ಒಮ್ಮೆ ಬೆಂಗಳೂರಿನಲ್ಲಿ ಆಫಿಸಿನಿಂದ ಮನೆಗೆ ಹೋಗುತ್ತಿದ್ದೆ. ಮಳೆ ಜೋರಾಗಿ ಬರುತ್ತಿತ್ತು. ಬಸ್ ಹತ್ತಿದಾಗ ಬಹಳಷ್ಟು ಸೀಟ್’ಗಳ ಮೇಲೆ ನೀರು ಬಿದ್ದಿದ್ದರಿಂದ ಬಹಳಷ್ಟು ಜನ ಕೂತುಕೊಳ್ಳದೆ ನಿಂತುಕೊಂಡೇ ಇದ್ದರು. ನನಗೆ ಕೆಲಸದಿಂದ ಆಯಾಸವಾಗಿದ್ದರಿಂದ ಮತ್ತು ಬಹಳ ದೂರ ಪ್ರಯಾಣಿಸಬೇಕಿದ್ದರಿಂದ ನನ್ನ ಕರ್ಚೀಫನ್ನೇ ತೆಗೆದು ಒಂದು ಸೀಟ್’ನ್ನು ಒರೆಸಿ ಕೂತುಕೊಂಡೆ.ಅಷ್ಟರವರೆಗೆ ಸುಮ್ಮನೇ ನಿಂತುಕೊಂಡಿದ್ದ ಹೆಂಗಸೊಬ್ಬಳು ಬಂದು “ಸರ್ ಲೇಡಿಸ್’ಗೆ ಸೀಟ್,ಬಿಟ್ಟುಕೊಡಿ” ಎಂದಳು.” ಎಲಾ ಇವಳಾ,ಇಷ್ಟರವೆರೆಗೆ ಸುಮ್ಮನೇ ನಿಂತುಕೊಂಡಿದ್ದು, ನನ್ನ ಕರ್ಚೀಫಿನಿಂದ ಸ್ವಚ್ಚಗೊಳಿಸಿ ಕೂಡಲು ಹೋದರೆ ಸೀಟು ಬಿಟ್ಟುಕೊಡಿ ಎಂದು ಕೇಳುತ್ತಾಳಲ್ಲ” ಎಂದು ಅನಿಸಿತು. ಈಗಿನ ಮೀಸಲಾತಿ ವ್ಯವಸ್ಥೆಯ ಬಗ್ಗೆಯೂ ಈ ಘಟನೆ ಯೋಚಿಸುವಂತೆ ಮಾಡಿತು.
ಸ್ಟಾರ್ ಟಿವಿನಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಸೀರಿಯಲ್’ನಲ್ಲಿ ಒಂದು ದೃಶ್ಯ ನನ್ನನ್ನು ಬಹುವಾಗಿ ಕಾಡಿತು. ಅಲ್ಲಿ ಕರ್ಣನು ಕೀಳುಜಾತಿಯವನೆಂದು ತಿಳಿದು ಅವನ ಕೈಯಿಂದ ದಾನವನ್ನು ಸ್ವೀಕರಿಸಲು ಮೇಲ್ವರ್ಗದವರು ಒಪ್ಪಲಿಲ್ಲ. ಆಗ ಕರ್ಣನ ಹೆಂಡತಿ’ವೃಶಾಲಿ’ ಕೇಳುತ್ತಾಳೆ.”ಸ್ವಾಮಿ ನೀವು ದಾನವನ್ನು ಸ್ವೀಕರಿಸದಿರುವದರಿಂದ ನನ್ನ ಯಜಮಾನನ ಮನಸ್ಸಿಗೆ ನೋವಾಗುತ್ತದೆ, ದಯವಿಟ್ಟು ಸ್ವೀಕರಿಸಿ”ಎನ್ನುತ್ತಾಳೆ. ಆಗ ಆ ಜನರು “ಕ್ಷಮಿಸಿ, ನಾವು ಕೀಳುಜಾತಿಯವರಿಂದ ದಾನ ಪಡೆಯುವದು ಶಾಸ್ತ್ರ ವಿರೋಧವಾಗುತ್ತದೆ” ಎಂದರು. ಆಗ ವೃಶಾಲಿ ಕೇಳುತ್ತಾಳೆ “ನನ್ನ ಯಜಮಾನನಿಗೆ ಏಕೆ ಈ ರೀತಿ ಬಾರಿ ಬಾರಿ ಅವಮಾನ, ನೋವಾಗುತ್ತದೆ?” ಎಂದು ಕೇಳಿದಾಗ ಅವರು ಹೇಳುತ್ತಾರೆ “ಹಿಂದಿನ ಜನ್ಮದಲ್ಲಿ ಕರ್ಣನು ಘೋರ ತಪ್ಪುಗಳನ್ನು ಮಾಡಿ ಅನೇಕರಿಗೆ ನೋವು, ಪೀಡೆಯನ್ನುಂಟು ಮಾಡಿರಬಹುದು,ಅದಕ್ಕೆ”. ಆಗ ವೃಶಾಲಿ “ಸರಿ ಇರಬಹುದು, ಆದರೆ ಈ ಜನ್ಮದಲ್ಲಿ ನೀವು ನನ್ನ ಯಜಮಾನನಿಗೆ ಚುಚ್ಚು ಮಾತುಗಳ ಮೂಲಕ ನೋವನ್ನು ಕೊಡುತ್ತೀದ್ದಿರಲ್ಲ,ನೀವು ಮುಂದಿನ ಜನ್ಮದಲ್ಲಿ ಕೀಳಾಗಿ ಹುಟ್ಟಬಹುದಲ್ಲವೇ” ಎಂದಾಗ ಅವರೆಲ್ಲರೂ ಕಕ್ಕಾಬಿಕ್ಕಿಯಾಗುತ್ತಾರೆ. ಕರ್ಣನು ತನ್ನ ಕತ್ತಿ ತೆಗೆದು”ನೀವು ದಾನ ಸ್ವೀಕರಿಸದಿದ್ದರೆ ನಿಮ್ಮನ್ನು ಕೊಲ್ಲುವೆ”ಎಂದು ಹೆದರಿಸಿದಾಗ ಅವರು ಆಯಿತು ಸ್ವೀಕರಿಸುತ್ತೇವೆ ಎಂದು ಒಪ್ಪುತ್ತಾರೆ. ಆದರೆ ಕರ್ಣನು ಸುಮ್ಮನೆ ಹೋಗಿ ಬಿಡುತ್ತಾನೆ.
ನಿನ್ನೆ ಮೊನ್ನೆ ಕೇಳಿದ್ದು ಅದೇನೋ ’ಉಡುಪಿ ಚಲೋ”ಅಂತೆ, ದಲಿತರ ಸ್ವಾಭಿಮಾನ, ಹಕ್ಕುಗಳಿಗಾಗಿ ಹೋರಾಟ ಅಂತೆ,ಅಷ್ಟೆಲ್ಲಾ ಕಷ್ಟವಿದ್ದ ಅಂಬೇಡ್ಕರ್ ಆ ಕಾಲದಲ್ಲೇ ತುಂಬಾ ಓದಿಕೊಂಡೂ ತುಂಬಾ ಉನ್ನತ ಹುದ್ದೆಗೆ ಏರಿದರು.ನನಗೆ ಒಂದು ಅರ್ಥವಾಗಿಲ್ಲ, “ಬೇಡಿ ಪಡೆದ ಜೀವನ ಸ್ವಾಭಿಮಾನದ್ದೆಂದು ಯಾವ ಬಾಯಲ್ಲಿ ಹೇಳುತ್ತಾರೆ.ಬಾಯಲ್ಲಿ ಕಕ್ಕಸವಂತೂ ಹೋಗುತ್ತಿಲ್ಲ ಎಂಬ ನಂಬಿಕೆಯಿದೆ.
“ನನಗೆ ಚಡ್ಡಿಯಿಲ್ಲ, ಲಾಡಿಯಿಲ್ಲ, ಲಂಗವಿಲ್ಲ ಎಂದು ಘೋಷಣೆ ಕೂಗುತ್ತಾ ಬಾವುಟ ಹಿಡಿದುಕೊಂಡರೆ ದಾರಿಹೋಕರು ಬೆತ್ತಲೆಯನ್ನು ನೋಡಿ ನಕ್ಕು,ಕಣ್ಣು ತಂಪು ಮಾಡಿಕೊಂಡು ಹೋಗಬಹುದೇ ವಿನಃ ತುಂಡು ಬಟ್ಟೆಯನ್ನು ಎಸೆಯಲಾರರು. ಮುಖ ಮುಖ ಕೆರೆದುಕೊಂಡು ಬೇಡಿದರೂ ಹಿಡಿ ಅಕ್ಕಿ ಕೊಡಲು ಹಿಂದೆ ಮುಂದೆ ನೋಡುವ ಕಾಲದಲ್ಲಿ ಚಮಚವಿಟ್ಟು ತಿನ್ನಿಸಬೇಕೆಂದು ಇವರು ಕೇಳಿಕೊಳ್ಳುವದನ್ನು ನೋಡಿದರೆ ನನಗೆ ಬೇರೆ ಎಲ್ಲೆಲ್ಲಿಂದಲೋ ನಗು ಬರುತ್ತಿದೆ. ಅಂಬೇಡ್ಕರ್ ರವರು ಕಷ್ಟವಿದ್ದರೂ, ತಿರಸ್ಕಾರವಿದ್ದರೂ ಹೇಗೆ ಬದುಕಿ ಮೇಲೆ ಬರಬಹುದೆಂದು ತೋರಿಸಿದರು ಆದರೆ ಈ ಗೆದ್ದಲು ಹತ್ತಿದ ಮನಸ್ಸುಳ್ಳವರು,ಕಾಮಾಲೆ ಕಣ್ಣುಳ್ಳವರು, ನಡೆದಾಡುವ ಟೇಪ್ ರೆಕಾರ್ಡರ್’ಗಳು ಮಾತ್ರ ಅದೇ ಸವಕಲು ವಿಷಯಗಳಾದ ದೌರ್ಜನ್ಯ, ಅಸಮಾನತೆ,ಮನುವಾದ ಇತ್ಯಾದಿಗಳಿಗೆ ಜೋತು ಬಿದ್ದಿವೆ. ಇವರು ಕೇಳುತ್ತಿರುವದು ಹೇಗೆಂದರೆ”ಸೋಮಾಲಿಯದವರು ಒಲಂಪಿಕ್ಸ್ ಸಮಿತಿಯ ಮುಂದೆ ನಮ್ಮ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ,ನಮ್ಮ ಕ್ರೀಡಾಪಟುಗಳ ಸಾಮರ್ಥ್ಯ ಕಮ್ಮಿ ಅದಕ್ಕೆ ನಮಗೆ ಪ್ರತ್ಯೇಕ ೧೦೦ ಮೀಟರ್ ಓಟ ನಡೆಸಬೇಕೆಂದು ಕೇಳಿಕೊಳ್ಳುವ ಹಾಗೆ”.ಮಂಗಳಮುಖಿಯರಲ್ಲೂ ಕೂಡ ಸ್ವಂತ ಕಾಲ ಮೇಲೆ ನಿಲ್ಲುವದಕ್ಕೆ ಪ್ರಯತ್ನ ಪಡುವವರಿದ್ದಾರೆ.
ಯೇಸುವಿನಿಂದ, ಬುದ್ಧನಿಂದ ಸ್ಥಾಪಿತವಾದದ್ದು ಕ್ರಿಶ್ಚಿಯನ್ನರಿಂದ, ಬೌದ್ದ ನಾಯಕರಿಂದ ಹಾಳಾಯಿತು. ಅಂಬೇಡ್ಕರ್ ರವರಿಂದ ಸ್ಥಾಪಿತವಾದದ್ದು ಅಂಬೇಡ್ಕರ್ ವಾದಿಗಳೆನಿಸಿಕೊಂಡವರಿಂದ ಹಾಳಾಗುತ್ತಿದೆ.ಆದ್ದರಿಂದ ದಲಿತರೇ ಈ ಗೆದ್ದಲು ಹಿಡಿದ,ನಡೆದಾಡುವ ಟೇಪ್ ರೆಕಾರ್ಡರ್ ಗಳನ್ನು ಹತ್ತಿರ ಬಿಟ್ಟುಕೊಳ್ಳಬೇಡಿ. ಮೀಸಲಾತಿ ಇಲ್ಲದ ಸಮಯದಲ್ಲೇ, ಪ್ರೋತ್ಸಾಹವಿಲ್ಲದ ಕಾಲದಲ್ಲೇ ಅಷ್ಟೆಲ್ಲಾ ಸಾಧನೆಯನ್ನು ಅಂಬೇಡ್ಕರ್ ಮಾಡಿದ್ದಾರೆ.ಅವರೇ ನಿಮಗೆ ಆದರ್ಶ. ಮೀಸಲಾತಿಯನ್ನು ಧಿಕ್ಕರಿಸಿ ನಮ್ಮಲ್ಲೂ ಛಲವಿದೆ ಎಂದು ತೋರಿಸಿ.ಪ್ರತಿಷ್ಟೆಯಲ್ಲಿ ದೊರಕುವ ಸುಖವು ಸ್ವರ್ಗಕ್ಕಿಂತ ಮಿಗಿಲಾದುದು. “ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು”ಎಂದು ತಿಲಕರು ಹೇಳಿದ್ದಾರೆ. ಹಾಗೆಯೇ”ಉದ್ಯೋಗ, ಶಿಕ್ಷಣ, ಉತ್ತಮ, ಗೌರವಾನ್ವಿತ ಬಾಳು ನಿಮ್ಮ ಜನ್ಮ ಸಿದ್ಧ ಹಕ್ಕುಗಳೇ” ಅದನ್ನು ಅರಿಯದೇ ಭಿಕ್ಷುಕರಂತೆ ನಮಗೆ ಅಷ್ಟು ಮೀಸಲಾತಿ ಕೊಡಿ,ಇಷ್ಟು ಮೀಸಲಾತಿ ಕೊಡಿ, ಖಾಸಗಿ ಸಂಸ್ಥೆಗಳಲ್ಲೂ ಮೀಸಲಾತಿ ಕೊಡಿ ಇತ್ಯಾದಿಯಾಗಿ ನಿಮ್ಮ ನಾಯಕರು ಹೇಳುತ್ತಾರೆಂದು ಕೇಳಿ ಅವರ ತಾಳಕ್ಕೆ ತಕ್ಕಂತೆ ಕುಣಿಯದಿರಿ. “If you don’t get opportunities, Then create opportunities”. ಗೌರವಾನ್ವಿತ ಬದುಕು ಎಂಬುವದು ಬೇಡಿ ಪಡೆಯುವದರಲ್ಲಿಲ್ಲ.ಬದಲಾಗಿ ಸಾಮರ್ಥ್ಯದಲ್ಲಿದೆ