ಅಂಕಣ

ಡಿ ಕಂಪೆನಿಯ ಡಾನ್ ಈಗ ವೀಲ್‍ಚೇರ್ ಮೇಲೆ ದಿನ ಲೆಕ್ಕ ಹಾಕುತ್ತಿರುವನು…

ಡಿ ಕಂಪೆನಿಯಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ಕ್ರೂರಿ! ಅವನು ಮಾಡದ ಪಾಪಗಳೇ ಇಲ್ಲ ಎಂದೇ ಹೇಳಬಹುದು.ಜಗತ್ತಿನ 10 most wanted  ಡಾನ್‍ಗಳಲ್ಲಿ ಮೂರನೆಯವನೇ ಅವನು. ಅವನೀಗ ದಮ್ಮಯ್ಯಾ ದಕ್ಕಯ್ಯ ಎಂದರೂ ಬಿಡದೆ ಕಾಲ ವಿಧಿಯ ವೇಷ ಧರಿಸಿ ಒಂದಾದ ಮೇಲೊಂದು ಪೆಟ್ಟನ್ನು ನೀಡುತ್ತಿದೆ. ಶನೀಶ್ವರ ದಾವೂದ್ ಹೆಗಲೇರಿ ಬೇತಾಳದಂತೆ ಕಾಟ ನೀಡುತ್ತಲೇ ಇದೆ.ಅದಕ್ಕೆ ಅಲ್ವಾ ಕಾಲ ಚಕ್ರದಂತೆ ತಿರುಗುತ್ತದೆ ಅನ್ನೋದು…

  ಅವನೇ ಸ್ವಾಮಿ ಅಪ್ಪಿತಪ್ಪಿ ಭಾರತದಲ್ಲಿ ಹುಟ್ಟಿದ ಕಿರಾತಕ ದಾವೂದ್ ಇಬ್ರಾಹಿಂ…! ಡಿಸೆಂಬರ್ 1955ರಲ್ಲಿ ಇವನ ಜನನ ಮುಂಬಯಿನಲ್ಲಾಯಿತು.ಒಂದು ಮರಿಯಾದಸ್ಥ ಕುಟುಂಬದಲ್ಲಿ ಜನಿಸಿದ್ದ ದಾವೂದ್’ನ ಪಿತಾಮಹ  ಸಿ.ಐ.ಡಿಯಲ್ಲಿ ಒಬ್ಬ ಹೆಡ್ ಕಾನ್ಸ್’ಟೇಬಲ್ ಎಂಬುದು ನಂಬಲು ಕಷ್ಟವಾದರೂ ಸತ್ಯ. “ಪೊಲೀಸ್ ನ ಮಗ ಕಳ್ಳ ಆಗ್ತಾನೆ” ಅಂತ ಒಂದು ಮಾತಿದೆಯಲ್ಲಾ ಅಂತೆಯೇ ಅಪ್ಪ ಇಬ್ರಾಹಿಂ ಕಾಸ್ಕರ್‍ನ ಮಗ ಒಬ್ಬ ಮಹಾನ್ ಕಳ್ಳನಾದ. ಮೊದಮೊದಲು ಹಾಜಿ ಮಾಸ್ಟನ್’ನೆಂಬ ಒಬ್ಬ ದಾದಾನೊಂದಿಗೆ ಸೇರಿ ಹಲವು ಅಡ್ಡ ಕಸುಬಿ ಕೆಲಸಗಳನ್ನು ಮಾಡಿದ.ನಂತರ “ಮಂಗ ತಾನು ಕೆಡೋದಲ್ಲದೆ ವನವನ್ನು ಕೆಡಿಸುತ್ತೆ”ಎಂಬ ಗಾದೆಯಂತೆ ಹಾಗೆ ಈ ಕೆಲಸಗಳಿಗೆ ಅವನೊಬ್ಬನೇ ಇಳಿಯದೆ ಅವನ ಸಹೋದರನಾದ ಶಬೀರ್ ಇಬ್ರಾಹಿಂ ಕಾಸ್ಕರ್’ನನ್ನೂ ಜೊತೆ ಸೇರಿಸಿಕೊಂಡ. ಮುಂದೆ ಅವನು ರಕ್ತಸಿಕ್ತ ಹೆಜ್ಜೆಗುರುತುಗಳನ್ನು ಇಡುತ್ತಾ ಸೃಷ್ಟಿಸಿದ್ದು ಕರಾಳ ಚರಿತ್ರೆ…

7ರಾಷ್ಟ್ರಗಳಲ್ಲಿ ದಾವೂದ್ ಎಂಬ ಪಾತಕಿಯ ಅಕ್ರಮ ಐಶ್ವರ್ಯವಿದೆ.ದುಬೈ, ಯು.ಕೆ, ಸೆಪ್ರೆಸ್,ತುರ್ಕಿ,ಸ್ಪೇನ್, ಮೊರಾಕ್ಕೋ ಹಾಗು ಭಾರತದಲ್ಲಿ ಬೇಜಾನ್ ಆಸ್ತಿಪಾಸ್ತಿ ಮಾಡಿಟ್ಟಿರುವನು.ಮುಂಬೈನಲ್ಲಿ ಅದೆಷ್ಟೋ ಗಗನ ಚುಂಬಿ ಬೃಹತ್ ಕಟ್ಟಡಗಳು ಪರೋಕ್ಷವಾಗಿ ಇವನ ಮಾಲಿಕತ್ವದಲ್ಲೇ ಇದೆ. ಹಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇವನು ಒಟ್ಟ ಕೋಟ್ಯಾಂತರ ರೂ  ಕಪ್ಪು ಹಣವನ್ನು ಯಾರ್ಯಾರದೋ ಹೆಸರಿನಲ್ಲಿ ಜಮಾ ಮಾಡಿಟ್ಟಿರುವನು.ಈ ಮಹತ್ತರ ರಹಸ್ಯ ಮಾಹಿತಿಗಳನ್ನೆಲ್ಲ ಭಾರತದ ಹೆಮ್ಮೆಯ ಗುಪ್ತಚರ ಇಲಾಖೆಗಳಾದ ರಾ, ಜಾರಿ ನಿರ್ದೇಶನಾಲಯ,ಇಂಟಲಿಜೆನ್ಸ್ ಏಜೆನ್ಸಿ ಮೂರು ಸೇರಿ ಕಲೆಹಾಕಿದೆ. ಅವನ ಕಬಂದ ಬಾಹುಗಳನ್ನು ತುಂಡರಿಸಲು ಈಗಾಗಲೇ ದಾವೂದ್ ನೆಟ್‍ವರ್ಕ್‍ಗಳನ್ನು ಕಂಡು ಹಿಡಿಯಲಾಗಿದೆ.

ಪರಮ ಪಾತಕಿ  ದಾವೂದ್ ಭೂಗತವಾಗಿ ಬರೊಬ್ಬರಿ 30 ವರ್ಷವೇ ಆಗುತ್ತಾ ಬಂತು.ಪಾಕ್ ನೊಂದಿಗೆ ಸೇರಿ ಭಾರತದ ಆರ್ಥಿಕತೆಯನ್ನೇ ಬುಡಮೇಲು ಮಾಡಲೆಂದು ಹವಾಲಾ ಅಂದರೆ ನಕಲಿ ನೋಟ್ ದಂಧೆಗೆ ಗಾಡ್ ಫಾದರ್ ಆದ.ನಿರಂತರವಾಗಿ ಸುಪಾರಿ, ರಿಯಲ್ ಎಸ್ಟೇಟ್ ಮಾಫಿಯಾ, ಮಾದಕ ವಸ್ತುಗಳ ಅಕ್ರಮ ವಹಿವಾಟು, ಕೊನೆಗೆ ಜಿಹಾದಿ ಭಯೋದ್ಪಾದನೆಗೂ ಮಾಸ್ಟರ್ ಮೈಂಡ್ ಆದ.ನೋಡ ನೋಡುತ್ತಿದಂತೆಯೇ ಭೂಗತ ಲೋಕದಲ್ಲಿ ದಾವೂದ್ ಹೆಮ್ಮರದಂತೆ ಬೆಳೆದು ನಿಂತ. ಮಾತೃಭೂಮಿ ಭಾರತಕ್ಕೆ ಕೇಡು ಬಗೆಯುತ್ತಾ ಉಂಡ ಮನೆಗೇ ದ್ರೋಹ ಬಗೆಯುತ್ತಾ ಅನ್ಯಾಯದ ಅಧ್ಯಾಯಗಳನ್ನು ಬರೆರುತ್ತಾ ಹೋದ.ಕಪ್ಪು ಹಣದ ರಾಶಿ ರಾಶಿ ಕಂತೆಯಲ್ಲೇ ಮಂಚ ಮಾಡಿ ಸುಖದ ಸುಪ್ಪತ್ತಿಗೆತಲ್ಲಿ ಮಲಗಿದ.

ಅವನು ಭಾರತಕ್ಕೆ ಬಗೆದ ಅನ್ಯಾಯ ಎಂದಿಗೂ ಕ್ಷಮಿಸಲಾಗುವುದಿಲ್ಲ.ಅತಿರೇಕವೆನ್ನುವಷ್ಟು ಒಬ್ಬ ಪಾಪ ಮಾಡಿದಾಗ ಪಾಪದ ಕೊಡ ತುಂಬಿ, ವಿಧಿ ಕೂಪಕ್ಕೆ ಸಿಲುಕಿ ನಲುಗಿ ಹೋಗುವನು ಎಂಬುದು ದಾವೂದ್‍ನನ್ನೇ ನೋಡಿ ಅರಿಯಬಹುದಾಗಿದೆ. ಈಗ ಅವನ ಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ.ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿರವರು ದುಬೈಗೆ ತೆರಳಿ ಅಲ್ಲಿನ ರಾಜನೊಂದಿಗೆ ಗುಪ್ತ ಸಮಾಲೋಚನೆ ಮಾಡಿ ಬಂದ ಮೇಲೆ ದುಬೈನಲ್ಲಿರುವ ದಾವೂದ್ ಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಭಾರತದಲ್ಲೂ ಇರುವ ಅವನ ಬೇನಾಮಿ ಆಸ್ತಿಯ ಎಲ್ಲಾ ವಿವರಗಳನ್ನು ಕಲೆ ಹಾಕಿ ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿದೆ.ಇದಿಷ್ಟೇ ಅಲ್ಲ ಹವಾಲ ಸಾಮ್ರಾಜ್ಯದಲ್ಲಿ ದಾವೂದ್ ನ ಎಲ್ಲಾ ರೀತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಖನಾನಿಯೂ ಕೆಲ ದಿನಗಳ ಹಿಂದೆ ನಿಗೂಢವಾಗಿ ಸತ್ತು, ಯಮನ ಪಾದ ಸೇರಿರುವನು.ದಾವೂದ್ ನ ಆರೋಗ್ಯವೂ ತೀರಾ ಹದಗೆಟ್ಟು ಹೋಗಿದೆ. ಗ್ಯಾಂಗ್ರೀನ್’ನಿಂದಾಗಿ ಕೊಳೆಯುತ್ತಿದ್ದ ಅವನ ಕಾಲುಗಳನ್ನು ತುಂಡರಿಸಲಾಗಿದೆ.ಇಂದೋ ನಾಳೆಯೋ ಎಂದು ದಿನಲೆಕ್ಕ ಹಾಕುತ್ತಾ ಬದುಕುತ್ತಿರುವ ದಾವೂದ್ ಈಗಾಗಲೇ ತನ್ನ ಉತ್ತರಾಧಿಕಾರಿಯನ್ನು ಕೂಡ ಘೋಷಿಸಿರುವನು.

ತನ್ನ ಮಾತೃ ಭೂಮಿಗೆ ಒಂದಿಲ್ಲಾ ಒಂದು ರೀತಿಯಲ್ಲಿ ಕೇಡು ಬಗೆಯತ್ತದ್ದ ದಾವೂದ್ ಇಬ್ರಾಹಿಂನ ಕೊನೆ ಆಸೆ ಕೇಳಿದರೆ ನೀವು ನಗದೇ ಇರಲಾರಿರಿ…”ತನ್ನ ಮಾತೃಭೂಮಿಯಾದ ಭಾರತದಲ್ಲಿಯೇ ಅವನ ಅಂತ್ಯಕ್ರಿಯೆ ಆಗಬೇಕು.ಅಲ್ಲೇ ಅವನ ದೇಹದ ದಫನ್ ಕೂಡ ಮಾಡಬೇಕು” ಎಂಬುದು ಅವನ ಕೊನೆ ಆಸೆಯಂತೆ ಸತ್ಯಕ್ಕೂ ಎಂಥಹ ವಿಚಿತ್ರ ಕೊನೆ ಆಸೆಯಲ್ಲವಾ? ಎನ್.ಡಿ.ಎ ಕೇಂದ್ರ ಸರಕಾರ ದಾವೂದ್ ನನ್ನು ಜೈಲಿಗೆ ಅಟ್ಟಲು ಅವನ ತಲಾಷ್‍ನಲ್ಲಿದೆ.ಅತ್ತ ಪಾಕ್ ಇದನ್ನು ಅರಿತು ತನ್ನ ಭಾರತದ ವಿರುದ್ಧದ ಎಲ್ಲಾ ರೀತಿಯ ಪಾಕ್‍ನ ಕಾರ್ಯಗಳಲ್ಲಿ ಭಾಗಿಯಾಗಿದ್ದ ಹಾಗು ಪಾಕ್‍ನ ಎಲ್ಲಾ ರಹಸ್ಯಗಳನ್ನು ಅರಿತಿದ್ದ ದಾವೂನನ್ನು ಬಲಿಕಾ ಬಕ್ರವನ್ನಾಗಿಸಿ ಹತ್ಯೆ ಮಾಡಲು ಹವಣಿಸುತ್ತಿದೆ.

ಅಂತೂ “ತಲೆಗೆ ಹಾಕಿದ ನೀರು ಕಾಲಿಗೆ ಇಳಿಯಲೇ ಬೇಕು” ಎಂಬ ಗಾದೆಯಂತೆಯೇ ದಾವೂದ್ ಅಂದು ಮಾಡಿದ್ದ ಪಾಪಕ್ಕೆ ಇಂದು ಬೆಲೆ ತೆರುವಂತೆ ವಿಧಿ ವಿಕೃತವಾಗಿ ಆಟವಾಡುತ್ತಿದೆ. ಸದ್ಯ ದಾವೂದ್ ಸೌದಿ ಅರೆಬಿಯಾದಲ್ಲಿ ಅಡಗಿರುವನು ಎಂಬ ಮಾಹಿತಿ ಇದೆ.ಒಂದು ಕಾಲಕ್ಕೆ ಭೂಗತಲೋಕದ ಸಿಂಹಾಸನದ ಮೇಲೆ ಕುಳಿತು ಅಟ್ಟಹಾಸ ಬೀರುತ್ತಿದ್ದವನು ಈಗ ಬಾಲ ಮುದುರಿದ ಶ್ವಾನದಂತೆ ಅದ್ಯಾವುದೋ ಮೂಲೆಯಲ್ಲಿ ಯಾರಿಗೂ ಬೇಡದಂತೆ ಭಯದಿಂದ ಅಡಗಿಕೊಂಡು ವೀಲ್ ಚೇರ್ ಮೇಲೆ ಓಡಾಡುವಂತಹ ಪರಿಸ್ಥಿತಿ ಬಂದಿದೆ. ಅದಕ್ಕೆ “ಪಾಪಿ ಚಿರಾಯು” ಅಂತ ಹೇಳ್ತಾರೆ ಹೊರತು “ಪಾಪಿ ಚಿರಸುಖಿ” ಅಲ್ಲ…

-ರಜತ್ ರಾಜ್ ಡಿ.ಎಚ್.

 ಪ್ರಥಮ ಎಂ.ಸಿ.ಜೆ

ಎಸ್.ಡಿ.ಎಂ ಪಿ.ಜಿ ಸೆಂಟರ್

ಉಜಿರೆ, ಬೆಳ್ತಂಗಡಿ

  rajathrajdh4@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!