ಅಂಕಣ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಎಷ್ಟು ಸರಿ…?

ಚಲೋ ಉಡುಪಿ ಕಳೆದ ಒಂದು ವಾರದಿಂದ ಕೇಳುತ್ತಿದ್ದೇವೆ. ಈ ಹೋರಾಟದ ಉದ್ದೇಶ ದಲಿತ ಸಮುದಾಯದ ಏಳಿಗೆಗೋ ಅಥವಾ ಕೆಲವು ಬುದ್ದಿಜೀವಿಗಳ ಸ್ವಹಿತಕ್ಕೋ ಅರ್ಥವಾಗುತ್ತಿಲ್ಲ. ಚಲೋ ಉಡುಪಿ ಹೋರಾಟ ಹುಟ್ಟಿಕೊಳ್ಳಲು  ಕಾರಣವೇನು…? ಇದರಿಂದ ಲಾಭ ಅಥವಾ ನಷ್ಟ ಯಾರಿಗೆ ಇನ್ನೂ ನಿಗೂಢ. ಧರ್ಮದ ವಿರುದ್ಧ ಹೋರಾಟ ಮಾಡುವುದು ಸುಲಭ. ಅದರಿಂದ ಧರ್ಮಗಳ ನಂಬಿಕೆ, ಆಚಾರ, ವಿಚಾರ, ಧಾರ್ಮಿಕ ಭಾವನೆಗಳಿಗೆ ದೊಡ್ಡ ಹೊಡೆತ ಉಂಟಾಗಬಹುದು. ಸಮಾಜದ ಜನರು ಧರ್ಮಗಳ ರಕ್ಷಣೆಗೆ ಹೋರಾಟ ಮಾಡಬೇಕು ವಿನಃ ನಾಶಕ್ಕಲ್ಲ.  ಕಳೆದ ಎರಡೂವರೆ ವರ್ಷದಿಂದ ಕೆಲವು ಬುದ್ದಿಜೀವಿಗಳಿಗೆ ಉರಿ ಹೆಚ್ಚಾಗುತ್ತಿದೆ, ಎಲ್ಲಿ ನಮ್ಮ ಗಂಜಿ ಕೇಂದ್ರಗಳಿಗೆ ಹಾನಿಯಾಗಬಹುದೆಂದು. ಇದೆ ಕಾರಣಕ್ಕಾಗಿ ಹಿಂದೂ ಸಮಾಜದ ಮೇಲೆ ವಕ್ರ ದೃಷ್ಟಿ ಬೀಳುತ್ತಿದೆ.

ಚಲೋ ಉಡುಪಿ ಹೋರಾಟದಿಂದ ದೇಶದ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕೆಟ್ಟ ಹೆಸರು ಬರಿಸುವ ಹುನ್ನಾರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂ ದೇವಾಲಯಗಳ, ಮಠಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಧಾರ್ಮಿಕ ಸ್ಥಳಗಳ ನಾಶಕ್ಕಾಗಿ ಕಾಣದ ಕೈಗಳು ಕೆಲಸ ಮಾಡುತ್ತಿದೆ. ಅದರ ಒಂದು ಭಾಗವೇ ಉಡುಪಿ ಚಲೋ. ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಬಾರದೆಂದು ನೋಡಿಕೊಳ್ಳುತ್ತಿದ್ದಾರೆ.ಹಿಂದೂ ಧರ್ಮದ ಕುರಿತು ವಿಚಾರಗಳನ್ನು ತಿಳಿಯಪಡಿಸುತ್ತಿರುವ ಪೇಜಾವರ ಶ್ರೀಗಳ ವಿರುದ್ಧ ಹೋರಾಟ ಇದು ಸರಿಯಲ್ಲ. ನಾವೆಲ್ಲ ಗೌರವಿಸುವ ಶ್ರೀಗಳ ಮೇಲೆ ನಡೆಯುವ ಹೋರಾಟವನ್ನು ಹಿಂದೂ ಸಮಾಜ ಖಂಡಿಸಬೇಕಾಗಿದೆ. ಹಿಂದೂ ದೇವಾಲಯಗಳ ತೇಜೋವದೆ ಮಾಡಲು ಯಾರಿಗೂ ಅವಕಾಶ ನೀಡಬಾರದು. ದೇವರ ಮೇಲೆ ನಂಬಿಕೆ ಇಲ್ಲದವರಿಗೆ  ದೇವಾಲಯಗಳಲ್ಲಿ, ಮಠಗಳಲ್ಲಿ ಏನು ಕೆಲಸ…?

ಉಡುಪಿ ಮಠದಲ್ಲಿ ಊಟದ ಸಮಯದಲ್ಲಿ ಪಂಕ್ತಿ ಭೇದವಿದೆ ಎನ್ನುವ ಕಾರಣದಿಂದ ಮುತ್ತಿಗೆ ಹಾಕುವ ಹೋರಾಟವಾಗಿದೆ. ದಲಿತರಿಗೆ ಮತ್ತು ಬ್ರಾಹ್ಮಣರಿಗೆ ಒಟ್ಟಿಗೆ ಕುಳಿತುಕೊಂಡು ಊಟ ಮಾಡುವ ವ್ಯವಸ್ಥೆಯಿಲ್ಲ  ಎಂಬುದು ಉಡುಪಿ ಚಲೋ ಹೋರಾಟಗಾರರ ವಾದವಾಗಿದೆ. ಪ್ರಾಚೀನ ಕಾಲದಿಂದ ಇಂತಹ ಪದ್ಧತಿ ಚಾಲ್ತಿಯಲ್ಲಿ ಬಂದಿತ್ತೇನೋ  ಆದರೆ ಈ ಸಮಯಗಳಲ್ಲಿ ಬದಲಾಗುತ್ತಿದೆ. ಪೇಜಾವರ ಶ್ರೀಗಳು ದಲಿತರ ಊರುಗಳಿಗೆ ತೆರಳಿ ಅವರೊಂದಿಗೆ ವಾಸ ಮಾಡಿದ್ದಾರೆ. ದಲಿತರ ಏಳಿಗೆಗೆ  ಶ್ರೀಗಳು ತುಂಬಾ ಶ್ರಮ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಠಕ್ಕೆ ಮುತ್ತಿಗೆ ಹಾಕುವುದು ಎಷ್ಟು ಸರಿ?

ದೇವಸ್ಥಾನಗಳಿಗೆ ಬರುವ ಭಕ್ತರು ಎಲ್ಲರ ಜೊತೆಗೆ ಕುಳಿತು ಭೋಜನ ಸೇವಿಸಿದರೆ ಉತ್ತಮ ಆದರೆ ದೇವಾಲಯಗಳ, ಮಠಗಳ ವಿಷಯದಲ್ಲಿ ಮುಗ್ದ ದಲಿತರನ್ನು ಎಳೆದು ತರುವ ನಾಯಕರು ಯೋಚನೆ ಮಾಡಬೇಕು. ಚಲೋ ಉಡುಪಿ ಹೋರಾಟದಿಂದ ದಲಿತರಿಗೆ ಯಾವ ರೀತಿಯಲ್ಲಿ ಸಹಾಯವಾಗಬಹುದು. ನಮ್ಮ ಸಮಾಜದಲ್ಲಿ ಅದೆಷ್ಟೋ ದಲಿತರು ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುತ್ತಿದ್ದಾರೆ ಇವರುಗಳ ಏಳಿಗೆಗೆ ಶ್ರಮಿಸುವ ಹೋರಾಟ ನಡೆಯುತ್ತಿಲ್ಲ. ಇದೆಲ್ಲ ಹೋರಾಟಗಾರಿಗೆ  ತಿಳಿದಿಲ್ಲವೇ…?

ಒಬ್ಬ ಮನುಷ್ಯನಿಗೆ ಜೀವಿಸಲು ಬೇಕಾದ ಮೂಲ ಸೌಕರ್ಯಗಳು ದಲಿತರಿಗೆ ತಲುಪುತ್ತಿಲ್ಲ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಆದರೆ ಇದನ್ನ ತಲುಪಿಸುವ ಕೆಲಸ ಮಾಡುತ್ತಿಲ್ಲ. ಕಾರಣ ಇದರಿಂದ ಬುದ್ದಿಜೀವಿಗಳಿಗೆ ಯಾವುದೇ ಲಾಭವಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಬೇಕೇ ಒಂದು ಸಮಾಜ ಏಳಿಗೆಗೆ, ದಲಿತರು ಅಂತ ಇನ್ನೂ ಎಷ್ಟು ವರ್ಷ ಅಂತ ಕರೆಸಿಕೊಳ್ಳುವುದು. ಮುಗ್ದ ದಲಿತ ಸಹೋದರರನ್ನ ರಾಜಕೀಯ ನಾಯಕರು ಮೊಸಳೆ ಕಣ್ಣೀರು ಹಾಕಿ ಮರುಳು ಮಾಡುತ್ತ ನಾವು ನಿಮ್ಮೊಂದಿಗೆ ಇದ್ದಿವಿ ಎಂದು ಹೇಳಿ ನಂತರದಲ್ಲಿ ಮರೆತು ಬಿಡುವ ಕೆಲವು ರಾಜಕೀಯ ನಾಯಕರು ಮತ್ತು ಬುದ್ದಿಜೀವಿಗಳೂ ಇದ್ದಾರೆ.

ಪೇಜಾವರ ಶ್ರೀಗಳು ದಲಿತರ ಊರುಗಳಿಗೆ ತೆರಳಿ ಅಲ್ಲಿಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಅಲ್ಲಿಯ ಜನರೊಂದಿಗೆ ವಾಸ್ತವ್ಯ ಮಾಡಿ ಮೂಲ ಸೌಕರ್ಯಗಳು ಒದಗಿಸಿ ಸಮಾಜದಲ್ಲಿರುವ ಅಸ್ಪ್ರಶ್ಯತೆಯನ್ನು ಹೋಗಲಾಡಿಸಿ ಅನೇಕ ಹಿಂದೂ ಸಹೋದರರು ಯಾವುದೊ ಕಾರಣದಿಂದ ಮತಾಂತರ ಹೊಂದಿದ್ದವರು ಮರಳಿ ಸ್ವಧರ್ಮಕ್ಕೆ ಮರಳುವಂತೆ ಮಾಡಿದ್ದಾರೆ. ಇಂತಹ ಉತ್ತಮ ಕೆಲಸಗಳಲ್ಲಿ ಶ್ರೀಗಳು ತೊಡಗಿಸಿಕೊಂಡಿದ್ದಾರೆ. ಈ ಬೆಳವಣಿಗೆ ಸಹಿಸದ ಕೆಲವರು ಇಂತಹ ಹೋರಾಟಗಳನ್ನು ಹಿಂದೂ ಸಮಾಜದ ಮೇಲೆ ಮಾಡುತ್ತಿದ್ದಾರೆ.

ಸಮಾಜದಲ್ಲಿ ಬದುಕುವ ಪ್ರತಿಯೊಬ್ಬನು ಎಲ್ಲರಂತೆ ಸಮಾನವಾಗಿ ಜೀವಿಸುವ ಹಕ್ಕು ಹೊಂದಿದ್ದಾನೆ. ಭಾರತದ ಸಂವಿಧಾನ ಸಮಾನತೆಯನ್ನು ಪ್ರತಿಪಾದಿಸುತ್ತದೆ ಈ ಕಾರಣಕ್ಕಾಗಿ ದೇಶದಲ್ಲಿ ಸಮಾನ ನಾಗರೀಕ ಕಾನೂನು ಜಾರಿಯಾಗಬೇಕು. ಇದರ  ಹೋರಾಟಕ್ಕೆ ಎಷ್ಟು ಬುದ್ದಿಜೀವಿಗಳು ಬರುತ್ತಾರೆ? ಸಮಾನ ನಾಗರೀಕ ಕಾನೂನು ಜಾರಿಗೆ ಬಂದರೆ ದೇಶದ ಎಲ್ಲ ಜನರು ಒಂದೇ ಕಾನೂನಿನಡಿಯಲ್ಲಿ ಬರುತ್ತಾರೆ ಅವಾಗ ಯಾವ ರೀತಿಯಲ್ಲಿ ಅಸಮಾನತೆ ಬರಲು ಸಾಧ್ಯವಿಲ್ಲ ಅಲ್ಲವೇ…

ಪ್ರಚಲಿತ ವಿದ್ಯಮಾನಗಳಲ್ಲಿ ಹಿಂದೂ ಧರ್ಮ ಅನೇಕ ತೊಂದರೆಗಳನ್ನು ಎದುರಿಸುತ್ತಿವೆ  ಯಾರೋ ಮಾಡಿದ ತಪ್ಪಿಗೆ ಒಂದು ಧರ್ಮದ ಮೇಲೆ ಗೊಬೆ ಕೂರಿಸುವ ಕೆಲಸವಾಗುತ್ತಿದೆ. ಜಾತಿ ಜಾತಿಗಳ ಮಧ್ಯೆ ದ್ವೇಷ ಭಾವನೆಯನ್ನು ಬಿತ್ತುವವರ ಬಗ್ಗೆ ಹಿಂದೂ ಸಮಾಜ ಜಾಗ್ರತವಾಗಬೇಕಾಗಿದೆ ನಾನು ಆ ಜಾತಿ ಈ ಜಾತಿಯೆನ್ನುವ ವಿಷಯ ಬಾರದೆ ನಾವು ಹಿಂದೂಯೆನ್ನುವ ಉಚ್ಚಾರ ಮಾತ್ರ ಬರಬೇಕು.

ಸಮಾಜದಲ್ಲಿ ದಲಿತರ ಜೀವನ ಕೆಲ ಮಟ್ಟದಲ್ಲಿದೆ ಇದಕ್ಕೆ ಕಾರಣ ಹಿಂದೂ ಧರ್ಮವಲ್ಲ ನಮ್ಮನ್ನಾಳುವ ರಾಜಕಾರಣಿಗಳು ಕೇವಲ ಚುನಾವಣೆಯ ಸಮಯದಲ್ಲಿ ತೆರಳಿ ಕೇವಲ ಆಶ್ವಾಸನೆ ನೀಡಿ ಮರಳು ಮಾಡುತ್ತಾರೆ. ವಿದ್ಯಾಭ್ಯಾಸ, ಉದ್ಯೋಗ, ಮನೆ, ಜೀವನ ಸುರಕ್ಷತೆಯ ಯೋಜನೆಗಳು, ಮೂಲಸೌಕರ್ಯಗಳು ಇನ್ನೂ ದಲಿತರ ಊರುಗಳಿಗೆ ತಲುಪಿಲ್ಲ, ತಲುಪಲು ಬಿಡುತ್ತಿಲ್ಲ. ಬಡವರು ಬಡವರಿಗಿದ್ದಾರೆ ಮಾತ್ರ ಶ್ರೀಮಂತರಿಗೆ ಬೆಲೆ ಅದೇ ರೀತಿ, ದಲಿತರನ್ನು ಸಮಾಜದಲ್ಲಿ ಬೆಳೆಯಲು ಯಾರೋ ತಡೆಯಾಗುತ್ತಿದ್ದಾರೆ. ಹಿಂದೂ ದೇವಾಲಯಗಳಿಗೆ ಮುತ್ತಿಗೆ ಹಾಕಿದ ಮಾತ್ರಕ್ಕೆ ಯಾವ ಬದಲಾವಣೆಗೆ ಸಾಧ್ಯವಿಲ್ಲ ದಲಿತರನ್ನು ಹೋರಾಟದಲ್ಲಿ ಪಾಲ್ಗೊಳಿಸಿ ಇನ್ನೂರೋ ನಾಯಕರಾಗುವ ಕೆಲಸವಾಗುತ್ತಿದೆ. ದಲಿತರ ಊರುಗಳ ಅಭಿವೃದ್ಧಿಗೆ ಚಲೋಗಳಂತ ಹೋರಾಟ ನಡೆದರೆ ತುಂಬಾ ಸಂತೋಷವಾಗುತ್ತಿತ್ತು. ದೇವಾಲಯಗಳಿಗೆ ಮುತ್ತಿಗೆ ಹಾಕಿ ಹಿಂದೂ ಸಮಾಜದ ಸಹಬಾಳ್ವೆಗೆ ತೊಂದರೆಯಾಗದೆ ಧರ್ಮಗಳಲ್ಲಿರುವ ಕೇಡುಗಳನ್ನ ಸಮಾಜದ ಮಾರ್ಗದರ್ಶಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವುದು ಉತ್ತಮ ನಡೆಯಾಗಬಹುದು.

ರವಿವರ್ಮ.ಎ

www.meravivarma.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!