ಅಂಕಣ

ನಟನಟಿಯರ ವಿರುದ್ದ ಅಪಸ್ವರ ಅನಗತ್ಯ

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಪ್ರಬುದ್ದ ಘಟ್ಟವನ್ನು ತಲುಪಿತ್ತು. ಈ ಹಂತಕ್ಕೆ ಬೆಳೆದು ಮರವಾಗಲು ಶ್ರಮಿಸಿದ ಕನ್ನಡಿಗರು ಹಲವಾರು. ನಟರು, ನಿರ್ದೇಶಕರು ಎಲ್ಲರೂ ಅಂದು ತಮ್ಮ ಜೀವನವನ್ನು ಸಿನಿಮಾ ರಂಗಕ್ಕೆ ಮುಡಿಪಾಗಿಟ್ಟಿದ್ದರು. ಇವರಾರೂ ದಿನ ಬೆಳಗಾಗುವುದರೊಳಗೆ ಪ್ರಸಿದ್ಧಿ,ಯಶಸ್ಸು ಪಡೆಯಲಿಲ್ಲ. ಬದಲಾಗಿ ತಮ್ಮ ಪ್ರತಿಭೆಯನ್ನು ನಟನೆಯ ಮೂಲಕ ವ್ಯಕ್ತಪಡಿಸಿ ಜನರ ಮನ ತಲುಪಿದರು. ಆದರೆ ಇಂದು ಕಾಲ ಬದಲಾಗಿದೆ, ಕನ್ನಡ ಚಿತ್ರರಂಗ ದಿನದಿಂದ ದಿನಕ್ಕೆ ಸುದ್ದಿಯಲ್ಲಿದೆ. ಡಬ್ಬಿಂಗ್ ವಿರುದ್ದ ಹೋರಾಟ ಚಾಲ್ತಿಯಲ್ಲಿರುವಾಗಲೇ ಕನ್ನಡ ನಟ ನಟಿಯರ ಬಗ್ಗೆ ನಿರ್ಮಾಪಕರು ಅಸಮಾಧಾನ ಹೊರ ಹಾಕಿದ್ದಾರೆ. ಟಿವಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ನಟರಿಂದ ಸಿನಿಮಾ ವಲಯಕ್ಕೆ ಧಕ್ಕೆಯಾಗುತ್ತಿದೆ ಎಂಬ ಕೊರಗು ವ್ಯಕ್ತಪಡಿಸಿದ್ದಾರೆ.

ನಟರು ರಿಯಾಲಿಟಿ ಷೋಗಳಿಲ್ಲಿಯೂ ಗುರುತಿಸಿಕೊಳ್ಳುವುದರ ಜೊತೆಯಲ್ಲಿಯೇ ಸಿನಿಮಾರಂಗದಲ್ಲಿಯೂ ಉತ್ತಮ ನಟನೆ ಮೂಲಕ  ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಬಹುದು. ಗುಣಮಟ್ಟದ ಕಥೆ ಮತ್ತು ವಿನೂತನ ಕಾರ್ಯಕ್ರಮಗಳಿಂದ ಹಿರಿತೆರೆ ಮತ್ತು ಕಿರುತೆರೆ ಎರಡೂ ರಂಗಗಳಲ್ಲಿ ಭಿನ್ನವಾಗಿ ಬೆಳೆದು ನಿಲ್ಲಬಹುದು. ಈ ನಿಟ್ಟಿನಲ್ಲಿ ನಿರ್ಮಾಪಕರು ಹಾಗೂ ನಟರು ಯೋಚಿಸಿದಲ್ಲಿ ಕನ್ನಡ ಮನೋರಂಜನ ಉದ್ಯಮವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.

ಕನ್ನಡ ಚಿತ್ರರಂಗವು ಅಭಿವೃದ್ಧಿ ಪಥದತ್ತ ತನ್ನ ದಾಪುಗಾಲನ್ನು ಇಡುತ್ತಿರುವಂತಹ ಸಂದರ್ಭದಲ್ಲಿಯೇ ರಿಯಾಲಿಟೀ ಶೋಗಳೂ ಕೂಡಾ ಜನರಿಗೆ ಉತ್ತಮ ಮಾಹಿತಿಯನ್ನು ನೀಡುವಂತಹ ಕಾರ್ಯವನ್ನು ಮಾಡುತ್ತಿವೆ. ಉತ್ತಮ ರಿಯಾಲಿಟೀ ಶೋಗಳಲ್ಲಿ ಚಿತ್ರನಟರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದಾಗಿ ಜನರಲ್ಲಿ ರಿಯಾಲಿಟಿ ಶೋಗಳ ಮೇಲೂ ಆಸಕ್ತಿ ಹೆಚ್ಚಿ ಉತ್ತಮ ಸಮಾಜ ನಿರ್ಮಾಣವೂ ಮಾಡಲು ಸಾಧ್ಯವಾಗಬಹುದು.

ಸಿನಿಮಾ ಹಾಗೂ ರಿಯಾಲಿಟಿ ಶೋಗಳು ಇಂದು ದಿನದಿಂದ ದಿನಕ್ಕೆ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಹಾಗಿರುವಾಗ ನಟನಟಿಯರು ಎಲ್ಲ ರಂಗದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು ಅಗತ್ಯವಾಗಿದೆ. ತಮ್ಮ ಬಿಡುವಿನ ವೇಳೆಯಲ್ಲಿ ಇಂತಹ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದರ ಯಶಸ್ವಿಗೆ ಸಹಕಾರಿಸಬೇಕಾಗಿದೆ. ಹಾಗಾಗಿ ಕನ್ನಡ ಚಿತ್ರರಂಗವು ವಿರೋಧಿಸದೆ ಎಚ್ಚರಿಕೆಯಿಂದ ಜನರನ್ನು ತಮ್ಮತ್ತ ಸೆಳೆದುಕೊಳ್ಳುವತ್ತ ಹೆಜ್ಜೆಯಿಡಬೇಕಾಗಿದೆ.

ಭಿನ್ನ ಚಲನಚಿತ್ರಗಳು ರೂಪುಗೊಂಡರೆ ಚಿತ್ರಮಂದಿರಗಳ ಕಡೆಗೆ ಜನರು ಬರುತ್ತಾರೆ. ಹಾಗಾಗಿ ಹಿರಿತೆರೆ ಮತ್ತು ಕಿರುತೆರೆ ಇವೆರಡೂ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಬೇಕು. ಎರಡೂ ವಲಯದಲ್ಲಿರುವ ಕಲಾವಿದರು ಭಿನ್ನವಾಗಿ ಗುರುತಿಸಿಕೊಳ್ಳಬೇಕು.

ಒಂದು ಮಾಧ್ಯಮ ಮತ್ತೊಂದು ಮಾಧ್ಯಮದ ವಿರೋಧಿ ಎಂಬ ಅಭಿಪ್ರಾಯ ಸರಿಯಲ್ಲ. ಬದಲಾಗಿ ಕನ್ನಡ ಸಿನಿಮಾ ರಂಗದಲ್ಲಿ ಉತ್ತಮ ನಿರ್ದೇಶಕರು ನಮ್ಮಲ್ಲಿ ಇದ್ದರೆ ಇವರುಗಳು ಹೊಸ ಹೊಸ ಪ್ರತಿಭೆಗಳನ್ನು ಕರೆ ತಂದು ಉತ್ತಮ ಚಲನಚಿತ್ರಗಳು ಬರುವವರೆಗು ಇದು ಮುಂದುವರಿಯುತ್ತದೆ. ಇದರಿಂದಾಗಿ ಸಿನಿಮಾಗಳನ್ನು ನೊಡುವವರು ಹೆಚ್ಚಾಗುತ್ತಾರೆ. ಜೊತೆಗೆ ಹೊಸ ಮುಖಗಳು ಪರಿಚಯವಾಗುತ್ತದೆ. ಇದರಿಂದ ರಿಯಾಲಿಟಿ ಷೋಗಳ ಜೊತೆ ಸ್ವರ್ಧೆ ಮಾಡಬಹುದಾಗಿದೆ. ಈ ರೀತಿಯಲ್ಲಿ ಯೋಚಿಸಿದರೆ ಸಿನಿಮಾದಲ್ಲಿಯೂ ಗುಣಮಟ್ಟ ಕಾಣುತ್ತದೆ ಹಾಗೂ ನಮ್ಮ ಎಲ್ಲಾ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.

ಪವನ್.ಎಂ.ಸಿ

ದ್ವಿತೀಯ ಪತ್ರಿಕೋದ್ಯಮ

ಎಸ್.ಡಿ.ಎಂ. ಕಾಲೇಜು ಉಜಿರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!