ಅಂಕಣ

ಕನ್ನಡ ಗೊತ್ತಿಲ್ಲ ಡಾಟ್ ಕಾಮ್

ಕರ್ನಾಟಕ ಮತ್ತು ಬೆಂಗಳೂರು ಕಲಿಕೆಗೆ ಹಾಗೂ ದುಡಿಮೆಗೆ ಒಳ್ಳೆ ಅವಕಾಶಗಳನ್ನು ಸೃಷ್ಟಿ ಮಾಡಿದೆ,ಇದರಿಂದ ಉತ್ತರ ಭಾರತದ ವಲಸಿಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ,ಉತ್ತರ ಭಾರತ ಅಷ್ಟೇ ಅಲ್ಲ ತಮಿಳುನಾಡು,ಕೇರಳ,ಆಂಧ್ರದಿಂದ ಯುವಕ ಯುವತಿಯರ ದಂಡೆ ಬೆಂಗಳೂರು ಕಡೆಗೆ ಮುಖ ಮಾಡಿ ನಿಂತಿರುವ ವಿಷಯ ಹೊಸದೇನಲ್ಲ.ಇದರಿಂದ ಆಗುವ ಸಮಸ್ಯೆಗಳು ಅಥವಾ ಪ್ರಯೋಜನೆಗಳ ಬಗ್ಗೆ ಯೋಚಿಸಿದಾಗ,ಮೋದಲ ಸಾಲಿನಲ್ಲಿ ನಿಲ್ಲುವುದೇ ಭಾಷೆ.ಕನ್ನಡ ಭಾಷೆ ಬರದ ಈ ಜನ ಇಲ್ಲಿ ಬಂದು ನೆಲೆ ಊರಿದರೂ ಕನ್ನಡ ಕಲಿಯುವ ಇಚ್ಚಾ ಶಕ್ತಿ ತೋರಿಸಲ್ಲ.ಅಲ್ಲಿ ಇಲ್ಲಿ ಬಳಸುವ ಕೆಲವು ಪದಗಳನ್ನು ಕಲಿಯಲೇ ಬೇಕು ಅಂಥ ಅವರೇ ತೀರ್ಮಾನ ಮಾಡಿದರೂ ನಾವು ಅವರಿಗೆ ಆ ಅವಕಾಶ ಕೊಡದೆ ಅವರ ಭಾಷೆಯನ್ನೇ ನಾವು ಕಲಿತು ಉಪಯೋಗಿಸುವ ಪದ್ದತಿಯನ್ನು ಬೆಳೆಸಿಕೊಂಡಿದ್ದೇವೆ.ನಿಮ್ಮ ಸಮೀಪದ ಕನ್ನಡಿಗರನ್ನ ಮಾತನಾಡಿಸಿ ನೋಡಿ ಅವನಿಗೆ ಕನ್ನಡ ಬರುತ್ತಿದ್ದರೂಬೇರೆ ಭಾಷೆ ಮಾತಾಡುವ ಕಯಾಲಿ ಬೆಳೆಸಿಕೊಂಡಿರುತ್ತಾನೆ.ಕಂಪನಿಯಲ್ಲಿ ಇಂಗ್ಲಿಷ್,ಪಾನಿಪುರಿ ಅಂಗಡಿಯಲ್ಲಿ ಹಿಂದಿ,ಬೇರೆ ರಾಜ್ಯದ ಸಹದ್ಯೋಗಿ ಜೊತೆ ತಮಿಳು,ತೆಲುಗು,ಮಲಯಾಳಂ ಕಲಿತು ಮಾತಾಡುವ ನಾವು,ಪರಭಾಷಿಕರಿಗೆ  ಸ್ವಲ್ಪವಾದರೂ ಕನ್ನಡ ಕಲಿಸಬೇಕು ಅನ್ನುವ ಭಾವನೆ ಇದ್ದರೂ  ಕಡಿಮೆ.

 “ನೀರು ಕೊಡಿ”,”ಊಟ ಆಯಿತಾ”,”ಚೆನ್ನಾಗಿದೆಯ” ಅಂಥ ಸಣ್ಣ ಪದಗಳ ಬಳಕೆಯನ್ನು ನಮ್ಮ ಕಾಲೇಜ್ ದಿನಗಳಲ್ಲಿ ರಾಜಸ್ತಾನ ಮತ್ತು ಬಿಹಾರಿ ಹುಡುಗರಿಗೆ ಹೇಳಿಕೊಟ್ಟಿದ್ದ ನಾವು ಆಮೇಲೆ ಆ ಪ್ರಯತ್ನ ಬಿಟ್ಟು ನಾವೇ ಹಿಂದಿ,ಬಿಹಾರಿ ಜೊತೆ ಹರ್ಯಾಣ ಸ್ಲ್ಯಾಂಗ್ ಕೂಡ ಕಲಿತಿದ್ದೆವು.ಅದರಲ್ಲೇ ಸ್ವಲ್ಪ ಜನ ಉತ್ಸಾಹ ಕಳೆದುಕೊಳ್ಳದೆ ಫೇಸ್ಬುಕ್,ಟ್ವಿಟ್ಟರ್’ನಲ್ಲಿ ಕನ್ನಡ ಪದಗಳ ಬಳಕೆ ಕಲಿಸುತ್ತಾರೆ,ಇನ್ನು ಕೆಲವರು ವಾರಾಂತ್ಯದಲ್ಲಿ ತರಬೇತಿ ನಡೆಸುತ್ತಾರೆ.ಇವೆಲ್ಲದರ ನಡುವೆ ಕೇಳಿ ಬರುತ್ತಿರುವ ಹೆಸರು “ಕನ್ನಡ ಗೊತ್ತಿಲ್ಲ ಡಾಟ್ ಕಾಮ್”.

ಅನೂಪ್ ಮಯ್ಯ ಮತ್ತು ರಾಕೇಶ್ ಮಯ್ಯ ಅವರು ಪ್ರಾರಂಬಿಸಿದ “ಕನ್ನಡ ಗೊತ್ತಿಲ್ಲ ಡಾಟ್ ಕಾಮ್” ಬಗ್ಗೆ ಅವರ ಮಾತಲ್ಲೇ ಕೇಳೋಣ

ನಮಸ್ತೆ ,

೧.ಏನಿದು “ಕನ್ನಡ ಗೊತ್ತಿಲ್ಲ ಡಾಟ್ ಕಾಮ್

ಸುಮ. ಆರ್:: ಕನ್ನಡ ಗೊತ್ತಿಲ್ಲ ಇದು ಕನ್ನಡ ಕಲಿಯಲು ಆಸೆ ಇರುವ ಹೊರನಾಡಿನವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೊಸ ಬಗೆಯ ಪ್ರಯತ್ನ. ಇದು ಹೊರನಾಡಿನವರನ್ನು ನಮ್ಮಲ್ಲಿ ಒಬ್ಬರನ್ನಾಗಿಸುವ ಪ್ರಯತ್ನ ಕೂಡ ಹೌದು.ಇದನ್ನು ಹೊರನಾಡಿನವರಿಗೆ ಕನ್ನಡ ಕಲಿಸಿ ಕರ್ನಾಟಕದಲ್ಲಿ ಅವರ ಜೀವನ ಮತ್ತಷ್ಟು ಸುಲಭವಾಗಿಸುವತ್ತ ಇಟ್ಟಿರುವ ಮೊದಲ ಹೆಜ್ಜೆ ಎನ್ನಬಹುದು.

೨. “ಕನ್ನಡ ಗೊತ್ತಿಲ್ಲ ಡಾಟ್ ಕಾಮ್” ಯಾರು ನಡೆಸುತ್ತಿದ್ದಾರೆ

ಸುಮ. ಆರ್.:

ಇದರ ಮುಖ್ಯ ರೂವಾರಿಗಳು ಅನೂಪ್ ಮಯ್ಯ ಮತ್ತು ಅವರ ಸಹೋದರ ರಾಕೇಶ್ ಮಯ್ಯ ಅವರು, ಅವರೊಂದಿಗೆ 10 ಜನರ ತಂಡ ಇದನ್ನು ನಡೆಸುತ್ತಿದ್ದೇವೆ.

೩.ತರಬೇತಿ ಯಾವ ರೀತಿ ಇರುತ್ತದೆ?

ಸುಮ. ಆರ್ :ನಮ್ಮಲ್ಲಿ ಮೂರು ಹಂತದ ತರಬೇತಿ ನಡೆಯುತ್ತದೆ. ಮೊದಲ ಎರಡು ಹಂತಕ್ಕೆ ಅಲ್ಪ ಪ್ರಮಾಣದ ಶುಲ್ಕ ವಿಧಿಸಲಾಗುತ್ತದೆ,ಆದರೆ ಮೂರನೆ ಹಂತ ಉಚಿತವಾಗಿದೆ.

ತರಬೇತಿ ವಾಟ್ಸಾಪ್ ಮೂಲಕ ನಡೆಯುತ್ತದೆ.25 ಜನ ವಿದ್ಯಾರ್ಥಿಗಳು ಮತ್ತು ಮೂರು ಜನ ಟೀಚರ್’ಗಳ ಗುಂಪು ಮಾಡಿ  ಪ್ರತಿದಿನ ಟೆಕ್ಟ್ಸ್ ಮತ್ತು ವಾಯ್ಸ್ ಮೆಸೇಜುಗಳ ಮೂಲಕ ಪಾಠಗಳನ್ನು  ಈ ಗುಂಪುಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ,ಜೊತೆಗೆ ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹಾರ ಮಾಡಲಾಗುತ್ತದೆ. ವಾರಕ್ಕೊಮ್ಮೆ ಸಣ್ಣ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡಲಾಗುತ್ತದೆ.

೪. “ಕನ್ನಡ ಗೊತ್ತಿಲ್ಲ ಡಾಟ್ ಕಾಮ್” ತರಬೇತಿಗೆ ಹೇಗೆ ಸೇರಿಕೊಳ್ಳುವುದು?

ಸುಮ. ಆರ್ : ಆಸಕ್ತರು   www.kannadagottilla.com ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ನಮ್ಮ ತಂಡವು ಅವರನ್ನು ಸಂಪರ್ಕ ಮಾಡುತ್ತದೆ

೫. . “ಕನ್ನಡ ಗೊತ್ತಿಲ್ಲ ಡಾಟ್ ಕಾಮ್” ಇಲ್ಲಿವರೆಗೂ ಮಾಡಿದ ಸಾಧನೆ ವಿವರಿಸಿ.

ಅನೂಪ್ ಮಯ್ಯ: ಇಲ್ಲಿಯವರೆಗೂ ನಾವು ಸುಮಾರು 3000 ವಾಟ್ಸಪ್ ನಲ್ಲಿ,10,000 ಜನ ಫೆಸ್ಬುಕ್’ನಲ್ಲಿ  1,000 ಜನ ಟ್ವಿಟರ್’ನಲ್ಲಿ ಕನ್ನಡ ಕಲಿಸಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅದರಲ್ಲಿ ಭಾರತದ ಅನ್ಯ ಭಾಷಿಗರಲ್ಲದೆ ಜಪಾನೀಯರು, ಮೆಕ್ಸಿಕನರು, ಜರ್ಮನ್ನರು,ನಾರ್ವೆಯವರು ಇದ್ದಾರೆ ಎಂಬುದು ನಮಗೆ ಅತ್ಯಂತ ಸಂತಸ ತರುವ ವಿಚಾರ.

ಇದಲ್ಲದೆ ನಾವು ಫೇಸ್‍ಬುಕ್ ಮುಖಾಂತರವು ದಿನಕ್ಕೆ ಎರಡು ಕನ್ನಡ ಪದ ಕಲಿಸುತ್ತಾ ಇದ್ದೇವೆ.ಇದಲ್ಲದೆ ಸ್ಕೈಪ್ ಮೂಲಕವು ಸಹ ಕನ್ನಡ ತರಬೇತಿ ನಡೆಯುತ್ತದೆ ಅಲ್ಲದೆ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲೂ ಸಹ ನೇರ ತರಗತಿಗಳನ್ನು ನಮ್ಮ ತಂಡ ನಡೆಸಿಕೊಟ್ಟಿದೆ. ಕನ್ನಡ ಅಭಿವೃದ್ದಿಪ್ರಾಧಿಕಾರದ ಸಹಯೋಗದೊಡನೆ ಬೆಂಗಳೂರಿನಲ್ಲಿ ಸೈಕಲ್ ಜಾಥ ನಡೆಸಿದ್ದೇವೆ.

೬. . “ಕನ್ನಡ ಗೊತ್ತಿಲ್ಲ ಡಾಟ್ ಕಾಮ್” ಸಂಪರ್ಕಕ್ಕೆ ಸಂಬಂದಿಸಿದ ಮಾಹಿತಿಗಳು

ಅನೂಪ್ ಮಯ್ಯ:  www.kannadagottilla.com

hello@kannadagottilla.com

ಪ್ರತಿ ತಿಂಗಳು ಎಂ ಜಿ ರೋಡ ಬೆಂಗಳೂರು ನಲ್ಲಿ ಉಚಿತವಾಗಿ ತರಬೇತಿ ನಡೆಸಲಾಗುವುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Anand Rc

ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ
ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು
ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!