಗಿ ನಿಂತ ಹಿತೈಷಿಗಳು, ಒಂದು ದಿನ ಕೆಲಸಕ್ಕೆ ಹೋಗದೆ ಇದ್ದರೆ ” ನಿನ್ನೆ ಏನು ಬಂದಿಲ್ಲ” ಎಂದು ಕೇಳುವ ಅದೆಷ್ಟು ದಾರಿಯಲ್ಲಿ ಸಿಕ್ಕ ಅಪರಿಚಿತ ಸ್ನೇಹಿತರು… ವಾಹ್ ಅದೆಷ್ಟೊಂದ್ ಜನ… ನಿಮ್ಮವರು ಅಂತ ಅನ್ನಿಸ್ತಿಲ್ವೇ??.. ನಿಮ್ಮನ್ನು ನಂಬಿರುವವರು ಅಥವಾ ನೀವು ನಂಬಿರುವವರು… ಇವರನ್ನೆಲ್ಲಾ ಬಿಟ್ಟು ಹೋಗೊದಕ್ಕೆ ಅದ್ ಹೇಗ್ರಿ ನಿಮಗೆ ಮನಸ್ಸು ಬರುತ್ತೆ? … ಬೇಡ, ಆತ್ಮಹತ್ಯೆ ಬೇಡ…

ಕೊನೆ ಮಾತು: ಜೀವನ ಎನ್ನುವುದು ದೊಡ್ಡ ಸಾಗರ ಇದ್ದಂತೆ. ಇಲ್ಲಿ ಈಜಿ ದಡ ಸೇರಿದವರೇ ಸಾಧಕರು. ಜೀವನ ಎನ್ನುವ ದೋಣಿಯಲ್ಲಿ ಆಗಾಗ ಏಳು – ಬೀಳು ಇದ್ದದ್ದೇ. ಬಿದ್ದಾಗ ಹೆದರದೆ ಬಂದ ಕಷ್ಟವನ್ನು ಸವಾಲಾಗಿ ಸ್ವೀಕರಿಸಿ, ಮೈಕೊಡವಿ ನಿಲ್ಲುವುದೆ ಬದುಕು. “ಬಂದದ್ದು ಬರಲಿ ಭಗವಂತನ ದಯೆ ಇರಲಿ” ಎಂದು ಕಷ್ಟಪಟ್ಟು ದುಡಿದು, ಅದರಿಂದ ಬಂದ ಫಲವನ್ನು ಹೆಮ್ಮೆಯಿಂದ ಸ್ವೀಕರಿಸಿ ಬದುಕುವುದೇ ಜೀವನ. ಬದುಕು ಬ್ಯೂಟಿಫುಲ್ ಅಲ್ವಾ? ಏನಂತೀರಿ?

 

ರಕ್ಷಿತ ಪ್ರಭು ಪಾಂಬೂರು

ಉಡುಪಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!