ಅಂಕಣ

ದೇಶ ಭಕ್ತಿಯನ್ನು ಮೂಡಿಸುವ ತೀರ್ಪು

ಸುಪ್ರಿಂಕೋರ್ಟ್ ಮಹತ್ವದ ತಿರ್ಮಾನ ನೀಡಿದೆ. ದೇಶದ ಎಲ್ಲಾ ಚಿತ್ರಮಂದಿರಗಳಲ್ಲೂ ಚಲನಚಿತ್ರ ಆರಂಭಕ್ಕೂ ಮುನ್ನಪರದೆಯ ಮೇಲೆ ರಾಷ್ಟ್ರಧ್ವಜ ತೋರಿಸಿ ರಾಷ್ಟ್ರಗೀತೆ ಪ್ರಸಾರ ಮಾಡುವುದು ಹಾಗೂ ಈ ಸಂಧರ್ಭದಲ್ಲಿ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸೂಚಿಸುವುದು ಕಡ್ಡಾಯ ಎಂದೂ ಆದೇಶ ನೀಡಿರುವುದು ದೇಶದ ಹಿತದೃಷ್ಠಿಯಿಂದ ಉತ್ತಮ ನಿಯಮಾವಳಿ ರೂಪಿಸಿದ್ದು ಮೆಚ್ಚುವಂತದ್ದೆ.

ರವೀಂದ್ರನಾಥ್ ಠ್ಯಾಗೂರ್‍ರು ರಾಷ್ಟ್ರಗೀತೆಯನ್ನು ರಚಿಸುವಾಗ ದೇಶದ ಸಂಪದಭ್ಯುದಯವನ್ನು ಎತ್ತಿ ಹಿಡಿದಿದ್ದರು. 52 ಸೆಕೆಂಡ್‍ಗಳ ಈ ಗೀತೆಯನ್ನು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‍ನ ಅಧಿವೇಶನದಲ್ಲಿ 27 ಡಿಸೆಂಬರ್ 1911ಕ್ಕೆ ಮೊದಲ ಬಾರಿಗೆ ಹಾಡಲಾಗಿತ್ತು. ಅಧಿಕೃತವಾಗಿ ಭಾರತೀಯ ಸಂಸತ್ತಿನಲ್ಲಿ ಇದನ್ನೊಂದು ರಾಷ್ಟ್ರೀಯ ಗೀತೆ ಎಂದು ಅಂಗೀಕರಿಸಿದ್ದು 24 ಜನವರಿ 1950ರಂದು. ಈ ರೀತಿಯಾಗಿ ಜಾರಿಗೆ ಬಂದು ಪ್ರಸ್ತುತ ದಿನದಲ್ಲಿ ಶಿಕ್ಷಣ ಸಂಸ್ಥೆ, ಪ್ರಮುಖ ದಿನಾಚರಣೆಗಳು, ಸಂಘ-ಸಂಸ್ಥೆ, ಸರ್ಕಾರಿ ಅಧಿವೇಶನ, ಸಮಾರಂಭ ಮುಂತಾದೆಡೆ ದೇಶಭಕ್ತಿಯಿಂದ ಹಾಡಲಾಗುತ್ತಿದೆ.

ಸುಪ್ರೀಂಕೋರ್ಟ್ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಪ್ರಸಾರ ಮಾಡಬೇಕೆಂದು ಆದೇಶ ಹೊರಡಿಸಿರುವುದು ಒಳ್ಳೇಯ ಬೆಳವಣಿಗೆ. ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ ಕೆಲವೊಂದು ಅಹಿತಕರವಾದ ಘಟನಾವಳಿಗಳನ್ನು ಗಮನಿಸಿದರೆ ಹಲವರಲ್ಲಿ ದೇಶಭಕ್ತಿ ಎಂಬುದು ಮರೆಯಾಗಿ ಅದರ ಬದಲು ದ್ವೇಷ, ಕ್ರೋಧ, ಮದ, ಮತ್ಸರ ಎಂಬದೇ ತುಂಬಿಕೊಂಡಿದೆ. ನೈತಿಕ ತಳಹದಿಯ ಮೇಲೆ ನಿಂತು ಆಲೋಚಿಸುವವರ ಸಂಖ್ಯೆಯೂ ಕೂಡ ಅತ್ಯಲ್ಪ ಪ್ರಮಾಣದಲ್ಲಿರುವುದು ಬೇಸರದ ಸಂಗತಿ.

ಪ್ರಮುಖವಾಗಿ ಕೆಲವೊಂದು ಶಿಕ್ಷಣ ಸಂಸ್ಥೆಗಳನ್ನು ಗಮನಿಸುವುದಾದರೆ, ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಲ್ಲಿ ರಾಷ್ಟ್ರ ಗೀತೆಯನ್ನು ಹಾಡಲಾಗುತ್ತಿದ್ದಾದೂ ಅದರಷ್ಟೇ ಪ್ರಾಮುಖ್ಯ ಪಡೆದ ನಾಡಗೀತೆಯನ್ನು ಅವರಿಗೆ ಅನೂಕೂಲವಾಗುವಂತೆ ಕೆಲವೊಂದು ಭಾಗಗಳನ್ನು ಬಿಟ್ಟು ಹಾಡುವ ಆಘೋಷಿತ ನಿಯಮವಿದೆ. ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಂದೇಮಾತರಂ ಗೀತೆ ಕಂಡುಬಂದರೆ, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇದಾವೂದು ಇಲ್ಲದೆ ರಾಷ್ಟ್ರಗೀತೆ ಎಂಬುದೇ ಮರೆಯಾಗಿದೆ. ಇಂಗ್ಲಿಷ್ ಶಿಕ್ಷಣ ಪದ್ಧತಿಯಲ್ಲಂತೂ “ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ “ ಎಂಬುದನ್ನು ಬಿಟ್ಟರೆ ಕೆಲವರಿಗೆ ದೇಶ ಭಕ್ತಿಯನ್ನು ಮೂಡಿಸುವ ಗೀತೆಗಳೇ ನೆನಪಿರುವುದಿಲ್ಲ.

ಕೆಲವೊಂದು ಕಡೆ ರಾಷ್ಟ್ರಗೀತೆಯನ್ನು ಹಾಡುವುದೂ ಕೇವಲ ತೋರಿಕೆಗಷ್ಟೇ. ಉಚ್ಚಾರಗಳೂ ಕೂಡ ಸ್ಪಷ್ಟತೆ ಇರುವುದಿಲ್ಲ. ಸ್ವಾತಂತ್ರ್ಯೋತ್ಸವ ದಿನದಂದು ಧ್ವಜವನ್ನೆ ಉಲ್ಟಾ ಮಾಡಿ ಹಾರಿಸುವವರು ರಾಷ್ಟ್ರಗೀತೆಯನ್ನು ನೆಟ್ಟಗೆ ಹಾಡುತ್ತಾರೆಯೇ ? ಇದಕ್ಕೆಲ್ಲಾ ಕಾರಣ ಇಂದಿನ ಆಧುನಿಕ ಪ್ರಪಂಚ, ತಂತ್ರಜ್ಞಾನಗಳ ಮೆರೆಯುವಿಕೆ. ಅಬ್ಬರದ ಮತ್ತು ಬಿಗುವಿನ ಜೀವನ ಕ್ರಮ. ಸಾಮಾನ್ಯವಾಗಿ ಭಕ್ತಿಭಾವ ಮೂಡಬೇಕಾದದ್ದು ಆತ್ಮದಿಂದ ನಮ್ಮೋಳಗಿನ ಅಂತರ್ಯದಿಂದ. ಬದಲಾದ ಜೀವನ ಕ್ರಮ ಎಲ್ಲವನ್ನು ನಾಶ ಮಾಡುತ್ತಿದೆ.

ಇದೆಲ್ಲಾವನ್ನು ಗಮನಿಸಿ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ಕೆಲವರಲ್ಲಾದರೂ ಜಾಗೃತಿ ಮೂಡಿಸಬಹುದು ಎಂಬ ಆಶಾಭಾವನೆ ಇದೆ. ಇನ್ನು ಚಿತ್ರಮಂದಿರಗಳಲ್ಲಿ ಜಾತಿ, ಧರ್ಮ ಪಂಗಡವಿಲ್ಲದೆ ಹ¯ವಾರು ಜನರು ಸೇರುವುದರಿಂದ ಭಾವೈಕತೆ ಮೂಡುವುದರಲ್ಲಿ ಸಂದೇಹವಿಲ್ಲ. ಗಮನಿಸಬೇಕಾದ ಸಂಗತಿಯಂದರೆ ಚಿತ್ರಮಂದಿರಕ್ಕೆ ಹಲವರು ಬರುವುದು ಮನರಂಜನೆ ಪಡೆಯಲು ಮಾತ್ರ. ಕೆಲವರು ಕುಟುಂಬದವರೊಡನೆ, ಮತ್ತೂ ಕೆಲವರು ಪ್ರೇಯಸಿಯೊಡನೆ, ಸ್ನೇಹಿತರೊಡನೆ ಬಂದಿರುತ್ತಾರೆ. ಇಲ್ಲಿ 52 ಸೆಕೆಂಡ್‍ಗಳ ಕಾಲ ನಿಲ್ಲವುದು ಹಾಗೂ ಗೌರವ ಸೂಚಿಸುವುದು ಅಷ್ಟೇನೂ ಕಷ್ಟಕರವಲ್ಲದಿದ್ದರೂ ಬಂದವರ ಮನಸ್ಥಿತಿಯನ್ನು ಅಧ್ಯಯನ ಮಾಡುವುದು ಮಾತ್ರ ಕಷ್ಟಸಾಧ್ಯ.

ಒಟ್ಟಾರೆಯಾಗಿ, ರಾಷ್ಟ್ರಗೀತೆ ಮೇಲೆ ನಮ್ಮಲ್ಲಿ ಭಕ್ತಿ ಹೆಚ್ಚಾಗಬಹುದು,  ದೇಶ ಭಕ್ತಿ ಮನೋಭಾವವನ್ನು ಧೃಡಗೊಳಿಸುವಲ್ಲಿಯೂ ಸಹಕಾರಿಯಾಗಬಹುದು, ಚಿತ್ರಮಂದಿರಗಳಲ್ಲಿ ನಾವೆಲ್ಲಾ ಒಂದೇ ಎಂಬ ಮನಸ್ಥಿತಿ ಮೂಡಿಬರಬಹುದು ಎನ್ನುವ ಆಶಾವಾದದೊಂದಿಗೆ ಕೋರ್ಟ್‍ನ ಈ ತೀರ್ಮಾನವನ್ನು ಮೆಚ್ಚತಕ್ಕದ್ದೇ.

ಮಿಥುನ್ ಮೊಗೆರಾ

ಉಜಿರೆ

www.mithumogera@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!