ಅಂಕಣ

ಸಲಹೆಗಾರರಿಗೊಂದು ಬಹಿರಂಗ ಪತ್ರ

ಮಾನ್ಯ ಸಲಹೆಗಾರರೆ,

ನೀವು ಯಾರನ್ನು ಹೇಗೆ ಬೇಕಾದರೂ ಕರೆಯಿರಿ, ಆದರೆ ನಾವು ನಮ್ಮ ಸೌಜನ್ಯ ಮರೆತಿಲ್ಲ ಎನ್ನುವುದನ್ನು ನಿಮಗೆ ನೆನಪಿಸುತ್ತಾ ಮುಖ್ಯ ವಿಷಯವನ್ನು ಆರಂಭಿಸುತ್ತೇನೆ.  ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ನೀವು ಎಲ್ಲ ವಿಚಾರಗಳ ಕುರಿತಾಗಿ ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು. ಆದರೆ ಕೆಲವು ವಿಷಯಗಳ ಕುರಿತಾಗಿ ನಿಮ್ಮ ಜ್ಞಾನ ಪಾತಾಳಕ್ಕಿಂತಲೂ ಕೆಳಗೆ ಇರುವುದರಿಂದ ನಿಮಗೆ ಮಾಹಿತಿ ನೀಡಬೇಕಾದ ಅನಿವಾರ್ಯತೆ ಬಂದಿದೆ. ನೀವಾಗಿಯೇ ವಿಷಯಗಳನ್ನು ಸಂಗ್ರಹ ಮಾಡಿಕೊಳ್ಳುತ್ತೀರೋ ಅಥವಾ ನಿಮಗೂನಿಮ್ಮಂತೆಯೇಇರುವ ಒಬ್ಬ ಸಲಹೆಗಾರರಿಂದ ಮಾಹಿತಿ ದೊರೆಯುತ್ತದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ನಿಮ್ಮಲ್ಲಿರುವ ಸುಳ್ಳು ಮಾಹಿತಿಗಳನ್ನು ಅಸಂಬದ್ಧವಾಗಿ, ಅಶ್ಲೀಲ ಪದಗಳನ್ನು ಬಳಸಿ ಜನರೆದುರಿಗೆ ಇಡುತ್ತೀರಿ ಎನ್ನುವುದನ್ನು ನೀವು ಮತ್ತೆ ಮತ್ತೆ ನಿರೂಪಿಸುತ್ತಿದ್ದೀರಿ. ಇತ್ತೀಚೆಗೆ ನೀವು ಕೊಡುತ್ತಿರುವ ಹೇಳಿಕೆಗಳು, ಫೇಸ್ಬುಕ್ ಮಾಧ್ಯಮದಲ್ಲಿ ನೀವು ಹಾಕುತ್ತಿರುವ ಪೋಸ್ಟ್ಗಳನ್ನು ಗಮನಿಸಿದರೆ, ನಿಮ್ಮ ಹೇಯ ಮನಸ್ಥಿತಿಯು ಅನಾವರಣಗೊಳ್ಳುತ್ತಿದೆ.

ಇತ್ತೀಚೆಗೆ ನೀವು ಒಂದು ಸಾಮಾಜಿಕ ಸಂಘಟನೆ, ಅದರ ಮುಖ್ಯಸ್ಥರು ಹಾಗೂ ಜೊತೆಗೆ ಒಬ್ಬ ಸಂಸದರ ಕುರಿತಾಗಿ ಅತ್ಯಂತ ಕೆಟ್ಟದಾಗಿ ನಿಮ್ಮ ಗೋಡೆಯಲ್ಲಿ ಗೀಚಿಕೊಂಡಿದ್ದು ಅದಾಗಲೆ ನಿಮಗೆ ಮರೆತಿರಬಹುದು. ಆದರೆ, ಅಸಹ್ಯ ಹುಟ್ಟಿಸುವ ಬರಹವನ್ನು ನಾವು ಮರೆತಿಲ್ಲ. ಅಧಿಕಾರದ ಅಮಲಿನಲ್ಲಿ, ದರ್ಪ ಪ್ರದರ್ಶಿಸುತ್ತಿರುವ ನಿಮಗೆ ಸತ್ಯ ವಿಷಯಗಳಾವುವು ಗೋಚರಿಸುತ್ತಿಲ್ಲ. ಯುವ ಬ್ರಿಗೇಡ್ ಸಂಘಟನೆಯ ಬ್ರಿಗೇಡಿಗಳ ತಲೆಯಲ್ಲೇನಿದೆ?, ಅವರಿಗೆ ಗೊತ್ತಿರುವ ಧರ್ಮ, ಸಂಸ್ಕೃತಿ, ಇತಿಹಾಸ ಏನು ಎನ್ನುವುದನ್ನು ಓದಿ ಚೆನ್ನಾಗಿ ತಿಳಿದುಕೊಂಡು ಮತ್ತೊಮ್ಮೆ ಪೋಸ್ಟ್ ಹಾಕಿ.

FB_IMG_1473220596910

ಯುವ ಬ್ರಿಗೇಡ್ ಮತ್ತು ಮೈಸೂರು ಸಂಸದರ ಕುರಿತು ಕೀಳು ಮಟ್ಟದ ಸ್ಟೇಟಸ್ ಹಾಕಿ ಸಾರ್ವಜನಿಕರಿಂದ ಹಿಗ್ಗಾಮುಗ್ಗ ತರಾಟೆಗೊಳಗಾದ ಬಳಿಕ ಡಿಲೀಟ್ ಮಾಡಲ್ಪಟ್ಟ ಸಲಹೆಗಾರರ ಸ್ಟೇಟಸ್ ಇದು.

ವಿವೇಕಾನಂದರ ಕುರಿತಾಗಿ ಅಂದು ನೀವೇನೋ ಗೀಚಿ ನಿಮ್ಮ ವ್ಯಕ್ತಿತ್ವದ ಪರಿಚಯ ಎಲ್ಲರಿಗೂ ಮಾಡಿಕೊಟ್ಟಿರಿ. ಆದರೆ ನಮ್ಮ ಯುವ ಬ್ರಿಗೇಡಿಗಳು ವಿವೇಕಾನಂದರ ವ್ಯಕ್ತಿತ್ವವನ್ನು ಜನರೆದುರು ತೆರೆದಿಟ್ಟರು. ‘ಅಮೃತ ಹಬ್ಬಸಾವಿರದ ವಿವೇಕಾನಂದಎಂಬ ಹೆಸರಿನಿಂದ ಕರ್ನಾಟಕದ ಮೂಲೆ ಮೂಲೆಗೆ ತೆರಳಿ 2185 ಕೇಂದ್ರಗಳಲ್ಲಿ ಒಂದೇ ದಿನದಲ್ಲಿ ವಿವೇಕಾನಂದರ ವಿಚಾರಧಾರೆಗಳನ್ನು ಪ್ರಸ್ತುತಪಡಿಸಿದರು. 2015 ಜನವರಿ 12 ರಂದು ಆರಂಭಗೊಂಡ  ವಿಚಾರ ಮಾಲಿಕೆ ನಿರಂತರವಾಗಿ ವಿವೇಕಾನಂದರ ಕುರಿತಾಗಿ ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಭಗವದ್ಗೀತೆ ಸುಡಬೇಕು ಎನ್ನುವ ಮಾತುಗಳನ್ನಾಡಿದ ವ್ಯಕ್ತಿಗೆ ನೀವು ರಕ್ಷಣೆ ಕೊಟ್ಟರೆ, ಭಗವದ್ಗೀತೆಯಲ್ಲಿನ ಜೀವನ ಸಾರವನ್ನು ನಮ್ಮ ಬ್ರಿಗೇಡಿಗಳು ಮನೆಮನೆಗಳಿಗೂ ತಲುಪಿಸಿದರು. ‘ಭಗವದ್ಗೀತೆಸುಡುವುದು ದೇಹ, ಆತ್ಮವಲ್ಲಎಂಬ ಹೆಸರಿನಲ್ಲಿ ಭಗವದ್ಗೀತೆಯ ಸಾವಿರಾರು ಪುಸ್ತಕಗಳನ್ನು ಮುದ್ರಿಸಿ ಜನರ ಕೈಲಿಟ್ಟರು.

ಬಡತನದ ಕಾರಣದಿಂದಾಗಿ ಸೈನ್ಯ ಸೇರುತ್ತಾರೆ ಎಂದು ಸೈನಿಕರ ಕುರಿತಾಗಿ ಮಾತನಾಡುವ ನಿಮಗೆ ನಮ್ಮಲ್ಲಿನ ಎಷ್ಟು ಸೈನಿಕರ ಪರಿಚಯ ಇದೆ? ಅವರ ಹೋರಾಟ, ಬದುಕಿನ ಕುರಿತಾಗಿ ನಿಮಗೆಷ್ಟು ಜ್ಞಾನವಿದೆ ಸಲಹೆಗಾರರೆ? ನಿಮ್ಮ ಸರಕಾರದ ಮಂತ್ರಿ, ಸಚಿವರುಗಳ ಭಾವಚಿತ್ರವಿರುವ ಬ್ಯಾನರ್ಗಳನ್ನು ಹಾಕಿಕೊಂಡು ಕಾರ್ಗಿಲ್ ವಿಜಯ ಆಚರಿಸುವ ನಿಮಗೆ ಅದೆಷ್ಟು ಸೈನಿಕರ ಯಶೋಗಾತೆಯ ಪರಿಚಯವಿರಬಹುದು? ಅದೇ ನಮ್ಮ ಯುವ ಬ್ರಿಗೇಡಿಗಳನ್ನು ಕೇಳಿ ನೋಡಿ, ಕಾರ್ಗಿಲ್ ಕದನ ಕಲಿಗಳ ಹೋರಾಟವನ್ನು ನಿಮ್ಮ ಕಣ್ಣಾಲಿಗಳು ಮಂಜಾಗುವಂತೆ ಹೇಳುತ್ತಾರೆ. ನಾಡಿಗಾಗಿ ಹೋರಾಡಿದ ಒಬ್ಬೊಬ್ಬ ಸೈನಿಕರನ್ನು ಗುರುತಿಸಿ, ಅವರನ್ನು ಗೌರವಿಸುವ ಸೌಜನ್ಯ ಇವರುಗಳಿಗಿದೆ. ಸೈನಿಕರ ಮಾತುಗಳಿಂದಲೇ ಅವರ ಸಾಧನೆಗಳನ್ನು ಮಕ್ಕಳಿಗೆ, ಯುವ ಜನತೆಗೆ ತಲುಪಿಸುತ್ತಿರುವ ಸಂಘಟನೆಯಿದು. ಸ್ಕ್ರೀನ್ ಶಾಟ್ ತೆಗೆದು ಕಳಿಸಿ ಎಂದು ಮಾರ್ಗದರ್ಶನ ಮಾಡುವ ನೀವು, ಶಾಲಾ ಕಾಲೇಜುಗಳಲ್ಲಿ ಸೈನಿಕರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಒಂದು ವ್ಯವಸ್ಥೆ ಹುಟ್ಟು ಹಾಕುತ್ತೀರಾ? ಮುಖ್ಯಮಂತ್ರಿಗಳಿಗೆ ಇದೊಂದು ಯೋಗ್ಯ ಸಲಹೆಯನ್ನಾದರೂ ನೀಡಲು ನಿಮ್ಮಿಂದ ಸಾಧ್ಯವೇ?

ಪೋಲಿಸರ ಸಾವಿನಲ್ಲಿ ರಾಜಕೀಯ ಮಾಡುವ ನಿಮಗೆ, ಪೋಲಿಸರನ್ನು ಬಳಸಿಕೊಂಡು ರೈತರು, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ನಿಮಗೆ ಪೋಲಿಸರ ಕರ್ತವ್ಯದ ಕುರಿತಾಗಿ ಎಷ್ಟರ ಮಟ್ಟಿಗೆ ಕಾಳಜಿಯಿದೆ? ಬ್ರಿಗೇಡಿಗಳು ಪೋಲಿಸರನ್ನು ಕೂಡ ಮರೆತಿಲ್ಲ ಸಲಹೆಗಾರರೆ. 26 ನವೆಂಬರ್ 2015 ರಂದು ರಾಜ್ಯದ 375 ಕ್ಕು ಹೆಚ್ಚು ಪೋಲಿಸ್ ಸ್ಟೇಷನ್ಗಳಿಗೆ ಹೋಗಿ ಪೋಲಿಸರನ್ನು ಅಭಿನಂದಿಸಿ, ಅವರ ಒಳ್ಳೆಯ ಕಾರ್ಯವನ್ನು ಪ್ರೋತ್ಸಾಹಿಸಿದರುಮುಂಬೈ ದಾಳಿಯ ದಿನ ಮೃತಪಟ್ಟ ಧೀರ ಪೋಲೀಸರನ್ನು ಮೂಲಕ ಗೌರವಿಸಿದರು.

ಕೇವಲ ಭಾಷಣ, ಚರ್ಚೆಗಳಷ್ಟೇ ಯುವ ಬ್ರಿಗೇಡ್ ಸಂಘಟನೆಯ ಸಾಧನೆಗಳಲ್ಲ. ಸಮಾಜ, ಪರಿಸರ ಇವುಗಳ ಕುರಿತಾಗಿಯೂ ನಮಗೆ ಕಾಳಜಿಯಿದೆ. ‘ತರುಣ ಶಕ್ತಿತಣಿಸಲಿ ಪೃಥ್ವಿಎಂಬ ಕಾರ್ಯಕ್ರಮದಡಿಯಲ್ಲಿ 65 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿಸಲಾಗಿದೆ. ಅಧಿಕಾರದಲ್ಲಿದ್ದುಕೊಂಡು, ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಕೆಲಸ ಮಾಡುವ ಅವಕಾಶಗಳಿದ್ದರೂ ನಿಮಗೆ ಬೆಂಗಳೂರಿನ ನಾಕಾರು ಕೆರೆಗಳ ಹೂಳು ತೆಗೆಯುವ ಕೆಲಸ ಸಾಧ್ಯವಿಲ್ಲ. ಹೂಳು ತುಂಬಿರುವ ನಿಮ್ಮ ಸರಕಾರದ ತಲೆಗೆ ವಿಷಯ ಹೊಕ್ಕುವುದೂ ಇಲ್ಲ ಬಿಡಿ. ಗಿಡ ನೆಟ್ಟರೆ ಸಾಲದು, ಅದಕ್ಕೆ ನೀರುಣಿಸಿ ಬೆಳೆಸಬೇಕು ಎನ್ನುವುದನ್ನು ನಿಮಗೆ ಬ್ರಿಗೇಡಿಗಳು ಮಾರ್ಗದರ್ಶಿಸುತ್ತಾರೆ. ‘ಪೃಥ್ವಿಯೋಗ ಹೆಸರಿನಲ್ಲಿ ನೆಟ್ಟ 50 ಸಾವಿರಕ್ಕೂ ಮಿಗಿಲಾದ ಗಿಡಗಳನ್ನು ನೀರುಣಿಸಿ ಬೆಳೆಸುತ್ತಿದೆ ಸಂಘಟನೆ.

ಇತಿಹಾಸದ ಪರಿಚಯವಿಲ್ಲದ ಇವರು ಸಾವರ್ಕರ್, ಭಗತ್ಸಿಂಗ್, ಅಂಬೇಡ್ಕರ್, ಬುದ್ಧ, ಬಸವಣ್ಣ ಇವರುಗಳ ಕುರಿತಾಗಿ ಕಾರ್ಯಕ್ರಮ ಮಾಡುತ್ತಾರೆ ಅಲ್ಲವೇ? ಒಂದು ದಿನ ಸರಕಾರಿ ರಜೆ ಘೋಷಿಸಿ ನೀವು ಇವರುಗಳ ಜನ್ಮ ದಿನಾಚರಣೆಗಳನ್ನು ಆಚರಿಸುತ್ತೀರಿ. ಆದರೆ ಯುವ ಬ್ರಿಗೇಡ್ ಸಂಘಟನೆಯು ಸದ್ಬಾವನಾ ಎಂಬ ಚಿಂತನೆಯಿಂದ ಎಲ್ಲ ಚೇತನಗಳ ಬದುಕಿನ ಸಾಧನೆಯನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುತ್ತಿದೆ. ಕಿರು ಚಿತ್ರಗಳ ಮೂಲಕ, ಭಾಷಣ ಹಾಗೂ ಬರವಣಿಗೆಯ ಮೂಲಕ ನಮ್ಮ ಇತಿಹಾಸಕಾರರನ್ನು ಸ್ಮರಿಸಿಕೊಳ್ಳುತ್ತಿದೆ.

ಆಜಾದ್ ಹಿಂದ್ಸೇನಾನಿಯೊಂದಿಗೆ ನಾಲ್ಕು ಹೆಜ್ಜೆ’ –  ಸುಭಾಶರ ಕುರಿತಾದ ಕಾರ್ಯಕ್ರಮ ಸರಣಿ, ‘ಮೈ ನೇಶನ್ಮೈ ಲವ್ಶಾಲಾ ಕಾಲೇಜುಗಳಲ್ಲಿ ತಾಯಿ ಭಾರತಿಯ ಪೂಜೆ, ‘ಆಯ್ ಆಮ್ ಭಗತ್’ – ಪರಿಸರ ಸ್ನೇಹಿ ಸೈಕಲ್ ಅಭಿಯಾನ, ‘ಸಂದೀಪ್ ಇನ್ ಮೈ ಹಾರ್ಟ್’ – ವೀರ ಯೋಧನ ಜನ್ಮದಿನಾಚರಣೆ, ‘ಸೈನ್ಯ ಸೇರುವುದು ಹೇಗೆ?’ – ಮಾಹಿತಿ ಕಾರ್ಯಕ್ರಮ, ಕಾರ್ಗಿಲ್ ವಿಜಯೋತ್ಸವ’ – ಕಾರ್ಗಿಲ್ ಕದನದ ಸೇನಾನಿಗಳ ಸ್ಮರಣೆ, ‘ಒನ್ ರಾಂಕ್ಒನ್ ಪೆನ್ಶನ್ನಿವೃತ್ತ ಯೋಧರಿಗೆ ಬೆಂಬಲ, ‘ಸ್ಪಿರಿಟ್ ಆಫ್ ಫ್ರೀಡಮ್’ – ಸ್ವಾತಂತ್ರ್ಯ ದಿನಾಚರಣೆ, ‘ದಿಗ್ವಿಜಯ್ ದಿವಸ್’ – ವಿವೇಕಾನಂದರು ವಿಶ್ವದೆದುರು ಭಾರತವನ್ನು ಎತ್ತರಕ್ಕೇರಿಸಿದ ದಿನದ ಸಂಭ್ರಮಾಚರಣೆಯ ಸ್ಮರಣೆ, ‘ಶೂಟ್ ಯುವರ್ ಎಮೋಷನ್ಸ್’ – ರಾಜ್ಯದ ಜನರ ಸಂದೇಶಗಳನ್ನು, ಶುಭಾಶಯಗಳನ್ನು ವಾಟ್ಸಾಪ್, ಹೈಕ್ಗಳ ಮೂಲಕ ಸಂಗ್ರಹಿಸಿ, ಯೋಧ ಭೂಮಿಗೆ ಹೋಗಿ ಸೈನಿಕರಿಗೆ ತಲುಪಿಸಿದ ಕಾರ್ಯಕ್ರಮ, ‘ವಿತ್ತಶಕ್ತಿ’ – ಯುವ ಜನತೆಗೆ ಉದ್ಯೋಗಾನುಕೂಲ ಸ್ಕಿಲ್ ಡೆವೆಲೆಪ್ಮೆಂಟ್ ಕಾರ್ಯಕ್ರಮ, ಇನ್ಸ್ಪೈರ್ ಪ್ರವಾಸ , ಲೋಕ ಸಾಹಸ ಯಾತ್ರದೇಶದ ಉದ್ದಗಲ ಪ್ರವಾಸ, ‘ತಾತ್ಯಾ200’ – ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರನ ಸ್ಮರಣೆ, ‘ರಾಕ್ ಡೇವಿವೇಕಾನಂದರ ವಿಶ್ವಗುರು ಕಲ್ಪನೆಯ ಭಾರತ ನಿರ್ಮಾಣದ ಪ್ರಯತ್ನಕ್ಕಾಗಿ ಮುನ್ನುಡಿ ಹುಟ್ಟು ಹಾಕಿದ ಕಾರ್ಯಕ್ರಮ, ‘ವಾರ್ ಆಫ್ ಟಾಂಕ್ಸ್’- 1965 ಯುದ್ಧ ವಿಜಯದ ಸಂಭ್ರಮಾಚರಣೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಯುವ ಬ್ರಿಗೇಡ್ ಸಂಘಟನೆ ನಡೆಸುತ್ತಾ ಬಂದಿದೆ. ಮಣ್ಣಿನ ಎಲ್ಲ ಹೋರಾಟಗಳನ್ನು, ಅದಕ್ಕಾಗಿ ದೇಶದ ಹುತಾತ್ಮರು ಮಾಡಿದ ತ್ಯಾಗಗಳನ್ನು ಮರೆಯದೇ ಜನರಿಗೆ ನೆನಪಿಸುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ.

ಯಾವುದೇ ರಾಜಕೀಯ ಉದ್ದೇಶವಿಲ್ಲದೆ, ರಾಜಕೀಯ ನಾಯಕರುಗಳ ಹೆಸರಿಲ್ಲದೆ ಈ ಸಂಘಟನೆ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಪಕ್ಷದ ಕಾರ್ಯಕರ್ತರ ಸಭೆ ನಡೆಸಲು, ಸರಕಾರದ ಸಾಧನೆ ಹೇಳಿಕೊಳ್ಳುವ ಸಮಾವೇಶ ನಡೆಸಲು ನೀವು ರಾಜಕೀಯದವರು ದುಡ್ಡು ಕೊಟ್ಟು ಜನರನ್ನು ಕರೆಸುತ್ತೀರಿ. ಆದರೆ ನಮ್ಮ ಯುವ ಬ್ರಿಗೇಡ್ ಮಿತ್ರರು ತಮ್ಮ ದುಡ್ಡಿನಲ್ಲಿ ಊರೂರು ತಿರುಗಿ ಕೆಲಸ ಮಾಡುತ್ತಾರೆ. ಇವರಿಗೆ ಯಾವ ಹೆಸರು ಹಾಗೂ ಹಣ ಬೇಕಾಗಿಲ್ಲ. ತಾವು ಮಾಡುವ ಕೆಲಸಗಳನ್ನು ನಾಲ್ಕು ಜನರಲ್ಲಿ ಹೇಳಿಕೊಳ್ಳುವ ಜಾಯಮಾನವೂ ಇವರಲ್ಲಿಲ್ಲ. ಹೆಸರು ಹಾಗೂ ಹಣ ಗಳಿಕೆಯೇ ಗುರಿಯಾಗಿರುವ ನಿಮ್ಮೆಲ್ಲರ ಪೋಷಿತ ಅದೆಷ್ಟೋ ಸಂಘ-ಸಂಸ್ಥೆಗಳಿಗಿಂತ ಯುವ ಬ್ರಿಗೇಡ್ ಭಿನ್ನವಾಗಿರುವುದು ನಿಮಗೆ ಸಹಿಸಲು ಸಾಧ್ಯವಾದ ವಿಷಯವಾಗಿದೆ ಅಲ್ಲವೇ?

ಯಾರ ತಲೆಯಲ್ಲಿ ಸಗಣಿ ತುಂಬಿಕೊಂಡಿದೆ, ಯಾರಿಗೆ ಧರ್ಮಸಂಸ್ಕೃತಿ, ಇತಿಹಾಸದ ಪರಿಚಯವಿಲ್ಲ, ಅಶ್ಲೀಲವಾಗಿ ಯಾರು ಮಾತನಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ ಸಲಹೆಗಾರರೆಅಧಿಕಾರದ ಗುಂಗಿನಲ್ಲಿ ಜನರ ಮೇಲೆ, ನಿಮ್ಮ ವಿಕೃತ ಕೆಲಸಗಳನ್ನು ಟೀಕಿಸುವವರ ಮೇಲೆ ನೀವು ತೋರಿಸುತ್ತಿರುವ ದೌರ್ಜನ್ಯವನ್ನು ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೆಂದು ನಿಮ್ಮ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿ. ನಂತರ ನಿಮ್ಮ ಅಭಿವೃದ್ಧಿ ಸಾಧನೆಗಳನ್ನು ಬರೆದುಕೊಳ್ಳಿ. ನಾವು ನೋಡಿ ಆನಂದಿಸುತ್ತೇವೆ. ಅದನ್ನು ಬಿಟ್ಟು ಬೇರೆಯವರ ವೈಯಕ್ತಿಕ ವಿಷಯವನ್ನು, ಸಾಮಾಜಿಕ ಸಂಘಟನೆಗಳ ಕುರಿತಾಗಿ ಹೀಗೆ ಬರೆದುಕೊಳ್ಳುತ್ತಿದ್ದರೆ, ಬ್ರಿಗೇಡಿಗಳ ಜೊತೆಗೆ ನಿಮ್ಮ ಸಂಸದರು ಕೂಡ ಇನ್ನಷ್ಟು ಒಳ್ಳೆಯ, ಅಭಿವೃದ್ಧಿ ಕೆಲಸಗಳನ್ನು ಮಾಡಿಬಿಟ್ಟಾರು ಜೋಕೆ!!

ಸಂಧ್ಯಾ ಶಾಸ್ತ್ರಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!