ಎಷ್ಟೋ ಖುಷಿಯು,ಎಷ್ಟೋ ಕನಸೂ ಕೈಕುಲುಕಿ ಶುರುವಾಗಿದೆ ನಿನ್ನೊಂದಿಗೇ…!!!
ಹನಿಯನು ಮೊಗೆದ ಹಸಿರೆಲೆಯಂತೆ,ತಾಯಿನೂ ಹುಟ್ಟುವಳು ಕೂಸೊಂದಿಗೆ…!!
ತನ್ನ ಪಿಳಿ ಕಂಗಳಲ್ಲಿ ಮಗು ನೋಡಿತು ಮೊದಲ ನೋಟ..!!
ಹೆಸರೊಂದನು ಜತೆಸೇರಿಸಿ ಕರೆಯಿತು ಲೋಕ..!!
ಎದೆಹಾಲು.,ತಾಯ್ಮಡಿಲು.,ಕೈತುತ್ತು ಪ್ರತಿ ಇರುಳು ಚುಕ್ಕಿ ಚಂದ್ರನ ಸಹಿತ…!!
ಪ್ರಕೃತಿಯ ಒತ್ತಾಳು..,ದೈನಂದಿನ ಅದೇ ಬಾಳು..,ತಾನಾಗಿತು ಚಕಿತ…!!!
ವಿಶಾಲತೆ,ಮುಗ್ಧತೆ ಎಲ್ಲವೂ ಮರೆಯಾಯ್ತು ಮಗುವೊಂದು ಬೆಳೆದಂತೇ…!!
ಮುಂದೊಂದು ಮಗುವಂತೆ ಇನ್ನೊಂದೂ ಇದರಂತೇ…!!!
ಬೆಳೆದು ಹಾಳಾಗುವುದೆ ಬದುಕು..!!!
-ರಾಹುಲ್ ಜಮದಗ್ನಿ