ಅಂಕಣ

ಬಗಲ್‍ನಲ್ಲಿರುವ ದುಷ್ಮನ್‍ನ ಸುತ್ತ…!

ಪಾಕಿಸ್ತಾನ ಅದೇನೆಂದು ಒಂದು ರಾಷ್ಟ್ರವಾಗಲು ಬಯಸಿಬಿಟ್ಟಿತೋ?! ಅದೀಗ ಕಲಿಯುಗದ ನರಕವಾಗಿಬಿಟ್ಟಿದೆ. ಕಾರಣ ಜಿಹಾದಿ ಉಗ್ರವಾದ. ಹಾಗಾಗಿಯೇ ಬಹುಪಾಲು ಪಾಕಿಗಳು  ಪಾಪಿಗಳಾಗಿ ಪರಮ ಕ್ರೂರಿಗಳಾಗಿಹರು.ಅವರಿಗೆ ಮಾನವೀಯ ಮೌಲ್ಯಗಳ ಬೆಲೆ ಕಿಂಚಿತ್ತೂ ತಿಳಿದಿಲ್ಲ, ಮತಾಂಧತೆಯಿಂದ ಹತ್ಯಾಕಾಂಡ,ರಕ್ತಪಾತ ಮಾಡುವುದೊಂದೇ ತಿಳಿದಿರುವುದು ಅವರಿಗೆ! ಈ ದುಃಸ್ಥಿತಿಗೆ ಬೇಕಿತ್ತಾ ಭಾರತದಿಂದ ವಿಭಜಿತವಾಗಿ ಪ್ರತ್ಯೇಕವಾಗುವ ದುಸ್ಸಾಹಸ…!? ಸುಮ್ಮನಿರಲಾರದೆ ಕಾಲುಕೆರೆದುಕೊಂಡು ಭಾರತವನ್ನು ಆಗಿಂದಾಗ್ಗೆ ಕೆಣಕುತ್ತಿರುವ ಪಾಕ್‍ಗೆ ಉದಾರ ನೀತಿಯನ್ನು ತೋರಬೇಕೆ? ಬ್ರಹ್ಮಾಸ್ತ್ರದಿಂದ ಸಂಪೂರ್ಣ ಸಂಹಾರ ಮಾಡಬೇಕೆ? ಎಂಬುದು ಪ್ರಶ್ನೆ.

 “ಹಿಂದುಗಳು ಮತ್ತು ಮುಸ್ಲಿಮರು ಸಮಾನ ರಾಷ್ಟ್ರೀಯತೆಯನ್ನು ರೂಪಿಸಿಕೊಳ್ಳುವುದು ಸಾಧ್ಯ ಎನ್ನುವುದು ಒಂದು ಕನಸು. ಏಕೀಕೃತ ಭಾರತ ರಾಷ್ಟ್ರದ ತಪ್ಪು ಕಲ್ಪನೆ ಮಿತಿಮೀರಿದ್ದು, ನಮ್ಮ ಬಹುತೇಕ ಕಷ್ಟಗಳಿಗೆ ಕಾರಣವಾಗಿದೆ. ಹಿಂದುಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ಧರ್ಮಗಳ ತತ್ವ ಸಿದ್ಧಾಂತಗಳಿಗೆ, ಸಾಮಾಜಿಕ ಪದ್ಧತಿಗಳಿಗೆ, ಸಂಪ್ರದಾಯಗಳಿಗೆ ಮತ್ತು ಸಾಹಿತ್ಯಕ್ಕೆ ಸೇರಿದವರು. ಅವರಿಂದ ಸಹ ವಿವಾಹ, ಸಹ ಭೋಜನ ಸಾಧ್ಯವಿಲ್ಲ. ವಾಸ್ತವವಾಗಿ ಅವರು ಎರಡು ಭಿನ್ನ ನಾಗರೀಕತೆಗಳಿಗೆ ಸೇರಿದವರು.  ಮುಖ್ಯವಾಗಿ ಪರಸ್ಪರ ಸಂಘರ್ಷ ಯುಕ್ತವಾದ ವಿಚಾರಗಳು ಮತ್ತು ಕಲ್ಪನೆಗಳನ್ನು ಆಧರಿಸಿರುವ ಭಿನ್ನ ನಾಗರೀಕತೆಗೆ ಸೇರಿದವರು. ಜೀವನ ಮತ್ತು ಜೀವನದ ಅವರ ದರ್ಶನಗಳು ವಿಭಿನ್ನ”ನೆನಪಿಇರಲಿ ಹೀಗೆಂದು ನುಡಿದಿದ್ದು ಮಹಮ್ಮದ್ ಅಲಿ ಜಿನ್ನಾ 1940ರ ಮುಸ್ಲಿಂ ಲೀಗ್‍ನ ಕಾರ್ಯಕ್ರಮವೊಂದರಲ್ಲಿ. `ಹಿಂದು ಮುಸ್ಲಿಂ ಸಾಮರಸ್ಯದ ರಾಯಭಾರಿ`  ಎಂದು ಕರೆಸಿಕೊಳ್ಳುತ್ತಿದ್ದ ಜಿನ್ನಾ ಪಾಕಿಸ್ತಾನಕ್ಕೆ ಕಾಯಿದೆ-ಐ-ಆಜûಮ್ (ರಾಷ್ಟ್ರಪಿತ) ಆಗುವ ಇಂಗಿತದ ಬಿಂಬಿತವೇ ಆಗಿತ್ತು ಈ ಮಾತುಗಳು. ಜಿನ್ನಾಗೆ ಪಾಕಿಸ್ತಾನ ರಚನೆ ಆದರೆ ಸಾಕು ಮುಸ್ಲಿಮರು ಹಾಯಾಗಿ ಬದುಕುತ್ತಾರೆಂಬ  ಪೂರ್ವಾಗ್ರಹವಿತ್ತೋ? ಅಥವಾ ಅಧಿಕಾರದ ಹಪಹಪಿ, ತಣ್ಣಗಿನ ಸ್ವಾರ್ಥವಿತ್ತೇ?ಎಂಬ ಎರಡು ಪ್ರಶ್ನೆಗಳು ನಮ್ಮಲ್ಲಿ ಮೂಡದೆ ಇರದು. ವಿಷಯದ ಆಳಕ್ಕೆ ಇಳಿದರೆ ಅಲ್ಲಿ ಜಿನ್ನಾರವರ ಸ್ವ ಹಿತಾಸಕ್ತಿಯ ಕರಿ ನೆರಳು ಕಾಣುತ್ತದೆ ನರಕವಾಗಿರುವ ಪಾಕಿಸ್ತಾನದ ಭೂಪಟದ ಮೇಲೆ!

ಭಾರತದ ವಿಭಜನೆಯಾದ ಸಂದರ್ಭದಲ್ಲಿ ಅರಾಜಕತೆ ಮತಾಂಧತೆಗೆ ರಕ್ತದ ಕೋಡಿಯೇ ಹರಿದಿತ್ತು. ಈ ಕುರಿತು ಕುಷವಂತ್ ಸಿಂಗ್ ತನ್ನ Train to Pakistan ಎಂಬ ಪುಸ್ತಕದಲ್ಲಿ “The summer of 1947 was not like other Indian summers.Even the weather had a different feel in that year It was hotter than usual,drier and duster.And the summer was longer .People began to say that God was punishing them for sins. Some of them had good reason. The summer before, communal riots, precipitated by the reports of the proposed division of the country into a Hindu India and a Muslim Pakistan had broken out in Calcutta, and within few months the death toll had mounted to several thousand. Mulims said the hindus had planned and started killing.According to Hindus, the Muslims were to blame.The fact is both sides killed, both shot & stabbed & speared & clubbed. Both tortured, both raped. Hundred of thousands of Hindus & Sikhs  who had lived for centuries on north west Frontier abandoned their homes & fled towards the protection of the predominantly Sikhs  & Hindu communities in the east. The riot had become a rout. By the summer of 1947, Formally announced, ten million people- Muslim Hindu & Sikhs were in flight. By the time the monsoon, broke war in arms, in terror or in hiding”ಎಂದು ಆಗಿನ ಆ ಆಘಾತಕಾರಿ ಪರಿಸ್ಥಿತಿಯನ್ನು ಬಿಚ್ಚಿಟ್ಟಿರುವರು. ಪ್ರತ್ಯೇಕ ರಾಷ್ಟ್ರಕ್ಕಾಗಿ ಅಸಂಖ್ಯಾತ ನರಮೇಧಗಳುದ ನಡೆ ನಂತರ ಅಂತೂ ಇಂತೂ ಶತಾಯ ಗತಾಯ ಹಠ ಹಿಡಿದು ಜನ್ನಾ ಪಾಕಿಸ್ತಾನವನ್ನು 14 ಆಗಸ್ಟ್ 1947ರಂದು ಭಾರತದಿಂದ ವಿಭಜಿಸಿ ಒಂದು ರಾಷ್ಟ್ರವಾಗಿಸಿಯೇ ಬಿಟ್ಟರು.

`ಸಾರೆ ಜಹಾಂಸೆ ಅಚ್ಚಾ ಹಿಂದುಸ್ತಾನ್  ಹಮಾರಾ ಹಮಾರಾ` ಎಂದು ಭಾರತವನ್ನು ಹಾಡಿ ಹೊಗಳಿದ್ದ ಕವಿ  ಮಹಮ್ಮದ್ ಇಕ್ಭಾಲ್ ಹೊಸ ರಾಷ್ಡ್ರಕ್ಕೆ ಪಾಕಿಸ್ತಾನ ಎಂಬ ಹೆಸರನ್ನು ಇಟ್ಟರು. ಪಾಕಿಸ್ತಾನ P -Punjab A- Afghanistan K-Kashmir S-Sindhu, TAN-Baluchistan ಎಂಬ ಪೂರ್ಣಾರ್ಥವಾಗಿತ್ತು. ಈ ಹೆಸರಿಗೆ ಮತ್ತೊಂದು ಅರ್ಥವೂ ಇತ್ತು ಅದು ಉರ್ದು ಭಾಷೆಯಲ್ಲಿ ಪಾಕಿ ಎಂದರೆ ಪವಿತ್ರ, ಸ್ತಾನ ಎಂದರೆ ಸ್ಥಳ. ಹೆಸರಿಗೇನೋ ಪವಿತ್ರ ಸ್ಥಳ ಎಂದಿತ್ತು, ನಿಜಕ್ಕೂ ಆ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆಯಾ?

ಪಾಕಿಸ್ತಾನದ ವಿಕೃತಿ ಎಷ್ಟೆಂದರೆ ಪಾಕ್ ಭಾರತದಿಂದ ವಿಭಜಿತವಾಗಬೇಕಾದರೆ ಗಾಂಧೀಜಿಯವರ ಗರ್ವಕ್ಕೆ ಸೋತು ಭಾರತ ಸರಕಾರ ಪಾಕ್‍ನ ಅಭಿವೃದ್ಧಿಗೆಂದು ನಮ್ಮ ದೇಶದ    ಖಜಾನೆಯಲ್ಲಿ ಇದ್ದ 112 ಕೋಟಿಯಲ್ಲಿ 56 ಕೋಟಿಯನ್ನು ಕೊಡಲಾಯಿತು.ಆಗಿನ ಪರಿಸ್ಥಿತಿಯಲ್ಲಿ ಪಾಕ್‍ನಲ್ಲಿ ಕಿತ್ತು ತಿನ್ನುವ ಬಡತನ, ಸಾಂಕ್ರಾಮಿಕ ರೋಗ ಹರಡುವಿಕೆ, ಆಹಾರದ ಕೊರತೆಯ ಸಮಸ್ಯೆ ಹೇಳತೀರದಷ್ಟು ಗಂಭೀರವಾಗಿತ್ತು. ಪಾಕ್‍ನ ಗತಿ ಹೀಗಿದ್ದರೂ ಆ ಹಣವನ್ನು ತನ್ನ ಶ್ರೇಯೋಭಿವೃದ್ಧಿಗೆ ಬಳಸಲಿಲ್ಲ. ಹುಚ್ಚು ಲೋಭದ ಮೋಹ, ಪಂಜಾಬ್, ಕಾಶ್ಮೀರ ಭಾಗವನ್ನು ಪಾಕ್‍ಗೆ ನೀಡಲಿಲ್ಲ ಎಂಬ ಕಾರಣಕ್ಕೆ ಆ ಹಣವನ್ನು ಸಂಪೂರ್ಣವಾಗಿ ಭಾರತದ ವಿರುದ್ಧ ಸೆಣೆಸಲೆಂದೇ ವ್ಯೇಯಿಸಲಾಯಿತು ಅದು ಸೇನಾ ಬಲವನ್ನು ಹೆಚ್ಚಿಸುವ ಮೂಲಕ. ಪಾಕ್‍ನ ಉಗ್ರರರದ್ದು ಇಂದೂ ಅಂದೂ  “ಕಾಫಿರರನ್ನು ಕೊಲ್ಲಬೇಕು, ಧರ್ಮ ಯುದ್ಧ ಮಾಡಬೇಕು, ಕಾಫಿರನನ್ನು ಶುಕ್ರವಾರದ ದಿನ ಕೊಂದರೆ ಸ್ವರ್ಗದಲ್ಲಿ 72 ಕನ್ಯೆಯರು” ಎಂದು ನಂಬುವ ಅರ್ಥವಿಲ್ಲದ ಅವಿವೇಕಿ ಜಿಹಾದಿ ಧೋರಣೆ…!

ಇತ್ತೀಚೆಗಿನ ಕಾಲಮಾನದಲ್ಲಿ

ಪಾಕ್‍ನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಿರ್ದಿಷ್ಠ ದಾಳಿ ಮಾಡಿತ್ತು ಇದಾದ ನಂತರ ಪಾಕ್‍ನ ಅಸಹಿಷ್ಣತೆ ಉಷ್ಣ ಜಾಸ್ತಿಯಾಗಿ 256 ಬಾರಿ ಇಲ್ಲಿಯವರೆಗೆ ಗಡಿ ರೇಖಾ ನಿಯಂತ್ರಣವನ್ನು ಉಲ್ಲಂಘಿಸಿದೆ. ಅದರ ಹುಂಬತನ ಎಷ್ಟು ಮಿತಿಮೀರಿದೆ ಎಂದರೆ ಇತ್ತೀಚೆಗೆ ಭಾರತೀಯ ಸೈನಿಕನೊಬ್ಬನ ದೇಹವನ್ನು ವಿರೂಪಗೊಳಿಸಿತ್ತು.ಯುದ್ಧ ನೀತಿಯನ್ನಲ್ಲಾ ಗಾಳಿಗೆ ತೂರಿ ಒಬ್ಬ ನೆರೆ ರಾಷ್ಟ್ರದ ಸೈನಿಕ ಹುತಾತ್ಮನಾದ ಮೇಲೂ ಅವನ ದೇಹವನ್ನು ಛಿದ್ರಗೊಳಿಸುವ  ವಿಕೃತಿ ಅದು ಜಿಹಾದಿಯಲ್ಲಿ ಮಾತ್ರ ಬರಲು ಸಾಧ್ಯ.

ಕೇಂದ್ರದ ಬಲಿಷ್ಠ ರಕ್ಷಣಾ ನೀತಿ

ಪಾಕ್‍ನ ಎಲ್ಲಾ ರೀತಿಯ ತಂಟೆತಕರಾರುಗಳಿಗೂ ಭಾರತದ ಸೇನೆ ಎನ್.ಡಿ.ಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಮರ್ಥವಾಗಿ ಪ್ರತೀಕಾರ ತೋರುತ್ತಿದೆ. ಇದು  ಬಹಳ ಸೂಕ್ತ ಏಕೆಂದರೆ ನಿಮ್ಮ ಮೇಲೆ ಗುಂಡಿನ ಮಳೆಯನ್ನು ಗೆರೆಯುತ್ತಿರುವಾಗ ನೀವು ಅವರತ್ತ ತಿರುಗಿ ಮಲ್ಲಿಗೆ ಹೂವು ಹಾಕುತ್ತಾ, ಶಾಂತಿ ಮಂತ್ರ ಜಪಿಸುತ್ತಾ, ಕೈಗೆ ಬಳೆ ತೊಟ್ಟು ಶ್ವೇತ ವರ್ಣದ ಪಾರಿವಾಳವನ್ನು ಆಕಾಶದತ್ತ ಹಾರಿಸುತ್ತಿರಲು ಸಾಧ್ಯವಾ? ಭಾರತೀಯ ಸೇನೆ ಪಾಕ್ ಗೆ ತಕ್ಕ ಉತ್ತರ ನೀಡುತ್ತಿರುವುದಕ್ಕೆ ಕಾರಣ ಭಾರತದ ನರೇಂದ್ರ ಮೋದಿರವರ ನೇತೃತ್ವದ ಎನ್.ಡಿ.ಎ ಸರಕಾರದ ರಕ್ಷಣಾ ನೀತಿ. ಮನೋಹರ್ ಪರಿಕ್ಕರ್‍ರವರು ರಕ್ಷಣಾ ಸಚಿವರಾದ ನಂತರ “ಭಾರತದ ಒಬ್ಬ ಯೋಧ ಹುತಾತ್ಮನಾದರೆ, ಪಾಕ್‍ನ 10 ಸೈನಿಕರ ಹತ್ಯೆ ಮಾಡಬೇಕೆಂದು” ದಿಟ್ಟತನದಿಂದ ನುಡಿದಿದ್ದರು.

ಬುದ್ಧಿ ಕಲಿಯದಿದ್ದರೆ ಬ್ರಹ್ಮಾಸ್ತ್ರವೇ ಪ್ರಯೋಗಿಸಬೇಕು

ಪಾಕ್ ನ ಇಡೀ ದೇಶದ ಜನಸಂಖ್ಯೆ ನಮ್ಮ ಸೇನೆಯ ಯೋಧರ ಸಂಖ್ಯೆ ಒಂದೇ ಎಂಬುದನ್ನು ಅರಿತು ಬದ್ಮಾಶಿ ಪಾಕ್ ತನ್ನ ಉದ್ಧಟತನವನ್ನು ಇನ್ನಾದರೂ ನಿಲ್ಲಿಸಬೇಕಿದೆ. ಪಾಕಿಗಳು ನಂಬುವ ಆ ಅಲ್ಲಾಹು ಇದ್ದರೆ ಅವರಿಗೆ ಮಾನವೀಯ ಮೌಲ್ಯದ ಬೆಲೆಯನ್ನು ಗೊತ್ತು ಮಾಡಿಕೊಳ್ಳುವಂತೆ ಮಾಡಲಿ.ಇಲ್ಲವಾದರೆ ರಣಹದ್ದುವಿನ ಪುಟ್ಟ ಮರಿಯಂತಿರುವ ಪಾಕ್‍ಗೆ ಲೋಕ ಗುರು ಆಗಲಿರುವ ಭಾರತ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಬೇಕಷ್ಟೇ….! ಆ ಬ್ರಹ್ಮಾಸ್ತ್ರವೇ ಯುದ್ಧವೊಂದೇ ಅಲ್ಲದೆ ಬೇರೇನೂ  ಅಲ್ಲ….

ರಜತ್ ರಾಜ್ ಡಿ.ಹೆಚ್

ಎಸ್.ಡಿ.ಎಂ ಕಾಲೇಜು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!