ಅಂಕಣ

ವ್ಯಕ್ತಿ ಮುಖ್ಯವಲ್ಲ, ಚಿಂತನೆಗಳೇ ಮುಖ್ಯ

ಅಭಿವೃದ್ಧಿ ಹೊಂದುತ್ತಿರುವಂತಹ ರಾಷ್ಟ್ರಗಳ ಪೈಕಿ ಭಾರತವು ಮುಂಚೂಣಿಯಲ್ಲಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲು ದೇಶದಲ್ಲಿ ಇನ್ನೂ ಹಲವಾರು ರೀತಿಯ ಬದಲಾವಣೆಗಳು ಆಗಲೇ ಬೇಕು. ಹೀಗಾದಲ್ಲಿ ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರುವುದು ಖಚಿತ.

ಹೌದು, ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಈಗಿನ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಗಳನ್ನೆಲ್ಲಾ ಗಮನಿಸಿದರೆ ಚಿಂತನಾಶೀಲ ವ್ಯಕ್ತಿಗಳ ಮನಸ್ಸಿನಲ್ಲಿ ಇಂತಹದ್ದೊಂದು ಸಂದೇಹ ಮೂಡುವುದು ಸಹಜ. ಏಕೆಂದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮ ಕಣ್ಣಿಗೆ ಕಾಣುವುದು ಕೇವಲ ದ್ವೇಷ, ಅಸೂಯೆ,ಅಧಿಕಾರದಾಹಿ ಮನಸ್ಸುಗಳೇ. ಇಂತಹ ಮನಸ್ಥಿತಿಗಳ ಹೊರತಾಗಿ ರಾಜಕೀಯ ವ್ಯವಸ್ಥೆಯೇ ಇಲ್ಲ ಎಂಬಂತಾಗಿ ಬಿಟ್ಟಿದೆ.

ಒಂದು ರಾಷ್ಟ್ರವು ಅಭಿವೃದ್ಧಿಯನ್ನು ಸಾಧಿಸಬೇಕು ಎಂದರೆ ರಾಷ್ಟ್ರದ ಮಾನವಿಕ ಬಂಡವಾಳದ ಚಿಂತನೆಗಳು ಅಭಿವೃದ್ಧಿ ಪರವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಚಿಂತನೆಗಳಿಗೆ ಪೂರಕವಾದಂತಹ ಕೆಲಸಗಳನ್ನು ಯಾರೂ ಮಾಡುತ್ತಿಲ್ಲ. ಅದರ ಬದಲಾಗಿ ಚಿಂತನೆಗಳನ್ನು ಮಾಡಿದಂತಹ ವ್ಯಕ್ತಿಯು ಮುಖ್ಯವಾಗುತ್ತಾನೆ. ಇಂತಹ ಪ್ರಕ್ರಿಯೆಯು ರಾಷ್ಟ್ರದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ.

ವ್ಯಕ್ತಿಯನ್ನು ಮುಖ್ಯಭೂಮಿಕೆಯಲ್ಲಿ ಕೂರಿಸುವ ಬದಲು ವ್ಯಕ್ತಿಯ ಅಭಿವೃದ್ಧಿಪರವಾದಂತಹ ಚಿಂತನೆಗಳನ್ನು ಮಾತ್ರ ನಾವು ಮುಂದಿಟ್ಟುಕೊಂಡು ಸಾಗಿದರೆ ರಾಷ್ಟ್ರವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ಮತ್ತು ಆತನ ಚಿಂತನೆಗಳೆರಡೂ ಕೂಡಾ ಮುಖ್ಯವಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಧಿಕಾರದಾಹಿ ರಾಜಕೀಯ ವ್ಯವಸ್ಥೆ. ಒಬ್ಬ ವ್ಯಕ್ತಿಗೆ ಅಧಿಕಾರವಿದ್ದರೆ ಮಾತ್ರ ಆತನ ಚಿಂತನೆಗಳಿಗೆ ಬೆಲೆ ನೀಡುವಂತಹ ಕಾಲಘಟ್ಟವಿದಾಗಿದೆ.

ಹೌದು, ಏಕೆಂದರೆ ಇಂದಿನ ಕಾಲಘಟ್ಟದಲ್ಲಿ ಅಭಿವೃದ್ಧಿಪರ ಚಿಂತನೆಗಳನ್ನು ನಡೆಸುವಂತಹ ವ್ಯಕ್ತಿ ಸಾಮಾನ್ಯನಾಗಿದ್ದರೆ ಅಥವಾ ಅಧಿಕಾರ ರಹಿತನಾಗಿದ್ದರೆ ಆತನ ಚಿಂತನೆಗಳಿಗೆ ಯಾವುದೇ ರೀತಿಯಾದಂತಹ ಮನ್ನಣೆ ದೊರಕಲಸಾಧ್ಯ. ಅದೇ ವ್ಯಕ್ತಿ ಯಾವುದೋ ಒಂದು ಅಧಿಕಾರವನ್ನು ಹೊಂದಿದ್ದಾಗ ಆತನು ತನ್ನ ಲಾಭಕ್ಕಾಗಿ ನಡೆಸುವಂತಹ ಚಿಂತನೆಗಳೂ ಕೂಡ ಸಮಾಜದಲ್ಲಿ ಬಹಳ ಬೇಗ ಒಪ್ಪಿತಗೊಂಡು ಬಿಡುತ್ತವೆ.

ಒಬ್ಬ ವ್ಯಕ್ತಿಯಲ್ಲಿರುವಂತಹ ಶ್ರೇಷ್ಟ ರಾಷ್ಟ್ರಾಭಿವೃದ್ಧಿಪರ ಚಿಂತನೆಯನ್ನು ಆತನು ಸಾರ್ವತ್ರಿಕಗೊಳಿಸಿ ಆ ಚಿಂತನೆಯನ್ನು ರಾಷ್ಟ್ರದ ಅಭಿವೃದ್ಧಿ ದಿಸೆಯಲ್ಲಿ ಬೆಳೆಸಬೇಕು ಎಂದರೆ ಆತನಿಗೆ ಅಧಿಕಾರ, ಹಣವಿರಬೇಕೆಂಬ ಬಹಳ ಕೆಳಮಟ್ಟದ ವ್ಯವಸ್ಥೆಯಡಿಯಲ್ಲಿ ಭಾರತಾಂಬೆಯು ಕೈಗೊಂಬೆಯಾಗಿ ಬಿಟ್ಟಿದ್ದಾಳೆ. ಯಾವ ಕಾಲಘಟ್ಟದಲ್ಲಿ ರಾಷ್ಟ್ರದ ಸಾಮಾನ್ಯ ಪ್ರಜೆಯಲ್ಲಿರುವಂತಹ ರಾಷ್ಟ್ರಾಭಿವೃದ್ಧಿಪರವಾದಂತಹ ಚಿಂತನೆಗಳಿಗೆ ಮನ್ನಣೆ ದೊರೆಯುವುದಿಲ್ಲವೋ ಅಂತಹ ಅನಿಷ್ಟ ಪದ್ಧತಿಯನ್ನು ರಾಷ್ಟ್ರವು ಹೊಂದಿರುತ್ತದೆಯೋ ಅಂತಹ ರಾಷ್ಟ್ರವು ಅಭಿವೃದ್ಧಿಯನ್ನು ಸಾಧಿಸಲು ಯಾವುದೇ ಕಾರಣಕ್ಕೂ ಕೂಡಾ ಸಾಧ್ಯವಿಲ್ಲ..

ಯಾವ ರಾಷ್ಟ್ರದಲ್ಲಿ ವ್ಯಕ್ತಿಗಿಂತ ಆತನಲ್ಲಿರುವ ರಾಷ್ಟ್ರದ ಅಭಿವೃದ್ಧಿಯನ್ನು ಸಾಧಿಸುವಂತಹ ಚಿಂತನೆಗಳಿಗೆ ಮನ್ನಣೆ ನೀಡಿ ಆತನ ಚಿಂತನೆಗಳ ದೃಷ್ಟಿಕೋನದಿಂದ ರಾಷ್ಟ್ರವನ್ನು ಕಟ್ಟುವಂತಹ ಪ್ರಯತ್ನಕ್ಕೆ ರಾಷ್ಟ್ರದ ಪ್ರಮುಖರು ಮುಂದಾಗುತ್ತಾರೋ ಆಗ ರಾಷ್ಟ್ರವು ಅಭಿವೃದ್ಧಿಯನ್ನು ಸಾಧಿಸಿ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇಂತಹ ಸ್ವ ಹಿತಾಸಕ್ತಿಯ ದೃಷ್ಟಿಕೋನವನ್ನು ಬಿಟ್ಟು ಕೆಲವು ವ್ಯಕ್ತಿಗಳು ಸಾಮಾನ್ಯ ವ್ಯಕ್ತಿಗಳ ಚಿಂತನೆಗಳಿಗೂ ಬೆಲೆಕೊಟ್ಟು ಅಂತಹ ವಿಷಯವನ್ನು ತಮ್ಮಲ್ಲಿಯೂ ಕೂಡ ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಯಾವುದೇ ರೀತಿಯ ಕಲ್ಲು ಮುಳ್ಳುಗಳಿಲ್ಲದೆ ಅಭಿವೃದ್ಧಿ ಎಂಬ ವಾಹನವನ್ನು ಬಹಳ ವೇಗವಾಗಿ ಚಲಾಯಿಸಿ ಗುರಿ ಮುಟ್ಟಲು ಸಹಕಾರಿಯಾಗುತ್ತದೆ.  ಇಂತಹ ಚಿಂತನೆಗಳಿಗೆ ಪೂರಕವಾಗಿ ನೋಡುತ್ತಾ ಹೋದರೆ ಅಸಾದುಲ್ಲಾ ಬೇಗ್‍ರವರ ಒಂದು ಕವನ ನಮ್ಮ ಕಣ್ಮುಂದೆ ಬರುತ್ತದೆ.

       “ ಹವ್ಯಾಸ ಬದಲಿಸು, ಹಣೆಬರಹ ಬದಲಾದೀತು

       ದೃಷ್ಟಿ ಬದಲಿಸು, ದೃಶ್ಯ ಬದಲಾದೀತು

       ಆದರೆ ದೋಣಿಯನ್ನು ಬದಲಿಸಬೇಕೆಂದಿಲ್ಲ,ದಿಕ್ಕನ್ನು ಬದಲಿಸಿದರೆ ಸಾಕು ದಡ ಎದುರಾದೀತು”

ಹೌದು, ಈ ಕವನದ ಅರ್ಥ ಎಷ್ಟು ನಿಜವಲ್ಲವೇ?ನಮ್ಮ ಹವ್ಯಾಸವನ್ನು ಬದಲಿಸಿದರೆ ಹಣೆಬರಹವು ತನ್ನಿಂದ ತಾನಾಗಿಯೇ ಬದಲಾವಣೆ ಹೊಂದಿದಂತಹ ಉದಾಹರಣೆಗಳಿವೆ. ಅದೇ ರೀತಿ ನಾವು ಅಭಿವೃದ್ಧಿ ದಡವನ್ನು ಸೇರಬೇಕು ಎಂದರೆ ನಾವು ಹೋಗುತ್ತಿರುವಂತಹ ದೋಣಿಯನ್ನು ಬದಲಿಸಬೇಕೆಂದಿಲ್ಲ. ಅದರ ಬದಲಾಗಿ ನಾವು ಹೋಗುತ್ತಿರುವಂತಹ ಅಭಿವೃದ್ಧಿ ಮಾರ್ಗವನ್ನು ಬದಲಿಸಿದಾಗ ಅಭಿವೃದ್ಧಿಯಾಗುವುದರಲ್ಲಿ ಇಲ್ಲ.

ಭರತ್ ಭಾರದ್ವಾಜ್. ಹೆಚ್,ಎಸ್

ದ್ವಿತೀಯ ಎಂಸಿಜೆ

ಎಸ್‍ಡಿಎಂ ಕಾಲೇಜು, ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!