ಅಂಕಣ

ಚಿರಪರಿಚಿತ ತರಗೆಲೆ ಹಕ್ಕಿ

ಮುಂಜಾನೆ ಸೂರ್ಯ ಅದಾಗಲೇ ತನ್ನ ನಸು ಬೆಳಕನ್ನು ಬೀರಲು ತಯಾರಾಗುತ್ತಿದ್ದಂತೆಯೇ ಕೌಸಲ್ಯಾ ಸುಪ್ರಜಾ ರಾಮ.. ಸುಪ್ರಭಾತ ಒಂದು ಕಡೆ ಮೊಳಗತೊಡಗಿದರೆ, ಮತ್ತೊಂದು ಕಡೆ ಹಕ್ಕಿಗಳ ಚಿಲಿಪಿಲಿ, ಕಲರವದ ಸದ್ದು ಸರ್ವೇ ಸಾಮಾನ್ಯ. ಅದು ಕೇಳಲೂ ಇಂಪು. ಮೈ ಮನಗಳಲ್ಲಿ ಉಲ್ಲಾಸದ ಹೊನಲು ಮೂಡಿಸಿ, ಬೆಳ್ಳಂಬೆಳಗಿನ ಸುಂದರ ಅನುಭವವನ್ನು ನೀಡುತ್ತದೆ. ಹಲವು ಹಕ್ಕಿಗಳ ಚಿಲಿಪಿಲಿಯನ್ನು ಕೇಳಿ ಖುಷಿಪಡುತ್ತೇವೆ. ಎಲ್ಲಾ ಹಕ್ಕಿಗಳೂ ನಮಗೆ ನೋಡ ಸಿಗುವುದಿಲ್ಲ. ಆದರೆ ಇಲ್ಲೊಂದು ಹಕ್ಕಿ ಬಹುತೇಕರಿಗೆ ಚಿರಪರಿಚಿತ.ತರಗೆಲೆ ಹಕ್ಕಿ”.

ನಸು ಕಂದು ಬಣ್ಣದ ಶರೀರ, ಹಳದಿ ಬಣ್ಣದ ಬಾಗಿದ ಸುಂದರ ಕೊಕ್ಕಿನಿಂದ ಗಮನ ಸೆಳೆಯುವಲಿಯೋತ್ರಿಚಿಡೇಪಕ್ಷಿ ಕುಟುಂಬಕ್ಕೆ ಸೇರಿದ ಈ ಹಕ್ಕಿಗಳು ಸಾಮಾನ್ಯವಾಗಿ 5ರಿಂದ 10 ಸಂಖ್ಯೆಯ ಗುಂಪಿನಲ್ಲಿ ಕಂಡು ಬರುತ್ತವೆ. ಇದರ ವೈಜ್ನಾನಿಕ ಹೆಸರು ಟರ್ಡಾಯ್ಡಸ್ ಸ್ಟ್ರೈಟಾ”. ಕಾಡು ಹಾಗೂ ಕೃಷಿಭೂಮಿ ಇವುಗಳ ವಾಸಸ್ಥಾನ. ಸುಮಾರು20ರಿಂದ 25ಸೆಂಟಿಮೀಟರ್ ಗಾತ್ರದ ಈ ಹಕ್ಕಿಗಳು ಇತರ ಹಕ್ಕಿಗಳಂತೆ ವಲಸೆ ಹೋಗುವುದಿಲ್ಲ. ಇವುಗಳ ರೆಕ್ಕೆ ಉರುಟಾದ ರಚನೆಯನ್ನು ಹೊಂದಿದ್ದು ಹಾರಾಟದಲ್ಲಿ ಅಷ್ಟೇನೂ ಪರಿಣತಿ ಪಡೆದವುಗಳಲ್ಲ. ಇನ್ನು ನಗರ ಪ್ರದೇಶಗಳಲ್ಲಿ ಕಂಡುಬರುವ ತರಗೆಲೆ ಹಕ್ಕಿಗಳು, ಉದ್ದವಾದ ಬಾಲ ಹಾಗೂ ಗಾತ್ರದಲ್ಲೂ ತುಸು ದೊಡ್ಡದಾಗಿದ್ದು, ಬೂದು ಬಣ್ಣವನ್ನು ಹೊಂದಿರುತ್ತವೆ.

1

ತರಗೆಲೆ ಹಕ್ಕಿಗಳ ಆಹಾರ ಹುಳು ಹುಪ್ಪಟೆಗಳು,ಧಾನ್ಯಗಳು, ಮಕರಂಧ ಹಾಗೂ ಕೆಲ ವಿಧದ ಹಣ್ಣುಗಳು. ತಮ್ಮ ಗುಂಪು ಚಟುವಟಿಕೆಯಿಂದ ಎಲ್ಲೆಂದರಲ್ಲಿ ಅರಚುತ್ತಾ ಎದುರಾಳಿಗಳಿಂದ ರಕ್ಷಣೆ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಇತರ ಹಕ್ಕಿಗಳಿಗೆ ತೊಂದರೆಯನ್ನೂ ನೀಡುತ್ತವೆ. ಸುಮಾರು 12ರಿಂದ16.5 ವರ್ಷಗಳ ಕಾಲ ಜೀವಿಸುವ ಈ ತರಗೆಲೆ ಹಕ್ಕಿಗಳು ರೈತರ ಬೆಳೆಗಳನ್ನು ಹುಳು ಹುಪ್ಪಟೆಗಳಿಂದ ಕಾಪಾಡುವ ಸ್ನೇಹಜೀವಿಗಳು. ಎಳೆಯ ತರಗೆಲೆ ಹಕ್ಕಿಗಳ ಕಣ್ಣಿನ ಭಾಗವು ಗಾಢ ಬಣ್ಣದಿಂದ ಕೂಡಿದ್ದು ಕ್ರಮೇಣ ವರ್ಷಗಳು ಕಳೆದಂತೆ ನಸು ಹಳದಿ ಬಣ್ಣಕ್ಕೆ ತಿರುಗುತ್ತವೆ.

2

ತರಗೆಲೆ ಹಕ್ಕಿಗಳು ತಮ್ಮ ಮೂರನೆಯ ವಯಸ್ಸಿನ ನಂತರ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ. ಮಾರ್ಚ್-ಎಪ್ರಿಲ್ ಹಾಗೂ ಜುಲೈ-ಸೆಪ್ಟೆಂಬರ ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯುತ್ತವೆ. ದಟ್ಟವಾದ ಮರಗಳ ಮಧ್ಯಭಾಗದಲ್ಲಿ ಎಲೆಗಳಿಂದ ಮರೆಮಾಚುವ ಗೂಡನ್ನು ರಚಿಸಿ ಅಲ್ಲಿ ತಮ್ಮ ಮೊಟ್ಟೆಗಳನಿಟ್ಟು ಕಾಪಾಡುತ್ತವೆ ಈ ತರಗೆಲೆ ಹಕ್ಕಿಗಳು.  ಮೊಟ್ಟೆಗಳು ಗಾಢ ಹಸಿರು ಮಿಶ್ರಿತ ನೀಲಿ ಬಣ್ಣವನ್ನು ಹೊಂದಿರುತ್ತವೆ. ಮೊಟ್ಟೆಯಿಂದ ಮರಿಗಳು ಹೊರ ಬಂದ ಮೇಲೆ ತಾಯಿ ಹಕ್ಕಿಗೆ ಇತರ ತರಗೆಲೆ ಹಕ್ಕಿಗಳು ಆಹರ ನೀಡುವ ಪ್ರಕ್ರಿಯೆಯಲ್ಲಿ ಪರಸ್ಪರ ಸಹಕರಿಸುತ್ತವೆ. ನಂತರ ಎರಡು ವರ್ಷಗಳ ಹಾರಾಟದ ತರಬೇತಿಯ ಬಳಿಕ ಮರಿಹಕ್ಕಿಗಳು ಸ್ವತಂತ್ರವಾಗಿ ಹಾರಾಟ ನಡೆಸುತ್ತವೆ.

ಮನೆಯ ಅಂಗಳದಲ್ಲಿ, ಹಸಿರು ಒಣ ಪೊದರುಗಳಲ್ಲಿ, ಮನೆ, ಅಂಗಡಿಗಳ ಛಾವಣಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಾಣ ಸಿಗುವ ತರಗೆಲೆ ಹಕ್ಕಿಗಳು ತಮ್ಮ ಚೀರುವ ಧ್ವನಿಯಿಂದ ಎಲ್ಲರ ಗಮನಸೆಳೆಯುತ್ತವೆ. ಇವುಗಳ ಧ್ವನಿ ಕೆಲವರಿಗೆ ಹರಟೆಯೆಂದೆನಿಸಿರೂ ಪಕ್ಷಿಪ್ರಿಯರಿಗೆ ಖುಷಿಕೊಡುವುದಂತೂ ಖಂಡಿತ!

 

ತರಗೆಲೆ ಹಕ್ಕಿಯ ಹೆಸರು ವಿವಿಧ ಭಾಷೆಗಳಲ್ಲಿ:

ಇಂಗ್ಲೀಷ್:        ಜಂಗಲ್ ಬಾಬ್ಲರ್

ಹಿಂದಿ:   ಪೇಂಗಿಯಾ ಮೈನಾ

ಮರಾಠೀ;           ಸಾತ್ಬಹಿಣೀ

ಸಂಸ್ಕøತ: ಅರಣ್ಯ ಹಹೋಲಿಕಾ

************************************

ಚಿತ್ರ-ಬರಹ:

ಕೃಷ್ಣ ಪ್ರಶಾಂತ್ ವಿ. ಗೇರುಕಟ್ಟೆ

ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ಎಸ್.ಡಿ.ಎಮ್ ಕಾಲೇಜು , ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!