Featured ಅಂಕಣ

ಮನದೊಳಗೊಮ್ಮೆ ‘ಮೋದಿ’ ಬಂದಾಗ..

ನಮಗೆಲ್ಲ ಪ್ರಧಾನಿ ಎಷ್ಟೊಂದು ಸಾಮಾನ್ಯಯೆನಿಸಿದ್ದಾರೆಂದರೆ, ಮುಂದೊಂದು ದಿನ  ಮನೆಯಲ್ಲಿ ತರಕಾರಿ ಖಾಲಿಯಾದರೂ ‘ಮೋದಿ’ಯನ್ನು ಕೇಳು ಎನ್ನುವ ದಿನಗಳು ದೂರವಿಲ್ಲ ಎನಿಸುತ್ತಿದೆ.ನಾ ಕಂಡಂತೆ ಈಗ ಹಣ್ಣು ಹಣ್ಣು ಮುದುಕರಿಂದ ಬುದ್ಧಿ ಬಂದ ಮಕ್ಕಳಿಗೆಲ್ಲ ಮೋದಿಯ ಪರಿಚಯ ಇದೆ.

ನಮ್ಮಲ್ಲಿ ..

-ಹಲವರಿಗೆ ಅವರೊಬ್ಬ ಕೆಲಸಗಾರನಾಗಿ ಕಂಡರೆ ಇನ್ನು ಕೆಲವರಿಗೆ ಕೆಲಸಕ್ಕೆ ಬಾರದವರು

-ಹಲವರಿಗೆ ಅವರೊಬ್ಬ ಸಂಘಟಕನಾಗಿ ಒಗ್ಗಟ್ಟು ಮೂಡಿಸುವವನೆನಿಸಿದರೆ ಕೆಲವರಿಗೆ ಒಡೆಯುವವ,

-ಹಲವರಿಗೆ ದೇಶಕ್ಕಾಗಿ ವಿಶ್ವ ಸುತ್ತುವವ,ಕೆಲವರಿಗೆ ಶೋಕಿಗಾಗಿ ವಿಶ್ವ ಸುತ್ತುವವ,

-ಹಲವರಿಗೆ ಆತನ ಮಾತುಗಳೆಂದರೆ ಪ್ರೇರಣೆ, ಕೆಲವರಿಗೆ ಅದೊಂದು ಭಾಷಣ,

ಹೀಗೆ ಎರಡು ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಆ ಪಟ್ಟಿಯಲ್ಲಿಯ ಹಲವರು ಕೆಲವರಿಗೆ ಸಮರ್ಥನೆ ಕೊಡುತ್ತಾ, ಅದೇ ಕೆಲವರು ಹಲವರಲ್ಲಿ ಮೋದಿಯ ಎಲ್ಲಾ ನಡೆಗೂ ಕೊಂಕು ಹುಡುಕುವ ಪ್ರಶ್ನೆ ಕೇಳುತ್ತಾ edited photo ಹಾಕುತ್ತಾ ಕಚ್ಚಾಡುತ್ತಾ ಇರುತ್ತಾರೆ.ಸಮಯ ಸಿಕ್ಕಾಗಲೆಲ್ಲ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಇರುತ್ತಾರೆ.ಇತ್ತ ಹಲವರು ಮೋದಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನದಲ್ಲಿ ತೊಡಗಿರುತ್ತಾರೆ.ಈಗ ದೇಶದ ಅನೇಕ ರಾಜಕೀಯ ವ್ಯಕ್ತಿಗಳು ತಮ್ಮೆಲ್ಲ ಹೊಣೆಗಾರಿಕೆಯನ್ನು ಮೋದಿ ತಲೆ ಮೇಲೆ ಇಟ್ಟು ಅವರ ಪ್ರತಿಕ್ರಿಯೆಗೆ ಕಾಯುತ್ತಾ ಕುಳಿತಿರುತ್ತಾರೆ.

ಮೊನ್ನೆ my gove ಸಮಾರಂಭದಲ್ಲಿ ಮೋದಿಯ ಮಾತು ಕೂಡ ಇದಕ್ಕೆ ಸರಿಯಾದ ಉತ್ತರವನ್ನು ಕೊಡುತ್ತದೆ.ನಮ್ಮ ಮನ ರಾಜಕೀಯವೆಂದರೆ ಹಗರಣ,ಭ್ರಷ್ಟಾಚಾರ ಇದಕ್ಕೆ ಮೀಸಲಿಟ್ಟಿದ್ದಕ್ಕೋ ಏನೋ ನಾವು ಈಗೀಗ ಮೋದಿ ಸರಕಾರವನ್ನು ಒಂದಿಲ್ಲೊಂದು ವಿಚಾರದಲ್ಲಿ ಸಿಕ್ಕಿಸುವ ಪ್ರಯತ್ನವ ಸದಾ ಮಾಡುತ್ತಲೆ ಇದ್ದೆವೆ..

# ಮೋದಿ ಸೂಟ್’ನಿಂದ ಮೋದಿ ಕುಡಿದ ನೀರಿನ ಮೌಲ್ಯದ ವರೆಗೆ ಲೆಕ್ಕಾಚಾರ ನೋಡಿಯಾಯ್ತು.

# ಮೋದಿ ಹೆಂಡತಿ ಕುರಿತು ಸಾಲು ಸಾಲು ಬರೆದಾಯ್ತು.

# ಮೋದಿ ಪ್ರವಾಸ ವಿಲಾಸಿ ಜೀವನವೆಂದು ಜರಿದಾಯ್ತು.

# ಮೋದಿ ಡಿಗ್ರಿ ಅಂಕಪಟ್ಟಿ ಪರಿಶೀಲನೆ ಕೂಡ ನಡೆಯಿತು.

ಇಂತಹ ಅವಕಾಶ ಬಹುಶಃ ಸ್ವತಂತ್ರ ಭಾರತದಲ್ಲಿ ಇದುವರೆಗೆ ಅಧಿಕಾರ ವಹಿಸಿಕೊಂಡ ಯಾವ ಪ್ರಧಾನಿ ಕಾಲದಲ್ಲೂ ಸಿಕ್ಕಿಲ್ಲ,ಆಗೆಲ್ಲ ನಾವೆಲ್ಲ ಹಗರಣದ ಮೊತ್ತದಲ್ಲಿನ ಅಂಕೆಗಳನ್ನು ಕೈಬೆರಳು ಸಾಲದೆ ಕಾಲ್ಬೆರಳನ್ನು ಉಪಯೋಗಿಸುದಕ್ಕೆ ಆಗುತ್ತಾ ಎಂದು ಯೋಚಿಸುವುದರಲ್ಲೆ ಕಾಲ ಕಳೆಯುತ್ತಿದ್ದೆವು..

ಕಾಲ ಬದಲಾದಂತೆ ನಾವು ಬದಲಾದರೆ ಪ್ರಪಂಚದ ವಿಶಾಲ ಬಯಲಂತೆ ಕಂಡು ನಾವೆಲ್ಲ ಕುಟುಂಬದವರಂತೆ ಕಾಣುತ್ತದೆ ಎಂಬ ಮಾತಿಗೆ ವಿಪರ್ಯಾಸ ಎಂಬಂತೆ ನಾವೆಲ್ಲ ಸಂಕುಚಿತ ಮನಸ್ಥಿತಿಯನ್ನು ಹೊಂದುತ್ತಿದ್ದೇವೆ ಎಂಬುದಕೆ ಪ್ರಧಾನಿ ಮಂತ್ರಿಗಳ ಕುರಿತು ನಾವು ಕೇಳುವ ಪ್ರಶ್ನೆಗಳು,ಪ್ರಧಾನಿಯಿಂದ ಬಯಸುವ ಉತ್ತರಗಳು,ಪ್ರಧಾನಿಯ ಕೆಲಸಕ್ಕೆ ನಾವು ತೋರುವ ಪ್ರತಿಕ್ರಿಯೆಗಳೆ ಸಾಕ್ಷಿ.. ನಾವು ಈಗೀಗ ಮೋದಿ ಕುಂತರು ಪ್ರಶ್ನೆ ಮಾಡುತ್ತೇವೆ,ನಿಂತರು ಪ್ರಶ್ನೆ ಮಾಡುತ್ತೇವೆ,ನಮಗೆ ಮೋದಿ ಎಷ್ಟು ಬಗ್ಗಿದರೂ ಸಾಲದು,ನಮ್ಮ ಮನೆಯ ಕೋಳಿ ಮುಂಜಾನೆ ೫ರ ಬದಲು ೪ ಕ್ಕೆ ಕೂಗಿದರೂ ಮೋದಿ ಕಾರಣ,ದೇಶದಲ್ಲಿ ಮಳೆ ಕಡಿಮೆ ಆಗಲೂ ಮೋದಿ ಕಾರಣ..ಎಲ್ಲದಕ್ಕೂ ಮೋದಿಯ ಕಾರಣಗೊಳಿಸಿ,ಅವರಿಗೊಂದು ಟ್ವಿಟರ್ ಸಂದೇಶ ಕಳಿಸಿ ಉತ್ತರಿಸಿ ಎನ್ನುತ್ತಿದ್ದೇವೆ. ಮೋದಿ ಮಾತ್ರ ತಾನೊಬ್ಬ ಸಾಮಾನ್ಯ ‘ಜನ ನಾಯಕನಲ್ಲ’ ತಾನೊಬ್ಬ ‘ಜನ ಸೇವಕ’ ಎಂಬುದ ಪದೇ ಪದೇ ತಮ್ಮ ಕಾರ್ಯದಲ್ಲಿ ತೋರಿಸುತ್ತಲೆ ಬರುತ್ತಿದ್ದಾರೆ.

– ಅವರು ದೇಶದ ಮೇಲಿಟ್ಟ ಪ್ರೀತಿ ಅವರ ಸಂಸತ ಭವನದ ಸೆಂಟ್ರಲ್ ಹಾಲ್ ನಲ್ಲಿ ಅವರ ಹನಿಗೂಡಿದ ಕಣ್ಣೀರಲ್ಲಿ ದೇಶ ಕಂಡಿದೆ.

– ಪ್ರಪಂಚದ ವಿವಿಧ ದೇಶಗಳಲ್ಲಿ ಅವರು ಮಾಡಿದ ಭಾಷಣ ತೋರಿಸಿದೆ.

– ವಿದೇಶಗಳಲ್ಲಿ ನಮ್ಮ ಪ್ರಧಾನಿಗೆ ಸಿಗುವ ಗೌರವ ಅವರ ಸಂಪಾದನೆ ಆಗದೆ ಅವರಿಂದ ದೇಶದ ಗೌರವ ಹೆಚ್ಚಿದೆ.

– ಪ್ರತಿ ಬಾರಿ ತಾನೊಬ್ಬ ಸಾಮನ್ಯ ಎಂದು ಗಾಜಿನ ಕೋಣೆಯೊಳಗೆ ಹೋಗದೆ ಸ್ವತಂತ್ರವಾಗಿ ದೇಶವ ಉದ್ದೇಶಿಸಿ ಭಾಷಣ ಮಾಡಿ ಸಾಬೀತು ಮಾಡಿದ್ದಾರೆ.

– ದೇಶದ ಮಕ್ಕಳಿಂದ ಹಿರಿಯರಿಗೆ ಅವರು ತೋರುವ ಸೌಜನ್ಯ ಕೂಡ ಅವರನ್ನು ಇತರರಿಂದ ಭಿನ್ನವಾಗಿಸುತ್ತದೆ.

ಇಷ್ಟೆಲ್ಲಾ ಇದ್ದರೂ ನಮ್ಮಲ್ಲಿ ಕೆಲವರ ಮನಸ್ಸು ಮೋದಿಯನ್ನು ಪ್ರಧಾನಿಯಾಗಿ ಕಾಣಲು ಅವರು ಪ್ರಧಾನಿಯಾಗಿ ಎರಡುವರೆ ವರ್ಷ ಆಗುತ್ತಾ ಬಂದರೂ ಇನ್ನೂ ಸಂಶಯದಿಂದಲೇ ಕಾಣುತ್ತಿದೆ ಇದೇ ಪ್ರಸಕ್ತ ಭಾರತದ ವಿಪರ್ಯಾಸ ಎಂದರೆ ತಪ್ಪಾಗಲಾರದು..

ನಾವು ಮೋದಿಯ ಎಲ್ಲಾ ವಿಚಾರವನ್ನು ಕೆದಕ್ಕಿದಾಯ್ತು,ಲೇವಡಿ ಮಾಡಿದಾಯ್ತು,ಕೊಂಕಾಡಿದಾಯ್ತು,ಸಂಬಂಧ ಕಟ್ಟಿಯು ಆಯ್ತು.ಇನ್ನು ಬರಲಿರುವ ದಿನಗಳಲ್ಲಿ ಅದೇನು ಪ್ರಶ್ನೆಗಳು ಇವೆಯೋ ಕಾಲಕ್ಕೆ ಗೊತ್ತು.ಏನೇ ಇದ್ದರೂ ಮೋದಿ ತಾನು ಪ್ರಧಾನ ಸೇವಕನೆಂದು ಪದೇ ಪದೇ ತಮ್ಮ ಕೆಲಸದಲ್ಲೇ ತೋರಿಸುತ್ತಾ ದೇಶಕ್ಕೊಂದು ಅಭಿವೃದ್ಧಿಯ ದಾರಿ ತೋರುವುದಲ್ಲೇ ಮಗ್ನರಾಗಿದ್ದಾರೆ.

ಏನೇ ಆಗಲಿ,  ಮೋದಿ ಮುನ್ನಡೆಯಲಿ.  ಜನ್ಮ ದಿನದ ಶುಭಾಯಗಳು

-ಪ್ರಕಾಶ್ ಆವರ್ಸೆ

prakashavarse@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!