ಅಂಕಣ

ಬದಲಾವಣೆ ನಮ್ಮಿಂದಲೇ ಆರಂಭವಾಗಲಿ

ಭಾರತ ದೇಶವು ಹಳ್ಳಿಗಳ ನಾಡು. ದೇಶದ ಅಭಿವೃದ್ಧಿ ಆಗಬೇಕಾದರೆ ಮೊದಲು ಹಳ್ಳಿಗಳ ಅಭಿವೃದ್ಧಿಯಾಗಬೇಕು. ಹಾಗಾದರೆ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾದ್ಯವೆಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಹೌದು! ಅವರು ಹೇಳಿದ್ದು ಅಕ್ಷರ ಸಹ ನಿಜ. ಇಂದು ಗಾಂಧೀಜಿಯವರ ಆ ಕನಸು ನಿಜವಾಗಬೇಕಾದರೆ ಆ ನಿಟ್ಟಿನಲ್ಲಿ ನಾವು ಮತ್ತು ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸುವ ಅಗತ್ಯ ನಮ್ಮ ದೇಶಕ್ಕಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಶ್ರೀಮಂತವಾಗಿದೆ. ನಮ್ಮ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಬೇರೆ ದೇಶದ ಮುಂದೆ ಕೈ ಚಾಚುವ ಅನಿವಾರ್ಯ ಇಂದಿಗೂ ಬಂದಿಲ್ಲ, ಮುಂದೆಯು ಬರುವುದಿಲ್ಲ ಎನ್ನುವುದು ನನ್ನ ಭಾವನೆ. ಸ್ನೇಹಿತರೆ, ನಮ್ಮ ದೇಶದಲ್ಲಿ 124 ಕೋಟಿ ಜನಸಂಖ್ಯೆಯಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಹಾಗೂ ಸಮಸ್ಯೆಯು ಹೌದು. ನಮ್ಮ ದೇಶದ ಹಿನ್ನೆಡೆಗೆ ಹಲವಾರು ಜ್ವಲಂತ ಸಮಸ್ಯೆಗಳು ಮತ್ತು ಕಾರಣಗಳನ್ನು ಕಾಣಬಹುದು. ಅನಕ್ಷರತೆ, ಭಯೋತ್ಪಾದನೆ, ಬಡತನ, ನೀರುದ್ಯೋಗ, ಅಸ್ಪøಶ್ಯತೆ, ಭ್ರಷ್ಟಾಚಾರ, ಜನಸಂಖ್ಯಾ ಹೆಚ್ಚಳ ಇವುಗಳಷ್ಟೆ ಅಲ್ಲದೆ ಕೇಲವು ವರ್ಷಗಳಿಂದ ಜಾತೀಯತೆ, ಅಸ್ವಚ್ಛತೆ, ಹಾಗೂ ನೈರ್ಮಲ್ಯ ಸಹ ದೇಶದ ಪ್ರಗತಿಗೆ ಇಂದು ಮಾರಕ ಅಂಶಗಳಾಗಿ ಮಾರ್ಪಟ್ಟಿವೆ. ಇಂತ ವಿಷಯಗಳು ತಾಂಡವಾಡುತ್ತಿರುವುದರಿಂದ ಹೇಗೆ ತಾನೆ ಬದಲಾವಣೆ ಹಾಗೂ ಅಭಿವೃದ್ದಿ ಹೊಂದಲು ಸಾಧ್ಯ. ಹಾಗಾಗಿ ದೇಶದಲ್ಲಿ ಆಗಬೇಕಾಗಿದ್ದು ಬಹಳಷ್ಟಿದೆ. ಸುಧಾರಣಾ ಪರಿಕಲ್ಪನೆ ಎಂಬುದು ದೊಡ್ಡ ಉದ್ಯಮ ಸಾಮ್ರಾಜ್ಯಗಳು ಮತ್ತು ಸರ್ಕಾರದ ನಡುವಿನ ಮಾತುಕತೆಗಷ್ಟೇ ಸೀಮಿತವಾಗಬಾರದು. ಅದು ಕಾರ್ಯರೂಪಕ್ಕೆ ಬರಬೇಕು ಹಾಗಾದಾಗ ಮಾತ್ರ ನಿಗದಿತ ಗುರಿಯನ್ನು ತಲುಪಲು ಸಾಧ್ಯ.

ಇತರೆ ದೇಶಗಳು ಅಭಿವೃದ್ಧಿ ಪಥದಲ್ಲಿ ನಮಗಿಂತ ವೇಗವಾಗಿ ದೂರ ಸಾಗಿವೆ ಹಾಗೂ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಯೋಚಿಸುತ್ತಿವೆ. ಅದ್ದರಿಂದ ನಾವು ಅವರ ವೇಗಕ್ಕೆ ಓಡಲು ಸಿದ್ಧರಾಗಬೇಕು. ನಮ್ಮ ದೇಶ ಹಿಂದೆ ಉಳಿದಿದೆ ಎಂದು ನಾನು ಹೇಳುತ್ತಿಲ್ಲ, ನಮ್ಮಲ್ಲಿ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಇವುಗಳ ಸಮರ್ಪಕ ಬಳಕೆಯಾಗಬೇಕು. ಜೊತೆಗೆ ವೇಗದ ಮಿತಿಯಿಲ್ಲದೆ ಓಡುತ್ತಿರುವ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭಾರತವು ಸಹ ಇತರೆ ರಾಷ್ಟ್ರಗಳಿಗೆ ತಾನೇನು ಕಡಿಮೆಯಿಲ್ಲ ಎನ್ನುವುದನ್ನು ಕೇಲವು ವರ್ಷಗಳಲ್ಲಿ ತೋರಿಸುವಂತಾಗಬೇಕು. ಇತ್ತೀಚಿನ ವರ್ಷಗಳ ಬೆಳವಣಿಗೆಗಳಾದ ಯುದ್ಧ ವಿಮಾನಗಾಗಿರಬಹುದು, ಸಬ್ ಮೆರಿನ್, ಹಡಗು, ಯುದ್ದೋಪಕರಣಗಳು ಹೀಗೆ ಎಲ್ಲವನ್ನು ಭಾರತವೇ ಉತ್ಪಾದನೆ ಮಾಡುತ್ತಿದೆ. Make In India ಎನ್ನುವಂತಹ ಯೋಜನೆ ಬಂದ ಮೇಲೆ ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಸ್ವದೇಶಿ ವಸ್ತುಗಳು ನಿರ್ಮಾಣವಾಗುತ್ತಿವೆ. ಒಂದು ಕಾಲದಲ್ಲಿ ಬೇರೆ ದೇಶದಿಂದ ಹಣಕೊಟ್ಟು ಖರೀದಿ ಮಾಡುತ್ತಿದ್ದ ದೇಶ ಇಂದು ಬೇರೆ ದೇಶಗಳಿಗೆ ರಪ್ಪು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ನಿಜವಾಗಿಯು ಇದು ಖುಷಿಯ ವಿಷಯವೇ.

ಒಂದು ಕಾಲದಲ್ಲಿ ನಮ್ಮ ದೇಶವನ್ನು ವಕ್ರದೃಷ್ಟಿಯಿಂದ ನೋಡಿದವರು ಇಂದು ನಮ್ಮೊಂದಿಗೆ ಸ್ನೇಹ ಹಸ್ತವನ್ನು ಬಯಸುತ್ತಿದ್ದಾರೆ. ಗಡಿಯಾರದಲ್ಲಿ ಸಮಯ ಹೇಗೆ ಬದಲಾಗುತ್ತ ಇರುತ್ತದೆಯೋ ಹಾಗೆ ಕಾಲವೂ ಕೂಡಾ ಬದಲಾವಣೆಯನ್ನು ಹೊಂದುತ್ತದೆ. ಹಾಗಾಗಿ ಕಾಲಕ್ಕೆ  ಅನುಸಾರವಾಗಿ ನಾವು ಸಹ ಬದಲಾವಣೆಗಳನ್ನು ಬಯಸೋಣ, ಬದಲಾಗೋಣ. ಬದಲಾವಣೆ ಎಂಬುವುದು ಜಗದ ನಿಯಮ, ಹೀಗಿರುವಾಗ ನಾವು ಬದಲಾಗುವುದು ತುಂಬ ಅನಿವಾರ್ಯ. ಆದರೆ ಇತ್ತೀಚಿನ ದಿನದಲ್ಲಿ ಬದಲಾವಣೆ ಅಗುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಬಹುಶ: ಅವರ ಕಣ್ಣಿಗೆ ದಿನ ಬೆಳಗಾಗುವುದರೊಳಗೆ  ದೇಶವೇ ಬದಲಾಗಬೇಕು ಎನ್ನುವ ಭಾವನೆ ಇರಬಹುದು. ಅವರ ತಲೆಯಲ್ಲಿ ಇಂತಹ ಭಾವನೆಗಳು ಓಡುತ್ತಿರಬಹುದು ಯಾರಿಗೆ ಗೊತ್ತು. ಬದಲಾವಣೆ ಎಂದ ಮಾತ್ರಕ್ಕೆ ನಮ್ಮ ಉಡುವ ಬಟ್ಟೆ, ತಿನ್ನುವ ಆಹಾರ, ಮಾತನಾಡುವ ಶೈಲಿ, ವಾಸಿಸುವ ರೀತಿ ಇವೆಲ್ಲ ಬದಲಾವಣೆ ಹೊಂದಿದರೆ ಸಾಲದು  ಅಥವಾ ಬದಲಾವಣೆ ನಮ್ಮ ಇಡೀ ಸಂಸ್ಕೃತಿಯನ್ನೇ ಒಮ್ಮೆ ಬದಲಾಯಿಕೊಳ್ಳಬೇಕು ಅಂತ ಅಲ್ಲ ನಮ್ಮಿಂದ ಯಾವುದನ್ನು ಬದಲಾವಣೆ ಮಾಡಲು ಸಾದ್ಯವಾಗುತ್ತದೆಯೋ ಅದನ್ನು ಬದಲಾಯಿಸೋಣ.

ರಾಷ್ಟ್ರದ ಸ್ವಚ್ಚತೆಯನ್ನು ಕಾಪಾಡಲು ಎಲ್ಲರೂ ದೊಡ್ಡ ದೊಡ್ಡ ಚಳುವಳಿಗಳನ್ನೇ ಮಾಡಬೇಕೆಂಬುದೇನಿಲ್ಲ. ಬದಲಾಗಿ ತಮ್ಮ ಮನೆ ಮತ್ತು ಊರುಕೇರಿಗಳನ್ನು ಸ್ವಚ್ಚವಾಗಿರಿಸಿಕೊಂಡಾಗ ರಾಷ್ಟ್ರದ ಸ್ವಚ್ಚತೆ ತನ್ನಿಂದ ತಾನಾಗಿಯೇ ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿಗಳ ಹಲವಾರು ಮಹತ್ವದ ಯೋಜನೆಗಳಿಂದಾಗಿ ರಾಷ್ಟ್ರವು ಮಹತ್ವದ ಬದಲಾವಣೆಯನ್ನು ಸಾಧಿಸುವತ್ತ ಹೆಜ್ಜೆ ಇಡುತ್ತಿದೆ.  ಮಹಿಳೆಯರಿಗೆ, ಮಕ್ಕಳಿಗೆ, ಸೈನಿಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ.

ಇಂತಹ ಕಾರ್ಯಗಳಿಗೆ ನಾವು ಕೂಡ ಒಂದಾಗಿ ನಮ್ಮ ಬೆಂಬಲವನ್ನು ನೀಡೋಣ ಅವರಿಗೂ ಸ್ವಲ್ಪ ಸಮಯ ಅವಕಾಶವನ್ನು ನೀಡುವ. ಯಾವುದೇ ಸರ್ಕಾರ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ಅಥವಾ ಯೋಜನೆ ಜಾರಿಮಾಡಲು ಹೊರಟರೆ ಮೊದಲು ಎದುರಾಗುವುದೇ ರಾಜಕೀಯ, ಜಾತೀಯತೆ. ಇದೊಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಯಾವುದೇ ವಿಷಯ ಚರ್ಚೆಗೆ ಬರಬೇಕಾದರೆ ಅಲ್ಲಿ ರಾಜಕೀಯದ ಬಣ್ಣವನ್ನು ಹಚ್ಚಿರುತ್ತಾರೆ. ಮುಂದೆ ನಡೆಯುವುದು ಎಲ್ಲವು ರಾಜಕೀಯ ಆಟಗಳೆ. ಹೀಗಿರುವಾಗ ಜನರಾಗಲಿ ಪಕ್ಷಗಳಾಗಲಿ ದೇಶದ ಅಭಿವೃದ್ಧಿಯಾಗಲು ಬದಲಾವಣೆಯಾಗಲು ಸಾಧ್ಯವಾಗುತ್ತದೆ. ಎಲ್ಲ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬದಿಗಿಟ್ಟು ಕೆಲಸಗಳನ್ನು ಮಾಡಿದರೆ ಖಂಡಿತವಾಗಿಯು ಬದಲಾವಣೆ ಸಾಧ್ಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಇದಕ್ಕೆ ಅವಕಾಶವನ್ನೆ ಕೊಡುವುದಿಲ್ಲ ಎಲ್ಲಾ ಪಕ್ಷಗಳು ಸ್ವಾರ್ಥಿಗಳಾಗಿದ್ದಾರೆ. ಇಂದಿನ ದಿನಗಳಲ್ಲಿ ಎಲ್ಲರೂ ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುವವರೆ ಹೊರತೂ ದೇಶದ ಒಳಿತಿಗಾಗಿ ಶ್ರಮಿಸುತ್ತಿಲ್ಲ. ಹಾಗಾಗಿ ಯುವಕರು ಹೆಚ್ಚು ದೇಶದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ನಮ್ಮಿಂದಲೇ ಬದಲಾವಣೆ ಆರಂಭವಾಗಬೇಕಿದೆ ನಾವೆಲ್ಲರೂ ಕೈ ಜೋಡಿಸಿದಾಗ ಮಾತ್ರ ದೇಶಕ್ಕೆ ಶಕ್ತಿ ತುಂಬಲು ಸಹಕಾರಿಯಾಗುತ್ತದೆ ಎನ್ನುವುದು ಸೂರ್ಯ ಸತ್ಯ.

ಪವನ್ ಎಂಸಿ

ದ್ವಿತೀಯ ಎಂ.ಸಿ.ಜೆ

ಎಸ್.ಡಿ.ಎಂ. ಕಾಲೇಜು ಉಜಿರೆ

pavanmc603@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!