ಅಂಕಣ

ಟಿಪ್ಪು: ಕಾಂಗ್ರೆಸ್ಸಿನ ಅನ್ನ ಭಾಗ್ಯ??

ಭವ್ಯ ಭಾರತ ದೇಶದೋಳ್, ವೈವಿಧ್ಯಮಯ ರಾಜ್ಯ ಕರ್ನಾಟಕದೋಳ್, ಸಧ್ಯ ಮಾತೆಯರಾದ ಕಾವೇರಿ ಮತ್ತು ಮಹದಾಯಿಗಳು ಶಾಂತರಾಗಿದ್ದಾರೆ, ಆದರೆ ಪರ-ವಿರೋಧ, ವಾದ-ಪ್ರತಿವಾದಗಳಿಂದ ಭಾರಿ ಚರ್ಚೆಯಲ್ಲಿರುವ ಹಾಟ್ ಕೆಕ್ ಆಫ್  ಮೀಡಿಯಾ ಅಂದ್ರೆ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿರುವ ವಿವಾದಿತ ಟಿಪ್ಪು ಜಯಂತಿ.

            ಚಿತ್ರದುರ್ಗದಲ್ಲಿ ನಾಯಕ ಸಮುದಾಯದ ಕಗ್ಗೋಲೆಗಳು, ದೇವಟಿ ಪರಂಬುವಿನ ಶಾಂತಿ ಸಭೆಯಲ್ಲಿ 40 ಸಾವಿರ ಕೊಡಗಿನ ವೀರರ ಸಾಮೂಹಿಕ ಹತ್ಯಾಕಾಂಡ, ಕಡಲತೀರದ ನೆತ್ತರಕೆರೆಯಲ್ಲಿ ಸಾವಿರಾರು ಕ್ರಿಶ್ಚಿಯನ್ನರ ಮಾರಣಹೋಮ, ಮೇಲುಕೋಟೆಯ ಅಯ್ಯಂಗಾರ ಕುಟುಂಬಗಳ ಕಗ್ಗೋಲೆಗಳು, ಮಲಬಾರಿನಲ್ಲಿನ ಕ್ರೌರ್ಯಗಳು, ಕನ್ನಡಕ್ಕೆ ತಿರಸ್ಕಾರ-ಪರ್ಸೊಅರಾಬಿಕ್ ಭಾಷೆಗಳ ಪುರಸ್ಕಾರ ಹೀಗೆ ಎಣಿಸಲಸಾಧ್ಯವಾದಷ್ಟು ನರಕ ಸದೃಶ ಕೃತ್ಯಗಳ ಕರ್ತೃವೇ ಟಿಪ್ಪು ಸುಲ್ತಾನ. ಇಷ್ಟೆಲ್ಲಾ ಕರಾಳ ಇತಿಹಾಸವನ್ನು ಹೊಂದಿರುವ ಟಿಪ್ಪುವಿನ ನೈಜ ಇತಿಹಾಸವನ್ನು ಮರೆಮಾಚಿ, ಹೀರೊವನ್ನಾಗಿಸುವ ಕೆಲಸ ಇಂದು-ನಿನ್ನೆಯದಲ್ಲ,  ಚಿಕ್ಕ-ಪುಟ್ಟ ಪ್ರಯತ್ನಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದವು, ಇದು ಶರವೇಗ ಪಡೆದುಕೊಂಡಿದ್ದು ಇತ್ತಿಚಿನ ವರ್ಷಗಳಲ್ಲಿ.

ರಾಜಕೀಯ ಸೂಕ್ಷ್ಮತೆಗಳನ್ನೊಮ್ಮೆ ಅವಲೋಕಿಸಿದಾಗ 2014ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡು ನೆಲಕಚ್ಚುವಂತ ಕಳಪೆ ಸಾಧನೆ ಪ್ರದರ್ಶಿಸಿದ ಕಾಂಗ್ರೇಸ್ ತದನಂತರ ನಡೆದ ಬಹುತೇಕ ಚುನಾವಣೆ ಗಳಲ್ಲಿನ ಫಲಿತಾಂಶ ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾದವು, ಒಂದೊಂದೆ ರಾಜ್ಯಗಳಲ್ಲಿ ತನ್ನ ಆಡಳಿತವನ್ನು ಕಳೆದುಕೊಳ್ಳುತ್ತಾ ಹೊಯ್ತು, ರಾಹುಲ್ ಗಾಂಧಿಯಂತ ಯುವ ನಾಯಕನನ್ನು ಹೊಂದಿದ್ದರು, ಪಕ್ಷಕ್ಕೆ ಮತ್ತು ನಾಯಕರಿಗೆ ಮುಂದೆ ಜಯಿಸುತ್ತೆವೆಂಬ ವಿಶ್ವಾಸವಂತೂ ಇಲ್ಲ, ಸೋತು ಸುಣ್ಣವಾಗಿದ್ದ ಕಾಂಗ್ರೇಸ್ಸಿನಿಂದ ತಲೆ ತಲಾಂತರಗಳಿಂದ ಜತೆಗಿದ್ದ ಒಂದೊಂದೆ ಸಮುದಾಯಗಳು ದೂರ ಸರಿಯುತ್ತಿರುವದನ್ನು ಗಮನಿಸಿದ ಪಕ್ಷ, ಸುಮಾರು 17 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿ, ಜಗತ್ತಿನಲ್ಲೇ 3ನೇಯ ಅತಿ ಹೆಚ್ಚು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಭಾರತ, ಆದರೂ ಸಂವಿದಾನದ ಪ್ರಕಾರ  ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು, ಇಂತಹ 17 ಕೋಟಿಯುಳ್ಳ ಸಮುದಾಯವನ್ನು ಹೇಗಾದರೂ ಮಾಡಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ವೋಟ್ ಬ್ಯಾಂಕ್ ಮಾಡಿಕೊಳ್ಳುವ ಪ್ಲ್ಯಾನ್ ಅರ್ಥಾತ್ ಮೂಗಿಗೆ ತುಪ್ಪ ಹಚ್ಚಿ ಲಾಭ ಪಡೆಯುವ ಹುನ್ನಾರ.

            ಹೀಗೆ ಮುಸ್ಲಿಮರನ್ನು ಓಲೈಸುವ ಸಲುವಾಗಿ ಕಾಂಗ್ರೇಸ್ ಪಕ್ಷಕ್ಕೆ ಉತ್ತರದಲ್ಲಿ ಹಲವಾರು ವಿಚಾರಗಳಿವೆ, ಆದರೆ ದಕ್ಷೀಣ ಭಾರತದಲ್ಲಿ ಅಸ್ಥಿತ್ವ ಉಳಿಸಿಕೊಳ್ಳುವ ಅವಕಾಶವಿರುವದು ಕರ್ನಾಟಕದಲ್ಲಿ ಮಾತ್ರ, ಇಂತಹ ಕರ್ನಾಟಕದಲ್ಲಿ ಓಲೈಕೆಗಾಗಿ ಭೂತಗನ್ನಡಿ ಹಾಕಿ ಹುಡುಕಿದಾಗ ಸಿಕ್ಕಂತಹ ಅನ್ನಭಾಗ್ಯವೇ ಟಿಪ್ಪು ಸುಲ್ತಾನ್. ವಿರೋಧ ಪಕ್ಷಗಳು ಪ್ರಶ್ನಿಸುವಂತೆ ವಿವಾದಿತ ಟಿಪ್ಪುನೇ ಯಾಕೆ? ಬೇರೆಯವರು ಯಾಕಿಲ್ಲ? ಇಲ್ಲೂ ಲೆಕ್ಕಾಚಾರಗಳಿವೆ, ಅದ್ಯಾಕೋ ಟಿಪ್ಪುವಿನ ಹೇಸರು ಕೇಳಿದಾಗ ರೋಮಾಂಚನಗೊಳ್ಳುವ ಮುಸ್ಲಿಮರು, ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ್, ಸರ್ ಮಿರ್ಜಾ ಇಸ್ಮಾಯಿಲ್ ಅಂದ್ರೇ ಅಷ್ಟೋಂದು ರೋಮಾಂಚನಗೊಳ್ಳಲ್ಲ, ಅವನೇ ಶ್ರೇಷ್ಠನೆಂಬ ಭಾವನೆ ಬಹುತೇಕ ಮುಸ್ಲಿಮರಿಗಿದೆ, ಇದೇ ಕಾರಣದಿಂದ 214 ವರ್ಷಗಳಿಂದ ಘೋರಿಯಲ್ಲಿ ಶಾಂತವಾಗಿ ಮಲಗಿದ್ದ ಟಿಪ್ಪುವನ್ನು ಎಬ್ಬಿಸಿದ್ದು ಯು.ಪಿ.ಎ-2 ಆಡಳಿತದ ಕೊನೆಯಲ್ಲಿ ಆಗಿನ  ಕೇಂದ್ರ ಸಚಿವ ರೆಹಮಾನ್ ಖಾನ್ “ಜ್ಯಾತ್ಯಾತೀತ” ಭಾರತದಲ್ಲಿ “ಅಲ್ಪಸಂಖ್ಯಾತ ಜಾತಿ”ಯವರಿಗಾಗಿ, ಕರ್ನಾಟಕದ ಶ್ರೀರಂಗ ಪಟ್ಟಣದ ಹತ್ತಿರ ನೀರಾವರಿಯುಳ್ಳ ನೂರಾರು ಎಕರೆ ಪಲವತ್ತಾದ ಪ್ರದೇಶದಲ್ಲಿ ಟಿಪ್ಪು ವಿಶ್ವವಿಧ್ಯಾಲಯ ಸ್ಥಾಪನೆಯ ಹೆಸರಲ್ಲಿ, ಮುಂದೆ ವಿಜಯಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೋ. ಚನ್ನಬಸಪ್ಪನವರಿಂದ ಟಿಪ್ಪು ಕನ್ನಡ ವಿರೋದಿಯೂ ಅಲ್ಲ, ಹಿಂದೂ ವಿರೋಧಿಯೂ ಅಲ್ಲ, ಕೊಡವರ ಮೇಲೆ ನಡೆಸಿದ ಹಲ್ಲೆಗಳೆಲ್ಲವೂ ಸಂಶಯಾಸ್ಪದವೆಂದು ಹೇಳಿಸಿ ಟಿಪ್ಪುವನ್ನು ಹೊಗಳಿ ಹೀರೋ ಮಾಡುವ ಪ್ರಯತ್ನ ಮಾಡಿದ್ದು ಇದೇ ಕಾಂಗ್ರೇಸ್, ತದನಂತರ ಬುದ್ದಿಜೀವಿ ಗಿರೀಶ ಕಾರ್ನಾಡರಿಂದ ಸಮಾರಂಭವೊಂದರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೇಂಪೆಗೌಡರ ಬದಲು ಟಿಪ್ಪು ಹೆಸರೇ ಸೂಕ್ತ ಎಂದು ಹೇಳಿ ವಿವಾದಕ್ಕೆ ಮತ್ತೊಮ್ಮೆ ತುಪ್ಪ ಸುರಿದಿದ್ದು ಕೂಡ ಕಾಂಗ್ರೇಸ್ ಪಕ್ಷವೇ, ತದನಂತರ ಬಂದ ಸಿದ್ದರಾಮಯ್ಯನವರ ಸರ್ಕಾರ ಜೈನರು, ಕ್ರಿಸ್ಚಿಯನ್ನರು, ಬೌದ್ದರು, ಪಾರಸಿಗಳು, ಕೊಡವರು ಹೀಗೆ ಹಲವರು ಅಲ್ಪಸಂಖ್ಯಾತರಿದ್ದರೂ ಕೇವಲ ಮುಸ್ಲಿಮರಿಗೆ ಮಾತ್ರ “ಶಾದಿಭಾಗ್ಯ” ಕೊಟ್ಟು, ಜ್ಯಾತ್ಯಾತೀತತನವನ್ನು ಬಿಟ್ಟು ನಿಜವಾದ ಕೋಮುವಾದ ಪ್ರದರ್ಶಿಸಿದರು, ಅಷ್ಟೇ ಅಲ್ಲ ಮುಂದೆ ಗಣರಾಜ್ಯೋತ್ಸವ ಪ್ರದರ್ಶನದಲ್ಲಿಯೂ ಇದೇ ವಿವಾದಿತ ಟಿಪ್ಪುವಿನ ಚಿತ್ರ ಪ್ರದರ್ಶನವಾಯಿತು, ನಾಡಹಬ್ಬ ದಸರೆಗೆ ಹಣಕಾಸಿನ ಕೊರತೆ ಎನ್ನುವ ಮುಖ್ಯಮಂತ್ರಿಗಳು, ಟಿಪ್ಪು ಜಯಂತಿಗೆ ಕೋಟಿ-ಕೋಟಿ ಸುರಿಯುತ್ತಿರುವದನ್ನು ನೋಡಿದರೆ ವೋಟ್ ಬ್ಯಾಂಕ್ ರಾಜಕಾರಣ ಸ್ಪಷ್ಟವಾಗಿ ಗೋಚರವಾಗುತ್ತದೆ.

ಸಧ್ಯ ಕಾಂಗ್ರೇಸ್ ಆಡಳಿತವಿರುವ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಕರ್ನಾಟಕವೊಂದೇ ದೊಡ್ಡ ರಾಜ್ಯ, ಹೀಗಾಗಿ ಕಾಂಗ್ರೇಸ್ ಪಕ್ಷದ ಮಟ್ಟಿಗೆ ಕರ್ನಾಟಕವು ಚಿನ್ನದ ಮೊಟ್ಟೆಯಿಡುವ ಕೋಳಿಯೇ ಸರಿ, ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಸಂಪನ್ಮೂಲ ಕ್ರೋಡಿಕರಿಸುವಲ್ಲಿ ಕರ್ನಾಟಕದ್ದು ಪ್ರಮುಖ ಪಾತ್ರ, ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಹತ್ತಿರವಾಗುತ್ತಿರುವ ಉತ್ತರ ಪ್ರದೇಶದ ಚುನಾವಣೆಗಳು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ತ್ವರಿತಗತಿಯಲ್ಲಿ ಸ್ಥಾಪಿಸಲು ಹೊರಟಿರುವ 1800 ಕೋಟಿಯ “ಸ್ಟೀಲ್ ಬ್ರಿಡ್ಜ್”.

            ಹಾಗೇ ನೋಡಿದರೆ ಮುಸ್ಲಿಮರಿಗೆ ಅಲ್ಲಾಃ ಮತ್ತು ಕುರಾನ ಮಾತ್ರ ಪೂಜ್ಯನೀಯವು, ಯಾವುದೇ ವ್ಯಕ್ತಿ ಪೂಜ್ಯತೆಯನ್ನು ಇಸ್ಲಾಂ ಒಪ್ಪುವದಿಲ್ಲ, ಇದೇ ಕಾರಣಕ್ಕಾಗಿ ಬಹುತೇಕ ಮುಸ್ಲಿಮರು ಪ್ರಧಾನಮಂತ್ರಿಗಳ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವದಾದರೆ, ಟಿಪ್ಪುವಿನ ವ್ಯಕ್ತಿ ಪೂಜತೆಯನ್ನು ಹೇಗೆ ಒಪ್ಪಿಯಾರು? ಆದರೆ ದುರಂತ ಎಂದರೆ ಬಹುತೇಕರು ಇವತ್ತು ಈ ಜಯಂತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಹಿಂದೊಂದು ದಿನ ಇವರ ಪೂರ್ವಜರು(ತಾತ-ಮುತ್ತಾತಂದಿರು) ಪ್ರಾಣ ಭಯಕ್ಕಾಗಿ ಟಿಪ್ಪುವಿನ ಖಡ್ಗಕ್ಕಂಜಿ ಮತಾಂತರಗೊಂಡವರೆಂದು ಇವರಿಗೆ ತಿಳಿಯದ ವಿಚಾರವೇನಲ್ಲ. ಒಂದು ವೇಳೆ ಇವತ್ತೇನಾದರೂ ಟಿಪ್ಪು ಜೀವಂತವಾಗಿದ್ದರೆಂದು ಊಯಿಸಿಕೊಳ್ಳಿ, ಈ ಜಯಂತಿಯನ್ನು ಸ್ವತಃ ಟಿಪ್ಪು ಸಹಿತ ಒಪ್ಪಿಕೊಳ್ಳುತ್ತಿರಲಿಲ್ಲ, ಯಾಕಂದ್ರೇ ಇದನ್ನು ಬಹುತೇಕ ಕಾಫಿರರು ಆಚರಿಸುತ್ತಿದ್ದಾರೆ ಮತ್ತು ಯಾವೊಬ್ಬ ಮುಸ್ಲಿಮನಿಗೂ ಇದರಿಂದ ಒಂದು ಬಿಡಿಗಾಸು ಲಾಭವಿಲ್ಲ, ಇವತ್ತು ತಮ್ಮ ಸ್ವಹಿತಕ್ಕಾಗಿ, ಪಕ್ಷದ ಲಾಭಕ್ಕಾಗಿ, ವರ್ಚಸ್ಸಿಗಾಗಿ ತಮ್ಮ “ಅನ್ನಭಾಗ್ಯ”ಕ್ಕಾಗಿ ತನ್ನನ್ನು ಬಳಸಿಕೊಳ್ಳುವದನ್ನು ನೋಡಿ ಬಹುಶಃ ಟಿಪ್ಪು ಸಹಿತ ಅಸೂಯೆ ಪಟ್ಕೊತಿದ್ದ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾತಿನಂತೆ “ಆಡಳಿತದ ಹೆಸರಲ್ಲಿ  ನಡೆಯುವ ದುಂದುವೆಚ್ಚ ಮಹಾನ್ ರಾಷ್ಟ್ರದ್ರೋಹ”, ಹಾಗಾದ್ರೆ ಸಾರ್ವಜನಿಕರ ತೆರಿಗೆ ಹಣದಲ್ಲಿ, ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಪ್ರತಿ ತಾಲೂಕಿಗೆ 25 ಸಾವಿರ ಮತ್ತು ಪ್ರತಿ ಜಿಲ್ಲೆಗೆ 50 ಸಾವಿರದಂತೆ ವ್ಯಯಿಸುತ್ತಿದೆ ಮತ್ತು ಈ ಹಣವನ್ನು ಹೀಗೇಯೆ ಬಳಸಬೇಕು, ಅದರ ಖರ್ಚು-ವೆಚ್ಚದ ಲೆಕ್ಕಾಚಾರಗಳನ್ನು ಸಲ್ಲಿಸಬೇಕು, ಸರ್ಕಾರ ಅದನ್ನು ಪರಿಶಿಲಿಸಬೇಕು ಎಂಬ ಯಾವುದೇ ನಿಯಮ ನಿರ್ಬಂಧಗಳಿಲ್ಲ, ಹೀಗಾಗಿ ಇದು ನುಂಗಣ್ಣರ ಪಾಲಿಗೊಂದು ಸುವರ್ಣ ಅವಕಾಶ ಅಷ್ಟೇ, ಬಹುಪಾಲು ಸಾರ್ವಜನಿಕರ ಬದ್ದ ವಿರೋಧದ ನಡುವೆಯೂ ಸರ್ಕಾರವು ವಿವಾದಿತ ಟಿಪ್ಪುವಿನ ಜಯಂತಿಯನ್ನು ಆಚರಿಸುತ್ತಿರುವದು ರಾಷ್ಟ್ರದ್ರೋಹವಲ್ಲವೆ?

-ಪರಪ್ಪ ಶಾನವಾಡ

shapashri@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!