ಅಂಕಣ

`ಹರಿದು ಕೂಡುವ ಕಡಲು’ –(ನಲವತ್ತೈದು ಗಜಲ್‍ಗಳು)

ಕವಿ: ಗಣೇಶ ಹೊಸ್ಮನೆ,

ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ,

ಪ್ರಕಟಣೆಯ ವರ್ಷ: 2014, ಪುಟಗಳು: 68, ಬೆಲೆ: ರೂ.60-00

                            ಗಣೇಶ ಹೊಸ್ಮನೆಯವರ ಈ ಗಜಲ್ಸಂಕಲನ ಪ್ರಕಟವಾಗಿ ವರ್ಷವೇ ಕಳೆದಿದೆ. ತುಂಬ ತಡವಾಗಿ `ಈಹೊತ್ತಿಗೆ’ಗಾಗಿ ಇದನ್ನು ತೆರೆಯುತ್ತಿದ್ದೇನೆ. ಇದೊಂದು ಬಹಳಒಳ್ಳೆಯ ಕೃತಿ. ಗಣೇಶ ಅಪರೂಪಕ್ಕೆ ಒಳ್ಳೆಯ ಕವಿತೆ ಬರೆಯುವಪೈಕಿಯಲ್ಲ. ಇವರು ನಿಜಕ್ಕೂ (ಉತ್ತರ)ಕನ್ನಡದ ಒಳ್ಳೆಯ ಕವಿ.ಇವರ ಮೊದಲನೆಯ ಕವಿತಾ ಸಂಕಲನ `ಯಾರೂ ನೆಡದ ಮರ’ಈ ಮಾತಿಗೆ ಪ್ರಮಾಣ.  ಪ್ರಸ್ತುತ ಈ ಗಜಲ್‍ ಸಂಕಲನಕ್ಕೆ ಕವಿ-ಕತೆಗಾರ ಆನಂದ ಋಗ್ವೇದಿಯವರು ಗಜಲ್‍ ಪ್ರಕಾರದ ತಮ್ಮಎಲ್ಲಾ  ತಿಳಿವಳಿಕೆಯನ್ನು ಒಗ್ಗೂಡಿಸಿಕೊಂಡು ಮುನ್ನುಡಿಬರೆದಿದ್ದಾರೆ. ಗಣೇಶರ ಗಜಲ್‍ಗಳ ಓದಿಗೆ ಬೇಕಾದ ಸಿದ್ಧತೆ ಈಮುನ್ನುಡಿಯಿಂದ ಸಿಗುತ್ತದೆ. ಎಸ್.ನಟರಾಜ ಬೂದಾಳುಹಿನ್ನುಡಿ ಬರೆದು ಈ ಕವಿತೆಗಳ ಬಗ್ಗೆ ತಮ್ಮ ಮೆಚ್ಚಿಗೆಯಸರ್ವಸ್ವವನ್ನೂ ದಾಖಲಿಸಿದ್ದಾರೆ. ಈ ಸಂಕಲನದಲ್ಲಿ ಒಟ್ಟೂನಲವತ್ತೈದು ಗಜಲ್‍ಗಳಿವೆ. ಝೆನ್ ಕತೆಗಳಂತೆ ಇಲ್ಲಿರುವಯಾವ ಗಜಲ್‍ಗೂ ಶೀರ್ಷಿಕೆಯಿಲ್ಲ. ಇತ್ತೀಚೆಗೆ ಈ ಮಾದರಿಅಲ್ಲಲ್ಲಿ ಚಾಲ್ತಿಗೆ ಬರುತ್ತಿದೆ. (ಕವಿ ಸಂಧ್ಯಾದೇವಿ ಕೂಡ ಹೀಗೇ.)ಗಜಲ್ ಛಂದಸ್ಸಿನ ಕುರಿತು ಆರಂಭದಲ್ಲಿಯೇ ಗಣೇಶ ಕೆಲವುಸೂಕ್ತ ಮಾಹಿತಿಗಳನ್ನು ಪೂರೈಸಿದ್ದು ಇದು ಸರ್ವಥಾಉಪಯುಕ್ತವಾದ ಮಾಹಿತಿ. ಗಣೇಶ್ ಗಜಲ್ ಕಾವ್ಯಪ್ರಕಾರದಎಲ್ಲ ವ್ಯಾಕರಣವನ್ನೂ ಬಳಸಿದ್ದಾರೆಯಾದರೂ ನನಗದುಮುಖ್ಯವೆನಿಸುವುದಿಲ್ಲ. ಏಕೆಂದರೆ ಒಂದು ಕವಿತೆಯಾಗಿ ಕೂಡಇವು ಸಾರ್ಥಕ ರಚನೆಗಳು. ಹೇಗೆಂದರೆ—

                            (ಗಜಲ್ ಸಂಖ್ಯೆ-25)

                       “ಎಲ್ಲಿ ನನ್ನ ಕಂಬನಿಗಳು ಚೆಲ್ಲಿವೆಯೆಂದು ತಿಳಿದೆ

                        ಅಲ್ಲಿಯೇ ನನ್ನ ಖುಶಿಯಿದೆಯೆಂದು ತಿಳಿದೆ

                        ಎಲ್ಲಿ ನನ್ನನು ಕೊಲ್ಲಲಾಗಿದೆಯೋ ಗೆಳೆಯಾ

                        ಅಲ್ಲಿಯೇ ನನ್ನ ಜೀವವಿದೆಯೆಂದು ತಿಳಿದೆ

                        …………………………………………………………

                        ಎಲ್ಲಿ ನನ್ನ ಕತ್ತಲಿದೆಯೋ ಗೆಳೆಯಾ

                        ಅಲ್ಲಿಯೆ ನನ್ನ ಕನಸುಗಳಿವೆಯೆಂದು ತಿಳಿದೆ!”—ಇವರ ಗಜಲ್‍ಗಳ ಒಂದು ಸ್ಯಾಂಪಲ್ ಇದು.  ಭಾವಾದ್ರ್ರವಾದ ಕವಿತೆಯ ತಿಳಿವಳಿಕೆಯನ್ನೂ ಕವಿಯ ಮನೋರಂಗವನ್ನೂಒಟ್ಟಿಗೆ ಕಾಣುತ್ತೇವೆ ಇಲ್ಲಿ. ಗಣೇಶರ ಕವಿತೆಗಳ ಪ್ರಧಾನಚೆಹರೆಯೆಂದರೆ ಇವರ ಕವಿತೆಗೂ ಕವಿತೆಯ ಅರ್ಥಧ್ವನಿಗೂನಡುವೆ ಅಸಾಧಾರಣವಾದ ಹೊಂದಾಣಿಕೆ ಇರುವುದು. ಅಂದರೆಕವಿತೆಯಿಂದ ಅರ್ಥವನ್ನು ಬೇರ್ಪಡಿಸಿ ಹೇಳಲಾರೆವೆನ್ನುವುದು.ಮತ್ತು ಇವರ ಕವಿತೆ ಪದಗಳ ಆಡಂಬರವಿಲ್ಲದೆ ಅವತರಿಸುತ್ತದೆಎನ್ನುವುದು. ಒಳ್ಳೆಯ ಕವಿತೆಯನ್ನು ಗದ್ಯದಲ್ಲಿ ವಿವರಿಸಲಾಗದುಎನ್ನುವ ನಿಜಕ್ಕೆ ಇದೊಂದು ತಕ್ಷಣ ಕೊಡಬಹುದೆನ್ನಿಸುವಉದಾಹರಣೆ. ಬದುಕಿನ ತಾತ್ವಿಕತೆಯ ಹುಡುಕಾಟ ಈ ಕವಿಗೆಎಲ್ಲಿಲ್ಲದ ಸೃಜನಶೀಲತೆಯನ್ನು ತಂದುಕೊಡುತ್ತದೆಯೆನ್ನಲುಮತ್ತೊಂದು ಗಜಲ್ :

                    ‘ದಣಿದು ಬಂದವರೆಲ್ಲ ನೆರಳಿನಲಿ ಸೇರಿ ನಿಂತಿಹರು`ಹೊಸ್ಮನೆ’

                    ನಡೆದು ಪಡೆದುದೆಲ್ಲವ ಕೊಟ್ಟು ಕಳೆದುಕೊಳ್ಳದೆಮುಂದೆ ಸಾಗಲಾರೆ!” (ಗಜಲ್ ಸಂ.17)

ಕವಿತೆಯೊಂದು ಒಳ್ಳೆಯ ರಚನೆಯಾದರೆ ಓದುಗನ ಬಹಳಷ್ಟುಸಿಹಿ ಮಾತುಗಳಿಗೆ ಅದು ಕಾಯುವುದಿಲ್ಲ. ಓದುಗನಸಂಯಮದ ಮಾತೇ ಅದರ ಗುಣಗಾನಕ್ಕೆ ಸಾಕು. ಈಗಜಲ್‍ಗಳಿಗೂ  ಅನ್ವಯಿಸಿ ಹೇಳುತ್ತಿರುವ ಮಾತು ಇದು.ಆದರೆ, ಈ ಕವಿತೆಗಳನ್ನು ಒಂದೇ ಸಿಟಿಂಗ್‍ನಲ್ಲಿ ಓದುವಾಗಒಂದು ಅಪಾಯವಿದೆ ಎಂದು ಅನುಭವದಿಂದಹೇಳಬಯಸುತ್ತೇನೆ. ಅಂದರೆ, ಗಣೇಶ್‍ರ ಈ ಗಜಲ್‍ಗಳುಒಂಥರದ ಖಿನ್ನತೆಯಲ್ಲಿ ರಚನೆಗೊಂಡಂತೆ ಕಾಣುತ್ತ, ತಮಸ್ಸಿನಲ್ಲಿತಪಕ್ಕೆ ಕುಳಿತವನ ಚಿತ್ರಣ ಕೊಡುತ್ತವೆ. ಆದ್ದರಿಂದ ಗಣೇಶ್ನಿಧಾನವಾಗಿ ದಿನಕ್ಕೊಂದು ಕವಿತೆಯಂತೆ ಓದಿಸಿಕೊಳ್ಳಬೇಕಾದಕವಿ. ಆಗ ಮಾತ್ರ ಇವರ ಕವಿತೆ ಹೆಚ್ಚು ಆಸ್ವಾದ್ಯ ಎನ್ನಿಸುತ್ತವೆ.ತುಸು ಹೆಚ್ಚೇ ಎನ್ನಿಸುವಷ್ಟು ಎಡಚ ಚಿಂತನೆಯ ಗಣೇಶ್`ಆಸ್ವಾದ್ಯ’ ಪದದ ಬಳಕೆಯನ್ನು ತನ್ನ ಸಂದರ್ಭದಲ್ಲಿಒಪ್ಪದಿರಬಹುದು. ಆದರೆ, ಇವರ ಕವಿತೆಗಳುಆಸ್ವಾದ್ಯವಾಗಿರುವುದು ಸುಳ್ಳಲ್ಲ. ಮತ್ತೂ ಏನೆಂದರೆ, ಇವರಕವಿತೆಗಳಲ್ಲಿ ಪುರೋಗಾಮಿಗೆ ಇರಬೇಕಾದ ಧಾವಂತ ಇಲ್ಲ.ತಣ್ಣಗೆ ಗ್ರೀಷ್ಮ ಕಾಲದ ನೆರಳಿನಂತಿರುತ್ತವೆ. ಇವರು ಕೊಡುವಪ್ರತಿಮೆಗಳು ಒಡಲಿನೊಳಗಿನ ಅನುಭವದಿಂದ ಬಂದುನೇಯ್ದುಕೊಳ್ಳುತ್ತವೆ. ಸುತ್ತಲಿನ ಹಸಿ ಹಸಿ ದೃಶ್ಯಗಳಿಂದ ತೆಗೆದುಕೊಟ್ಟಂತಿರುವುದಿಲ್ಲ. ಇದೆಲ್ಲವನ್ನೂ ನೆನಪಿನಲ್ಲಿ ಒಡ್ಡಿಕೊಂಡು ಈಗಜಲ್‍ಗಳನ್ನು ಓದುಗರು ಪಡೆದುಕೊಳ್ಳಲಿ ಎನ್ನುವುದು ನನ್ನಆಶಯ ಮತ್ತು, ಒಂದಷ್ಟು ಒಳ್ಳೆಯ ಕವಿತೆಗಳ ಎದುರು ನನ್ನವಿನಯದ ಮಾತು  ಕೂಡಾ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!