ಅಂಕಣ

“ಸ್ಯಾಲರಿ ಕ್ರೆಡಿಟೇಡ್” ಎನ್ನುವ ಪುಟ್ಟ ಸಂದೇಶ

ಹುಟ್ಟಿದ ಊರು ಬಿಟ್ಟ ಬೆಂಗಳೂರಿನಂತಹ ನಗರಗಳನ್ನ ಸೇರುವಾಗ ಯಾವೊಬ್ಬನು ಕೂಡ ತನಗೆ ಮುಂದೆ ಒಂದು ದಿನ ಕಷ್ಟಗಳು ಬರುತ್ತವೆ ಎಂದೂ ಊಹೆ ಕೂಡ ಮಾಡಿರುವುದಿಲ್ಲ.ಆದರೆ ಈ ನಗರ ಮತ್ತು ಇಲ್ಲಿನ ಜೀವನವೇ ಬೇರೆ, ಕಷ್ಟಗಳು ಯಾವಾಗ ಬರುತ್ತವೆ ಅನ್ನೋ ಒಂದು ಸಣ್ಣ ಸುಳಿವು ಕೂಡ ಇರುವುದಿಲ್ಲ. ಊರು ಬಿಟ್ಟು ಬಂದ ಹೊಸದರಲ್ಲಿ  ಕಷ್ಟಗಳ ಅನುಭವವಾಗುವುದು ತುಂಬಾ ಕಡಿಮೆ, ಯಾಕಂದರೆ ಅದು ವಿದ್ಯಾರ್ಥಿ ಜೀವನ, ತಿಂಗಳ ಮೊದಲ ವಾರ ಸರಿಯಾಗಿ ಖಾತೆಗೆ ಹಣ ಜಮೆಯಾಗುತ್ತಾ ಹೋಗುತ್ತದೆ. BCM ಅಥವಾ ಕಮ್ಯೂನಿಟಿ ಹಾಸ್ಟಲ್‌‌ನಲ್ಲಿ ಜೀವನ ಸಾಗುತ್ತದೆ. ಹಾಗೋ ಹೀಗೋ ಕಷ್ಟ ಪಟ್ಟೋ ,ಇಷ್ಟ ಪಟ್ಟೋ ಒಂದು ಪದವಿ ಪಡೆದು ಕೆಲಸದ ಹಿಂದೆ ಬಿದ್ದಾಗ ಶುರುವಾಗುವುದೇ ನಿಜವಾದ ಸಮಸ್ಯೆಗಳು.

ತಿಂಗಳು ಮುಗಿಯುತ್ತಲೇ ಮನೆ ಬಾಡಿಗೆ ಕೊಡಬೇಕು, ಕರೆಂಟ್ ಬಿಲ್, ನೀರಿನ ಬಿಲ್, ಪೇಪರ್, ಅಂಗಡಿ, ಕೇಬಲ್, ಇಂಟರ್‌ನೆಟ್, ಮೊಬೈಲ್, ಕ್ರೆಡಿಟ್ ಕಾರ್ಡ್ ಬಿಲ್, ಹೀಗೇ ಒಂದರ ಹಿಂದೆ ಒಂದರಂತೆ ಶುರುವಾಗುತ್ತವೆ. ಆದರೆ ಇದರ ಪರಿವೇ ಇಲ್ಲದ ಹಾಗೆ ನಮ್ಮ ಸಂಬಳ ಕುಂಟುತ್ತಾ ಸಾಗುತ್ತದೆ. ಸಂಬಳ ಬಂತೋ ಇಲ್ಲವೋ ಗೊತ್ತಿಲ್ಲ ಸರಿಯಾದ ಸಮಯಕ್ಕೆ ಬಾಡಿಗೆ ಕೊಡಬೇಕು, promotion, hike ಅಯ್ತೋ ಇಲ್ವೋ ಹನ್ನೊಂದು ತಿಂಗಳಿಗೊಮ್ಮೆ ಬಾಡಿಗೆ ಜಾಸ್ತಿ ಆಗಲೇಬೇಕು. ಇದರ ಮಧ್ಯೆ ಸರ್ಕಾರದ ದ್ವಂದ್ವ ನೀತಿಗಳು,ಹೆಚ್ಚುತ್ತಿರುವ ಸೇವಾ ತೆರಿಗೆ, ದಿನೇ ದಿನೇ ಏರುತ್ತಿರುವ ಅವಶ್ಯ ಸರಕು ಸೇವೆಗಳ ಬೆಲೆಗಳು. ಒಟ್ಟನಲ್ಲಿ ನಮ್ಮಂಥ ಯುವಕರ ಪಾಡು ಹೇಳತೀರದು.

ಇವೆಲ್ಲದರ ಮಧ್ಯೆ ತಿಂಗಳಿಗೋ ಎರಡು ತಿಂಗಳಿಗೊಮ್ಮೆ ಬರುವ Salary credited ಅನ್ನೋ ಮೆಸೇಜ್‌ನಿಂದ ಸಿಗೋ ಆನಂದ ಬೇರೆ ಯಾವುದರಿಂದ ಕೂಡ ಸಿಗುವುದಿಲ್ಲ, ನಾವು ಇಷ್ಟಪಡೋ crushಗಳು ಅಪ್ಪಿ ತಪ್ಪಿ I LOVE YOU ಅಂತಾ ಸಂದೇಶ ಕಳುಹಿಸಿದಾಗ ಸಿಗುವ ಖುಷಿಗಿಂತ ಹೆಚ್ಚು ನಗುವನ್ನು ಮೇಲಿನ ಒಂದು ಪುಟ್ಟ ಮೆಸೇಜ್ ತರುತ್ತದೆ. ಯಾವುದೋ ಹಳ್ಳಿಯಿಂದ ನೂರಾರು ಕನಸುಗಳನ್ನು ಹೊತ್ತು ಜೀವನ ಮಾಡೋದಕ್ಕೆ ಬಂದ ಯುವಕರಿಗೆ  ಬರೋ ಕಷ್ಟಗಳು ಅನೇಕ. ಅದರ ಮಧ್ಯೆ ಈ ಖಾಸಗಿ ಪ್ರಪಂಚದಲ್ಲಿ ನಾವುಗಳು ನಮಗೇ ತಿಳಿಯದೇ ಜೀತದಾಳಾಗಿ ದುಡಿಯುತ್ತಿದ್ದೇವೆ. ಅವರಿಗೆ ಸುಖ ಕೊಡುವವರೆಗೆ ಮಾತ್ರ ನಮಗೆ ಬೇಡಿಕೆ, ಅಮೇಲೆ ಜೀವನ ಮೂರಾಬಟ್ಟೆ.

ಜೀವನ ಕೇವಲ ತಿಂಗಳಿಗೊಮ್ಮೆ ಬರೋ salary credited ಅನ್ನೋ ಸಂದೇಶದ ರೀತಿ ಸರಳವಾಗಿಲ್ಲ, ಕ್ಷಣಿಕ ಸುಖದ ಬಗ್ಗೆ ಬಿಟ್ಟು ಮುಂದಿನ ಎರಡು ಮೂರು ದಶಕಗಳ ಬಗ್ಗೆ ಯೋಚಿಸೋಣ, Income- Expenditure= savings ಅನ್ನೋ ಸಮೀಕರಣದ ಬದಲು Income- Savings = Expenditure ಅನ್ನೋ ಸುಂದರ ಸಮೀಕರಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಈ ರೀತಿ ಮಾಡಿದಾಗ ಜೀವನ ಖಂಡಿತ ಸುಖವಾಗಿರುತ್ತದೆ.

ವಿನಯ್ ಕೆಂಕೆರೆ

ಉಪನ್ಯಾಸಕರು

ಆಚಾರ್ಯ ಪದವಿ ಶಿಕ್ಷಣ ವಿದ್ಯಾಲಯ

ಬೆಂಗಳೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!