ಅಂಕಣ

ನೈಸರ್ಗಿಕ ಸೌಂದರ್ಯದ ತಾಣ ನಮ್ಮ ಭಾರತ

ಭಾರತವು ಹಲವು ಪ್ರವಾಸಿ ತಾಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡ ಸುಂದರ ರಾಷ್ಟ್ರ. ಇನ್‍ಕ್ರೆಡಿಬಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಮುಂದುವರಿಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದರೊಂದಿಗೆ ಇತರ ರಾಷ್ಟ್ರಗಳಿಗೂ ಕೂಡ ತನ್ನ ಸಾಮರ್ಥ್ಯವೇನೆಂದು ಸಾಬೀತುಪಡಿಸುತ್ತಿದೆ. ಜೊತೆಗೆ  ಭಾರತ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಜನವರಿ 25ನ್ನು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತಿದೆ..

ನಮ್ಮ ದೇಶವು ಪ್ರವಾಸಿಗರಿಗೆ ಉತ್ತಮ ಮನೋರಂಜನೆ ನೀಡುವುದರೊಂದಿಗೆ, ಸೌಮ್ಯ ಮತ್ತು ಪ್ರಶಾಂತ ವಾತಾವರಣವನ್ನು ಕಲ್ಪಿಸುತ್ತದೆ. ಸಾರಿಗೆ ಮತ್ತು ಸಂಪರ್ಕದ ಅಭಿವೃದ್ಧಿಯಿಂದಾಗಿ ವಿದೇಶಿಗಳಿಂದಲೂ ಕೂಡ ಪ್ರವಾಸಿಗರು ಭಾರತದ ವಿಶ್ವವಿಖ್ಯಾತ ಸ್ಥಳಗಳಿಗೆ ಭೇಟಿ ಕೊಡುತ್ತಿದ್ಧಾರೆ. ಇಲ್ಲಿನ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಏಕೈಕ ಉದ್ಯಮ ಎಂದರೇ ಅದು ಪ್ರವಾಸೋದ್ಯಮ ಮಾತ್ರ.

ಭೋರ್ಗರೆಯುವ ಜಲಧಾರೆಗಳು,, ಮೃಗಾಲಯ, ಪಾರಂಪರಿಕ ವಸ್ತು ಸಂಗ್ರಹಾಲಯ, ಐತಿಹಾಸಿಕ ತಾಣಗಳು, ದೇವಾಲಯಗಳು, ಬೆಟ್ಟಗುಡ್ಡಗಳು ಮುಂತಾದವು ನಮ್ಮ ರಾಷ್ಟ್ರದ ಪ್ರಮುಖ ಪ್ರವಾಸಿ ಸ್ಥಳಗಳಾಗಿವೆ.ಇದಲ್ಲದೆ ಸುತ್ತಮುತ್ತಲಿನ ಪರಿಸರಗಳು  ಮನ ಮುದಗೊಳಿಸುವ ರೀತಿಯಲ್ಲಿ ಕಂಗೋಳಿಸುತ್ತಾ ಪ್ರವಾಸಿಗರನ್ನು ಬೇರೋಂದು ಲೋಕಕ್ಕೆ ಕೊಂಡೋಯ್ಯುತ್ತದೆ. ಹಬ್ಬ-ಹರಿದಿನ, ಜಾತ್ರೆಗಳ ಸಂಧರ್ಭದಲ್ಲಿ ಜೊತಗೆ ವಾರಂತ್ಯದ ಸಮಯದಲ್ಲಿ ಪ್ರಮುಖ ನಗರಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ.

ಅತಿಥಿ ದೇವೋಭವ ಎಂದು ಪ್ರವಾಸಿಗರನ್ನು ಕೈಬೀಸಿ ಕರೆಯುತಿರುವ ಈ ನಮ್ಮ ದೇವತೆಗಳ ಭೂಮಿ,  ಕಲಾಸಕ್ತರ ಮೆಚ್ಚಿನ ಸ್ಥಳ. ಭಿನ್ನವಾಗಿ ಛಾಯಗ್ರಹಣ ಮಾಡುವವರಿಗೆ, ಕವಿಗಳಾಗುವವರಿಗೆ, ಸುತ್ತಮುತ್ತಲಿನ ಪ್ರತಿಯೊಂದು ಅಂಶಗಳನ್ನು ಆಸ್ವಾದಿಸುವವರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ವರ್ಷದಿಂದ ವರ್ಷಕ್ಕೆ ದೇಶದ ಪಾರಂಪರಿಕ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಐತಿಹಾಸಿಕ, ಧಾರ್ಮಿಕ ಪರಂಪರೆ, ಸಾಂಸ್ಕತಿಕ ತಾಣಗಳು ಪ್ರಸಿದ್ಧಿಯ ಪಥದತ್ತ ಸಾಗುತ್ತಿದ್ದು ವರದಿಗಳ ಪ್ರಕಾರ ಈ ಉದ್ಯಮವು 124.8 ಬಿಲಿಯನ್ ಡಾಲರ್‍ನಷ್ಟು  ಒಟ್ಟು ದೇಶಿಯ ಉತ್ಪನ್ನಕ್ಕೆ ಕೊಡುಗೆ ನೀಡುತ್ತಿದೆ. 2014 ರಿಂದ 2024ರ ನಡುವೆ ಶೇ. 6.4ರಷ್ಟು ಜಿಡಿಪಿ ಬೆಳವಣಿಗೆಯಾಗುವುದು ಎಂದು ಅಂದಾಜಿಸಲಾಗಿದ್ದು ಈ ಉದ್ಯಮವು ಆದಾಯದ ಮೂಲವೆಂದೇ ಪರಿಗಣಿತವಾಗಿರುವುದು.

ಈ ಎಲ್ಲಾ ಕಾರಣಕ್ಕಾಗಿ ಸರ್ಕಾರ ಇಂದು ಪರಿಶ್ರಮದಿಂದ ದೇಶ ಸ್ವಚ್ಚವಾಗಿರುವಂತೆ ನೋಡಿಕೊಂಡು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದ್ದು , ರೈಲ್ವೆ ಸ್ಟೇಷನ್, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯ ಸುರಕ್ಷತಾ ವಿಧಾನಗಳನ್ನು ಆಳವಡಿಸಿಕೊಂಡಿದ್ದನ್ನು ಕಾಣಬಹುದು. ಅತೀ ಹೆಚ್ಚು ಪ್ರಸಿದ್ದಿ ಪಡೆದ ಸ್ಥಳಗಳಾದ ಆಗ್ರಾದ ತಾಜ್‍ಮಹಲ್, ದೆಹಲಿಯ ಕುತುಬ್ ಮಿನಾರ್, ಸಾಂಚಿಯ ಪ್ರಾಚೀನ ಸ್ತೂಪಗಳು, ಮತ್ತು ಗೋವಾದ ಪಾರ್ಟಿ ಹಬ್‍ಗಳು ದಿನದಿಂದ ದಿನಕ್ಕೆ ಪ್ರವಾಸಿಗರನ್ನು ಸೆಳೆಯುತ್ತಲೆ ಇದೆ. ಕೇಧಾರನಾಥ ಕೂಡ ಒಂದು ಉತ್ತಮ ಧಾರ್ಮಿಕ ಪ್ರವಾಸಿ ತಾಣವಾಗಿದೆ.. ಕುಂಭ ಮೇಳದಲ್ಲಿ 75 ಮಿಲಿಯನ್ ಜನ ಸೇರುವುದರಿಂದ ಇದು ಕೂಡ ಆಕರ್ಷಣೀಯ ಕೇಂದ್ರ ಬಿಂದು.

ಪ್ರವಾಸೋದ್ಯಮ ಎಂಬುದು ಭಾರತದಲ್ಲಿ 40 ಮಿಲಿಯನ್ ಉದ್ಯೋಗವನ್ನು ಸೃಷ್ಟಿಸಿದ್ದು ಅತೀ ಹೆಚ್ಚು ಉದ್ಯೋಗವನ್ನು ನೀಡುವ ಕ್ಷೇತ್ರವೆಂದೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಿಂದ ರೆಸ್ಟೋರೆಂಟ್‍ಗಳು, ಹೋಟೆಲ್‍ಗಳು, ಆಹಾರೋತ್ಪಾದನ ಸಂಸ್ಥೆಗಳು, ವಾಹನಗಳ ಮಾಲಿಕರು, ಗೈಡ್‍ಗಳು ,ಇತರರು ಕೂಡ ಲಾಭವನ್ನು ಗಳಿಸುತ್ತಿದ್ದಾರೆ. ಜನರಿಗೆ ಅದ್ಭುತ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ಇಂದು ಅನೇಕ ಏಜೆನ್ಸಿಗಳು, ಅಂತರ್ಜಾಲಗಳು ಹುಟ್ಟಿಕೊಂಡಿವೆ. ಅಮೇರಿಕಾ ದೇಶವು ಪ್ರಮುಖವಾಗಿ ಭಾರತಕ್ಕೆ ಮಾರುಕಟ್ಟೆಯನ್ನು ನೀಡುತ್ತಿದೆ. ಏಕೆಂದರೇ ಇಲ್ಲಿಂದಲೇ ಹೆಚ್ಚು ಪ್ರವಾಸಿಗರು ಭಾರತಕ್ಕೆ ಆಗಮಿಸುವುದು..

ಪ್ರವಾಸ ಮಾಡುವವರಲ್ಲೂ ಕೂಡ ಹಲವು ಬಗೆಗಳನ್ನು ಕಾಣಬಹುದು. ಕೆಲವರು ಶಿಕ್ಷಣ ಪಡೆಯಲು ಪ್ರವಾಸ ಮಾಡಿದರೆ, ಮತ್ತೆ ಕೆಲವರು ಮನೋರಂಜನೆಗಾಗಿ, ವೈದ್ಯಕೀಯ ಸೌಲಭ್ಯ ಪಡೆಯಲು, ಕ್ರೀಡೆಗಾಗಿ ತೆರಳಿ ಕೆಲವೊಂದು ಸ್ಥಳದ ಸೌಂದರ್ಯವನ್ನು ಸವಿಯುತ್ತಾರೆ. ಭಾರತದ ಪ್ರತಿಯೊಂದು ಪ್ರವಾಸಿ ಸ್ಥಳಗಳೂ ಕೂಡ ವಿಭಿನ್ನವಾಗಿದ್ದು, ಹೆಚ್ಚಾಗಿ ಇಲ್ಲಿನ ಸಂಸ್ಕ್ರತಿಯ ಸೊಗಡನ್ನು ಪರಿಚಯಿಸುವ ನಿಟ್ಟಿನಲ್ಲಿರುವುದನ್ನು ಕಾಣಬಹುದು. ಪ್ರಸ್ತುತ ದೇಶದಲ್ಲಿ ಸ್ವಚ್ಚತೆಯೇ ಪ್ರಮುಖ ಧ್ಯೇಯವಾಗಿದೆ. ಆದರೂ ಕೂಡ ಕೆಲವೊಂದು ತಾಣಗಳಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುವುದನ್ನು ಬಿಟ್ಟರೆ ಬಹುತೇಕವಾಗಿ ಸುಂದರ ಪರಿಸರಗಳು ಪ್ರವಾಸಿಗರ ಮನವನ್ನು ಆಕರ್ಷಿಸುತ್ತದೆ. ಇದು ನಮ್ಮ ದೇಶದ ಹೆಗ್ಗಳಿಕೆ ಎನ್ನಬಹುದು.

ಮಿಥುನ್ ಮೊಗೇರ

   ಮಡಿಕೇರಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!