ಅಂಕಣ

`ಬೇಂದ್ರೆಯವರ ಕಾವ್ಯಸೃಷ್ಟಿಯಸ್ವರೂಪ’—-(ಲೇಖನಗಳು) – ಒಂದು ವಿಮರ್ಶೆ

  `ಬೇಂದ್ರೆಯವರ ಕಾವ್ಯಸೃಷ್ಟಿಯ ಸ್ವರೂಪ’—-(ಲೇಖನಗಳು)

  ಲೇಖಕರು: ಜಿ.ಎಸ್.ಶಿವರುದ್ರಪ್ಪ, ಪ್ರಕಾಶಕರು:ಅಭಿನವ, 17/18-2,

  ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ,ವಿಜಯನಗರ, ಬೆಂಗಳೂರು-040

  ಮೊದಲನೆಯ ಮುದ್ರಣ: 2014, ಪುಟಗಳು: 64,ಬೆಲೆ: ರೂ.40-00

`ಅಭಿನವ’ದ `ಸರಸ್ವತಿ ನೆನಪು’ ಮಾಲಿಕೆಯ14ನೆಯ ಪುಸ್ತಿಕೆಯಾಗಿ ಜಿ.ಎಸ್.ಶಿವರುದ್ರಪ್ಪನವರಈ ಕೃತಿ ಪ್ರಕಟವಾಗಿದೆ. ಈ ಮಾಲಿಕೆಯಲ್ಲಿಗೋಪಾಲಕೃಷ್ಣ ಅಡಿಗ, ವಿಜಯಾ ದಬ್ಬೆ,ಕೆ.ವಿ.ತಿರುಮಲೇಶ್, ಕೆ.ವಿ.ನಾರಾಯಣ, ವೆಂಕಟೇಶ್ಮೂರ್ತಿ, ಬಸವರಾಜ ಕಲ್ಗುಡಿ, ಅನಂತಮೂರ್ತಿ,ಸತ್ಯಕಾಮ, ಶೇಷ ನವರತ್ನ,ಎಲ್.ಎಸ್.ಶೇಷಗಿರಿರಾವ್, ಜಿ.ಎಚ್.ನಾಯಕ,ವಿ.ಕೆ.ಗೋಕಾಕ್, ಬನ್ನಂಜೆ ಗೋವಿಂದಾಚಾರ್ಯ,ಜಿ.ಎಸ್.ಶಿವರುದ್ರಪ್ಪ-ಹೀಗೆ ಒಟ್ಟೂ ಕನ್ನಡದ 14ನಾಮಾಂಕಿತ ಬರಹಗಾರರು ದ.ರಾ.ಬೇಂದ್ರೆಯವರಮೇಲೆ ಬರೆದಿದ್ದು, ಜಿಎಸ್‍ಎಸ್ ಬರೆದ ಈ ಪುಸ್ತಕ,ಮಾಲಿಕೆಯ ಕೊನೆಯ ಕೃತಿ.  ಈ ಪುಸ್ತಕಮಾಲಿಕೆಬೇಂದ್ರೆ ಕಾವ್ಯದ ಒಂದು ಸಮಗ್ರ ಅಧ್ಯಯನವನ್ನುಒದಗಿಸುತ್ತದೆ.

ಈ ಪುಸ್ತಕದಲ್ಲಿ  ಜಿ.ಎಸ್.ಎಸ್.ಅವರ ಎರಡುಲೇಖನಗಳಿವೆ. ಮೊದಲನೆಯ `ಕಾವ್ಯ ಸೃಷ್ಟಿ-ಬೇಂದ್ರೆಯವರ ದೃಷ್ಟಿ’  ಲೇಖನದಲ್ಲಿ,  ಅವರಸಖೀಗೀತ, ನಾದಲೀಲೆ, ಗಂಗಾವತರಣ,ಸೂರ್ಯಪಾನ, ಮೂರ್ತಿ ಮತ್ತು ಕಾಮಕಸ್ತೂರಿ,-ಕವನಗಳಿಂದ ಉಲ್ಲೇಖಗಳನ್ನು ಆರಿಸಿಕೊಂಡುಶಿವರುದ್ರಪ್ಪನವರು ಬೇಂದ್ರೆದೃಷ್ಟಿಯಲ್ಲಿಕಾವ್ಯವೆಂದರೆ ಏನು ಎನ್ನುವುದನ್ನು ಸಂಗ್ರಹಿಸುತ್ತಾರೆ. `ಸಖೀಗೀತ’ದಲ್ಲಿ ಕವಿ ಜನರಿಗೆ ಹಿಗ್ಗಿನ ಹಾಡುನೀಡುವವನು (`ಜನಕ ಹಿಗ್ಗಿನ ಹಾಡು ನೀಡಾಂವ’)ಎನ್ನುತ್ತಾರೆ ಬೇಂದ್ರೆ. ಕವಿಯೂ ಎಲ್ಲರಂತೆಮನುಷ್ಯನೇ. ಅವನಿಗೂ ಎಲ್ಲರಂತೆ ಕಷ್ಟಗಳಿವೆ,ಸುಖಗಳೂ ಇವೆ. ಆದರೆ ಕವಿ “ಎನ್ನ ಪಾಡೆನಗಿರಲಿಅದರ ಹಾಡನ್ನಷ್ಟೆ/ ನೀಡುವೆನು ರಸಿಕ ನಿನಗೆ”ಎನ್ನುವ ಲೋಕೋತ್ತರ ಸ್ವಭಾವದವನು.ಸಂಸ್ಕøತದಲ್ಲಿ ಅಲಂಕಾರಿಕರು ಕಾವ್ಯಾನಂದವುಬ್ರಹ್ಮಾನಂದದ ಸಹೋದರ ಎಂದು ಕಾವ್ಯಾನಂದಕ್ಕೆಅತಿ ಉನ್ನತವಾದ ಸ್ಥಾನವನ್ನು ಲೌಕಿಕ ಜೀವನದಲ್ಲಿಕಲ್ಪಿಸಿಕೊಟ್ಟಿದ್ದಾರೆ. ಬೇಂದ್ರೆಯವರ ಕಾವ್ಯದೃಷ್ಟಿಅದನ್ನೇ ಅನುಸರಿಸಿದ್ದು, `ನಾದಲೀಲೆ’ಯಲ್ಲಿ ಅವರು”ಓಂಕಾರದ ಶಂಖನಾದಕಿಂತ ಕಿಂಚಿದೂನಾ” ಎಂದುಬೃಹ್ಮಸೃಷ್ಟಿಯ ಸನಿಹಕ್ಕೆ ಕಾವ್ಯವನ್ನು ಒಯ್ದುನಿಲ್ಲಿಸುತ್ತಾರೆ. ಆದರೆ ಕವಿಸೃಷ್ಟಿಯಾದ ಕಾವ್ಯವುಕವಿಗೊಂದೇ ಸೃಷ್ಟಿಯಾದುದಲ್ಲ, ಅದು ಜನರಿಗಾಗಿ; “ಏಕಾಂತದ ಜಿನುಗು ಲೋಕಾಂತಕೆಳೆಯಿತು/ ಜನವುಜನಾರ್ದನನೆಂದರಿತೆ” (`ಸಖೀಗೀತ’) ಎನ್ನುತ್ತಾರೆಬೇಂದ್ರೆ. ತನ್ನ ಕವನಗಳು ದೈವೀಕೃಪೆಯಿಂದಪ್ರಾಪ್ತವಾದವು ಎಂದು ಬೇಂದ್ರೆ ನಂಬುತ್ತಾರೆ. ಈದೈವೀಕೃಪೆ ಕನ್ನಡದ್ದು. ಅವರು `ಗರಿ’ಯಮುನ್ನುಡಿಯಲ್ಲಿ ಹೇಳಿರುವಂತೆ-“ನನ್ನ ಕವನಗಳೆಂದುಇದೀಗ ಹೇಳಿದೆನÀಷ್ಟೆ. ಅದೊಂದು ರೂಢಿಯಮಾತು. ಇವು ನನ್ನವಲ್ಲ. ಕನ್ನಡದ ಕವನಗಳು.ಕನ್ನಡದ ಅಶರೀರವಾಣಿಯು ಸಾವಿರಬಾಯಿಗಳಿಂದ ತನ್ನ ಕಣಸನ್ನು ಕನ್ನಡಿಸುತ್ತಿದೆ. ಆಸಾವಿರ ಬಾಯಿಗಳಲ್ಲಿ ನನ್ನದೊಂದು”. ಈ ಎಲ್ಲದರನಿರೂಪಣೆಯೇ ಈ ಪ್ರಬಂಧ. ಶಿವರುದ್ರಪ್ಪನವರ ಈಬರಹ ಬೇಂದ್ರೆ ಕವಿತೆಗಳನ್ನು ಓದಲು ಒಳ್ಳೆಯಪ್ರಸ್ತಾವನೆ.

ಎರಡನೆಯ ಲೇಖನ `ದೇಸೀಯತೆಯಲ್ಲಿ ಅರಳಿದದತ್ತ ಪ್ರತಿಭೆ’ ದೀರ್ಘವೂ ವಿಮರ್ಶಾತ್ಮಕವೂಆದದ್ದು. ಬೇಂದ್ರೆಯವರ ಕವಿತೆಗಳ ವಸ್ತುವೈವಿಧ್ಯಮಯವಾದದ್ದು ಹಾಗೂ ವಿಸ್ತಾರವಾದದ್ದುಎನ್ನುತ್ತಲೇ ಶಿವರುದ್ರಪ್ಪನವರು ಬೇಂದ್ರೆನವೋದಯದ ಇತರ ಎಲ್ಲ ಬರಹಗಾರರಿಗಿಂತಭಿನ್ನರಾಗಿದ್ದರು ಹಾಗೂ ಅವರ ಪ್ರತ್ಯೇಕತೆಯಿದ್ದದ್ದುಅವರು ದೇಶೀಯ ಸಂಸ್ಕೃತಿ, ಭಾರತೀಯರಪ್ರಾಚೀನ ಸಾಹಿತ್ಯ, ವಚನಸಾಹಿತ್ಯ, ಹಾಗೂಭಕ್ತಿಪಂಥದ ಸಾಹಿತ್ಯ ಗಳಿಂದ ಪಡೆದುಕೊಂಡಿದ್ದ ಸ್ಫೂರ್ತಿಯಲ್ಲಿ ಎನ್ನುತ್ತಾರೆ. `ನಾದಲೀಲೆ’ಯ ಒಂದುಕವಿತೆಯ ಸಾಲು “ಮುಗಿಲಬಾಯ ಗಾಳಿಕೊಳಲಬೆಳಕಹಾಡ ಬೀರಿ”ಯನ್ನು ತೋರಿಸಿ ಈ ಕವಿತೆಯಮೂಲಕ ಬೇಂದ್ರೆಯವರಿಗಿದ್ದ ಅಚ್ಚಕನ್ನಡದವ್ಯಾಮೋಹವನ್ನು ಗುರುತಿಸುತ್ತಾರೆ. ನವೋದಯದ ಬಿ.ಎಂ.ಶ್ರೀ, ಮಾಸ್ತಿ, ಕುವೆಂಪು, ಕಾರಂತ ಇವರೆಲ್ಲರಸ್ಫೂರ್ತಿಯ ನೆಲೆ ಪಾಶ್ಚಿಮಾತ್ಯ ಸಾಹಿತ್ಯವಾಗಿದ್ದರೆಬೇಂದ್ರೆ ಮಾತ್ರ ಅದಕ್ಕೆ ಒಲಿಯದೆ (ಈ ಗುಂಪಿನಲ್ಲಿಮಧುರಚೆನ್ನರೂ ಸೇರಿದ್ದಾರೆ) ದೇಶೀಯ ಸಾಹಿತ್ಯದಮೂಲಕವೇ ಕನ್ನಡದ ನವೋದಯವನ್ನುಸ್ವಾಗತಿಸಿದರು. ಆದ್ದರಿಂದ ಕನ್ನಡಸಾಹಿತ್ಯದನವೋದಯವು   ಏಕರೂಪದ್ದಾಗಿರಲಿಲ್ಲಎನ್ನುವುದು ಜಿಎಸ್‍ಎಸ್ ಗ್ರಹಿಕೆ.  “ವಸಾಹತುಶಾಹೀಸಂದರ್ಭದಲ್ಲಿ ಬೇಂದ್ರೆಯವರು ಪಾಶ್ಚಾತ್ಯಮಾದರಿಗೆ ಒಲಿಯಲಿಲ್ಲ” ಎನ್ನುವ ತೀರ್ಮಾನಕ್ಕೆ ಜಿಎಸ್‍ಎಸ್ ಬರುತ್ತಾರೆ. ಆದರೆ ಶಿವರುದ್ರಪ್ಪನವರಿಗೆಬೇಂದ್ರೆಕವಿತೆಗಳಲ್ಲಿ  ಸಾಮಾಜಿಕ ಪ್ರಜ್ಞೆಯ ಕೊರತೆಕಾಣಿಸುತ್ತದೆ. ಇದು ಅವರಿಗೆ  ಕುವೆಂಪು ಮತ್ತುಕಾರಂತರ ಕೃತಿಗಳ ಜೊತೆಗೆ ಬೇಂದ್ರೆಕವಿತೆಗಳನ್ನುಹೋಲಿಸುವಾಗ ಮನಗಂಡಿದೆ.

ಅನಂತಮೂರ್ತಿಯವರು ಬೇಂದ್ರೆಯವರನ್ನುಗ್ರಹಿಸುವ ರೀತಿಗೂ ಜಿಎಸ್‍ಎಸ್, ಕಿರಂ.ನಗರಾಜ್,ಕೆ.ವಿ.ತಿರುಮಲೇಶ್, ಕುರ್ತಕೋಟಿ, ಬನ್ನಂಜೆಮೊದಲಾದವರು ಗ್ರಹಿಸುವ ರೀತಿಗೂ ಇರುವವ್ಯತ್ಯಾಸದ ಕುರಿತು ಕಳೆದ ವಾರದ ಅಂಕಣದಲ್ಲಿಹೇಳಬೇಕಾಗಿದ್ದ ಮಾತನ್ನು ಇಲ್ಲಿಹೇಳಬೇಕೆನಿಸುತ್ತಿದೆ. ಅನಂತಮೂರ್ತಿ ಬೇಂದ್ರೆಯವರನ್ನು ಒಬ್ಬ ದೊಡ್ಡ ಕವಿಯನ್ನಾಗಿಅವರ ಕವಿತೆಗಳ ಮೂಲಕ ಕಾಣುವುದಷ್ಟೇ ಅಲ್ಲದೆ,ಬೇಂದ್ರೆ ಎನ್ನುವುದೊಂದು ಕಾವ್ಯವ್ಯಕ್ತಿತ್ವ ಎಂದುಸ್ವೀಕರಿಸಿ ಬೇಂದ್ರೆ ಎನ್ನುವ ಕಾನ್ಸೆಪ್ಟ್ ಜೊತೆಗೆಜಾಗತಿಕ ಸಾಹಿತ್ಯದ ಯೇಟ್ಸ್ ಮೊದಲಾದವರಮನಸ್ಸನ್ನು ಹೋಲಿಸಿಕೊಳ್ಳುತ್ತ ಓದುತ್ತಾರೆ.ಆದ್ದರಿಂದ ಅನಂತಮೂರ್ತಿ ಬೇಂದ್ರೆಪಠ್ಯವನ್ನುಲೇಖನದಲ್ಲಿ ಆಮೂಲಾಗ್ರ ಅವಲಂಬಿಸುವುದಿಲ್ಲ.ಕನ್ನಡದ ಉಳಿದ ಬೇಂದ್ರೆವಿಮರ್ಶಕರು ಪಠ್ಯವನ್ನುಮಾತ್ರ ಅವಲಂಬಿಸಿ ಅವರು ಕನ್ನಡದಲ್ಲಿ ಎಷ್ಟುಅನನ್ಯರಾದವರು ಎಂದು ಶೋಧಿಸುತ್ತಾರೆ. ಆದರೆನಮಗೆ ಈ ಎರಡೂ ಬಗೆಯ ಬೇಂದ್ರೆ ಓದುಮಹತ್ವದ್ದೆನಿಸುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!